Breaking News

ದೂರು ದಾಖಲಿಸುವಲ್ಲಿ ಲೋಪ : 12 ಮಂದಿ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಪ್ರಕರಣ ದಾಖಲಿಸುವ ವೇಳೆ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂಬ ಹಿನ್ನೆಲೆ ಹೈಕೋರ್ಟ್ 12 ಮಂದಿ ವಿರುದ್ಧ ದಾಖಲಿಸಿದ್ದ ಗ್ಯಾಂಬ್ಲಿಂಗ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ನಗರದ ಶೇಷಾದ್ರಿಪುರಂ ಠಾಣೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79, 80ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್​ನ ಸಿಬ್ಬಂದಿ ಹಾಗೂ ಇತರೆ 7 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ಧ …

Read More »

ಅಭಿಮಾನಿಗಳಿಗೆ ಇಲ್ಲಿ ‘ಕಿಚ್ಚ’ನೇ ದೇವರು.. ಸುದೀಪ್​ಗೆ ಗುಡಿ ನಿರ್ಮಿಸುತ್ತಿರುವ ರಾಯಚೂರು ಫ್ಯಾನ್ಸ್​

ರಾಯಚೂರು: ಚಲನಚಿತ್ರ ನಟರನ್ನು ಆರಾಧಿಸಿ ಅವರ ಹೆಸರಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರ ಶ್ರೇಯೋಭಿವೃದ್ಧಿ ಪ್ರಾರ್ಥಿಸುವುದು ಅಭಿಮಾನಿಗಳು ನಡೆಸಿಕೊಂಡು ಬಂದಿರುವ ಕಾರ್ಯವಾಗಿದೆ. ಆದರೆ ರಾಯಚೂರಲ್ಲಿ ತಮ್ಮ ನೆಚ್ಚಿನ ನಟನ ದೇವಾಲಯ ನಿರ್ಮಾಣಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಕನ್ನಡ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ಥಳಿ ಕೆತ್ತಿಸಿರುವ ಅಭಿಮಾನಿಗಳು ಅವರಿಗಾಗಿ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಮೊದಲು ಮಾನವನಾಗು ಎಂಬ …

Read More »

ಬೆಳಗಾವಿಯಲ್ಲೂ ಇಬ್ಬರು ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ವಕ್ಕರಿಸಿದ ಕೊರೊನಾ

ಬೆಳಗಾವಿ: ಇಲ್ಲಿನ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಒಳಗಾದ ಇಬ್ಬರೂ ವಿದ್ಯಾರ್ಥಿನಿಯರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಇವರು ನಗರದ ಖಾಸಗಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ವಸತಿ ನಿಲಯದಲ್ಲಿರುವ ಈ ಇಬ್ಬರು ಸ್ವಯಂ ಪ್ರೇರಿತವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರಲ್ಲೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ.‌ …

Read More »

ಮುಂದಿನ ಎರಡು ತಿಂಗಳ ಕಾಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬ್ರೇಕ್ 1d

ಬೆಂಗಳೂರು: ಶಾಲಾ, ಕಾಲೇಜು ಮತ್ತು ಹಾಸ್ಟಲ್‍ಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶಿಸಿದೆ.ಶಿಕ್ಷಣ ಸಂಸ್ಥೆಗಳಲ್ಲಿ ಸಮ್ಮೇಳನಗಳು, ಸೆಮಿನಾರ್ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು ಕನಿಷ್ಠ ಭೌತಿಕ ಹಾಜರಾತಿಯೊಂದಿಗೆ ಕಾರ್ಯಕ್ರಮವನ್ನು ನಡೆಸಬಹುದು. ಇಲ್ಲವೇ ಹೆಚ್ಚು ಭಾಗವಹಿಸಬೇಕಾದ ಸಂಧರ್ಭದಲ್ಲಿ ವರ್ಚುವಲ್ ಮೋಡï ಮೂಲಕ ಹಾಜರಾಗಬಹುದು ಎಂದು ಸೂಚಿಸಿದೆ. 18 ವರ್ಷಕ್ಕಿಂತ …

Read More »

ಮಹಿಳೆ ಕೆಟಗರಿ ಅಲ್ಲ!: ಹೈಕೋರ್ಟ್‌

ಬೆಂಗಳೂರು : ‘ಮೀಸಲಾತಿ ವಿಷಯದಲ್ಲಿ ಮಹಿಳೆ ಮೀಸಲು ಕೆಟಗರಿ ಅಲ್ಲ, ಅದೊಂದು ಲಿಂಗಸೂಚಕ ಮಾತ್ರ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಶಿರಾ ನಗರಸಭೆಯ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನವೆಂಬರ್ 25ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.   ಈ ಸಂಬಂಧ ಅಬ್ದುಲ್ಲಾ ಖಾನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಬಿಸಿಎ (ಮಹಿಳೆ) ಅಥವಾ ಸಾಮಾನ್ಯ (ಮಹಿಳೆ) …

Read More »

