ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆಯೇ ಆಡಳಿತರೂಢ ಬಿಜೆಪಿ ಶಾಸಕರು, ಒಬ್ಬರ ನಂತರ ಒಬ್ಬರಂತೆ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷ (ಎಸ್‌ಪಿ) ಸೇರುತ್ತಿದ್ದಾರೆ. ಇದನ್ನೇ ಉಲ್ಲೇಖ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಪಿ ವಿಕೆಟ್‌ಗಳು ಪತನಗೊಳ್ಳುತ್ತಿವೆ, ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಒಂದು ವೇಳೆ ಗೊತ್ತಿದ್ದರೂ ಕ್ಯಾಚ್ ಕೈಚೆಲ್ಲುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ’80 ವರ್ಸಸ್ …
Read More »ಮೇಕೆದಾಟು ಪಾದಯಾತ್ರೆ ಭದ್ರತೆಗೆ ತೆರಳಿದ್ದ 25 ಪೊಲೀಸರಿಗೆ ಕೊರೋನಾ
ಕೋಲಾರ: ಮೇಕದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಕೈಗೊಂಡಿದ್ದ ಪಾದಯಾತ್ರೆಗೆ ತೆರಳಿದ್ದ ಕೋಲಾರ ಜಿಲ್ಲೆಯ 25 ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಭದ್ರತಾ ಕರ್ತವ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ತೆರಲಿದ್ದು, ಕೋಲಾರ ಜಿಲ್ಲೆಯ ಪೊಲೀಸರು ಕೂಡ ತೆರಳಿದ್ದರು. ಹೀಗೆ ಪಾದಯಾತ್ರೆಯ ಭದ್ರತೆಗೆ ತೆರಳಿದ್ದ ಕೋಲಾರ ಜಿಲ್ಲೆಯ 25 ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಲಾಗಿದೆ.
Read More »ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’
ಜಗಳೂರು: ‘ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’ ತಾಲ್ಲೂಕಿನ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಜೀವ್ ಅವರ ತಾಯಿ ಪಟ್ಟಣದ ಆಸ್ಪತ್ರೆಯಲ್ಲಿ ರೋದಿಸಿದ್ದು ಹೀಗೆ. ಪಟ್ಟಣದ ಶವಾಗಾರದಲ್ಲಿ ಹೆತ್ತ ಮಕ್ಕಳು ಶವವಾಗಿ ಸಾಲಾಗಿ ಮಲಗಿರುವ ಘೋರ ದೃಶ್ಯ ಕಂಡು ಹೆತ್ತವರು ಆಘಾತಕ್ಕೆ ಒಳಗಾದರು. ಸಂಜೀವ್ ಅವರ ತಾಯಿ ಗೋಗರೆಯುತ್ತಿದ್ದ ದೃಶ್ಯ …
Read More »ಆಟೋ ಚಾಲಕನ ಬರ್ಬರ ಹತ್ಯೆ: 24 ಗಂಟೆಯಲ್ಲಿಯೇ ಆರೋಪಿಗಳ ಬಂಧನ:
ಇದೀಗ ಸಿಂದಗಿ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ ನೂರ್‌ಅಹ್ಮದ್ ಬುಡ್ಡೆಸಾಬ್ ನಾಯಿಕ್, ಸಮೀರ ರಫೀಕ್ ನಾಯಿಕ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಗುರುವಾರ ತಡರಾತ್ರಿ ಆಟೋ ಚಾಲಕನಾಗಿದ್ದ ಆಸೀಫ್ ಮೆಹಬೂಬ್ ಜಿನಾವರ್ ಎಂಬಾತನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕೊಲೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸಿಂದಗಿ ಪಿಎಸ್‌ಐ ನಿಂಗಪ್ಪ ಪೂಜಾರಿ ಹಾಗೂ ತಂಡ 24 ಘಂಟೆಗಳ …
Read More »ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿ
ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣಗೊಳಪಡಿಸಿದ್ದಾರೆ. ಕಳೆದ ತಿಂಗಳು 24ರಂದು ರಾತ್ರಿ ದುಷ್ಕರ್ಮಿಗಳು ಬಂದು ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದನ್ನ ಪ್ರಶ್ನಿಸಲು ಹೋದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಚಿಕಿತ್ಸೆ …
