Breaking News

ಹಾಸನ: 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ; ಬೇರೊಂದು ಯುವತಿ ಜತೆ ಎಂಗೇಜ್ಮೆಂಟ್

ಹಾಸನ: ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಕಾಲ ಸಂಸಾರ ಮಾಡಿ, ಪತ್ನಿಗೆ ಮೋಸ ಮಾಡಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ. ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಪತಿ ಮುಂದಾಗಿದ್ದು, ಈಗಾಗಲೇ ನಿಶ್ಚಿತಾರ್ಥ (engagement) ಕೂಡ ಮಾಡಿಕೊಂಡಿದ್ದಾನೆ. ಹೀಗಾಗಿ ನೊಂದ ಪತ್ನಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ …

Read More »

ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್​ನಲ್ಲಿ ಹೈ ಅಲರ್ಟ್

ಬೆಂಗಳೂರು: ದೇಶದಲ್ಲೆಡೆ ಕೊರೊನಾ ರೂಪಾಂತರಿ ಒಮಿಕ್ರಾನ್ (omicron) ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಹೀಗಾಗಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೊಸ ರೂಪಾಂತರಿ ಕೊರೊನಾ ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. 10 ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ‌ ಹದ್ದಿನ ಕಣ್ಣು ಇಡಲಾಗಿದೆ. …

Read More »

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಬೆಳಗಾವಿ, ‌-ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಸತಿ, ಊಟೋಪಹಾರ ಹಾಗೂ ಸಾರಿಗೆ ಮತ್ತಿತರ ವ್ಯವಸ್ಥೆಯನ್ನು ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು. ಅಧಿವೇಶನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ನ.27) ನಡೆದ ಪೂರ್ವಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ …

Read More »

ಡಿ.ಕೆ ಶಿವಕುಮಾರ್ ಭಾನುವಾರ ಬೆಳಗಾವಿಗೆ

ಬೆಳಗಾವಿ- ವಿಧಾನ ಪರಿಷತ್ತಿನ ಚುನಾವಣೆಯ ಪ್ರಚಾರಾರ್ಥ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ.  ಭಾನುವಾರ ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು,ಬೆಳಗಾವಿಯಲ್ಲೇ ವಾಸ್ತವ್ಯ ಮಾಡಲಿದ್ದು ಸೋಮವಾರ ದಿನಾಂಕ 29 ರಂದು ಬೆಳಗಾವಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಸಭೆ ನಡೆಸಿ ವಿಧಾನ ಪರಿಷತ್ತಿನ ಚುನಾವಣೆಯ ಕುರಿತು ಚರ್ಚಿಸಲಿದ್ದಾರೆ. ಉಸ್ತುವಾರಿಗಳ ನೇಮಕ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿಗೆ ಇಬ್ಬರು ವೀಕ್ಷಕರನ್ನು ಕೆಪಿಸಿಸಿ ನೇಮಿಸಿದೆ. ಬೆಳಗಾವಿ …

Read More »

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿನೀಡದಿದ್ದರೆ ಬಸವರಾಜ ಬೊಮ್ಮಾಯಿಸಹ ಅಧಿಕಾರ ಕಳೆದುಕೊಳ್ಳುತ್ತಾರೆ:ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿನೀಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸಹ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಭವಿಷ್ಯ ನುಡಿದಿದ್ದಾರೆ. ಅವರು ಇಲ್ಲಿನ ಕಳ್ಳಿಗುಡ್ಡ ಗ್ರಾಮದಲ್ಲಿ ಮಾತನಾಡಿ, ಮೀಸಲಾತಿ ನೀಡದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡರು. ಮೀಸಲಾತಿ ನೀಡದೇ ಹೋದರೆ ಈಗ ಬೊಮ್ಮಾಯಿ ಸಹ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಗುಡುಗಿದ್ದಾರೆ. ಸಮುದಾಯದಿಂದ ಒಗ್ಗಟ್ಟಿನ ಹೋರಾಟ ನಡೆದಿದ್ದರೆ ಇಷ್ಟೊತ್ತಿಗಾಗಲೇ ನಮ್ಮ ಮಕ್ಕಳ ಕೈಯಲ್ಲಿ ಸಟಿ೯ಫಿಕೆಟ್ ಇರಬೇಕಾಗಿತ್ತು. ಸಮಾಜವನ್ನು …

Read More »

60 ವರ್ಷದ ಇತಿಹಾಸದಲ್ಲಿ ದೇಶಕ್ಕೆ ಕಾಂಗ್ರೆಸ್​ ಕೊಡುಗೆ ಏನಪ್ಪಾ ಅಂದ್ರೆ ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಬಡತನ:ಕಟೀಲ್​

