ಬೆಂಗಳೂರು: ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹಣ ಇಲ್ಲದಿದ್ದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ ಎಂದು ಕಟುವಾಗಿ ಟೀಕಿಸಿದೆ. 2017-18ನೇ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬೀದರ್ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ …
Read More »ಸ್ನೇಹಿತರ ಜೊತೆಗೂಡಿ ಎಣ್ಣೆ ಪಾರ್ಟಿ.. ಮತ್ತೇರಿದ ಮೇಲೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..
ಹೊಸಕೋಟೆ (ಬೆಂ.ಗ್ರಾ) : ಅವಾಚ್ಯ ಪದಗಳಿಂದ ನಿಂದಿಸಿದ ಎಂದು ಕುಡಿದ ಅಮಲಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಸತ್ಯವಾರ ಗ್ರಾಮದಲ್ಲಿ ನಡೆದಿದೆ. ಎಣ್ಣೆ ಪಾರ್ಟಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಸ್ನೇಹಿತರೇ ಸೇರಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ದಾವಣಗೆರೆ ಮೂಲದ ಸುಧಾಕರ್ (43) ಎಂಬುವರು ಕೊಲೆಯಾಗಿರುವ ದುರ್ದೈವಿ. ಕೆ.ಸತ್ಯವಾರ ಗ್ರಾಮದ ನಾಗಭೂಷಣ್ ಅಲಿಯಾಸ್ ನಾಗ, ಚಂದ್ರಶೇಖರ್ ಅಲಿಯಾಸ್ …
Read More »#omicron ಆತಂಕದ ಮಧ್ಯೆಯೂ ಇಂದಿನಿಂದ ನಂದಿ ಬೆಟ್ಟ ಪ್ರವಾಸಿಗರಿಗೆ ಮುಕ್ತ ಮುಕ್ತ..!
ಬೆಂಗಳೂರು: ಸಿಲಿಕಾನ್ ಸಿಟಿಗೆ ಕೂಗಳತೆ ದೂರದಲ್ಲಿರುವ ಪ್ರವಾಸಿಗರ ಫೆವರೇಟ್ ಹಾಗೂ ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟ ಪ್ರಿಯರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶ ಆರಂಭವಾಗುತ್ತಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ. ಆರ್. ಮಾಹಿತಿ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಶನಿವಾರ ಮತ್ತು ಭಾನುವಾರದಂದು ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಜಿಲ್ಲಾಡಳಿತ …
Read More »‘ಲಕ ಲಕ ಲಂಬರ್ಗಿನಿ’ ಎನ್ನುತ್ತಾ ಚಂದನ್ ಶೆಟ್ಟಿ ಜೊತೆ ಸೊಂಟ ಬಳುಕಿಸಿದ ಡಿಂಪಲ್ ಕ್ವೀನ್
ರಾಜಾ-ರಾಣಿ ಶೋನಲ್ಲಿ ಬ್ಯುಸಿಯಾಗಿದ್ದ ಚಂದನ್ ಯಾವುದೇ ಆಲ್ಬಂ ಸಾಂಗ್ಗಳನ್ನ ಘೋಷಣೆ ಮಾಡಿರಲಿಲ್ಲ. ಇತ್ತೀಚಿಗೆ ಶೋ ಗ್ರ್ಯಾಂಡ್ ಆಗಿ ಎಂಡ್ ಆಗಿದ್ದು, ಚಂದನ್-ನಿವೇದಿತಾ ಮೂರನೇ ಸ್ಥಾನ ಪಡೆಯುವುದರ ಮೂಲಕ ಜನರ ಮನಸ್ಸನ್ನ ಗೆದ್ದಿದ್ದರು. ಈಗ ಚಂದನ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಒಂದನ್ನ ನೀಡಿದ್ದಾರೆ. ರಾಪರ್ ಚಂದನ್ ಶೆಟ್ಟಿ ಅವರು ಏನೇ ಮಾಡಿದ್ರು ಸಖತ್ ಡಿಫರೆಂಟ್ ಆಗಿ ಮಾಡ್ತಾರೆ. ಕ್ಯಾಚಿ ಸಾಹಿತ್ಯ, ಅದ್ಧೂರಿ ಸೆಟ್, ಕಾಸ್ಟೂಮ್ಗಳು ಅವರ ಆಲ್ಬಂ ಸಾಂಗ್ಸ್ಗಳಲ್ಲಿ ನೀವು ನೋಡಿರ್ತಿರಾ. ಇನ್ನು …
Read More »ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು! ಮುಂದೇನಾದರು?
