Breaking News

ಚಳಿಗಾಲದ ಅಧಿವೇಶನದಲ್ಲಿ (Winter session) ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆ?

ಬೆಳಗಾವಿಯಲ್ಲಿ (Belagavi) ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ (Winter session) ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.   ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡುವಂತೆ ಧಾರ್ಮಿಕ ಮುಖಂಡರು ಹಾಗೂ ಮಠಾಧೀಶರು ಒತ್ತಡ ತಂದಿದ್ದು, ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಕರಡು ಸಿದ್ದಪಡಿಸಲಾಗಿದ್ದು, ಕಾನೂನು ಪರಾಮರ್ಶೆ ನಡೆಸಲಾಗುತ್ತಿದೆ ಎನ್ನಲಾಗಿದೆ.     ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ …

Read More »

ಚುನಾವಣೆ ನಡೆದ 25 ಸ್ಥಾನಗಳ ಪೈಕಿ ಬಿಜೆಪಿಗೆ 13ರಿಂದ 15 ಸ್ಥಾನಗಳು ಬರಬಹುದು. ಕಾಂಗ್ರೆಸ್ 10ರಿಂದ 12 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇನ್ನು ಜೆಡಿಎಸ್ ಒಂದೆರಡು ಸ್ಥಾನಗಳಿಗೆ ಸೀಮಿತ

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಶುಕ್ರವಾರ (ಡಿ 10) ಚುನಾವಣೆ ನಡೆದಿದೆ. ಡಿಸೆಂಬರ್ ಹದಿನಾಲ್ಕರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಜೆಡಿಎಸ್ ಆರು ಸ್ಥಾನದಲ್ಲಿ ಸ್ಪರ್ಧಿಸಿದರೆ, ಎರಡು ರಾಷ್ಟ್ರೀಯ ಪಕ್ಷಗಳು ಎಲ್ಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿದೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸಿರುವುದರಿಂದ, ಇದರ ಇಂಪ್ಯಾಕ್ಟ್ ಯಾರ ಮೇಲೆ ಬೀಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪನವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ …

Read More »

ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಪತಿ, ತನ್ನ ಜತೆಗಿನ ಪತ್ನಿಯ ಏಕಾಂತದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌

ಬೆಂಗಳೂರು : ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಪತಿ, ತನ್ನ ಜತೆಗಿನ ಪತ್ನಿಯ ಏಕಾಂತದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆ.ಆರ್‌.ಪುರದ ದೇವಸಂದ್ರ ನಿವಾಸಿ 29 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ಹೊಂಗಸಂದ್ರ ನಿವಾಸಿ ಹರಿಕೃಷ್ಣ ಎಂಬಾತನ ವಿರುದ್ಧ ವೈಟ್‌ಫೀಲ್ಡ್‌ ಸಿಇಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಸಂತ್ರಸ್ತೆಗೆ ಆರೋಪಿ ಎರಡನೇ ಪತಿಯಾಗಿದ್ದು, ಮೊದಲ ಪತ್ನಿಯಿಂದ 2015ರಲ್ಲಿ ವಿಚ್ಛೇದನ ಪಡೆದಿದ್ದರು. ಖಾಸಗಿ ಕಂಪನಿಯೊಂದರ …

Read More »

ವಯಸ್ಸು 30 ದಾಟಿದ ಬಳಿಕ ನೀವು ಸೇವಿಸಲೇಬೇಕು ಈ ಆಹಾರ ಪದಾರ್ಥ

ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್​ ಹೆಚ್ಚಿರುವ ಹಣ್ಣುಗಳಲ್ಲಿ ಆಯಂಟಿ ಆಕ್ಸಿಡಂಟ್​ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ಹಣ್ಣುಗಳನ್ನು ಸೇವಿಸಿದ ಬಳಿಕ ತೂಕ ಇಳಿಕೆಯಾಗುತ್ತದೆ ಹಾಗೂ ಹೃದಯಾಘಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಬೊಕ್ರೊಲಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್​ ಇರುತ್ತದೆ. ಇದು ನಿಮ್ಮ …

Read More »

35 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಲಿಯೋನಾರ್ಡ್ ಧೂಮಕೇತು

ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ. ಅಲ್ಲದೇ, ತಿಂಗಳ ಕೊನೆಯಲ್ಲಿ ಇದು ಅತೀ ಪ್ರಕಾಶಮಾನವಾಗಿ ಗೋಚರಿಸಲಿದೆ. ಇದು ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿಗೆ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಿದ್ದಾರೆ. ಡಿ. 12ರಂದು ಈ ಧೂಮಕೇತು ಭೂಮಿಗೆ ಸಮೀಪಿಸುತ್ತಿದೆ. ಇದು ಭೂಮಿಯಿಂದ ಸುಮಾರು 523 ಶತಕೋಟಿ ಕಿ.ಮೀ ದರದಲ್ಲಿ ಇದೆ …

Read More »

