Breaking News

ಯಾರೂ ಯಾವ ಉಡುಪು ಹಾಕಿಕೊಳ್ಳಬೇಕು. ಯಾವ ಬಣ್ಣದ ಉಡುಪು ಹಾಕಬೇಕು ಅವರಿಗೆ ಬಿಟ್ಟ ವಿಚಾರ:

ಬೆಳಗಾವಿ: ಹಿಜಬ್ ಪರವಾಗಿ ನಮ್ಮ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಹಿಜಬ್ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಯಾವ ಉಡುಪು ಹಾಕಿಕೊಳ್ಳಬೇಕು. ಯಾವ ಬಣ್ಣದ ಉಡುಪು ಹಾಕಬೇಕು ಅವರಿಗೆ ಬಿಟ್ಟ ವಿಚಾರವಾಗಿದೆ. ನೀವು ಇಂತಹದ್ದೇ ಹಾಕಿಕೊಳ್ಳಿ ಅಂತಾ ಹೇಳುವ ಅಧಿಕಾರ ಯಾರಿಗೂ ಇಲ್ಲ.  ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಇದೆ ಎಂದಿದ್ದಾರೆ.ಸರ್ಕಾರ ಇದರ ಬಗ್ಗೆ …

Read More »

ನೀವಿಬ್ಬರೂ ಒಂದಾಗಿ ನಮ್ಮ ಕ್ಷೇತ್ರಗಳಿಗೆ ಬಂದ್ರೆ ಚುನಾವಣೆ ಗೆಲ್ಲಬಹುದು: ಡಿಕೆಶಿ, ಸಿದ್ದರಾಮಯ್ಯಗೆ ಕೈ ಶಾಸಕರ ಮನವಿ

ಬೆಂಗಳೂರು: ಕಾಂಗ್ರೆಸ್ ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಚಿಂತನ ಮಂಥನ ನಡೆದಿದೆ. ರಾತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಶಾಸಕರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ಶಾಸಕರು ಕೂಡಾ ಇಬ್ಬರೂ ನಾಯಕರಿಗೆ ನೀವಿಬ್ಬರೂ ಜೊತೆಯಾಗಿದ್ದರೆ ಚುನಾವಣೆ ಗೆಲ್ಲಬಹುದು ಅಂತಾ ಹೇಳಿರುವ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಮತದಾರನ ಮನೆ ಬಾಗಿಲಿಗೆ ಹೋಗಿ.. ನಿನ್ನೆ ರಾತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌, ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯಿದೆ. ಚುನಾವಣೆಗೆ …

Read More »

ಕಾಂಗ್ರೆಸ್ ಅಹೋರಾತ್ರಿ ಧರಣಿ 2ನೇ ದಿನಕ್ಕೂ ಮುಂದುವರಿಕೆ

ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿದೆ. ಧರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಹಲವು ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದವರ ಮೊಗಸಾಲೆಯಲ್ಲಿ ಕ್ರಿಕೆಟ್ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. ಇನ್ನು ಧರಣಿ ಹಿನ್ನೆಲೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದ ಖಾಸಗಿ ಹೋಟೆಲ್‍ನಿಂದ ರಾತ್ರಿ ಊಟ ಬಂದಿದ್ದು, ಸ್ಪೀಕರ್ ಸಚಿವಾಲಯದಿಂದ ವೆಜ್ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.ಕಾಂಗ್ರೆಸ್ ಧರಣಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ …

Read More »

ಕಲಾತಪಸ್ವಿ ರಾಜೇಶ್’ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ, ಕಲಾತಪಸ್ವಿ ರಾಜೇಶ್(89) ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ, ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್‌ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ರಾಜೇಶ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದ್ದಾರೆ. ವಿದ್ಯಾರಣ್ಯಪುರದಲ್ಲಿರುವ ನಿವಾಸದಲ್ಲಿ ಇಂದು ಸಂಜೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ʼಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ತಮಿಳು ಚಿತ್ರರಂಗದಿಂದ ಅಂದಿನ …

Read More »

ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಬಿಜೆಪಿ ನಿಲುವೇನು: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಹಾಗೆಯೇ, ಹೆಣ್ಣು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಬಿಜೆಪಿಯ ನಿಲುವು ಏನು ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ತಿಳಿಸಬೇಕು ಎಂದು ಕೇಳಿದ್ದಾರೆ. ಸುತ್ತೋಲೆಗೆ ಸಂಬಂಧಿಸಿದಂತೆ #HijabCircular ಟ್ಯಾಗ್ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ, ‘ರಾಜ್ಯದ …

Read More »

ಅನುಷ್ಠಾನಗೊಂಡ ಕಾಮಗಾರಿ ಪೂರ್ಣದ ನಿರೀಕ್ಷೆ

ಶಿವಮೊಗ್ಗ: ಹಿಂದಿನ ವರ್ಷ 2021-22ನೇ ಸಾಲಿನ ಬಜೆಟ್‌ ಮಂಡಿಸುವಾಗ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ಸಹಜವಾಗಿಯೇ ಇದ್ದ ನಿರೀಕ್ಷೆಗಳಂತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂತಹ ನಿರೀಕ್ಷೆಗಳಿಲ್ಲದಿದ್ದರೂ ಬಾಕಿ ಉಳಿದ ಕಾಮಗಾರಿಗಳಿಗೆ ಅನುದಾನ ಘೋಷಿಸಬೇಕಿದೆ. ದಶಕದಿಂದ ನನೆಗುದಿಗೆ ಬಿದ್ದಿದ್ದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗೆ ಬಜೆಟ್‌ ನೀಡುವ ಮೂಲಕ ಮತ್ತಷ್ಟು ಹಣ ನೀಡಿದ್ದರು. ಸೋಗಾನೆ ವಿಮಾನ ನಿಲ್ದಾಣದಲ್ಲಿ ಏರ್‌ಬಸ್‌ …

