Breaking News

ಮಾಹಿತಿ ಹಕ್ಕು ಅರ್ಜಿದಾರರಿಗೆ ಮಾಹಿತಿನೀಡದ ಅವರಿಗೆ ಐದು ಸಾವಿರ ರೂ.ಗಳ ದಂಡ ವಿಧಿಸಿ ಆದೇಶ

ಸಾಗರ: ಮಾಹಿತಿ ಹಕ್ಕು ಅರ್ಜಿದಾರರಿಗೆ ಮಾಹಿತಿ ನೀಡದಿರುವುದು ಮತ್ತು ವಿಚಾರಣೆಗೆ ಖುದ್ದು ಹಾಜರಾಗಲು ನೀಡಿದ ಸೂಚನೆಯನ್ನೂ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಎಸ್.ಎಲ್.ಪಾಟೀಲ್ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್. ಅವರಿಗೆ ಐದು ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕೆಳದಿ ರಸ್ತೆಯ ರಾಜಕುಮಾರ ಎಂಬುವವರು 2020ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಅರ್ಜಿ ಹಾಕಿ, ಆನಂದಪುರ ಹೋಬಳಿಯ ಮಲಂದೂರು ಗ್ರಾಮದ ಸರ್ವೆ ನಂಬರ್ ಒಂದಕ್ಕೆ …

Read More »

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ವಿಜಯಪುರ: ಜಾತಿ ಮೀಸಲು ಕಲ್ಪಿಸುವ ಕುರಿತು ಹಲವು ಸಮುದಾಯಗಳಿಂದ ಬೇಡಿಕೆಗಳು ಬಂದಿವೆ. ಈ ಬಗ್ಗೆ ವರದಿ ತರಿಸಿಕೊಂಡು ನನ್ನದೇ ಅವಧಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಮೀಸಲು ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಭಾನುವಾರ ಸಿಂದಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರಾರ್ಥ ಹಂದಿಗನೂರು ಗ್ರಾಮದಲ್ಲಿ ರೋಡ್ ಶೋನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿಯೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ …

Read More »

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್‌ ದ್ವಾರಕಾನಾಥ್‌

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ 2(ಎ)ಗೆ ಸೇರಿಸಬೇಕೆಂಬ ಬಲಿಷ್ಠ ವೀರಶೈವ ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಸರ್ಕಾರ ಮಣಿಯಬಾರದೆಂದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ ಎಸ್ ದ್ವಾರಕನಾಥ್ ಎಚ್ಚರಿಸಿದ್ದಾರೆ. ಇಂದು ಕುಮಾರ ಕೃಪ ಅತಿಥಿ ಗೃಹ ದಲ್ಲಿ ರಾಜ್ಯದ ಅತಿ ಹಿಂದುಳಿದ ಜನಾಂಗದ ಮಠಾಧೀಶರನ್ನ ಒಳಗೊಂಡ ಸಭೆಯಲ್ಲಿ ಮಾತನಾಡಿದರು. ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’, ಪಂಚಮಸಾಲಿಗಳ ಮೀಸಲು ಹೋರಾಟವನ್ನು ವಿರೋಧಿಸಿ ಅತಿ ಹಿಂದುಳಿದ ವರ್ಗಗಳ …

Read More »

ಬೆಳಗಾವಿ ಲಾಡ್ಜ್ ಗಳಲ್ಲಿ ಅಕ್ರಮ ಚಟುವಟಿಕೆ ಎಲ್ಲಕಡೆ ತಪಾಸಣೆ

ಬೆಳಗಾವಿ – ನಿನ್ನೆ ರಾತ್ರಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 100 ಕ್ಕೂ ಹೆಚ್ಚು ಲಾಡ್ಜ್ ಗಳನ್ನು ಪೊಲೀಸರು ಅನಿರೀಕ್ಷಿತವಾಗಿ ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ ಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಕಡೆ ತಪಾಸಣೆ ಶುರುಮಾಡಿದ್ದು, ಇದು ಮುಂದುವರಿಯುವುದಾಗಿ ತಿಳಿಸಿದ್ದಾರೆ. ಕಡ್ಡಾಯವಾಗಿ ಸಿಸಿಟಿವ್ಹಿ ಕ್ಯಾಮೆರಾ ಅಳವಡಿಸಲು, ಕಡ್ಡಾಯವಾಗಿ ಗ್ರಾಹಕರ ಗುರುತಿನ ಚೀಟಿ ಪಡೆಯಲು,  ಕಡ್ಡಾಯವಾಗಿ ರೆಜಿಸ್ಟರ್ ನಿರ್ವಹಣೆ ಮಾಡಲು,  ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಠಾಣೆಗೆ ಮಾಹಿತಿ ನೀಡಲು …

Read More »

ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು

ಬೆಂಗಳೂರು: ಕೋವಿಡ್ ಕಾರಣದಿಂದ ಮುಚ್ಚಲಾಗಿದ್ದ 1ರಿಂದ 5ನೇ ತರಗತಿ ಶಾಲೆಗಳು ನಾಳೆಯಿಂದ ರಾಜ್ಯಾದ್ಯಂತ ಶಾಲೆ ಆರಂಭವಾಗುತ್ತಿವೆ. ಸದ್ಯ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಾಳೆ ಮಕ್ಕಳನ್ನ ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಇನ್ನು ಕೆಲವು ಕೋವಿಡ್ ನಿಯಮದಂತೆ ತರಗತಿಗಳು ಆರಂಭವಾಗಲಿವೆ. ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ಸರ್ಕಾರ ಶಾಲೆಗಳಿಗೆ ಅವಕಾಶ ಕೊಟ್ಟಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ತೆರೆಯಬೇಕು. …

