Breaking News

ಬಸವ ಜಯಂತಿಯಂದೇ ಬಸವಣ್ಣನಿಗೆ ಅಪಮಾನ!

ವಿಜಯಪುರ: ಬಸವ ಜಯಂತಿಯಂದೇ ಜಗಜ್ಯೋತಿ ಬಸವಣ್ಣನಿಗೆ ಅಪಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಗಜ್ಯೋತಿ ಬಸವೇಶ್ವರ ದಿನಾಚಾರಣೆಯನ್ನು ವಿಜಯಪುರದಲ್ಲಿ ಆದ್ಧೂರಿಯಾಗಿ ಆಚರಿಸಲಾಯಿತು. ನಗರದ ಬಸವೇಶ್ವರರ ಮೂರ್ತಿ ಎದುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಎಸ್ಪಿ ಆನಂದ ಕುಮಾರ ಸೇರಿದಂತೆ ಹಲವರು ಭಾಗಿ ಆಗಿದ್ದರು. ಇದೆ ವೇಳೆ ಬಸವೇಶ್ವರರಿಗೆ ಅಪಮಾನ ಮಾಡಿದ ಘಟನೆ ಕೂಡ ನಡೆಯಿತು.ಸಂಸದ ರಮೇಶ ಜಿಗಜಿಣಗಿ ಶೂ ಧರಿಸಿ ಪೂಜೆಯಲ್ಲಿ ಪಾಲ್ಗೊಂಡರು‌. …

Read More »

ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು

ಹಾವೇರಿ: ಬಸವ ಜಯಂತಿ ಪ್ರಯುಕ್ತ ನಡೆದ ಎತ್ತುಗಳ ಮೆರವಣಿಗೆ ವೇಳೆ ಸವಣೂರು ತಾಲೂಕಿನ ಗ್ರಾಮದಲ್ಲಿ ಯುವಕನೊಬ್ಬ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ. ಮಂಗಳವಾರ ರಾತ್ರಿ ಕಾರಡಗಿ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಎತ್ತುಗಳ ಮೇಲೆ ಖಾಜಾಮುದ್ದೀನ್ ಕೋಲ್ಕಾರ(29) ಎಂಬಾತ ಚಪ್ಪಲಿ ತೂರಿದ್ದಾನೆ. ಚಪ್ಪಲಿ ತೂರಿದ್ದಕ್ಕೆ ಆಕ್ರೋಶಗೊಂಡ ಜನರು ಯುವಕನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್‌ನನ್ನು ವಶಕ್ಕೆ ಪಡೆದಿದ್ದಾರೆ. 

Read More »

ಆಮೆಗತಿಯಲ್ಲಿ ಸಾಗುತ್ತಿದೆ ಚಿಕ್ಕೋಡಿಯ ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ

ಅಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ 100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಕಟ್ಟಲಾಗುತ್ತಿದೆ. ಎರಡೂ ವರ್ಷ ಮುಂಚೆಯೇ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ… ಸದ್ಯ ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..ಬೇಗನೆ ಕಾಮಗಾರಿ ಮುಗಿಸುವಂತೆ ಒತ್ತಾಯಿಸುತ್ತಿದ್ದಾರೆ.ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ 20 ಕೋಟಿ ಅನುದಾನ ನೀಡಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಬಾಣಂತಿ ಕೋಡಿ ರಸ್ತೆ ಪಕ್ಕದಲ್ಲಿ ನಿರ್ಮಾಣ ವಾಗುತ್ತಿರುವ ತಾಯಿ …

Read More »

M.E.S.ಬಾಲ ಬಿಚ್ಚೋಕೆ ಬಿಡಬಾರದು: ಸಿದ್ದರಾಮಯ್ಯ ಎಚ್ಚರಿಕೆ

ಗಡಿ ವಿವಾದಲ್ಲಿ ಮತ್ತೆ ಉದ್ಧಟತನ ಮೆರೆದ ನಾಡದ್ರೋಹಿ ಎಂಇಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಂಇಎಸ್‍ನವರ ಪುಂಡಾಟಿಕೆಯನ್ನ ಸರ್ಕಾರ ಹತ್ತಿಕ್ಕಬೇಕು. ಎಂಇಎಸ್ ಬಾಲ ಬಿಚ್ಚೋಕೆ ಬಿಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಾಡದ್ರೋಹಿ ಎಂಇಎಸ್ ಮುಖಂಡನೊರ್ವ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಬಾಲ್ಕಿ ಸಹಿತ ನೂತನ ನಕ್ಷೆ ತಯಾರಿಸಿ ಅಖಂಡ ಮಹಾರಾಷ್ಟ್ರ ನಕ್ಷೆ ಇರುವ ಪೋಸ್ಟ ಫೇಸಬುಕ್‍ನಲ್ಲಿ ಹಾಕಿರುವ ಬಗ್ಗೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‍ಎಚ್ ಗ್ರಾಮದಲ್ಲಿ …

Read More »

ಶ್ರೀ ದೊಡ್ಡಣ್ಣ ದಿ.5 ರಂದು ಬೆಳಗಾವಿಗೆ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀ ದೊಡ್ಡಣ್ಣ ಅವರು ಇದೇ ಗುರುವಾರ ದಿ.5 ರಂದು ಬೆಳಗಾವಿಗೆ ಆಗಮಿಸಲಿದ್ದು ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಕನ್ನಡ ಸಂಘ ಸಂಸ್ಥೆಗಳ ಸನ್ಮಾನವನ್ನು ಸ್ವೀಕರಿಸಲಿದ್ದಾರೆ. ಮುಂಜಾನೆ 10.30 ಕ್ಕೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸರಳ ಕಾರ್ಯಕ್ರಮದಲ್ಲಿ ದೊಡ್ಡಣ್ಣ ಅವರು ಕನ್ನಡ ನಾಡು, ನುಡಿ ಮತ್ತು ಗಡಿಯ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಪರ ಸಂಘಟನೆಗಳ …