ಬಾಗಲಕೋಟೆ : 60 ವರ್ಷದ ಇತಿಹಾಸದಲ್ಲಿ ದೇಶಕ್ಕೆ ಕಾಂಗ್ರೆಸ್​ ಕೊಡುಗೆ ಏನಪ್ಪಾ ಅಂದ್ರೆ ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಬಡತನ ಎಂದು ಕಾಂಗ್ರೆಸ್​ ಪಕ್ಷದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ದೇಶಕ್ಕೆ ನಾಲ್ಕು ಕೊಡುಗೆ ಕೊಟ್ಟಿದೆ : ನಗರದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ನಾಲ್ಕು ಕೊಡುಗೆ …

Read More »

ಲಖನ್ ಜಾರಕಿಹೊಳಿ ಪಕ್ಷೇತರ ನಿಂತಿದ್ದು ಬಹಳ ಖುಷಿಯಾಗಿದೆ.: ರಮೇಶ್ ಜಾರಕಿಹೊಳಿ‌

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಒಳ್ಳೆಯದಾಯ್ತು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ‌ ಅಚ್ಚರಿಯ ಹೇಳಿಕೆ ನೀಡಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಾನೇ ನಿಲ್ಲಿಸಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಲಖನ್ ಜಾರಕಿಹೊಳಿ ಪಕ್ಷೇತರ ನಿಂತಿದ್ದು ಬಹಳ ಖುಷಿಯಾಗಿದೆ. ಲಖನ್ ಜಾರಕಿಹೊಳಿ ನಿಂತಿದ್ದೇ ಒಳ್ಳೆಯದಾಯ್ತು, ಇಲ್ಲವಾದರೆ ಅವಿರೋಧ …

Read More »

ಹೊಸ ರೂಪಾಂತರಿ ಒಮಿಕ್ರೋನ್ ಕೋವಿಡ್ ಆತಂಕ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್

ಬೆಳಗಾವಿ: ಹೊಸ ರೂಪಾಂತರಿ ಒಮಿಕ್ರೋನ್ ಕೋವಿಡ್ ಆತಂಕ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ವ್ಯಾಕ್ಸಿನ್​​​ ಮತ್ತು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯಿರುವ ಕೋಗನೊಳ್ಳಿ ಚೆಕ್ ಪೋಸ್ಟ್​ನಲ್ಲಿ‌ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಡೆಸುತ್ತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಗಡಿಯೊಳಗೆ ಪ್ರವೇಶ ಕಲ್ಪಿಸಲಾಗುತ್ತಿದ್ದು, ಲಸಿಕೆ ಪಡೆಯದಿರುವ ಪ್ರಯಾಣಿಕರನ್ನು ಮರಳಿ ಮಹಾರಾಷ್ಟಕ್ಕೆ …

Read More »

ನಡು ರಸ್ತೆಯಲ್ಲಿಯೇ ಭಾರಿ ವಾಹನಗಳನ್ನು ನಿಲ್ಲಿಸಿ ವಿವಿಧ ವಸ್ತುಗಳ ಲೋಡಿಂಗ್, ಅನ್‍ಲೋಡಿಂಗ್ ಮಾಡುತ್ತಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ

ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ನಡು ರಸ್ತೆಯಲ್ಲಿಯೇ ಭಾರಿ ವಾಹನಗಳನ್ನು ನಿಲ್ಲಿಸಿ ವಿವಿಧ ವಸ್ತುಗಳ ಲೋಡಿಂಗ್, ಅನ್‍ಲೋಡಿಂಗ್ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಯಡಿಯೂರಪ್ಪ ಮಾರ್ಗದ ರಸ್ತೆ ರಾಷ್ಟ್ರೀಯ ಹೆದ್ದಾರಿ-4ರಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಂತಹ ಸಮಯದಲ್ಲಿಯೇ ಬೇಕಾಬಿಟ್ಟಿಯಾಗಿ ದೊಡ್ಡ ಕ್ಯಾಂಟರ್‍ಗಳನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ, ಲೋಡ್, ಅನ್‍ಲೋಡ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಇಷ್ಟೇಲ್ಲಾ …

Read More »

10 ನಿಮಿಷಗಳ ಅಂತರದಲ್ಲಿ ಸಚಿವ ರಮೇಶ ಜಾರಕಿಹೊಳಿ, ಲಖನ್ ಜಾರಕಿಹೊಳಿ ಒಂದೇ ವೇದಿಕೆ ಮೇಲೆ ಪ್ರಾಚರ!!

  ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಮತಯಾಚನೆ ಮಾಡಿದರು. ಇನ್ನು ನನಗೇ ಪ್ರಥಮ ಪ್ರಾಶಸ್ಥ್ಯದ ಮತವನ್ನು ಕೊಡಿ ಎಂದು ಮತಯಾಚನೆ ಮಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತಯಾಚನೆ ಮಾಡಿದರು. ಇನ್ನು ಈ ಮೊದಲು 10 ನಿಮಿಷಗಳ ಮೊದಲು ಅದೇ ವೇದಿಕೆ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪರಿಷತ್ ಬಿಜೆಪಿ …

Read More »