Breaking News

ವಿಶ್ವಕಪ್ ಕ್ರಿಕೆಟ್​ ಟೂರ್ನಿಯಲ್ಲಿ ಪಾಕ್ ಬಗ್ಗು ಬಡಿದ ಭಾರತ ತಂಡದ ವನಿತೆಯರು..!

ಮಹಿಳೆಯರ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಕ್ರಿಕೆಟ್​ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ಮಣಿಸಿದೆ. ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್​​​​ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು ಪಾಕ್​ಗೆ 245 ರನ್​ಗಳ ಗುರಿಯನ್ನ ನೀಡಿತ್ತು. ಈ ಗುರಿಯನ್ನ ಬೆನ್ನು ಹತ್ತಿದ ಪಾಕಿಸ್ತಾನ 43 ಓವರ್ ಆಡಿ ತನ್ನೆಲ್ಲಾ ವಿಕೆಟ್​ಗಳನ್ನ ಕಳೆದುಕೊಂಡು ಸೋಲಿಗೆ ಶರಣಾಯಿತು. ಈ ಮೂಲಕ ಭಾರತ 107 ರನ್​ಗಳ ಭರ್ಜರಿ ಗೆಲುವನ್ನ ಸಾಧಿಸಿದೆ. …

Read More »

ಬಡವರಿಗಾಗಿ ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ: ಸಿದ್ದರಾಮಯ್ಯ

ನಾವು ಅಧಿಕಾರದಲ್ಲಿ ಇದ್ದಿದ್ದರೆ ಬಡವರಿಗೆ ಮನೆ ನೀಡುತ್ತಿದ್ದೆವು. 1 ಲಕ್ಷ ಮನೆಗಳನ್ನು ಬಡವರಿಗಾಗಿ ನೀಡುತ್ತಿದ್ದೆವು. ಆದ್ರೆ ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಕುಮಾರಸ್ವಾಮಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುತ್ತೇವೆ. ಕಾಂಗ್ರೆಸ್‍ಗೆ ಓಟು ಹಾಕಿದರೆ ನನಗೇ ಓಟು ಹಾಕಿದಂತೆ ಎಂದರು.

Read More »

ಕಾಂಗ್ರೆಸ್ 60 ವರ್ಷದಲ್ಲಿ ಏನೂ ಮಾಡಿಲ್ಲ:ಗೋವಿಂದ ಕಾರಜೋಳ

ಮೇಕೆದಾಟು ವಿಚಾರದಲ್ಲಿ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಯಾದಗಿರಿಯ ನಾರಾಯಣಪುರದಲ್ಲಿ ಸಚಿವ ಗೋವಿಂದ ಕಾರಜೋಳ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಾಂಗ್ರೆಸ್ 60 ವರ್ಷದಲ್ಲಿ ಏನೂ ಮಾಡಿಲ್ಲ. ನಾವು ಮೊದಲು 1 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಕೇಂದ್ರ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಮೇಕೆದಾಟು ಯೋಜನೆಯನ್ನು ಖಂಡಿತವಾಗಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More »

ಯಾವುದೇ ಮುಂದಾಲೋಚನೆ ಇಲ್ಲದ ಬಜೆಟ್: ಈಶ್ವರ್ ಖಂಡ್ರೆ

ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23 ರ ಬಜೆಟ್‌ಗೆ ದಿಕ್ಕು ದೆಸೆಯಿಲ್ಲ, ಯಾವುದೇ ಮುಂದಾಲೋಚನೆ ಇಲ್ಲದ ಬಜೆಟ್ ಇದಾಗಿದ್ದು ಕಲ್ಯಾಣ ಕರ್ನಾಟಕದ ಅಭಿವೃದ್ದಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ‌ 2,65,000 ಕೋಟಿ ಮೌಲ್ಯದ ಬಜೆಟ್ ಮಂಡನೆ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಂತಹ ಯೋಜನೆಗಳಿಲ್ಲ. ಕೇವಲ 3000 ಕೋಟಿ ರೂ ಘೋಷಣೆ …

Read More »

ಉಕ್ರೇನ್​ನಿಂದ ಸುರಕ್ಷಿತವಾಗಿ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ..

ಬೆಳಗಾವಿ : ಉಕ್ರೇನ್​​ನ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಬೆಳಗಾವಿಗೆ ಆಗಮಿಸಿದ ವಿದ್ಯಾರ್ಥಿನಿ ಬ್ರಾಹ್ಮಿ ಮನೋಜ ಪಾಟೀಲ್ ಅವರನ್ನು, ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಚಿಕ್ಕೋಡಿ ತಾಲೂಕಿನ ಬ್ರಾಹ್ಮಿ ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು. ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿರುವ ಬ್ರಾಹ್ಮಿ ಪಾಟೀಲ್, ಉಕ್ರೇನ್ ದೇಶದ ಚರ್ನಿವೇಸ್ಟ್ ನ ಬೊಕೊ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಯುದ್ಧ ಘೋಷಣೆಯಾದ …

Read More »

ರಷ್ಯಾ ಪಡೆಗಳಿಂದ ಮತ್ತೊಂದು ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಯತ್ನ

