Breaking News

ಆರ್ಥಿಕತೆ ಆಶಾವಾದ: ಕೇಂದ್ರ ಬಜೆಟ್ 2022; ದಿನಗಣನೆ 4

ಸಂಸತ್​ನ ಬಜೆಟ್ ಅಧಿವೇಶನ ಜ.31ರಂದು ಶುರುವಾಗಲಿದೆ. ಫೆ.1ರ ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ಶುಕ್ರವಾರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ 2021-22ರ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜು ವಿವರಗಳನ್ನು ಪ್ರಕಟಿಸಿದೆ. ಇದು ವಾರ್ಷಿಕ ಮುಂಗಡಪತ್ರ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರೊಂದಿಗೆ ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಅವಲೋಕನ ಇಲ್ಲಿದೆ. ಕೋವಿಡ್-19 ಸಂಕಷ್ಟದ ಕಾರಣ ಕಳೆದ ಮೂರು ವರ್ಷಗಳಿಂದ …

Read More »

ಸೆನ್ಸಾರ್​​ನಲ್ಲಿ ಪಾಸ್​​ ಆಯಿತು ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘777 ಚಾರ್ಲಿ’!

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘777 ಚಾರ್ಲಿ’ ಸೆನ್ಸಾರ್​​ನಲ್ಲಿ ಪಾಸ್​​ ಆಗಿದ್ದು, ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮುಗಿಸಿರುವ ಚಿತ್ರವು ಟೀಸರ್ ಹಾಗೂ ಹಾಡುಗಳಿಂದ ಸಖತ್ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ತೆರೆ ಹಂಚಿಕೊಂಡಿದ್ದು, ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಆಗುತ್ತೆ ಅನ್ನೋದು ಈ ಸಿನಿಮಾ ಸ್ಟೋರಿ. ಯುವ ನಿರ್ದೇಶಕ ಕಿರಣ್‌ ರಾಜ್‌ …

Read More »

ಬಸ್‍ಗಳ ನಿರ್ವಹಣೆ, ಡಿಪೋಗಳ ಖರ್ಚುವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೆ ನಿಗಮಗಳು ಪರದಾಡುವಂತಾಗಿದೆ.

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಎಸ್‌ಆರ್‌ಟಿಸಿಯ ನಾಲ್ಕು ಸಾರಿಗೆ ನಿಗಮಗಳನ್ನು ಒಂದೇ ನಿಗಮವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಲಾಗಿದೆ.ಕೊರೊನಾ ಕಾಣಿಸಿಕೊಂಡ ನಂತರ ಸಾರಿಗೆ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.ಬಸ್‍ಗಳ ನಿರ್ವಹಣೆ, ಡಿಪೋಗಳ ಖರ್ಚುವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೆ ನಿಗಮಗಳು ಪರದಾಡುವಂತಾಗಿದೆ. ಇದುವರೆಗೂ ಸಾರಿಗೆ ನಿಗಮಗಳು 4500 ಕೋಟಿ ರೂ.ಗಳ ನಷ್ಟ ಎದುರಿಸಿದೆ. ಹಿರಿಯ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಸಾರಿಗೆ ನಿಗಮಗಳ ಪುನರಚನಾ ಸಮಿತಿಗೆ ನೌಕರರ ಸಂಘದ ಪದಾಧಿಕಾರಿಗಳು ಈ ಮನವಿ ಮಾಡಿಕೊಂಡಿದ್ದಾರೆ.1997 …

Read More »

18 ವಿದ್ಯಾರ್ಥಿಗಳಿಗೆ ಕೋವಿಡ್ -19 ಸೋಂಕು,ಶಾಲೆ ಸೀಲ್ ಡೌನ್ !

ಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಶಾಲೆಯಲ್ಲಿ 18 ವಿದ್ಯಾರ್ಥಿಗಳಿಗೆ ಕೋವಿಡ್ -19 ಸೋಂಕು ಕಾಣಿಸಿಕೊಂಡಿದೆ.ಇಲ್ಲಿನ ನೆಹರು ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿನ ಇಬ್ಬರು ವಿದ್ಯಾರ್ಥಿಗಳಿಗೆ ಜನವರಿ 24 ರಂದು ಸೋಂಕು ಕಾಣಿಸಿಕೊಂಡಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಹೆಬ್ಬಳ್ಳಿ ಶಾಲೆಯನ್ನು ಸೀಲ್ ಡೌನ್ ಮಾಡಿದೆ.   ಬಳಿಕ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿದಾಗ ಒಟ್ಟಾರೇ 18 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಗ್ರಾಮದಲ್ಲಿ ಆತಂಕ ಹೆಚ್ಚಿದೆ. 18 …

Read More »

ಯತ್ನಾಳ್​-ಸಾಹುಕಾರ್​ ತೆರೆಮರೆ ತಂತ್ರ!

ಬೆಂಗಳೂರು: 2023ರ ಚುನಾವಣೆ ರಾಜ್ಯದಲ್ಲಿ ಹೊಸ ಪಕ್ಷಗಳ ಉದಯಕ್ಕೆ ನಾಂದಿ ಆಗುತ್ತಾ? 2013ರ ಘಟನೆಗಳು ಮರುಕಳಿಸುವ ಸೂಚನೆಗಳು ಸಿಗ್ತಿವೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ರಚನೆ ಬಗ್ಗೆ ಚರ್ಚೆ ಆಗಿದೆ ಅನ್ನೋ ಸುದ್ದಿ ಹಬ್ಬಿದೆ. 2023ರ ಚುನಾವಣೆಗೆ ಹೊಸ ರಂಗು ಪಡೆಯಲಿದೆ. ರಾಜ್ಯದಲ್ಲಿ ಹೊಸ ಪಕ್ಷ ಉದಯವಾಗುವ ಬಗ್ಗೆ ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿದೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ಕಟ್ಟುವ ಚರ್ಚೆ ನಡೆದಿದೆ. ಯತ್ನಾಳ್ ಜೊತೆ ಸೇರಿ ಜಾರಕಿಹೊಳಿ ಹೊಸ …

Read More »

ಜೇಮ್ಸ್’ ಪವರ್​​ಫುಲ್ ಪೋಸ್ಟರ್ ರಿಲೀಸ್;

ದಿವಂಗತ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಇಂದು ಕಾತುರದಿಂದ ಕಾಯುತ್ತಿದ್ದ ಕ್ಯೂರಿಯಾಸಿಟಿಗೆ ತೆರೆ ಬಿದ್ದಿದೆ. ಅಪ್ಪು ಅವರು ನಟಿಸಿದ್ದ ಜೇಮ್ಸ್​ ಚಿತ್ರದ ಪೋಸ್ಟರ್​ ಒಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಇಂದು ಗಣರಾಜ್ಯೋತ್ಸವದ ಪ್ರಯುಕ್ತ ,ನಿರ್ದೇಶಕ ಚೇತನ್​ ಪೋಸ್ಟರ್​ ರಿಲೀಸ್​ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು. ಅದರಂತೇ ಇಂದು ಜೇಮ್ಸ್​ ಸಿನಿಮಾದ ಪೋಸ್ಟರ್ ರಿಲೀಸ್​ ಮಾಡಿದ್ದಾರೆ.ಇದರಲ್ಲಿ ಪ್ಯಾರಾ ಮಿಲ್ಟ್ರಿ ಆಫೀಸರ್​ ಆಗಿ ಕಾಣಿಸಿಕೊಂಡಿರುವ ಅಪ್ಪು ನಯಾ ಸ್ಟೈಲ್​ಗೆ ಇಡೀ ಸ್ಯಾಂಡಲ್​ವುಡ್​ ತಲೆಬಾಗಿದೆ. …

Read More »