Read More »ರಾಜ್ಯಾದ್ಯಂತ ಇಂದಿನಿಂದ 2ನೇ ವಾರದ `ವೀಕೆಂಡ್ ಕರ್ಪ್ಯೂ’ ಜಾರಿ: ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೇರಿರುವ ವೀಕೆಂಡ್ ಕರ್ಪ್ಯೂ (Weekend Curfew ) ನಿನ್ನೆಯ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಆರಂಭಗೊಂಡಿದೆ. ಇಂದಿನಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್ ಹಾಕಲಿದ್ದಾರೆ. ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ …
Read More »ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳು ಮೇಕೆದಾಟು ಯೋಜನೆ ನೆಪದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ
ಬೆಂಗಳೂರು, – ಪರಿಸರ ಉಳಿವಿಗಾಗಿ ಮೇಕೆದಾಟು ಯೋಜನೆಯ ಜಾರಿಯಾಗಬಾರದು ಎಂದು ಪರಿಸರ ಸಂರಕ್ಷಣಾ ಸಮಿತಿಯಿಂದ ಪ್ರೆಸ್ ಕ್ಲಬ್ ಆವರಣದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಸಂವಾದದಲ್ಲಿ ಭಾಗವಹಿಸಿದ್ದರು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಮಾತನಾಡುತ್ತಾ ಮೇಕೆದಾಟು ಪರವಾಗಿದ್ದೇವೆ ಆದರೆ ಅಲ್ಲಿ ಕಟ್ಟುವ ಡ್ಯಾಮಿಗೆ ನಮ್ಮ ವಿರೋಧ ಇದೆ . ಭೂಮಿಯ ಮೇಲೆ ಸ್ವತಂತ್ರವಾಗಿ ನಿರ್ಭೀತಿಯಿಂದ ಜೀವಿಸುವ ಹಕ್ಕು …
Read More »ರಾಯಬಾಗ ತಾಲೂಕಿನ ಮುಳಗಳಖೋಡ ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್
ಚಿಕ್ಕೋಡಿ : ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ನೂರಾರು ಜನರು ಸೇರಿ ಜಾತ್ರೆ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದ್ರೆ, ಮಹಾರಾಷ್ಟ್ರದ ಗಡಿಗೆ ಹೊಂದಿರುವ ಚಿಕ್ಕೋಡಿಯಲ್ಲಿ ಮಾತ್ರ ಅಧಿಕಾರಿಗಳು ನಿರ್ಲಕ್ಷ್ಯತೆ ತೋರಿಸುತ್ತಿದ್ದಾರೆ. ಜನರಿಗೆ …
Read More »ಒಂದಲ್ಲ..ಎರಡಲ್ಲ..11 ಬಾರಿ ಕೋವಿಡ್ ಲಸಿಕೆ ಪಡೆದ ಭೂಪ..!
ಒಂದು ವರ್ಷದ ಅವಧಿಯಲ್ಲಿ 11 ಬಾರಿ ಕೋವಿಡ್ ಲಸಿಕೆಯನ್ನು 84 ವರ್ಷದ ವೃದ್ಧ ವ್ಯಕ್ತಿಯೊರ್ವ ಪಡೆದಿರುವ ಘಟನೆ ಬಿಹಾರದಲ್ಲಿ ಕಂಡು ಬಂದಿದೆ. ಬಿಹಾರದ ಮಾಧೇಪುರ ಜಿಲ್ಲೆಯ ನಿವಾಸಿ ಬ್ರಹ್ಮದೇವ್ ಮಂಡಲ್ ಎಂಬ ವೃದ್ಧ ವ್ಯಕ್ತಿಯೇ 11 ಬಾರಿ ಲಸಿಕೆ ಪಡೆದ ಪುಣ್ಯಾತ್ಮ. ಬ್ರಹ್ಮದೇವ್ ಮಂಡಲ್ ಅಂಚೆ ಇಲಾಖೆಯ ನಿವೃತ್ತ ಸರ್ಕಾರಿ ನೌಕರ. ಈ ವಾರದ ಆರಂಭದಲ್ಲಿ 12ನೇ ಬಾರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಬ್ರಹ್ಮದೇವ್ ಮಂಡಲ್ ಅವರು ಆರೋಗ್ಯ …
Read More »ಕುಂದಾನಗರಿಯಲ್ಲಿ ನೀರಿಗಾಗಿ ಹಾಹಾಕಾರ:
ಕುಂದಾನಗರಿ ಬೆಳಗಾವಿ ನಗರದಲ್ಲಿ ನೀರಿಗಾಗಿ ಹಾಹಾಕಾರ. ವಾಲ್ಮನ್‍ಗಳ ಪ್ರತಿಭಟನೆಯಿಂದ ಆಜಾದ್ ನಗರದ ನಿವಾಸಿಗಳಿಗೆ ಕಳೆದ 11ದಿನಗಳಿಂದ ನೀರು ಬಾರದ ಕಾರಣ ಆಜಾದ್ ನಗರ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ಆಜಾದ್ ನಗರದಲ್ಲಿ ಕಳೆದ 12ದಿನಗಳಿಂದ ನೀರುಬಂದಿಲ್ಲ. ವಾಲ್ಮನ್‍ಗಳು ನಡೆಸಿದ ಸ್ಟ್ರೈಕ್‍ನಿಂದ ನೀರು ಸರಬುರಾಜಲ್ಲಿ ವ್ಯತ್ಯಯವಾಗುತ್ತಿದೆ. ಹಾಗಾಗಿ ಆಜಾದ್ ನಗರದ ನಿವಾಸಿಗಳಿಗೆ ಕಳೆದ 11ದಿನಗಳಿಂದ ನೀರು ಬಾರದೇ ಕಂಗಾಲಾಗಿದ್ದಾರೆ. ಇನ್ನು ಮಹಿಳೆಯರು ಮಕ್ಕಳು ಎನ್ನದೇ ಎಲ್ಲರೂ ನಗರದ ಅಶೋಕ್ ಸರ್ಕಲ್‍ನಲ್ಲಿ …
Read More »
Laxmi News 24×7