ಮೈಸೂರು: ಇಬ್ಬರು ಯುವ ಪ್ರೇಮಿಗಳು ಜನುಮದ ಜೋಡಿಯಾಗಿ ಪರಸ್ಪರ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ಹಾಗೆ ಪ್ರೇಮಿಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ. ಕೊನೆಗೆ ತೆಪ್ಪ ನಡೆಸುವ ಅಂಬಿಗರಿಂದ ಪ್ರೇಮಿಗಳ ರಕ್ಷಣೆಯಾಗಿದೆ. ಅಭಿ (19) ಮತ್ತು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯಿಂದ ಆತ್ಮಹತ್ಯೆ ಯತ್ನ ನಡೆದಿದೆ. ಬಾಲಕಿಯು ಚಾಮರಾಜನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದರೆ ಅಭಿ ಪೆಟ್ರೋಲ್ ಬಂಕ್ …
Read More »ಈಸಿ ಲೋನ್, ಈಸಿ ಇನ್ ಸ್ಟಾಲ್ ಮೆಂಟ್ ಎಂದು ಲೋನ್ ಕೊಡುವ ರೀತಿಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಚಾರ ಮಾಡುತ್ತಾರೆ.: ಸತೀಶ ಜಾರಕಿಹೊಳಿ
ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಗುರಿ ಇಟ್ಟುಕೊಂಡಿದ್ದೇವೆ ಎಂದರು. ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆಯಿಂದ ಮತವಿಭಜನೆ ಪ್ರಶ್ನೆಯೇ ಇಲ್ಲ. ವಿವೇಕರಾವ್ ಈಗಾಗಲೇ ರಮೇಶ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ …
Read More »ದೂರು ದಾಖಲಿಸುವಲ್ಲಿ ಲೋಪ : 12 ಮಂದಿ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ಪ್ರಕರಣ ದಾಖಲಿಸುವ ವೇಳೆ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂಬ ಹಿನ್ನೆಲೆ ಹೈಕೋರ್ಟ್ 12 ಮಂದಿ ವಿರುದ್ಧ ದಾಖಲಿಸಿದ್ದ ಗ್ಯಾಂಬ್ಲಿಂಗ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ನಗರದ ಶೇಷಾದ್ರಿಪುರಂ ಠಾಣೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79, 80ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ನ ಸಿಬ್ಬಂದಿ ಹಾಗೂ ಇತರೆ 7 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ಧ …
Read More »ಅಭಿಮಾನಿಗಳಿಗೆ ಇಲ್ಲಿ ‘ಕಿಚ್ಚ’ನೇ ದೇವರು.. ಸುದೀಪ್ಗೆ ಗುಡಿ ನಿರ್ಮಿಸುತ್ತಿರುವ ರಾಯಚೂರು ಫ್ಯಾನ್ಸ್
ರಾಯಚೂರು: ಚಲನಚಿತ್ರ ನಟರನ್ನು ಆರಾಧಿಸಿ ಅವರ ಹೆಸರಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರ ಶ್ರೇಯೋಭಿವೃದ್ಧಿ ಪ್ರಾರ್ಥಿಸುವುದು ಅಭಿಮಾನಿಗಳು ನಡೆಸಿಕೊಂಡು ಬಂದಿರುವ ಕಾರ್ಯವಾಗಿದೆ. ಆದರೆ ರಾಯಚೂರಲ್ಲಿ ತಮ್ಮ ನೆಚ್ಚಿನ ನಟನ ದೇವಾಲಯ ನಿರ್ಮಾಣಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಕನ್ನಡ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ಥಳಿ ಕೆತ್ತಿಸಿರುವ ಅಭಿಮಾನಿಗಳು ಅವರಿಗಾಗಿ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಮೊದಲು ಮಾನವನಾಗು ಎಂಬ …
Read More »ಬೆಳಗಾವಿಯಲ್ಲೂ ಇಬ್ಬರು ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ವಕ್ಕರಿಸಿದ ಕೊರೊನಾ
ಬೆಳಗಾವಿ: ಇಲ್ಲಿನ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಒಳಗಾದ ಇಬ್ಬರೂ ವಿದ್ಯಾರ್ಥಿನಿಯರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಇವರು ನಗರದ ಖಾಸಗಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ವಸತಿ ನಿಲಯದಲ್ಲಿರುವ ಈ ಇಬ್ಬರು ಸ್ವಯಂ ಪ್ರೇರಿತವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರಲ್ಲೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ. …
Read More »ಮುಂದಿನ ಎರಡು ತಿಂಗಳ ಕಾಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬ್ರೇಕ್ 1d
ಬೆಂಗಳೂರು: ಶಾಲಾ, ಕಾಲೇಜು ಮತ್ತು ಹಾಸ್ಟಲ್ಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶಿಸಿದೆ.ಶಿಕ್ಷಣ ಸಂಸ್ಥೆಗಳಲ್ಲಿ ಸಮ್ಮೇಳನಗಳು, ಸೆಮಿನಾರ್ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು ಕನಿಷ್ಠ ಭೌತಿಕ ಹಾಜರಾತಿಯೊಂದಿಗೆ ಕಾರ್ಯಕ್ರಮವನ್ನು ನಡೆಸಬಹುದು. ಇಲ್ಲವೇ ಹೆಚ್ಚು ಭಾಗವಹಿಸಬೇಕಾದ ಸಂಧರ್ಭದಲ್ಲಿ ವರ್ಚುವಲ್ ಮೋಡï ಮೂಲಕ ಹಾಜರಾಗಬಹುದು ಎಂದು ಸೂಚಿಸಿದೆ. 18 ವರ್ಷಕ್ಕಿಂತ …
Read More »