Breaking News

ಬದುಕಬೇಕೆಂದಿದ್ದರೆ ಕಾಶ್ಮೀರ ಬಿಟ್ಟು ಹೋಗಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸದ್ಯ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ತಕ್ಷಣವೇ ಸ್ಥಳಬಿಟ್ಟು ತೆರಳಬೇಕು. ಬದುಕಬೇಕೆಂದಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಹೇಳುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.   ಇದರಿಂದಾಗಿ 1990ರ ದಶಕದಲ್ಲಿ ಉಂಟಾಗಿದ್ದಂತೆ ಕಾಶ್ಮೀರ ಪಂಡಿತರನ್ನು ಉಗ್ರವಾದಿಗಳ ಗುಂಪು ಗುರಿ ಮಾಡಿಕೊಂಡು ಕೊಂದು ಹಾಕುವ ಪರಿಸ್ಥಿತಿ ಮತ್ತೆ ತಲೆದೋರಿತೇ ಎಂಬ ಪ್ರಶ್ನೆ ಎದುರಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿಯೇ ಸಕ್ರಿಯವಾಗಿರುವ ಸ್ಥಳೀಯ ಉಗ್ರ ಸಂಘಟನೆ ಲಷ್ಕರ್‌-ಇ-ಇಸ್ಲಾಂ ವಲಸಿಗರು …

Read More »

ಕಳಸಾ ಬಂಡೂರಿ’ ಕಾಮಗಾರಿಗೆ ಶೀಘ್ರವೇ ಚಾಲನೆ : C.M. ಬೊಮ್ಮಾಯಿ

ಗದಗ : ಶೀಘ್ರವೇ ಕಳಸಾ ಬಂಡೂರಿ ಯೋಜನೆಗೆ (Kalasa Banduri Project) ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಘೋಷಣೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಳಸಾ ಬಂಡೂರಿ ಕಾಮಗಾರಿ ಸಂಬಂಧ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಅನುಮತಿಗೆ ವಿನಂತಿಸಲಾಗಿದೆ. ಈ ಯೋಜನೆಯಿಂದ ಹೆಚ್ಚು ಅರಣ್ಯ ಪ್ರದೇಶ ನಾಶವಾಗದಂತೆ ಗಮನ ನೀಡಿ ಡಿಪಿಆರ್ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಪ್ರಸಕ್ತ ಸಾಲಿನಲ್ಲಿಯೇ ಕಳಸಾ …

Read More »

ಹಳೇ ಹುಬ್ಬಳ್ಳಿ ಉದ್ವಿಗ್ನ, ಪೊಲೀಸರ ಮೇಲೆ ಕಲ್ಲು ತೂರಾಟ

ಹುಬ್ಬಳ್ಳಿ: ಮಸೀದಿಯ ಚಿತ್ರದ‌ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   ‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್‌, ಹಿಂದೂ ಸಾಮ್ರಾಟ್‌’ ಎಂದು ಚಿತ್ರದ ಮೇಲೆ ಬರೆಯಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಅಭಿಷೇಕ್‌ ಹಿರೇಮಠ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ …

Read More »

40,000 ಸಿಬ್ಬಂದಿ ನೇಮಿಸಿಕೊಳ್ಳಲಿದೆ T.C.S.

ನವದೆಹಲಿ: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್‌(ಟಿಸಿಎಸ್‌) ಸಂಸ್ಥೆಯು ಈ ಆರ್ಥಿಕ ವರ್ಷದಲ್ಲಿ ಒಟ್ಟು 40,000 ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಸಂಸ್ಥೆಯು ಮಾಹಿತಿ ಕೊಟ್ಟಿದ್ದು, ಸದ್ಯ 2020, 2021 ಮತ್ತು 2022ನೇ ಬ್ಯಾಚಿನ ಎಂ.ಎಸ್‌ಸಿ ಮತ್ತು ಎಂ.ಎ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಅವರಿಗೆ ಲಿಖೀತ ಪರೀಕ್ಷೆ ಮತ್ತು ಸಂದರ್ಶನ ಇರಲಿದ್ದು, ಅದಕ್ಕಾಗಿ ಏ.20ರವರೆಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕೊಡಲಾಗಿದೆ.

Read More »

BBMP ಕಚೇರಿಯಲ್ಲಿ AC ಸ್ಪೋಟ : ಕೆಲ ದಾಖಲೆಗಳು ʼಸುಟ್ಟು ಭಸ್ಮʼ

ಬೆಂಗಳೂರು : ನಗರದ ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ಎಸಿ ಸ್ಪೋಟಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಈ ಅಗ್ನಿ ಅವಘಡದಲ್ಲಿ ಕೆಲ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಬಿಬಿಎಂಪಿ ಮುಖ್ಯ ಇಂಜಿನಿಯರ್‌ ರಂಗನಾಥ್‌ ಕಚೇರಿಯಲ್ಲಿ ಎಸಿ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿದ್ದು, ಇದು 3ನೇ ಮಹಡಿಯಲ್ಲಿದೆ. ಇನ್ನು ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ಈ ಅವಘಡ ಸಂಭವಿಸಿದ್ದು, ಅಗ್ನಿ …

