ಮರಾಠಿ ಮತ್ತು ಕನ್ನಡಿಗರ ನಡುವೆ ಉತ್ತಮ ಸುಮಧುರ ಬಾಂಧವ್ಯ ಇದೆ, ಘಟನೆಗೆ ಎಲ್ಲ ಎಂಇಎಸ್ ಅಂತಲೂ ಹೇಳುವುದಿಲ್ಲ, ಮರಾಠಿಗರ ಹೆಸರಿನಲ್ಲಿ ಈ ರೀತಿ ಮಾಡುತ್ತಿದ್ದಾರೆ, ದೇಶದಲ್ಲಿ ಎಲ್ಲರೂ ಚೆನ್ನಾಗಿ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿ ನಗರದಲ್ಲಿಂದು ಮಾತಾನಾಡಿದ ಅವರು ಕನ್ನಡಿಗರು ಮತ್ತು ಮರಾಠಿಗರು ಇಲ್ಲಿ ಎಲ್ಲರೂ ಒಂದಾಗಿದ್ದೇವೆ, ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ,ಸಿ ಎಮ್ ಉದ್ಧವ್ ಠಾಕ್ರೆ, ಶರತ್ ಪವಾರ್ …
Read More »ಕಾಂಗ್ರೆಸ್ ಸದಸ್ಯರ ಮಾತಿನಿಂದ ರಾಜೀನಾಮೆಗೆ ಮುಂದಾಗಿದ್ದೆ: ಸಭಾಪತಿ ಹೊರಟ್ಟಿ
ಬೆಳಗಾವಿಯ ಅಧಿವೇಶನದ ಕೊನೆಯ ದಿನ ಕಾಂಗ್ರೆಸ್ ಸದಸ್ಯರು ತಮ್ಮ ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿದ ಪದಗಳು ನನಗೆ ಬೇಸರ ತರಿಸಿತ್ತು. ಇದರಿಂದಾಗಿ ನಾನು ರಾಜೀನಾಮೆಗೆ ಮುಂದಾಗಿದ್ದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನು ಎಂದಿಗೂ …
Read More »ಅಂತರ್ಜಾತಿ ಮದುವೆಯಾದ ನವಜೋಡಿಗೆ ಪ್ರಾಣಭೀತಿ; ಪೊಲೀಸ್ ರಕ್ಷಣೆಗೆ ಮೊರೆ
ಬಳ್ಳಾರಿ: ಅವರಿಬ್ಬರೂ ಪ್ರೀತಿಸಿ ಮದುವೆಯಾದ ನವಜೋಡಿ. ಪ್ರೀತಿಸೋ ಸಮಯದಲ್ಲಿ ಹತ್ತಾರು ಕನಸು ಕಂಡಿದ್ದ ಜೋಡಿಹಕ್ಕಿಗಳು. ಒಳ್ಳೆ ಜೀವನ ನಡೆಸಬೇಕು ಎಂದುಕೊಂಡಿದ್ದ ದಂಪತಿ. ಅಂತರ್ಜಾತಿ ಮದುವೆಯಾದ ಅಥವಾ ಪ್ರೀತಿಸಿ ಮದುವೆಯಾದ (Intercaste love and marriage) ಮೇಲೆ ಎಲ್ಲೆಡೆಯೂ ನಡೆಯೋ ಹಾಗೆ ಇವರ ಮನೆಯಲ್ಲೂ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನಮಗೆ ಜೀವಭಯ ಇದೆ ರಕ್ಷಣೆ ಕೊಡಿ ಅಂತ ಈ ಜೋಡಿ ಈಗ ಪೊಲೀಸರ ಮೊರೆಹೋಗಿದ್ದಾರೆ. ಎಸ್ಪಿ ಎದುರು ನಮಗೆ ರಕ್ಷಣೆ ಕೊಡಿ ಅಂತ …
Read More »ಕೆಪಿಎಸ್ಸಿ ಪರೀಕ್ಷೆಗಳು ಮುಂದೂಡಿಕೆ: 2022ರ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿದೆ ಎಕ್ಸಾಂ
ಕೆಪಿಎಸ್ಸಿ ಪರೀಕ್ಷೆಗಳು ಮುಂದೂಡಿಕೆ: 2022ರ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿದೆ ಎಕ್ಸಾಂ ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷಾ ದಿನಾಂಕಗಳನ್ನು ಕಾರಣಾಂತರಗಳಿಂದ ಮುಂದೂಡಿದೆ. ಪ್ರಥಮ ಹಂತವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 2022ರ ಫೆ.19 ಮತ್ತು 21 ಪರೀಕ್ಷೆ ನಡೆಯಲಿದೆ.