Read More »

ವಿಶ್ವದಾದ್ಯಂತ ಮರಳಿನ ಅಭಾವ ಆತಂಕಕ್ಕೆ ಕಾರಣ

ಅತಿಯಾದ ಮಾನವನ ಚಟುವಟಿಕೆ ಹಾಗೂ ಸುಸ್ಥಿರವಲ್ಲದ ಅಸಮತೋಲಿತ ಅಭಿವೃದ್ಧಿಯ ಪರಿಣಾಮ ನೈಸರ್ಗಿಕ ಸಂಪನ್ಮೂಲಗಳಿಗೆ ನಿರಂತರವಾಗಿ ಹಾನಿಯಾಗುತ್ತಿದೆ. ಗಾಳಿಯ ಗುಣಮಟ್ಟ ಕುಸಿದಿದೆ, ಹಲವೆಡೆ ನೀರಿಗೆ ಬರ ಎದುರಾಗಿದೆ. ಮಣ್ಣು ಲವತ್ತತೆ ಕಳೆದುಕೊಳ್ಳುತ್ತಿದೆ. ಈಗ ವಿಶ್ವದಾದ್ಯಂತ ಮರಳಿನ ಅಭಾವ ಆತಂಕಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಗಣಿಗಾರಿಕೆ ಆಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮರಳು ಪ್ರಮುಖವಾದದ್ದು. ಅನಿಯಂತ್ರಿತ ಮರಳು ಎತ್ತುವಳಿ ಮತ್ತು ಅದರಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ …

Read More »

ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು

ಕಾಸರಗೋಡು: ಚಿಕನ್​ ಶೋರ್ಮಾ ತಿಂದ ಬಳಿಕ ಫುಡ್​ ಪಾಯಿಸನ್ ಆಗಿ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದ ಚೆರ್ವತ್ತೂರಿನಲ್ಲಿ ನಡೆದಿದೆ. ಇದಲ್ಲದೆ, 14 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.   ಮೃತ ವಿದ್ಯಾರ್ಥಿನಿಯನ್ನು ಕರಿವೆಳ್ಳೂರು ಪೆರಳಂ ನಿವಾಸಿ ದೇವಾನಂದಾ (16) ಎಂದು ಗುರುತಿಸಲಾಗಿದೆ. ಚೆರ್ವತ್ತೂರಿನ ಐಡಿಯಲ್ ಫುಡ್​ ಪಾಯಿಂಟ್​ನಲ್ಲಿ ವಿದ್ಯಾರ್ಥಿಗಳು ಶನಿವಾರ ಶೋರ್ಮಾ ಸೇವಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ, ಹೊಟ್ಟೆನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. …

Read More »

ಬಸ್​ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್​ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​!

ವೇಮುರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ. ಆಂಧ್ರ ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಶ್ವನಾಥ್​ ಅದೇ ಕಾಲೇಜಿನಲ್ಲಿ ಬಸ್​ ಚಾಲಕನಾಗಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಕಳೆದ ಏಪ್ರಿಲ್​ …

Read More »

ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಸಾಧ್ಯತೆ?

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ರಜೆಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೇ 16 ರಿಂದ 2022 -23 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಕೊರೋನಾ ಕಾರಣದಿಂದ ಎರಡು ವರ್ಷ ಶೈಕ್ಷಣಿಕ ಅವಧಿ ವಿಳಂಬವಾಗಿದೆ. ಈ ಬಾರಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ, ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಜೆ ಅವಧಿ ವಿಸ್ತರಿಸಬೇಕೆಂದು ವಿಧಾನಪರಿಷತ್ …

Read More »

P.S.I. ಆಗಬೇಕು ಅಂತ ಮನಿ ಪ್ಲಾಟ್ ಮಾರಿ ರೊಕ್ಕಾ ಕೊಟ್ಟವನ ಮನಿಗೆ ಪೋಲಿಸ್ ಬಂದ ಅರೆಸ್ಟ್ ಮಾಡಿಕೊಂಡ ಹೋಗೋ ಹಾಗ್ ಆಗೆತಿ..

ಕಲಬುರಗಿ: ಮಗ ಪಿಎಸ್‌ಐ ಆಗುತ್ತಾನೆಂದು ತಂದೆ ಮನೆ, ಸೈಟು ಮಾರಿ 50 ಲಕ್ಷ ರೂಪಾಯಿ ಲಂಚ ಕೊಟ್ಟು, ದುಡ್ಡೂ ಇಲ್ಲದೇ, ಕೆಲಸವೂ ಇಲ್ಲದೇ ಗೋಳಾಡುವ ಸ್ಥಿತಿ ಶರಣಪ್ಪ ಎನ್ನುವವರಿಗೆ ಬಂದಿದೆ. ಮಗ ಪ್ರಭು ಪಿಎಸ್​ಐ ಆಗಲಿ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮಾರಿ ಇದೀಗ ಬೀದಿಗೆ ಬಂದದ್ದೂ ಅಲ್ಲದೇ, ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಂದೆ-ಮಗನನ್ನು ವಶಕ್ಕೆ ಪಡೆಯಲಾಗಿದೆ. ಆಡಿಟರ್ ಚಂದ್ರಕಾಂತ್ ಕುಲಕರ್ಣಿ ಮುಖಾಂತರ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಆರ್​.ಡಿ. ಪಾಟೀಲ್ ಅವರಿಗೆ …

Read More »