Read More »

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ವಿಜಯಪುರ: ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಹಾಗೂ ಜಗಜೀವನರಾಂ ಪ್ರಧಾನಿಯಾಗುವ ಅವಕಾಶ ತಪ್ಪಿಸಿದ ದಲಿತ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತದಾರರಿಗೆ ಮನವಿ ಮಾಡಿದರು. ಭಾನುವಾರ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಕನ್ನೋಳಿ, ಕೊಕಟನೂರ, ಹಂದಿಗನೂರು ಗ್ರಾಮಗಳಲ್ಲಿ ರೋಡ್ ಶೋನಲ್ಲಿ ಮಾತನಾಡಿದ ಅವರು, ಸುಳ್ಳು ಬಿತ್ತುವ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ …

Read More »

ಹೃದಯ ವಿದ್ರಾವಕ ಘಟನೆ: ಮೂವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಲಬುರಗಿ: ಮೂರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದಲ್ಲಿ ನಡೆದಿದೆ. ಈ ಆತ್ಮಹತ್ಯೆ ಕೇಸ್​ನಲ್ಲಿ ತಾಯಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಓರ್ವ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವ್ ಆಗಿದೆ. ತಾಯಿ ಲಕ್ಷ್ಮಿ ಏಳಕೆ (28),‌ ಮಕ್ಕಳಾದ ಗೌರಮ್ಮ (6), ಸಾವಿತ್ರಿ (1) ಮೃತ ದುರ್ದೈವಿಗಳು. ಇನ್ನೋರ್ವ ಬಾಲಕಿಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೂರು ಜನ ಹೆಣ್ಣು ಮಕ್ಕಳಿರುವ ಕಾರಣಕ್ಕೆ ಗಂಡ, ಗಂಡನ …

Read More »

ಮೆಟ್ರೋ ಕಾಮಗಾರಿ ವೇಳೆ ಅರ್ಧಕ್ಕೆ ತುಂಡಾಗಿ ಬಿದ್ದ ಬೃಹತ್ ಕ್ರೇನ್​​.. ತಪ್ಪಿದ ಭಾರೀ ದುರಂತ

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ನಡೆದಿದ್ದು, ಮೆಟ್ರೋ ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹು ದೊಡ್ಡ ಕ್ರೇನ್​​ ನಲವತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದ ಘಟನೆ ಸಿಲ್ಕ್ ಬೋರ್ಡ್ ಬಳಿ ನಡೆದಿದೆ. ಸಿಲ್ಕ್ ಬೋರ್ಡ್ ಟು ಕೆ ಆರ್ ಪುರಂ ಮಾರ್ಗವಾಗಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಕಾರ್ಯ ನಡೆಯುತ್ತಿದ್ದು, ಈ ವೇಳೆ ಮೆಷಿನ್ ಅರ್ಧಕ್ಕೆ ಕಟ್ ಆದ ಪರಿಣಾಮ …

Read More »

ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಸೇರಿದಂತೆ ತಮ್ಮ ದಿನ ನಿತ್ಯದ ಚಟುವಟಿಕೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜ್‍ ಕುಂದ್ರಾ ಕಾಣಿಸದೇ ಇರುವುದರ ಕುರಿತಾಗಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಾದ ವಿಯಾನ್, ಸಮಿಷಾ ಹಾಗೂ ತಾಯಿ ಸುನಂದಾ ಶೆಟ್ಟಿ ಜೊತೆಯಲ್ಲಿ ಆಲಿಬಾಗ್‍ಗೆ ಹೋಗಿದ್ದಾರೆ. ಶಿಲ್ಪಾ ಶೆಟ್ಟಿ ತೆರಳುವಾಗ ನಗುಮೊಗದಿಂದಲೇ …

Read More »

ಚಿಕ್ಕಬಳ್ಳಾಪುರ: ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಚಿಕ್ಕಬಳ್ಳಾಪುರ: ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆ ದಾಟಲು ಹೋಗಿ ಕೊಚ್ಚಿ ಹೋದ ಯುವಕ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕಮ್ಮಗುಟ್ಟನಹಳ್ಳಿ ವ್ಯಾಪ್ತಿಯ ನವಿಲುಗುರ್ಕಿಯಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆ ಕಾರಣ ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ಈ ವೇಳೆ ಬೈಕ್ ಮೂಲಕ ಯುವಕ ರಸ್ತೆ ದಾಟಲು ಮುಂದಾಗಿದ್ದು ಈ ವೇಳೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಸ್ಥಳೀಯರು ಟ್ರ್ಯಾಕ್ಟರ್​ ಮೂಲಕ ರಕ್ಷಣೆ ಮಾಡಿದ್ದಾರೆ. ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆಯಲ್ಲಿ …

Read More »