ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಕಾರ್ಯಕ್ಷಮತೆ ಅದು ಮುಂದಿನ ಚುನಾವಣೆಗಳಲ್ಲಿ ಸೋಲಲಿದೆ ಎನ್ನುವುದನ್ನು ಖಚಿತಪಡಿಸುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದಿ.ಪ್ರಿಂಟ್ ಗೆ ನೀಡಿರುವ ಸಂದರ್ಶನದಲ್ಲಿ, “ನರೇಂದ್ರ ಮೋದಿ ಜನಪ್ರಿಯತೆ ಕುಸಿದಿದೆ. 2019ರಲ್ಲಿ ಅವರಿಗಿದ್ದ ಜನಪ್ರಿಯತೆಗೆ ಹೋಲಿಸುವುದಾದರೆ ಈಗ ಅವರ ಜನಪ್ರಿಯತೆಗೆ ಪೆಟ್ಟು ಬಿದ್ದಿದೆ. ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ ಹಾಗೂ ಅಸಮರ್ಪಕ ಕೋವಿಡ್ ನಿರ್ವಹಣೆಯಿಂದಾಗಿ ನಾಗರಿಕರು ಅಸಮಾಧನಗೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಜನರು …
Read More »ಯುವತಿ ಆತ್ಮಹತ್ಯೆ ಪ್ರಕರಣ : ASI ಸೇರಿದಂತೆ 8 ಮಂದಿ ವಿರುದ್ದ FIR
ಮೈಸೂರು,ಅ.18- ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಹಿನ್ನಲೆಯಲ್ಲಿ ಡೆತ್ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣಾದ ಪ್ರಕರಣ ಸಂಬಂಧ ನಂಜನಗೂಡಿನ ಹುಲ್ಲಹಳ್ಳಿ ಠಾಣೆ ಎಎಸ್ಐ ಸೇರಿದಂತೆ 8 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಎಎಸ್ಐ ಎಂ.ಶಿವರಾಜು 8ನೇ ಆರೋಪಿಯಾಗಿದ್ದು ಇವರು ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಎಫ್ಐಆರ್ ದಾಖಲಾಗಿದೆ. ಯುವತಿ ನ್ಯಾಯ ಕೇಳಿ ಬಂದಾಗ ಸೂಕ್ತವಾಗಿ ಸ್ಪಂದಿಸದೆ ಎಎಸ್ಐ ಶಿವರಾಜು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಆರೋಪಿಗಳ ಆಮಿಷಕ್ಕೆ ಬಲಿಯಾಗಿ ಯುವತಿ ನೀಡಿದ ದೂರು …
Read More »ಕೃಷಿ ಕಾಯ್ದೆ ವಿರುದ್ಧ ಯುವ ರೈತನ ಒಂಟಿ ಹೋರಾಟ, ಸೈಕಲ್ ಮೇಲೆ ಊರೂರು ತಿರುಗಾಟ
ಕಳೆದ ಒಂದು ವರ್ಷದಿಂದ ನಿರಂತರವಾಗಿ ರೈತರ ಪ್ರತಿಭಟನೆಗಳು(Farmers Protest) ಮುಂದುವರಿದಿದೆ. ವಿರೋಧದ ನಡುವೆಯೂ ಕೆಲವರು ರೈತರೊಂದಿಗೆ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಅವರಿಗೆ ಬೆಂಬಲ ನೀಡಿದರೆ, ಇನ್ನೂ ಕೆಲವರು ಅವರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಇಲ್ಲೊಬ್ಬ ಯುವ ರೈತ ಅನ್ನದಾತರಿಗೆ ಬೆಂಬಲ ಸೂಚಿಸಲು ಕಾಶ್ಮೀರದಿಂದ(Kashmir) ಕನ್ಯಾಕುಮಾರಿಯವರೆಗೆ(Kanya Kumari) ಯಾತ್ರೆ ಹೊರಟಿದ್ದು, ಶನಿವಾರ ಕಾರವಾರಕ್ಕೆ ಭೇಟಿ ನೀಡಿದರು. ಯಾರಿವ ಈ ಯುವ ರೈತ? ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು …
Read More »ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಬೆಂಗಳೂರು : ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು. ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮುಂದಿಟ್ಟರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಹಣಕಾಸು …
Read More »ಸಿದ್ದರಾಮಯ್ಯ, ಎಚ್ಡಿಕೆಗೆ ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ: ಹೆಬ್ಬಾರ
ಶಿರಸಿ: ರಾಜಕೀಯವಾಗಿ ಹತಾಶರಾಗಿರುವ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಆರ್ಎಸ್ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಅವರಿಬ್ಬರಿಗೆ ತಾವು ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ’ ಎಂದು ಲೇವಡಿ ಮಾಡಿದರು. ‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರಸ್ಪರ ಟೀಕಿಸಿಕೊಳ್ಳುತ್ತಾರೆ. ಒಮ್ಮೆಲೆ ಸಂಘ ಪರಿವಾರದ ಮೇಲೆ ಹರಿಹಾಯುತ್ತಾರೆ. ಇದು ಅವರಿಬ್ಬರೂ ಗೊಂದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ’ ಎಂದರು. ‘ವಿಜಯದಶಮಿ ಮುಗಿಯಲಿ ಎಂದು …