Read More »

ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ

ಆನವಟ್ಟಿ: ಶ್ರಮಿಕ ವರ್ಗವಾದ ಭೋವಿ ಜನಾಂಗ ಹೊಟ್ಟೆಪಾಡಿಗಾಗಿ, ಅಲೆಮಾರಿ ಹಾಗೂ ಅರೆಅಲೆಮಾರಿ ಬದುಕು ಕಟ್ಟಿಕೊಂಡಿದೆ. ಜನಾಂಗದ ಅಭಿವೃದ್ಧಿಗಾಗಿ ಸಂಘಟನೆ ಬಲಗೊಳಿಸುವ ಜೊತೆಗೆ ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದು ಬಾಗಲಕೋಟೆ-ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.   ಇಲ್ಲಿಗೆ ಸಮೀಪದ ಹುರುಳಿ ಗ್ರಾಮದಲ್ಲಿ ತಾಲ್ಲೂಕು ಭೋವಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘವು ಸೋಮವಾರ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಭೋವಿ ಜನಾಂಗದ …

Read More »

ಹಿಜಾಬ್‌ ವಿವಾದದಿಂದ ರಾಜ್ಯದಲ್ಲಿ ಅಸ್ಥಿರತೆ: ವಿ.ಎಸ್‌.ಉಗ್ರಪ್ಪ

ಶಿವಮೊಗ್ಗ: ಹಿಜಾಬ್‌-ಕೇಸರಿ ಶಾಲು ವಿವಾದದ ಪರಿಣಾಮ ರಾಜ್ಯದಲ್ಲಿ ಅಸ್ಥಿರತೆ, ಅಶಾಂತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌. ಉಗ್ರಪ್ಪ ಪ್ರತಿಪಾದಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ‘ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಭಾಷಣವನ್ನು ರಾಜ್ಯಪಾಲರಿಂದ ಮಾಡಿಸಿದ್ದಾರೆ. ಸರ್ಕಾರಗಳ ಹಿನ್ನೋಟ, ಮುನ್ನೋಟವನ್ನು ಜನರ ಮುಂದೆ ಇಡಬೇಕಿತ್ತು. ಅದು ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಿರಬೇಕು. ರಾಜ್ಯಪಾಲರ ಭಾಷಣ ಒಂದು ರೀತಿ ‘ಓಲ್ಡ್ ವೈನ್ ಇನ್‌ ನ್ಯೂ ಬಾಟಲ್’ ಎನ್ನುವಂತಿದೆ’ ಎಂದು …

Read More »

ಇದಪ್ಪಾ ಸುದ್ದಿ: ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ ಪಡೆದ ಭೂಪ!

ನವದೆಹಲಿ, ಫೆಬ್ರವರಿ 17: ನೀಲಿ ಸಿನಿಮಾಗಳಲ್ಲೇ ಸಖತ್ ಸದ್ದು ಮಾಡುತ್ತಾ ಬಾಲಿವುಡ್ ಅಂಗಳಕ್ಕೆ ಲಗ್ಗೆಯಿಟ್ಟ ಸ್ಟಾರ್ ನಟಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಥ ಸ್ಟಾರ್ ನಟಿಯ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಎರಡು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ. ಈ ಕುರಿತು ಸ್ವತಃ ನಟಿ ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ನನಗೇ ಈ ರೀತಿ ಆಗಿ ಬಿಟ್ಟಿದೆ. ಹುಚ್ಚರು. ಕೆಲವು ಮೂರ್ಖರು …

Read More »

ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್ ಪಿಯಿಂದ ಗಣಿತ ಪಾಠ

ಚಿಕ್ಕಮಗಳೂರು :ಚಿಕ್ಕಮಗಳೂರು ತಾಲೂಕಿನ ಇಂದಾವರ ಶಾಲೆಯಲ್ಲಿ ಹಿಜಾಬ್​​ಗಾಗಿ ಗಲಾಟೆ ನಡೆದಿತ್ತು. ಶಾಲೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಭೇಟಿ ನೀಡಿ, ಶಾಲಾ ಮಕ್ಕಳಿಗೆ ಪಾಠ ಮಾಡಿರುವ ಘಟನೆ ನಡೆದಿದೆ. ಶಾಲೆಯ ಎಲ್ಲ ಮಕ್ಕಳಿಗೆ ಡಿಸಿ, ಎಸ್ಪಿ, ಸಿಇಓ ಪಾಠ ಮಾಡಿದ್ದಾರೆ. ಡಿಸಿ-ಎಸ್ಪಿ ಮಕ್ಕಳಿಗೆ ಗಣಿತ ಪಾಠ ಮಾಡಿದರೆ, ಜಿಲ್ಲಾ ಪಂಚಾಯಿತಿಯ ಸಿಇಒ ಸಮಾಜ ವಿಜ್ಞಾನ ಪಾಠ ಮಾಡಿದ್ದಾರೆ. ನಿನ್ನೆ …

Read More »