Breaking News

ಪಡಿತರ ಅಂಗಡಿಗಳಲ್ಲಿ ಮಿನಿ ಎಲ್‌ಪಿಜಿ ಸಿಲಿಂಡರ್‌ : ಕೇಂದ್ರ ಸಚಿವ ಪಿಯೂಷ್ ಗೋಯಲ್ ಘೋಷಣೆ

ನವದೆಹಲಿ: ಮಿನಿ ಎಲ್ ಪಿಜಿ ಸಿಲಿಂಡರ್ ಮಾರಾಟ ಸೇರಿದಂತೆ ಜನರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಜತೆಗೆ ಇತರೆ ವಸ್ತುಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ . ಪಡಿತರ ಅಂಗಡಿಗಳ ಮೂಲಕ ಮಿನಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.   ಪಡಿತರ ಅಂಗಡಿಗಳಲ್ಲಿ ಮಿನಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಕುರಿತು ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಚರ್ಚಿಸಲಾಗಿದೆ …

Read More »

ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

ಭಾಲ್ಕಿ : ಮದುವೆಯ ಸಂಭ್ರಮದ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪುತ್ರ‌ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋದ ದಂಪತಿಗಳು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ್ ತಾಂಡಾ ಬಳಿ ಬುಧವಾರ ತಡರಾತ್ರಿ ನಡೆದಿದೆ.   ಸೂರ್ಯಕಾಂತ ಪಾಟೀಲ ಅವರ ಮಗ ಸಾಯಿನಾಥ ಅವರ ಮದುವೆ ಡಿ. 26ಕ್ಕೆ ನಿಶ್ಚಯವಾಗಿದ್ದು, ಬೀದರ ನಗರದಲ್ಲಿ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಭಾಲ್ಕಿಗೆ ವಾಪಸ್‌ ಆಗುವಾಗ …

Read More »

ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಅನಿವಾರ್ಯ, ನಾಳೆ ದೆಹಲಿಗೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ವಿಶೇಷವಾಗಿ ಗಡಿಭಾಗಗಳಲ್ಲಿ ಕಠಿಣ ನಿಯಮ ತರುವ ಅನಿವಾರ್ಯತೆಯಿದೆ.ನಾಳೆ ದೆಹಲಿಗೆ ಹೋಗುತ್ತಿದ್ದು ಅಲ್ಲಿ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ನಿಯಮ ಜಾರಿಗೆ ತರಲಾಗುವುದು. ಎಂದು ಹೇಳುವ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ತರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರೋಗ್ಯ ಇಲಾಖೆ ಮತ್ತು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಗೆ ಬೂಸ್ಟರ್ …

Read More »

23 ರಾಷ್ಟ್ರಗಳಲ್ಲಿ `ಒಮಿಕ್ರಾನ್’ ಸೋಂಕು ಪತ್ತೆ

ನವದೆಹಲಿ : ಕಳೆದ ಒಂದು ವಾರದಲ್ಲಿಯೇ ದಕ್ಷಿಣ ಆಫ್ರಿಕಾದಿಂದ ಒಮಿಕ್ರಾನ್ ವೈರಸ್ 23 ದೇಶಗಳನ್ನು ತಲುಪಿದೆ. ವಿಶ್ವದಾದ್ಯಂತ ಕೊರನಾ ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿನ ಆತಂಕ ಹೆಚ್ಚಳವಾಗಿದ್ದು, 23 ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.ಕೊರೊನಾ ವೈರಸ್ ಒಮಿಕ್ರಾನ್​ನ ಹೊಸ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ.   ದಕ್ಷಿಣ ಆಫ್ರಿಕಾ-77, ಯುಕೆ-22, ಬೋಟ್ಸ್ ವಾನದಲ್ಲಿ 19, ನೆದರ್ ಲ್ಯಾಂಡ್ ನಲ್ಲಿ 16, ಪೋರ್ಚಗಲ್ ನಲ್ಲಿ 13, ಜರ್ಮನಿಯಲ್ಲಿ 9, ಇಟಲಿ 9, ಆಸ್ಟ್ರೇಲಿಯಾ …

Read More »

ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ಜನ ಸ್ಥಳಕ್ಕೆ ತೆರಳಿ ಪಾರ್ಟಿ ಮಾಡುವ ಸರ್ಕಾರಿ ಅಧಿಕಾರಿಗಳು,

ಖಾನಾಪುರ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಓರ್ವ ಮಹಿಳಾ ಕಾರ್ಯದರ್ಶಿ,  ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಇತ್ತೀಚೆಗೆ ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ಜನ ಸ್ಥಳಕ್ಕೆ ತೆರಳಿ ಪಾರ್ಟಿ ಮಾಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೀಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸುನೀಲ ಕದಮ್, ಸಂತೋಷ ಕಾಶೀಲಕರ, ವಿಠ್ಠಲ ಪತ್ರಿ, ಫ್ರಾನ್ಸಿಸ್ ಶೇರಾಂವ ಮಂಗಳವಾರ ತಹಸೀಲ್ದಾರ್ ಮತ್ತು …

Read More »