ರಾಜ್ಯದ ‘ಸರ್ಕಾರಿ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್: ಮುಂಬಡ್ತಿಯ ಮಿತಿ ಶೇ.25 ರಿಂದ 30ರಷ್ಟು ಹೆಚ್ಚಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ಭರ್ತಿಗೆ ಸಂಬಂಧ ಇದ್ದಂತ ರಿಕ್ತ ಸ್ಥಾನ ಆಧಾರಿತ ವರ್ಗೀಕರಣವನ್ನು ರದ್ದು ಪಡಿಸಿದ್ದು, ಇದರ ಬದಲಾಗಿ ಹುದ್ದೆ ಆಧಾರಿತ ( ಪೋಸ್ಟ್ ಬೇಸ್ಡ್ ) ವರ್ಗೀಕರಣಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಮುಂಬಡ್ತಿಗೆ ಇದ್ದಂತ ಶೇ.25ರ ಮಿತಿಯನ್ನು ಶೇ.30ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.   ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ …

Read More »

ಹೈ ಕೋರ್ಟ್​​​​ನಲ್ಲಿ ಹುದ್ದೆಗಳು ಖಾಲಿ ಇವೆ, ತಿಂಗಳಿಗೆ ₹ 63,070 ಸಂಬಳ 44m0 views17 shares

Karnataka High Court Recruitment 2021: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಉಚ್ಛ ನ್ಯಾಯಾಲಯ(Karnataka High Court )ದಲ್ಲಿ ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಹೈ ಕೋರ್ಟ್​​ 21 ಜಿಲ್ಲಾ ನ್ಯಾಯಾಧೀಶರ(District Court Judges ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಪೈಕಿ 18 ಬ್ಯಾಕ್​ಲಾಗ್(Back log)​ ಹುದ್ದೆಗಳು ಮತ್ತು …

Read More »

ಮುಂಬೈನಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮುಂಬೈ: ಕರೋನವೈರಸ್‌ನ ಒಮಿಕ್ರಾನ್ (Omicron) ರೂಪಾಂತರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಮುಂಬೈನಲ್ಲಿ (Mumbai) 48 ಗಂಟೆಗಳ ಕಾಲ ನಿಷೇಧಾಜ್ಞೆ (Section 144) ಜಾರಿಗೊಳಿಸಲಾಗಿದೆ. ವೀಕೆಂಡ್​ನಲ್ಲಿ ದೊಡ್ಡ ಸಮಾರಂಭಗಳನ್ನು ಆಯೋಜಿಸುವುದನ್ನೂ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಮುಂಬೈ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಜನರು ಮತ್ತು ವಾಹನಗಳನ್ನು ಒಳಗೊಂಡ ರ್ಯಾಲಿಗಳು ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಿರ್ಬಂಧಿಸಲಾಗಿದೆ ಎಂದು ಪಿಟಿಐ ಸುದ್ದಿ …

Read More »

ಅಧಿವೇಶನದ ಬಂದೋಬಸ್ತ್ ಗೆ ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ, ಎರಡು ಡೋಸ್ ವ್ಯಾಕ್ಸಿನ್ ಮತ್ತು ನೆಗೆಟಿವ್ ವರದಿ ಇದ್ದರೆ ಮಾತ್ರ ಅಧಿವೇಶನಕ್ಕೆ ಅನುಮತಿ

 ಬೆಳಗಾವಿ: ಜಿಲ್ಲೆಯಲ್ಲಿ ಡಿಸೆಂಬರ್​ 13 ರಂದು ನಡೆಯುತ್ತಿರುವ ಅಧಿವೇಶನಕ್ಕೆ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.  ಜಿಲ್ಲಾಡಳಿತ ಪ್ರತಿಯೊಬ್ಬರಿಗೂ 72 ಗಂಟೆ ಒಳಗೆ ಟೆಸ್ಟ್ ಮಾಡಿಸಿದ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ. ಅಲ್ಲದೇ ಎರಡು ಡೋಸ್ ವ್ಯಾಕ್ಸಿನ್ ಮತ್ತು ನೆಗೆಟಿವ್ ವರದಿ ಇದ್ದರೆ ಮಾತ್ರ ಅಧಿವೇಶನಕ್ಕೆ ಅನುಮತಿ ಎಂದು ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಇನ್ನು ಅಧಿವೇಶನದ ಬಂದೋಬಸ್ತ್ ಮತ್ತು ಭದ್ರತೆಗೆ ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ …

Read More »

ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಹೂ ಮಳೆಯ ಸ್ವಾಗತ

ಬಾದಾಮಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಬಾದಾಮಿ ಶಾಸಕರು ಸಿದ್ದರಾಮಯ್ಯನವರು ಇಂದು ಶುಕ್ರವಾರ ಬಾದಾಮಿಯಲ್ಲಿ ಮತ ಚಲಾಯಿಸಲು ಬಂದ ಸಂದರ್ಭದಲ್ಲಿ ಅಭಿಮಾನಿಗಳು ಜೆ.ಸಿ.ಬಿ ಮೂಲಕ ಹೂ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು.   ಮುಖಂಡರಾದ ಹೊಳಬಸು ಶೆಟ್ಟರ್, ಪಿ ಆರ್ ಗೌಡರ, ಎಂ ಬಿ ಹಂಗರಗಿ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡ್ರ, ನಾಗಪ್ಪ ಅಡಪಟ್ಟಿ, ಶಶಿ ಉದಗಟ್ಟಿ, ಎಚ್ ಬಿ ಯಕ್ಕಪ್ಪನವರ, ಬಸು ಕಟ್ಟಿಕಾರ, ವೆಂಕಣ್ಣ …

Read More »