ಡಿಕೆಎಸ್ ಜೊತೆ ಸಂಪರ್ಕ.. ಅವರು ಕಾಂಗ್ರೆಸ್​ಗೆ ಹೋಗಬಹುದು’ ಸವದಿ ಬಗ್ಗೆ ಲಖನ್ ಬಾಂಬ್

ಬೆಳಗಾವಿ: ಮುಂದೊಂದು ದಿನ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್​ಗೆ ಹೋದರೂ ಹೋಗಬಹುದು ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿಗೆ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಈ ಬಗ್ಗೆ ಮಾತನಾಡಿ.. ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರ ಅನುಭವಿಸಿದ್ರು. ಅಥಣಿಯಲ್ಲಿ ಸೋತ ನಾಯಕರು ಉನ್ನತ ಹುದ್ದೆ ಪಡೆದರು. ಪರಿಷತ್ ಚುನಾವಣೆಯಲ್ಲಿ ಡಿಕೆಎಸ್ ಜೊತೆಗೆ ಸೇರಿ ಕುತಂತ್ರ ರೂಪಿಸಿದರು ಎಂದು ಆರೋಪಿಸಿದರು. ಡಿಕೆಎಸ್ ಜೊತೆ ಸೇರಿ ಕುತಂತ್ರ …

Read More »

ಪೊಲೀಸರಿಂದಲೇ ಗಾಂಜಾ ಮಾರಾಟ ಕೇಸ್​: ಮತ್ತೆ ಮೂವರು ಪೆಡ್ಲರ್ಸ್​ ಲಾಕ್​

ಬೆಂಗಳೂರು: ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್​ ಸಿಬ್ಬಂದಿಯಿಂದ, ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೇ ಮೂವರು ಪೆಡ್ಲರ್ಸ್​ನ್ನು ಅರೆಸ್ಟ್​ ಮಾಡಲಾಗಿದೆ. ಶಿವ ಪಾಟೀಲ್, ಸೋಮ ಸುಂದರಂ ಹಾಗೂ ಪೂಜಾ ಸಿಸಿಬಿ ಬಲೆಗೆ ಬಿದ್ದ ಪೆಡ್ಲರ್ಸ್​. ಆರೋಪಿತ ಕಾನ್ಸ್​ಟೇಬಲ್​ಗಳಿಗೆ ಇವರ ಸಂಪರ್ಕ ಇತ್ತು ಎನ್ನಲಾಗ್ತಿದ್ದು, ಕೇಸ್​ ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ಸಾಕಷ್ಟು ವೇಗ ಪಡೆದುಕೊಂಡಿದೆ. ಆರೋಪಿಗಳು ಓರಿಸ್ಸಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Read More »

ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೇ ವಾಪಸ್​ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ

ಬೆಳಗಾವಿ: ಈಗಾಗಲೇ ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೇ ವಾಪಸ್​ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲೆಯ ಗೋಕಾಕ್​ನಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ಸತ್ಯ. ಹೀಗಾಗಿ ಮುಂದಿನ ದಿನದಲ್ಲಿ ಕಾಂಗ್ರೆಸ್​ ತೊರೆದು ಹೋದವರು ಮತ್ತೆ ಬಂದರೆ ಅಚ್ಚರಿ ಪಡುವಂತದ್ದು ಏನಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್​ ಸಿಡಿಸಿದ್ದಾರೆ. ಸಿದ್ಧರಾಮಯ್ಯ ನನ್ನ ಗುರುಗಳು ಎಂಬ ಲಖನ್ ಜಾರಕಿಹೊಳಿ …

Read More »

ರವಿ ಚೆನ್ನಣ್ಣನವರ್ ವರ್ಗಾವಣೆ; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಕ

ಬೆಂಗಳೂರು: ಇತ್ತೀಚೆಗೆ ಸಾಕಷ್ಟು ಆರೋಪ ಹಾಗೂ ವಿವಾದಗಳಿಗೆ ಈಡಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್​ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಎಕ್ಸಿಕ್ಯೂಟಿವ್​​ ಸ್ಥಾನದಿಂದ ನಾನ್​​-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್​​ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೇವಲ ರವಿ ಚನ್ನಣ್ಣನವರ್ ಮಾತ್ರವಲ್ಲ, ಒಟ್ಟು ಒಂಬತ್ತು ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ …

Read More »