Breaking News

ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಕೊಡಬೇಕು ಮತ್ತು ಕಾಂತರಾಜು ವರದಿಯನ್ನು ತಕ್ಷಣ ಸರ್ಕಾರ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷರಾದ ಎಮ್.ಸಿ.ವೇಣುಗೋಪಾಲ್ ನೇತೃತ್ವದ ನಿಯೋಗ ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿದ ನಂತರ ಈ ಕುರಿತು ಎಮ್.ಸಿ.ವೇಣುಗೋಪಾಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜ್ಯಪಾಲರು ನಮ್ಮ ಮನವಿಗೆ ಧನಾತ್ಮಕವಾಗಿ …

Read More »

ಮೇಲಾಧಿಕಾರಿಗಳ ಕಿರುಕುಳ – ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿ

ಕಲಬುರಗಿ: ತನ್ನ ಮೇಲಾಧಿಕಾರಿಗಳ ವರ್ತನೆಯಿಂದ ಮನನೊಂದು ಸಿಬ್ಬಂದಿಯೊಬ್ಬ ಡೆತ್ ನೋಟ್ ಬರೆದಿಟ್ಟು, ಲೈವ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಿನಾರಾ ಕ್ಯಾಪಿಟಲ್‍ನ ಕಲಬುರಗಿ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಕೃಷ್ಣಕಾಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ನಗರದ ಕೆಬಿಎನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಏನಿದು ಘಟನೆ? ಕೃಷ್ಣಕಾಂತ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಕಚೇರಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ಬಳಿಕ ಲೈವ್ ವೀಡಿಯೋ …

Read More »

ಹರ್ಷನ ಮೇಲೆ 2016ರಿಂದಲೇ ಕಣ್ಣಿಟ್ಟಿದ್ದರು – ಹರ್ಷನ ಹತ್ಯೆಗೆ ಕಾರಣವೇನು?

ಶಿವಮೊಗ್ಗ: ಹರ್ಷ ಹಾಗೂ ಖಾಸಿಫ್ ನಡುವೆ ಈ ಹಿಂದೆಯೂ ಹಲವು ಬಾರಿ ತಿಕ್ಕಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ 2016 ಮತ್ತು 2017ರಿಂದಲೇ ಕಣ್ಣಿಟ್ಟಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸೌಹಾರ್ದವನ್ನು ಹಾಳು ಮಾಡಲಾಗುತ್ತಿದೆ ಎಂಬ ಕೇಸ್ ಆದಾಗಿಂದ ಹರ್ಷ ವಿರುದ್ಧ ಖಾಸಿಫ್ ದ್ವೇಷ ಸಾಧಿಸುತ್ತಿದ್ದರು. ಆಗ ಹರ್ಷ ವಿರುದ್ಧ ಎರಡು ಕೇಸ್‍ಗಳನ್ನು ಸಹ ಪೊಲೀಸರು ಹಾಕಿದ್ದರು. ಈ ನಡುವೆ …

Read More »

ಹಿಜಾಬ್ ವಿವಾದ : ಮತ್ತೆ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ

ಹಿಜಾಬ್ ವಿವಾದ ಕುರಿತು 8ನೇ ದಿನವಾದ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ , ಮತ್ತೆ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ. ತ್ರಿಸದಸ್ಯ ಪೂರ್ಣ ಪೀಠದ ಮುಂದೆ ಇಂದು ಕೂಡ ಅಡ್ವಕೇಟ್ ಜನರಲ್ ಸರ್ಕಾರದ ಪರ ವಾದವನ್ನು ಮಂಡಿಸಿದರು. ಈ ಬಳಿಕ ಮಧ್ಯಂತರ ಆದೇಶದ ಸ್ಪಷ್ಟೀಕರಣಗಳನ್ನು ಕೋರುವ ಅರ್ಜಿಗಳನ್ನು ನಾಳೆ ತೆಗೆದುಕೊಳ್ಳುವುದಾಗಿ ಪೀಠ ಹೇಳಿತು. ಈ ಮೂಲಕ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.

Read More »

ಹಿಜಾಬ್ ವಿವಾದ ಕಾರಣಕ್ಕೆ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರಾದರೆ ಮರುಪರೀಕ್ಷೆ ಇಲ್ಲ: ಸಚಿವ ಬಿ.ಸಿ. ನಾಗೇಶ್

ಬೆಂಗಳೂರು: “ಹಿಜಾಬ್ ವಿವಾದದ ಕಾರಣಕ್ಕೆ ವಿದ್ಯಾರ್ಥಿಗಳು ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಅವರಿಗೆ ಮರುಪರೀಕ್ಷೆ ಇರುವುದಿಲ್ಲ. ಯಾರೂ ಕೂಡ ಹಠ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು,” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮನವಿ ಮಾಡಿದ್ದಾರೆ.   ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. “ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ಆದೇಶವನ್ನು ಕೆಲವರು ವಿರೋಧಿಸಿದ್ದಾರೆ.  ಅಂತಹವರ ಪರವಾಗಿ ಕಾಂಗ್ರೆಸ್‌ನವರು ಮಾತನಾಡುವುದು ಸರಿಯಲ್ಲ. …