Read More »ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ: ಸತೀಶ ಜಾರಕಿಹೊಳಿ ಫೌಂಡೇಶನ್
ಗೋಕಾಕ :17-10-2021 ರಂದು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ದಿನಾಂಕ ಗೋಕಾಕ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು, ಕಚೇರಿಯ ಒಳಗಡೆ ಮತ್ತು ಹೊರಗಡೆ ಬಹಳ ಕಸ ಮತ್ತು ಗುಟಕಾ ಪಾಕೇಟ ತಿಂದು ಉಗುಳಿದ ಗಲಿಜು ಇವನೆಲ್ಲಾ ಸ್ವಚ್ಛತೆಯನ್ನು ಮಾಡಿರುತ್ತೇವೆ. ಇನ್ನು ಮುಂದೆ ತಮ್ಮ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಸ್ವಚ್ಛತೆಗೆ ತಾವು ಕೆಲವು ನಿಯಮಗಳನ್ನು ಕಚೇರಿಯ ಆವರಣದಲ್ಲಿ ಜಾರಿಗೆ ತರಬೇಕು. ಕಸದ ಡಬ್ಬಿ …
Read More »ಹಾಸನ: ಕುಡಿದ ಅಮಲಿನಲ್ಲಿ ಬಾರ್ ಮುಂದೆ ನಿಂತಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹತ್ಯೆ
ಹಾಸನ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕಾರು ಹತ್ತಿಸಿ ಓರ್ವನ ಹತ್ಯೆಗೆ ಕಾರಣವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಶಿವರ ಗ್ರಾಮದಲ್ಲಿ ಘಟನೆ ನಡೆದಿದೆ. ಎಂ. ಶಿವರ ಗ್ರಾಮದ ಬಾರ್ ಮುಂದೆ ನಿಂತಿದ್ದಾಗ ಹೊಂಗೇಹಳ್ಳಿಯ ನವೀನ್ ಎಂಬಾತನಿಂದ ಈ ಕುಕೃತ್ಯ ನಡೆದಿದೆ. ಬಾರ್ ಮುಂದೆ ನಿಂತಿದ್ದ ನಂದೀಶ್, ಗಿರೀಶ್ ಮತ್ತಿರರ ಮೇಲೆ ಕಾರು ಚಲಾಯಿರುವ ಆರೋಪಿ ಹಂತಕನಾಗಿದ್ದಾನೆ. ಘಟನೆಯಲ್ಲಿ ನಂದೀಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಡಿದ ಅಮಲಿನಲ್ಲಿ …
Read More »ಬೀದರ್: ನಗರದ ಕೊಳಚೆ ನೀರಿನಿಂದ ಮಲಿನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು
ಬೀದರ್: ಐತಿಹಾಸಿಕ ಬೀದರ್ ಕೋಟೆಯೊಳಗೊಂದು ಪುಟ್ಟ ಊರಿದೆ. ಈ ಊರಲ್ಲಿರುವ ಇನ್ನೂರು ಎಕರೆಯಷ್ಟು ಜಮೀನಿನಲ್ಲಿ ರೈತರು ತರಕಾರಿ ಬೆಳೆಸುತ್ತಾ ನೆಮ್ಮದಿಯಿಂದಿದ್ದರು. ಇಲ್ಲಿ ಬೆಳೆಸುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆದರೀಗ ಆ ರೈತರಿಗೆ ತರಕಾರಿ ಬೆಳೆಯೋಕೆ ಸಾಧ್ಯವಾಗುತ್ತಿಲ್ಲ ಯಾಕೆ ಅಂತೀರಾ ಈ ವರದಿ ನೋಡಿ. ನಗರದ ಗಲೀಜು ನೀರು ಗ್ರಾಮದ ಹೊಲಕ್ಕೆ ಬರುತ್ತಿದೆ. ಇದರಿಂದ ಇಲ್ಲಿರುವ ಬಾವಿಯ ನೀರು ಮಲಿನವಾಗುತ್ತಿದೆ. ಕುಡಿಯೋ ನೀರು ಸೇರಿ ಕೃಷಿಗೂ ಇದರಿಂದ …
Read More »ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು ಕ್ವಾರಿಗೆ ಒಬ್ಬ ಯುವಕ ಪಾರಾಗಿದ್ದಾನೆ. ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿ ನಡೆದಿದೆ. ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ. ಈ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋಟೋ ಶೂಟ್ಗೆಂದು ಕ್ವಾರಿಯಲ್ಲಿ ಯುವಕರು ಇಳಿದಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು …
Read More »ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ನಿರ್ಧಾರ!
ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ (Lorry Owners Association) ನಿರ್ಧರಿಸಿದೆ. ರಾಜ್ಯಾದ್ಯಂತ ಲಾರಿ ಮುಷ್ಕರದ ಬಗ್ಗೆ ಲಾರಿ ಮಾಲೀಕರ ಸಂಘ ಅಕ್ಟೋಬರ್ 23ರಂದು ತೀರ್ಮಾನ ಕೈಗೊಳ್ಳಲಿದೆ. ಅಕ್ಟೋಬರ್ 23ರ ರೊಳಗೆ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಿದರೆ ಮಾತ್ರ ಲಾರಿಗಳು ರಸ್ತೆಗೆ ಇಳಿಯುತ್ತವೆ. ಇಲ್ಲವಾದಲ್ಲಿ ಗೂಡ್ಸ್ ವೆಹಿಕಲ್ಗಳ ಓಡಾಟ ರಾಜ್ಯಾದ್ಯಂತ ನಿಲ್ಲುತ್ತವೆ …
Read More »