ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಅದರ ನಡುವೆಯೂ ಕೆಲವು ವಿಶೇಷ ಘಟನೆಗಳು ವರದಿ ಆಗುತ್ತಿವೆ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ರಸ್ತೆ, ವೃತ್ತ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡುವ ಕಾರ್ಯ ನಡೆದಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು …
Read More »ರಾಜ್ಯದಲ್ಲಿ ಕೊರೋನಾ ಏರಿಕೆ, ಒಂದೇ ದಿನ 707 ಜನರಿಗೆ ಸೋಂಕು ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ದಿಢೀರ್ ಏರಿಕೆ ಕಂಡಿದೆ. ಜಿಲ್ಲೆಗಳಲ್ಲಿ ಕೂಡ ಕೊರೋನಾ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳೂ ಕೂಡ ಹೆಚ್ಚಾಗಿವೆ.ಇಂದು ಒಂದೇ ದಿನ 707 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದು ದಿನ 565 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 104 ಜನ ಬಿಡುಗಡೆಯಾಗಿದ್ದು, 6846 ಸಕ್ರಿಯ ಪ್ರಕರಣಗಳಿವೆ. 252 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಮೂವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 8223 ಸಕ್ರಿಯ ಪ್ರಕರಣಗಳು ಇವೆ. …
Read More »ಹೊಸ ವರ್ಷಾಚರಣೆ: ನಂದಿ ಬೆಟ್ಟದ ಸುತ್ತ ಮೂರು ದಿನ ನಿಷೇಧಾಜ್ಞೆ
ಬೆಂಗಳೂರು : ಬೆಂಗಳೂರು ನಗರದಲ್ಲಿ ರಾತ್ರಿ 10 ಗಂಟೆಯ ನಂತರ ಎಲ್ಲ ಬಾರ್, ಪಬ್ ಬಂದ್ ಮಾಡುವಂತೆ ಆದೇಶ ನೀಡಲಾಗಿದ್ದು, ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಯಲ್ಲಿದೆ ಎಂದು ನೆರೆಯ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರ ಉತ್ಸಾಹಕ್ಕೂ ಈಗ ಬೀಗ ಹಾಕಲಾಗಿದೆ. ನಂದಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಜ.3 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ …
Read More »ವಿದೇಶದಿಂದ ಬೆಂಗಳೂರಿಗೆ ಬಂದ 9 ಮಂದಿಗೆ ಕೊರೊನಾ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಕೊರೊನಾ ಸ್ಫೋಟಗೊಂಡಿದೆ. ವಿದೇಶದಿಂದ ಬಂದ 9 ಮಂದಿ ಪ್ರಯಾಣಿಕರಿಗೆ ಪಾಸಿಟಿವ್ ಬಂದಿದೆ. ಇಂದು ಬೆಳಗ್ಗಿನ ಜಾವ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 9 ಮಂದಿಯಲ್ಲಿ ಸೋಂಕು ಕಾಣಿಸಿದೆ. ಇಂಗ್ಲೆಂಡ್ 5, ಅಮೆರಿಕ 2, ಘಾನಾ 1, ಸ್ಕಾಟ್ಲ್ಯಾಂಡ್ನಿಂದ ಬಂದ ಒಬ್ಬರಿಗೆ ಕೊರೊನಾ ಬಂದಿದೆ.
Read More »ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!
ಡಿಸ್ಪುರ್: ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ನೀಡುವ ಹಾಗೂ ಕಫ್ರ್ಯೂ ನಿಯಮಗಳ ಬಗ್ಗೆ ಕೇಳಿಬರುತ್ತಿದೆ. ಆದರೆ ಅಸ್ಸಾಂನ ಬಿಸ್ವಂತ್ ಜಿಲ್ಲೆಯಲ್ಲಿ ಮಾತ್ರ ಹೊಸ ವರ್ಷಾಚರಣೆಗೆ ಉತ್ತೇಜನ ನೀಡುತ್ತಿದ್ದು, ಕುಡುಕರಿಗೆ ಹೊಸದೊಂದು ಸೌಲಭ್ಯವನ್ನೂ ಒದಗಿಸುತ್ತಿದೆ. ಡ್ರಂಕ್ ಆಂಡ್ ಡ್ರೈವ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ಅಸ್ಸಾಂನ ಬಿಸ್ವಂತ್ ಜಿಲ್ಲಾಡಳಿತ ಎರಡು ಸಹಾಯವಾಣಿಯನ್ನು ಸ್ಥಾಪಿಸಿದೆ. ಹೊಸವರ್ಷದಲ್ಲಿ ಮದ್ಯಪಾನ ಮಾಡಿದವರನ್ನು ಮನೆಗೆ ಬಿಡಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ಕುಡಿತದ ಅಮಲಿನಲ್ಲಿ ಸಂಭವಿಸುವ …
Read More »ಪ್ರವಾಹದಿಂದ ಹಾನಿಯಾದ ಜನರಿಗೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು: ಗೋವಿಂದ ಕಾರಜೋಳ