Read More »

ಮಾ.4 ರಂದು ಬೊಮ್ಮಾಯಿ ಸರ್ಕಾರದ ಚೊಚ್ಚಲ ಬಜೆಟ್

ಬೆಂಗಳೂರು: ಮಾರ್ಚ್ 4ರಂದು ತಮ್ಮ ಸರಕಾರದ ಚೊಚ್ಚಲ ಬಜೆಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ್ 4ರಂದು ತಾವು ಬಜೆಟ್ ಮಂಡನೆ ಮಾಡುವುದಾಗಿ ಹೇಳಿದರು.ಬಸವರಾಜ ಬೊಮ್ಮಾಯಿ ಅವರು ಹಣಕಾಸು ಖಾತೆಯನ್ನೂ ಸಹ ಹೊಂದಿದ್ದು, ಹೀಗಾಗಿ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ.   ಇದರ ಮಧ್ಯೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಮಂಡಲ …

Read More »

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,553 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,553 ಜನರಲ್ಲಿ ಸೋಂಕು ಪತ್ತೆಯಾಗಿದೆ.ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ 278 ಜನ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,12,622 ಕ್ಕೆ ಏರಿಕೆಯಾಗಿದೆ.   ಇನ್ನು ದೇಶದಲ್ಲಿ 1‌,64,522 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 31,377 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,21,89,887 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಿನ್ನೆ 33,84,744 ಜನರಿಗೆ …

Read More »

ಅಕ್ಷೇಪಾರ್ಹ ಟ್ವೀಟ್ ಆರೋಪ : ನಟ ಚೇತನ್ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ ನಿಂದನೆ ಬರಹ ಪ್ರಕಟಿಸಿ ಜನರನ್ನು ಪ್ರಚೋದಿಸಿದ ಆರೋಪದಡಿ ಸ್ಯಾಂಡಲ್ವುಡ್ ನಟ ಚೇತನ್ ನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೇತನ್ ಕುಮಾರ್ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಪದೇ ಪದೇ ಟ್ವೀಟ್ ಮಾಡಿದ ನಂತರ ಸುಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ಈ ಸಂಬಂಧ ವಿಚಾರಣೆ ನಡೆಸಿದ 8 ನೇ ಎಸಿಎಂಎಂ ಕೋರ್ಟ್ ನಟ ಚೇತನ್ …

Read More »

ಪ್ರಧಾನಿ ಕಾರ್ಯಾಲಯದಿಂದ ವಿಜಯ್ ಕಿರಗಂದೂರ್‌ಗೆ ಪತ್ರ..? ಬೆಸ್ತು ಬಿದ್ದ ಹೊಂಬಾಳೆ ಟೀಂ!

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಕೆಜಿಎಫ್ 2’ ಬಿಡುಗಡೆಗೆ ಯಶ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಎಂದು ಟೀಮ್ ಅನೌನ್ಸ್ ಮಾಡಿದೆ. ಆದರೆ, ಇನ್ನೂ ಅಭಿಮಾನಿಗಳಿಗೆ ನಂಬಿಕೆಯೇ ಬರುತ್ತಿಲ್ಲ. ಮತ್ತೆ ‘ಕೆಜಿಎಫ್ 2’ ಪೋಸ್ಟ್ ಪೋನ್ ಆಗುತ್ತಾ? ಅನ್ನುವ ಗೊಂದಲದಲ್ಲಿ ಇದ್ದಾರೆ. ಇದಕ್ಕೆ ಕಾರಣ ಇನ್ನೂ ಚಿತ್ರತಂಡ ಒಂದೇ ಒಂದು ಅಪ್‌ಡೇಟ್ ಕೊಟ್ಟಿ,ಲ್ಲ. ‘ಕೆಜಿಎಫ್ 2’ ಟೀಸರ್ ಬಿಟ್ಟರೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು …

Read More »

ಹರ್ಷನ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವ ಮೊದಲು ಆತನ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ.

  ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಸಂಬಂಧ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 12 ಮಂದಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂವರಲ್ಲಿ ಓರ್ವ ಆರೋಪಿಯನ್ನು ಬಂಧಿಸಲು ಪೊಲೀಸರು ಸ್ಕೆಚ್‌ ಹಾಕಿದ್ದ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ಮೊದಲು ಆರೋಪಿಯ ಸಹಚರನನ್ನು ಆತನ ಮನೆಯ ಬಳಿಯೇ ವಶಕ್ಕೆ ಪಡೆದಿದ್ದ ಪೊಲೀಸರು, ಈತನ ಮೂಲಕವೇ ಕೊಲೆ ಆರೋಪಿ ಬಂಧನಕ್ಕೆ ಬಲೆ‌ ಬೀಸಿದ್ದರು. ಸಹಚರನನ್ನು ಪೊಲೀಸರು ವಶಕ್ಕೆ ಪಡೆದ ದೃಶ್ಯದ …

Read More »