Read More »ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಜಾರಿ, ನಾಳೆ?
ಬೆಂಗಳೂರು,ಡಿ.25- ರಾಜ್ಯದಲ್ಲಿ ಮತ್ತೆ ನಿಧಾನಗತಿಯಲ್ಲಿ ಕೋವಿಡ್ ಸೋಂಕಿನ ಜೊತೆಗೆ ಓಮೈಕ್ರಾನ್ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ (ನೈಟ್ ಕರ್ಫ್ಯೂ ) ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಒಂದು ಪ್ರಕರಣಗಳು ದಾಖಲಾಗದಿದ್ದರೂ ಅಲ್ಲಿನ ಸರ್ಕಾರ ಮೂರು ದಿನಗಳ ಹಿಂದೆಯೇ ನೈಟ್ ಕಫ್ರ್ಯೂನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
Read More »6ನೇ ಕ್ಲಾಸ್ ಪರೀಕ್ಷೆಯಲ್ಲಿ ಸೈಫ್-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್ ಫೋಟೋ
6ನೇ ಕ್ಲಾಸ್ ಪರೀಕ್ಷೆಯಲ್ಲಿ ಸೈಫ್-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್ ಫೋಟೋ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ತಮ್ಮ ಮಗ ತೈಮೂರ್ ಅಲಿ ಖಾನ್ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತ ಇರುತ್ತಾರೆ. ಈಗ ಶಾಲೆಯೊಂದರ ಪರೀಕ್ಷೆಯಲ್ಲೂ ತೈಮೂರ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಕ್ಕಳು ಅಗತ್ಯಕ್ಕಿಂತ ಹೆಚ್ಚಿನ ಸಮಯ ಟಿವಿ ನೋಡುತ್ತಿದ್ದರೆ ಪೋಷಕರು ಗದರುತ್ತಾರೆ.
Read More »ಪಿಯು ಸೈನ್ಸ್ ಕಾಲೇಜು ಉಪನ್ಯಾಸಕ ಮಾರ್ಗಮಧ್ಯೆ ದುರಂತ ಅಂತ್ಯ: ಸಾವಿನ ಸುತ್ತ ಅನುಮಾನದ ಹುತ್ತ
ವಿಜಯಪುರ: ಪಿಯು ಸೈನ್ಸ್ ಕಾಲೇಜಿನ ಉಪನ್ಯಾಸಕರೊಬ್ಬರು ತರಗತಿ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುವ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಸಾವಿನ ಸುತ್ತ ಅನುಮಾನ ಹುತ್ತ ಬೆಳೆದಿದೆ. ತಾಳಿಕೋಟಿಯ ಕಾಶೀನಾಥ ಪುರಾಣಿಕಮಠ(27) ಮೃತರು. ಇವರು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಎಕ್ಸ್ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ(ಶುಕ್ರವಾರ) ಕಾಲೇಜಿಗೆ ಹೋಗಿದ್ದರು. ವಾಪಸ್ ಮನೆಗೆ ಬೈಕ್ನಲ್ಲಿ ಬರುವಾಗ ಮಾರ್ಗಮಧ್ಯೆ ಮಲಗಲದಿನ್ನಿ ಗ್ರಾಮದ ಬಳಿ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಬೈಕ್ ಅಪಘಾತವಾದಂತೆ …