ಬೆಂಗಳೂರು: ಪ್ರವಾಹದಿಂದ ಹಾನಿಯಾದ ಜನರಿಗೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು. ಬೆಳಗಾವಿ, ಬಾಗಲಕೋಟೆ ಮತ್ತು ಕಾರವಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಸೇರಿ ಮನೆಗಳಿಗೂ ಹಾನಿಯಾಗಿದೆ. ಈ ಪರಿಣಾಮ ಅಲ್ಲಿನ ಜನರು ಬಸ್ ಶೆಲ್ಟರ್ ಮತ್ತು ಸಮುದಾಯ ಭವನಗಳಲ್ಲಿ ಇನ್ನೂ ಜನ ವಾಸಿಸುತ್ತಿದ್ದಾರೆ. ಅಂಥವರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದ …
Read More »ಸೇವಾ ಭಾರತಿ ಟ್ರಸ್ಟ್ನಿಂದ ಕಿಮ್ಸ್ಗೆ ಆಂಬುಲೆನ್ಸ್ ಹಸ್ತಾಂತರ
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಗೆ ಪ್ರತಿದಿನವೂ ನೂರಾರು ಬಡ ರೋಗಿಗಳು ಬರುತ್ತಾರೆ. ತುರ್ತು ಸಮಯದಲ್ಲಿ ವಾಹನ ಸೇವೆ ತುಂಬ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಆಂಬುಲೆನ್ಸ್ ನೀಡಿರುವುದು ಖುಷಿಯ ಸಂಗತಿ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು. ಕಿಮ್ಸ್ ಆಸ್ಪತ್ರೆಗೆ ಸೇವಾ ಭಾರತಿ ಟ್ರಸ್ಟ್ ಉಚಿತವಾಗಿ ಅಂಬುಲೆನ್ಸ್ ನೀಡಿದ್ದು, ಅದನ್ನು ಕೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರ ಮಾಡಲಾಯಿತು. ನಂತರ ರಾಮಲಿಂಗಪ್ಪ ಅಂಟರತಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸೇವಾ ಭಾರತಿ …
Read More »ಎಂಇಎಸ್ ನಿಷೇಧಕ್ಕೆ ಕರವೆ ಆಗ್ರಹ, ಜನಪ್ರನಿಧಿಗಳ ಭಾವಚಿತ್ರಗಳನ್ನ ದಹಿಸಿ ಅಸಮಾಧಾನ
ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿದ್ದು, ಎಂಇಎಸ್ ವಿರುದ್ಧ ದ್ವನಿ ಎತ್ತದ ಬೆಳಗಾವಿ ಶಾಸಕರನ್ನು ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿವೆ. ಬೆಂಗಳೂರಿನ ಟೌನ್ ಹಾಲ್ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದು, ಎಂಇಎಸ್ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗುವಂತೆ ಆಗ್ರಹಿಸಿದ್ದಾರೆ. ಕರವೇ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು ಸಿಎಂ ಬೊಮ್ಮಾಯಿ ಭೇಟಿ ಮಾಡಿ ಎಂಇಎಸ್ …
Read More »ಹಿರಿಯ ನಟ ವೇಣುಮಿತ್ರ ಕಾಸರಗೋಡು ನಿಧನ
ಕಾಸರಗೋಡು: ಕಿರುತೆರೆ ನಟ, ಹಿರಿಯ ರಂಗಭೂಮಿ ಕಲಾವಿದ, ಕತೆಗಾರ, ಕುದುರೆಮುಖ ನಿವೃತ್ತ ನೌಕರ ಶ್ರೀ ವೇಣುಮಿತ್ರ ಕಾಸರಗೋಡು (73) ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದ್ದಾರೆ. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡಿದ ‘ರಂಗ ಭಾಸ್ಕರ’ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಶ್ರೀಯುತರು ಭಾಜನರಾಗಿದ್ದರು. ಸಾಗರದೀಪ ಸಿನೆಮಾದಲ್ಲೂ ಬಣ್ಣ ಹಚ್ಚಿ ಹಿರಿತೆರೆಯಲ್ಲೂ ಸೈ ಎನಿಸಿಕೊಂಡಿದ್ದರು. ಶ್ರೀಯುತರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ
Read More »ಏಪ್ರಿಲ್ ಕೊನೆಯ ವಾರಕ್ಕೆ ದ್ವಿತೀಯ ಪಿಯು ಪರೀಕ್ಷೆ :ಸಚಿವ ಬಿ ಸಿ ನಾಗೇಶ್
ಬೆಂಗಳೂರು:ದ್ವಿತೀಯ ಪಿಯು ಪರೀಕ್ಷೆಗಳು ಪಠ್ಯಕ್ರಮ ಇನ್ನೂ ಪೂರ್ಣಗೊಳ್ಳದ ಕಾರಣ ಮಾರ್ಚ್ನಲ್ಲಿ ನಡೆಯಲಿರುವ ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಂಗಳವಾರ ತಿಳಿಸಿದರು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ , ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಇತರ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರುವುದರಿಂದ ಪರೀಕ್ಷೆಗಳನ್ನು ಏಪ್ರಿಲ್ನ ನಂತರ ವಿಳಂಬ ಮಾಡಲಾಗುವುದಿಲ್ಲ ಎಂದು ನಾಗೇಶ್ …
Read More »