ಸುವರ್ಣ ವಿಧಾನಸೌಧ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರ ಪಿ.ಹೇಮಲತಾ

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಇದೇ ಡಿಸೆಂಬರ್13 ರಿಂದ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಅವರು ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬುಧವಾರ (ಡಿ.1) ಭೇಟಿ ನೀಡಿದ ಅವರು ಎಲ್ಲ ಸಿದ್ಧತೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ವಿಧಾನಸಭೆ, ಸಭಾಧ್ಯಕ್ಷರ ಕೊಠಡಿ, ಬ್ಯಾಂಕ್ವೆಟ್ ಸಭಾಂಗಣ, ಶಾಸಕರ ಹಾಗೂ ವಿರೋಧ ಪಕ್ಷದ ಮೊಗಸಾಲೆ, ಸೆಂಟ್ರಲ್ ಹಾಲ್, ಊಟದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯನ್ನು, ಕಾರ್ಯದರ್ಶಿಗಳ ಕ್ಯುಬಿಕಲ್ಸ್ …

Read More »

ಬೆಳಗಾವಿ ಮಾರ್ಕೆಟ್ ಪೊಲೀಸರಿಂದ ಇಸ್ಪೀಟ್ ಅಡ್ಡೆ ಮೇಲೆ ದಾಳಿ: 9 ಮಂದಿ ಬಂಧನ

ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಇಸ್ಪೀಟ್ ಆಡುತ್ತಿದ್ದ ಬರೊಬ್ಬರಿ 9 ಮಂದಿಗೆ ಹೆಡೆಮುರಿ ಕಟ್ಟಿದ್ದಾರೆ. ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಅವರ ನೇತೃತ್ವದ ತಂಡವು ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾಧ್ವ ರೋಡ ಬಳಿ ದಾಳಿ ಮಾಡಿದ್ದಾರೆ. ಈ ವೇಳೆ 9 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರಿಂದ 1,03,440 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೂ ಒಮಿಕ್ರಾನ್ ಕರಿ ನೆರಳು

ವಿದೇಶಗಳಲ್ಲಿ ಹೊಸ ತಳಿ ಕೊರೊನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವದಾಧ್ಯಂತ ಮತ್ತೆ ಆತಂಕ ಸೃಷ್ಟಿಯಾಗಿದೆ. ಅಲ್ಲದೇ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೂ ಒಮಿಕ್ರಾನ್ ಕರಿ ನೆರಳು ಬಿದ್ದಿದೆ. ಹೌದು ಡಿಸೆಂಬರ್ 13ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಕೂಡ ಆರಂಭವಾಗಿದೆ. ಆದರೆ ಇದೀಗ ವಿದೇಶಗಳಲ್ಲಿ ಒಮಿಕ್ರಾನ್ ಮತ್ತೆ ಹಾಗೂ ರಾಜ್ಯದಲ್ಲಿ ಅಲ್ಲಲ್ಲಿ ಕೊರೊನಾ ಸೋಂಕು …

Read More »

ಖಾನಾಪುರ ತಾಲ್ಲೂಕಿನ ನಂದಗಡದ ವಾರದ ಸಂತೆಯಲ್ಲಿ ಬುಧವಾರ ಒಂದು ಸುತ್ತು ಸುತ್ತಾಡಿದ ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್

ಖಾನಾಪುರ:  ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಬುಧವಾರ ತಾಲ್ಲೂಕಿನ ನಂದಗಡ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸಾಮಾನ್ಯ ಜನರಂತೆ ಸುತ್ತಾಡಿ ತರಕಾರಿ ಖರೀದಿಸುವುದರ ಜೊತೆಗೆ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ಆಲಿಸಿದರು. ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ನಂದಗಡಕ್ಕೆ ಭೇಟಿ ನೀಡಿದ್ದ ಅವರು ನಂದಗದ ಸಂತೆಯನ್ನು ಒಂದು ಪೂರ್ಣ ಸುತ್ತು ಹಾಕಿ ಸಂತೆಯಲ್ಲಿ ತಮ್ಮ ಮನೆಬಳಕೆಗೆ ಬೇಕಾದ ಗಜ್ಜರಿ, ಬೀಟರೂಟ್, ಪಾಲಕ್, ಬೀನ್ಸ್ ಸೌತೆಕಾಯಿ ಮತ್ತಿತರ ತರಕಾರಿಗಳನ್ನು ಖರೀದಿಸಿದರು. ಬಳಿಕ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಂವಾದ …

Read More »

ಬೆಳಗಾವಿ ವಿಧಾನಪರಿಷತ್‌ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ಗೆ ‘ಒಳೇಟಿನ’ ಭೀತಿ,ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಬಹಳ..?

ಬೆಳಗಾವಿ: ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಯು, ಇಲ್ಲಿನ ಪ್ರಭಾವಿಗಳಾದ ಜಾರಕಿಹೊಳಿ ಸಹೋದರರ ನಡುವಿನ ಸವಾಲ್‌ನಿಂದಾಗಿ ಇಡೀ ರಾಜ್ಯದ ಗಮನಸೆಳೆದಿದೆ ಮತ್ತು ತೀವ್ರ ಕುತೂಹಲವನ್ನೂ ಹುಟ್ಟು ಹಾಕಿದೆ.   ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಟ್ಟಿದೆ. ಆಮ್ ಆದ್ಮಿ ಪಕ್ಷದಿಂದ ಶೇಖರ ಹೆಗಡೆ ಸ್ಪರ್ಧಿಸಿದ್ದಾರೆ. …

Read More »