Read More »ಸಂತೋಷ್ ಜಾರಕಿಹೊಳಿ ಅವರಿಂದ 49ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ
ಗೋಕಾಕ: ಗೋಕಾಕ ತಾಲೂಕಿನ ಚಿಕ್ಕ ನಂದಿ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ಇಂದು ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ಅನ್ನ ಸಂತರ್ಪಣೆ ನಡೆಯಿತು. ಇಂದು ಚಿಕ್ಕನಂದಿ ಗ್ರಾಮದ ಜನತೆಗೆ ಸಾಹುಕಾರ ಹಾಗೂ ಅವರ್ ಅಭಿಮಾನ ಬಳಗದ ವತಿಯಿಂದ ಈ ಒಂದು ಕಾರ್ಯಕ್ರಮ ನಡೆಯಿತು ಚಿಕ್ಕ ಮಕ್ಕಳು ಸೇರಿದಂತೆ ಗುರು ಹಿರಿಯರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಸಂತರ್ಪಣೆಯ ಲಾಭ ಪಡೆದರು ಸುಮಾರು 49 …
Read More »ಬಿಜೆಪಿ ಸರ್ಕಾರ 120 ಸ್ಪೀಡ್‍ನಲ್ಲಿ ಇದೆ, 18 ತಿಂಗಳ ಆಡಳಿತದಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡುತ್ತೇವೆ.:ಸತೀಶ ಜಾರಕಿಹೊಳಿ
ಸವದತ್ತಿ ಶಾಸಕರು ಮತ್ತು ಬಿಜೆಪಿ ಸರ್ಕಾರ 120 ಸ್ಪೀಡ್‍ನಲ್ಲಿ ಇದೆ. ಹೀಗಾಗಿ ಕೋವಿಡ್, ಪ್ರವಾಹ ಏನು ಕಾಣುತ್ತಿಲ್ಲ. ಈಗಾಗಲೇ ಗಾಡಿ ಸ್ಪೀಡ್ ಅನ್ನು 60ಕ್ಕೆ ತಂದಿದ್ದೇವೆ. ಇನ್ನೂ 18 ತಿಂಗಳ ಆಡಳಿತದಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡುತ್ತೇವೆ. ಆ ಲೆಕ್ಕಾಚಾರದಲ್ಲಿ ನಾವಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು. ಮುನವಳ್ಳಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಶಾಸಕ ಸತೀಶ …
Read More »ಜಾತ್ರೆ ಮಾಡೋದಿದ್ರೆ ಬೆಳಗಾವಿಯಲ್ಲಿ ಅಧಿವೇಶನ ಕರೆಯಬೇಡಿ: ಬಸನಗೌಡ ಪಾಟೀಲ್ ಯತ್ನಾಳ್
ಉತ್ತರಕರ್ನಾಟಕದ ಬಗ್ಗೆ ಮೊದಲೇ ಚರ್ಚಿಸುವದಿದ್ರೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯಿರಿ. ಸುಮ್ಮನೆ ಜಾತ್ರೆ ಮಾಡಲು ಅಧಿವೇಶನ ಕರೆಯುವ ಅವಶ್ಯಕತೆ ಇಲ್ಲ ಎಂದು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿವೇಶನ ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿವೇಶನದ ಪ್ರಾರಂಭದಲ್ಲಿಯೇ ಉತ್ತರಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾಗಿತ್ತು. ಎಲ್ಲ ಸಚಿವರು ಇರುತ್ತಿದ್ದರು. ಮುಖ್ಯಮಂತ್ರಿಗಳು ಉತ್ತರ ಕೊಡಬಹುದಿತ್ತು. ಉದ್ದೇಶಪೂರ್ವಕವಾಗಿ …
Read More »