Read More »

ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

ಬೆಂಗಳೂರು​: ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಏಪ್ರಿಲ್​ 14ರಂದು ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಇದರ ನಡುವೆ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಎಂದು ಕರೆಸಿಕೊಳ್ಳುವ ಕಮಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ನೆಗಿಟಿವ್ ವಿಮರ್ಶೆ ನೀಡಿರುವುದು ಯಶ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. …

Read More »

ಗುಜರಾತ್‌ನಲ್ಲಿನ 108 ಅಡಿ ಎತ್ತರದ ʻಹನುಮಾನ್ ಪ್ರತಿಮೆʼಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಗುಜರಾತ್‌: ಇಂದು ಎಲ್ಲೆಡೆ ರಾಮನ ಭಕ್ತ ಹನುಮನ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಹನುಮಾನ್ ಪ್ರತಿಮೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಿದರು.   ಇದಕ್ಕೂ ಮುನ್ನ ಬೆಳಗ್ಗೆ ಪ್ರಧಾನಿ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ‘ಇಂದು ನಾವು ಹನುಮ ಜಯಂತಿಯ ವಿಶೇಷ ಸಂದರ್ಭವನ್ನು ಆಚರಿಸುತ್ತಿದ್ದೇವೆ. ಗುಜರಾತ್‌ನ ಮೊರ್ಬಿಯಲ್ಲಿ ಬೆಳಗ್ಗೆ 11 ಗಂಟೆಗೆ 108 ಅಡಿ …

Read More »

ಬಾಕ್ಸಾಫೀಸ್​ನಲ್ಲಿ ತೂಫಾನ್- ಎರಡೇ ದಿನದಲ್ಲಿ ₹ 240 ಕೋಟಿ ಬಾಚಿದ ‘ಕೆಜಿಎಫ್ ಚಾಪ್ಟರ್ 2’;

KGF Chapter 2 Box Office Collection Day 2 | Yash: ಚಿತ್ರತಂಡ ಭಾರತದಲ್ಲಿ ಯಶ್ ನಟನೆಯ ಚಿತ್ರವು ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಗೊಳಿಸಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿಸಿ ‘ಕೆಜಿಎಫ್ 2’ ಚಿತ್ರವು 240 ಕೋಟಿ ರೂ ಬಾಚಿಕೊಂಡಿದೆ. ವಿಶ್ವಾದ್ಯಂತ ಯಶ್ ನಟನೆಯ ಚಿತ್ರ ಗಳಿಸಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ.   ಯಶ್ (Yash) ಅಭಿನಯದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) …

Read More »

ಒಂದೇ ಸಮನೇ ಕಣ್ಣೀರು ಸುರಿಸಿದ ಹನುಮಂತ;

ಹುಬ್ಬಳ್ಳಿ: ಹನುಮ ಜಯಂತಿ ದಿನದಂದು ಹನುಮಂತ ಕಣ್ಣೀರು(Crying)ಹಾಕಿರುವಂತಹ ಅಚ್ಚರಿ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಬಳಿಯಿರುವ ಬುಡರಸಿಂಗಿ ಗ್ರಾಮದ ಹನುಮಂತ ದೇವಸ್ಥಾನದಲ್ಲಿ ನಡೆದಿದೆ. ಜಯಂತಿ ಹಿನ್ನಲೆಯಲ್ಲಿ ಮೂರ್ತಿಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಮಂತ ಕಣ್ಣಿನಲ್ಲಿ ಬಿಟ್ಟು ಬಿಡಲಾರದೆ ಹನಿ ಹನಿ ಕಣ್ಣೀರು ಸುರಿಯುತ್ತಿದೆ. ಕಣ್ಣೀನಲ್ಲಿ ನೀರು ನೋಡಿ ಅಚ್ಚರಿಗೊಂಡ ಗ್ರಾಮಸ್ಥರು ಘಟನೆ ನೋಡಲು ಮುಗಿಬಿದ್ದಾರೆ. ಕಲಬುರಗಿ ನಗರದಲ್ಲಿ ಕೇಸರಿ ನಂದನ ಯುವ ಬ್ರಿಗೇಡ್ ವತಿಯಿಂದ ಅದ್ದೂರಿ ಹನುಮ ಜಯಂತಿ …

Read More »

ಗುಟ್ಕಾ ವ್ಯಾಪಾರಿಯ ಮನೆಯ ಬೆಡ್​ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆ: ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಲಖನೌ: ಉತ್ತರ ಪ್ರದೇಶದ ಹಮೀರ್​ಪುರ್​ನಲ್ಲಿರುವ ಗುಟ್ಕಾ ವ್ಯಾಪಾರಿ ಮನೆಯ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್​ಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಬೆಡ್​ ಅಡಿಯಲ್ಲಿ 6 ಕೋಟಿ 31 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.   ಏಪ್ರಿಲ್​ 12ರ ಮಂಗಳವಾರ ಈ ದಾಳಿ ನಡೆದಿದ್ದು, 6.31 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಡ್​ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆಯಾದ ಬಳಿಕ ಅಧಿಕಾರಿಗಳ ನೋಟು …

Read More »