ಗಿಫ್ಟ್‌ ಡೀಡ್‌ ವರ್ಗಾವಣೆ: ಪೂರ್ವಾನ್ವಯ ಸಲ್ಲ

ಬೆಂಗಳೂರು: ‘ಗಿಫ್ಟ್ ಡೀಡ್ ಮೂಲಕ ಮಗಳಿಗೆ ನೀಡಿದ್ದ ಆಸ್ತಿ ವರ್ಗಾವಣೆ‌ ರದ್ದುಗೊಳಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ, ಹೈಕೋರ್ಟ್‌, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ಹವಣೆ ಮತ್ತು ಕಲ್ಯಾಣ ಕಾಯ್ದೆ-2007ರ ಕಲಂ 23(1) ನಿಬಂಧನೆಗಳನ್ನು, ಕಾಯ್ದೆ ಜಾರಿಯಾದ ನಂತರದ ಅವಧಿಯಲ್ಲಿ ಅನ್ವಯಸಬಹುದೇ ಹೊರತು, ಪೂರ್ವಾನ್ವಯ ಮಾಡಲಾಗದು’ ಎಂದು ಅಭಿಪ್ರಾಯಪಟ್ಟಿದೆ.   ಈ ಸಂಬಂಧ ತುಮಕೂರಿನ ಕಮಲಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಹಾಗೂ …

Read More »

5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆ ಹಾನಿ: ಮಳೆ, ರೋಗಬಾಧೆಗೆ ತುತ್ತಾದ ದ್ರಾಕ್ಷಿ

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆ, ಮೋಡ ಕವಿದ ವಾತಾವರಣ ಹಾಗೂ ರೋಗಬಾಧೆಯಿಂದ ರಾಜ್ಯದಲ್ಲಿ ದ್ರಾಕ್ಷಿ ಬೆಳೆ ಅಪಾರ ಹಾನಿಗೊಳಗಾಗಿದೆ. ದ್ರಾಕ್ಷಿ ಬೆಳೆಯುವ ಸುಮಾರು 32,000 ಹೆಕ್ಟೇರ್‌ ಪ್ರದೇಶದ ಪೈಕಿ ಶೇ 60ರಿಂದ ಶೇ 65ರಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.   ರಾಜ್ಯದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆಯಲ್ಲಿ ಅಂದಾಜು 26,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಉಳಿದಂತೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ದ್ರಾಕ್ಷಿ ಗಿಡವನ್ನು ಚಾಟ್ನಿ (ಪ್ರುನಿಂಗ್‌) …

Read More »

ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ

ಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿಯಾದ ಘಟನೆ ನಡೆದಿದೆ. ಬಾಗಲಗುಂಟೆ ಸಮೀಪದ ಎಂಇಐ ಲೆಯೊಟ್ ನಲ್ಲಿ ತಮಿಳುನಾಡು ಮೂಲದ ಶಿವಕುಮಾರ ಎಂಬಾತ ಆರ್ ಎಸ್ ಟ್ರಾವೆಲ್ಸ್ ಕಂಪನಿ ಆರಂಭಿಸಿದ್ದ,ಮೊದ ಮೊದಲು ಅಟ್ಯಾಚ ಹೆಸರಲ್ಲಿ ಕೆಲವು ವಾಹನಗಳಿಗೆ ತಿಂಗಳು ತಿಂಗಳು ಸರಿಯಾಗಿ ಬಾಡಿಗೆ ಕೊಡುತ್ತಾ ನಂಬಿಕೆ ಗಳಿಸಿದ್ದ. ಈತನ ಮೇಲಿನ ನಂಬಿಕೆಯಿಂದ …

Read More »

ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ನಾಲ್ಕು ಜನ ಗಂಭೀರವಾಗಿ ಗಾಯ

ಹಾವೇರಿ : ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ನಾಲ್ಕು ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಂದು ಬಸಾಪುರ ಗ್ರಾಮದಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಅವಘಡ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಹುಬ್ಬಳ್ಳಿ : ಹುಬ್ಬಳ್ಳಿಯ ಸಿದ್ದಾರೊಡ ಮಠದಲ್ಲಿರುವ ಕಲ್ಯಾಣಿ ಒಳಗೆ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ.

ಹುಬ್ಬಳ್ಳಿ : ಹುಬ್ಬಳ್ಳಿಯ ಸಿದ್ದಾರೊಡ ಮಠದಲ್ಲಿರುವ ಕಲ್ಯಾಣಿ ಒಳಗೆ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ. ಇಂದು ಮುಂಜಾನೆ ಸಿದ್ದಾರೊಡ ರ ಮಠದ ಕೆರೆಯಲ್ಲಿನ ಶ್ರೀ ಗುರುನಾಥರೂಢರ ಪೂಜೆಯನ್ನು ಸಲ್ಲಿಸಲು ಹೋಗಿದ್ದ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಹಲವು ವರ್ಷಗಳಿಂದ ಸಿದ್ದಾರೊಡರ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉಮೇಶಪ್ಪ ಜಾಳಿಹಾಳ ಎಂದು ತಿಳಿದು ಬಂದಿದೆ. ಸುದ್ದಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ NDRF ಸಿಬ್ಬಂದಿ ಬಂದು …

Read More »