ಕೀವ್‌(ಉಕ್ರೇನ್​): ಉಕ್ರೇನ್‌ನಲ್ಲಿ ಕಳೆದ ವಾರ ಜಪೋರಿಜ್ಜ್ಯಾ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ರಷ್ಯಾದ ಪಡೆಗಳು ಮತ್ತೊಂದು ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳುವ ಪ್ಲಾನ್​ ಹೊಂದಿವೆ ಎಂದು ಕೀವ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥರ ಸಲಹೆಗಾರ ಅಲೆಕ್ಸಿ ಅರೆಸ್ಟೋವಿಚ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಷ್ಯಾದ ಪಡೆಗಳು ನಿಕೋಲೇವ್‌ನ ಉತ್ತರಕ್ಕೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಹಾಗೆ ಇದರ ಭಾಗವಾಗಿ ದಕ್ಷಿಣ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ …

Read More »

ಸಂಪೂರ್ಣ ʻಮಹಿಳಾ ಸಿಬ್ಬಂದಿʼಯನ್ನೇ ಹೊಂದಿದ ʻರೈಲ್ವೆ ನಿಲ್ದಾಣʼವಿದು. ಯಾವುದು ಗೊತ್ತಾ?

ಬೆಳಗಾವಿ: ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಬಿಡಿಸಿಸಿ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು, ಬ್ಯಾಂಕ್ ಬಾಗಿಲು ಮುರಿದು ನಕಲಿ ಕೀ ಬಳಸಿ ಹಣ, ಚಿಭಾರಣ ದೋಚಿ ಪರಾರಿಯಾಗಿದ್ದಾರೆ.

Read More »

ಗೃಹ ಸಚಿವರ ಜಿಲ್ಲೆಯಲ್ಲಿ ಪಿಎಸ್‌ಐ ಸಮ್ಮುಖ ಪೊಲೀಸರಿಂದ ವ್ಯಕ್ತಿಯ ಮೇಲೆ ಅಮಾನವೀಯ ಹಲ್ಲೆ

ಶಿವಮೊಗ್ಗ ಜಿಲ್ಲೆ ಅನಪೇಕ್ಷಿತ ಸುದ್ದಿಗಳಿಗೆ ಕಾರಣವಾಗುತ್ತಿದೆ. ಇತ್ತೀಚಿಗೆ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ (Harsha murder) ನಡೆದು ಶಿವಮೊಗ್ಗ ನಗರ (Shivamogga city) ಎರಡು ವಾರಗಳ ಕಾಲ ಸುದ್ದಿಯಲ್ಲಿತ್ತು. ಕೊಲೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸಿದವು. ನಗರದಲ್ಲಿ ಕರ್ಫ್ಯೂ, ನಿಷೇಧಾಜ್ಞೆಗಳನ್ನು ಹೇರಲಾಗಿತ್ತು ಮತ್ತು ಶಾಲಾ ಕಾಲೇಜುಗಳು ಒಂದು ವಾರದವರೆಗೆ ಮುಚ್ಚಲ್ಪಟ್ಟಿದ್ದವು. ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಂಡ ಬಳಿಕ ಕೆಲವು ಕಡೆ ಪುನಃ ಹಿಜಾಬ್ ವಿವಾದ …

Read More »

ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಜೊತೆ ಅನೈತಿಕ (Immoral Relationship) ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತ ಸಂತೋಷ ಫರೀಟ್​​ನನ್ನು ಪರಶುರಾಮ ಕುರುಬರ ಕೊಲೆ ಮಾಡಿದ್ದಾನೆ. ಸಂತೋಷ್ ಫರೀಟ್(36) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ನಿವಾಸಿ. ಆರೋಪಿ ಪರಶುರಾಮ ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ. ಕೊಲೆಯಾದ ಸಂತೋಷ್ ಪತ್ನಿ ಜೊತೆ ಪರಶುರಾಮ ಕುರಬರ ಅನೈತಿಕ ಸಂಬಂಧ ಹೊಂದಿದ್ದ. …

Read More »

ಶಿಕ್ಷಕಿ ಮೇಲೆ ಬಸ್ ನಲ್ಲಿ ಲೈಂಗಿಕ ಕಿರುಕುಳ: ಮೂಕ ಪ್ರೇಕ್ಷಕರಾದ ಸಹ ಪ್ರಯಾಣಿಕರು

ಕೋಝಿಕ್ಕೋಡ್: ಕೇರಳ ಸರ್ಕಾರಿ ಬಸ್ ನಲ್ಲಿ ರಾತ್ರಿ ಪ್ರಯಾಣದ ವೇಳೆ ಶಿಕ್ಷಕಿಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಇದೀಗ ಸಂಚಲನ ಮೂಡಿಸಿದೆ. ಕೋಝಿಕ್ಕೋಡ್ ಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದ ಅಧ್ಯಾಪಿಕೆ ಮೇಲೆ ಹಿಂದೆ ಕುಳಿತಿದ್ದ ಸಹ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಶಿಕ್ಷಕಿ ಪ್ರಶ್ನಿಸಿದಾಗ ಆತ ಕ್ಷಮೆ ಕೇಳುವವನಂತೆ ನಾಟಕವಾಡಿದ್ದ. ಈ ಬಗ್ಗೆ ಶಿಕ್ಷಕಿ ಮತ್ತು ಕಾಮುಕನ …

Read More »