ಬೆಂಗಳೂರು: ‘ವಿಧಿಯಾಟದಿಂದ ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದರು. ನಾನು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳಿದೆ. ಆದರೆ ಗುಲಾಮ್ ನಬಿ ಅಝಾದ್ ಅವರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂತ ಒತ್ತಾಯ ಮಾಡಿದರು’ ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು. ‘ಬಜೆಟ್ ನಲ್ಲಿ ಸಾಲ ಮನ್ನಾ ಮಾಡಲು ಹಣ ಮೀಸಲಿಡುವ ಬಗ್ಗೆ ಸಾಕಷ್ಟು …
Read More »ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳ: ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು..!
ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಪ್ರೇಯಸಿಗೆ ಗಿಫ್ಟ್ ಕೊಡಲು ಕಳ್ಳತನಕ್ಕೆ ಇಳಿದಿದ್ದ ಪ್ರಿಯಕರನಿಗೆ ಪ್ರೇಯಸಿಯೇ ಸಾಥ್ ಕೊಡುತ್ತಿದ್ದಳು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಬಂಧಿತ ಪ್ರೇಮಿಗಳನ್ನು ವಿನಯ್ (32) ಹಾಗೂ ಪ್ರೇಯಸಿ ಕೀರ್ತನಾ(25) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಚಂದ್ರಲೇಔಟ್ ಪೊಲೀಸರಿಂದ ಪ್ರೇಮಿಗಳ ಬಂಧನವಾಗಿದೆ. ಪ್ರೇಮಿ ವಿನಯ್, ರಾಜಾಜಿನಗರದ ರೌಡಿಶೀಟರ್. ಗಿಫ್ಟ್ ಕೊಡಿಸುವಂತೆ ವಿನಯ್ನನ್ನು ಪ್ರೇಯಸಿ ಕೀರ್ತನಾ ಪೀಡಿಸುತ್ತಿದ್ದಳು. ಹೀಗಾಗಿ, ವಿನಯ್ ಒಂದು …
Read More »ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ಯುವಕನ ಕೊಲೆ: ಯುವತಿ ಪೋಷಕರು ಸೇರಿ 10 ಮಂದಿ ಬಂಧನ
ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದ ಹಂತಕರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವತಿಯ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 …
Read More »ಹೆತ್ತ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದ ತಾಯಿ ಸೇರಿ ಖತರ್ನಾಕ್ ಗ್ಯಾಂಗ್ ಅಂದರ್
ಬೆಂಗಳೂರು: ಮಕ್ಕಳಿಲ್ಲ ಅನ್ನೋ ವೀಕ್ನೆಸ್ಸೇ ಇವರ ಬಂಡವಾಳ. ಸಂತಾನ ಭಾಗ್ಯ ಇಲ್ಲ ಎಂದು ಬಾಡಿಗೆ ಮಕ್ಕಳನ್ನ ಪಡೆಯೋ ನಿರ್ಧಾರಕ್ಕೆ ಬರೋ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಬಿಡಿ. ಯಾಕಂದ್ರೆ ಮಕ್ಕಳಾಗದೇ ಬೇಸತ್ತಿರುವ ಮುಗ್ಧ ಜನರೇ ಇವರ ಟಾರ್ಗೆಟ್. ಜಿಲ್ಲೆಯಲ್ಲಿ ಬಾಡಿಗೆ ತಾಯಿ ಮೂಲಕ ಮಕ್ಕಳು ಕೊಡ್ತೀವಿ ಅಂತ ಹೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ …
Read More »ಅಜಾಗೃತೆಯಿಂದ ಬಂದ ಟ್ಯಾಂಕರ್ ಢಿಕ್ಕಿ : ಬೈಕ್ ಸವಾರ ದಾರುಣ ಸಾವು.
ಚಿಂತಾಮಣಿ : ಅತಿ ವೇಗ ಮತ್ತು ಅಜಾಗೃತೆಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿರುವ ಅವಘಡ ನಗರದ ಕೋಲಾರ ವೃತ್ತದಲ್ಲಿ ಶುಕ್ರವಾರ ಸಂಭವಿಸಿದೆ. ಮದನಪಲ್ಲಿ ಕಡೆಯಿಂದ ಶುಕ್ರವಾರ ಬೆಳ್ಳಗ್ಗೆ 9.30ರ ವೇಳೆಗೆ ಅವಘಡ ಸಂಭವಿಸಿದ್ದು, ಚಿಂತಾಮಣಿ ಕಡೆಗೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೂಡಲೆ …
Read More »RSS ಇಲ್ಲದಿದ್ದರೆ ಭಾರತ ನಾಲ್ಕೈದು ಪಾಕಿಸ್ತಾನಗಳ ನಿರ್ಮಾಣವಾಗುತ್ತಿದ್ದವು’
ಹುಬ್ಬಳ್ಳಿ: ದೇಶ ರಕ್ಷಣೆಗೆ ಬದ್ಧವಾಗಿರುವ ಸಂಘ ಇಲ್ಲದೇ ಹೋಗಿದ್ದರೆ ಭಾರತದಲ್ಲಿ ಈ ವೇಳೆಗಾಗಲೇ ನಾಲ್ಕೈದು ಪಾಕಿಸ್ತಾನಗಳು ನಿರ್ಮಾಣವಾಗುತ್ತಿದ್ದವು ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಆರ್ ಎಸ್‌ಎಸ್ ಅನ್ನು ಜಿದ್ದಿಗೆ ಬಿದ್ದಂತೆ ಟೀಕಿಸುತ್ತಿವೆ. ಆದರೆ ದೊಡ್ಡ ಇತಿಹಾಸ ಹೊಂದಿರುವ ಆರ್ ಎಸ್‌ಎಸ್‌ನಿಂದಾಗಿ ದೇಶ ಸುರಕ್ಷಿತವಾಗಿ ಹಾಗೂ ಶಾಂತಿರೀತಿಯಿಂದ ಉಳಿದುಕೊಂಡಿದೆ. ದೇಶದ ಒಗ್ಗಟ್ಟು …
Read More »ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧದ ನೌಕರರಿಂದಲೂ ಡೀಲ್ : ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ, ಭ್ರಷ್ಟಜನತಾಪಾರ್ಟಿ ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ …
Read More »ಹಾನಗಲ್ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ
ಹಾವೇರಿ: ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಶಿವರಾಜ ಸಜ್ಜನರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಹಾನಗಲ್ ಪಟ್ಟಣದ ಕುಮಾರೇಶ್ವರ ಮಠದಿಂದ ಮೆರವಣಿಗೆ ಆರಂಭವಾಗಿತ್ತು. ಸಚಿವರಾದ ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ರಾಜುಗೌಡ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಅನೇಕರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
Read More »ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಂದು ಬಲಿ.. ಟಿಪ್ಪರ್ ಹರಿದು ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗೆ ಸಾಮಾನ್ಯ ಜನರು ಬಲಿಯಾಗುತ್ತಿರುವ ದುರ್ಘಟನೆಗಳು ಮುಂದುವರೆದಿದ್ದು, ಇಂದು ಕೂಡ ಓರ್ವ ಮಹಿಳೆ ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಅಪಘಾತ ನಡೆದಿದ್ದು, ದ್ವಿ-ಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳೆ ಮೇಲೆ ಹರಿದ ಟಿಪ್ಪರ್ ಲಾರಿ ಹರಿದಿದೆ. ಒಂದೇ ಕುಟುಂಬದ ಮೂವರು ಬೈಕ್ನಲ್ಲಿ ಚಲಿಸುತ್ತಿದ್ದ ವೇಳೆ ರಸ್ತೆಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಮಹಿಳೆ ಮೇಲೆ ಟಿಪ್ಪರ್ …
Read More »ಮೋದಿ ರಾಜಕೀಯ ಸೇವೆಗೆ ಧನ್ಯವಾದ ಅರ್ಪಿಸಲು ಕಮಲ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ
ತುಮಕೂರು: ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂಜಿನ ಮೆರವಣಿಗೆ ಮೂಲಕ ಪ್ರಧಾನಿ ಮೋದಿಯವರ ರಾಜಕೀಯ ಸೇವೆಗೆ ಬಿಜೆಪಿ ಕಾರ್ಯಕರ್ತರು ಧನ್ಯವಾದ ಅರ್ಪಿಸಿದ್ದಾರೆ. ಸೇವಾ ಮತ್ತು ಸಮರ್ಪಣಾ ಅಭಿಯಾನ ಹೆಸರಿನಲ್ಲಿ ಪಂಜಿನ ಮೆರವಣಿಗೆ ನಡೆಯಿತು, ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜು ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ 20 ವರ್ಷ ಸಾರ್ಥಕ ರಾಜಕೀಯ ಸೇವೆ …
Read More »