Breaking News

ನಾಳೆಯಿಂದ ಬೆಳಗಾವಿಯಲ್ಲಿ ಭಾರತ-ಜಪಾನ್‌ ಮಹತ್ವದ ಜಂಟಿ ಸೇನಾಭ್ಯಾಸ

ಹೊಸದಿಲ್ಲಿ: ಕರ್ನಾಟಕದ ಬೆಳಗಾವಿಯಲ್ಲಿ ಫೆ.27ರಿಂದ ಮಾ. 10ರ ವರೆಗೆ ಭಾರತ ಮತ್ತು ಜಪಾನ್‌ ವಾರ್ಷಿಕ ಜಂಟಿ ಸೇನಾಭ್ಯಾಸ ನಡೆಸಲಿವೆ. ವಿವಿಧ ದೇಶಗಳೊಂದಿಗೆ ಭಾರತ ಸೇನಾ ತರಬೇತಿ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದು ಅದರಂತೆ ಈ ಬಾರಿ ಜಪಾನ್‌ ಜತೆಗೂಡಿ ಸೇನಾಭ್ಯಾಸ ನಡೆಸಲಿದೆ. ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಉಭಯ ದೇಶಗಳು ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಜಂಟಿ ಸೇನಾಭ್ಯಾಸ ಮಹತ್ವದ್ದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ ಜಪಾನ್‌ ಸೇನೆ ಬೆಳಗಾವಿಗೆ …

Read More »

2 ತಿಂಗಳೊಳಗೆ 10 ಬೈಕ್ ಕದ್ದ 17 ವರ್ಷದ ಬಾಲಕನ ಬಂಧನ

ಕಲಬುರಗಿ: ನಗರದಲ್ಲಿ ನಿರಂತರವಾಗಿ ಬೈಕ್‌ ಕಳ್ಳತನದಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಸ್ಟೇಷನ್‌ ಬಜಾರ್‌ ಠಾಣೆ ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ಮೌಲ್ಯದ 10 ಬೈಕ್‌ ಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಶಿವಶಕ್ತಿ ನಗರದ ನಿವಾಸಿ, 17 ವರ್ಷದ ಬಾಲಕನೇ ಸೆರೆಯಾದವ. ಈತ ನಗರದ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಕಳ್ಳತನದಲ್ಲಿ ತೊಡಗಿದ್ದ. ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಗಿರೀಶ ಎಸ್‌.ಬಿ. ನೇತೃತ್ವದಲ್ಲಿ ಸ್ಟೇಷನ್‌ ಬಜಾರ್‌ ಠಾಣೆ ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ …

Read More »

ಹಿಜಾಬ್ ಗೆ ಅವಕಾಶ ಕೊಡಿ, ಇಲ್ಲವಾದರೆ ಪರೀಕ್ಷೆ ಮುಂದೂಡಿ: ಚಾ.ನಗರದಲ್ಲಿ ವಿದ್ಯಾರ್ಥಿನಿಯರು

ಚಾಮರಾಜನಗರ: ರಾಜ್ಯ ಹೈಕೋರ್ಟ್ ಹಿಜಾಬ್ ಧರಿಸುವಿಕೆ ಬಗ್ಗೆ ತನ್ನ ತೀರ್ಪು ಪ್ರಕಟಗೊಳಿಸುವವರೆಗೆ ನಮಗೆ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದರು.   ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರಾದ ಹೀನಾ, ಖುತೇಜಾ, ಅಮೀನಾ, ಬೀಬಿ ಫಾತೀಮಾ ಹಾಗೂ ಶಿಫಾ, ನಾವು ಹಿಂದಿನಿಂದಲೂ ಕಾಲೇಜುವರೆಗೆ ಬುರ್ಖಾ ಧರಿಸಿ ಬಳಿಕ ಬುರ್ಖಾ ತೆಗೆದು …

Read More »

ಉಕ್ರೇನ್​​ನಿಂದ ವಾಪಸ್​ ಆದ ಜಾನ್ಹವಿ.. ಅಲ್ಲಿನ ಭೀಕರತೆ ಬಗ್ಗೆ ವಿವರಿಸಿದ್ದು ಹೀಗೆ..

ರಷ್ಯಾ–ಉಕ್ರೇನ್​ ಮಧ್ಯೆ ಸಂಘರ್ಷ ಮುಂದುವರೆದಿದೆ. ಇದರ ಮಧ್ಯೆ ಎರಡು ದೇಶಗಳಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ತಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಈಗಾಗಲೇ ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್​​ನಿಂದ ಭಾರತಕ್ಕೆ ವಾಪಸ್​ ಆಗಿರುವ ಜಾನ್ಹವಿ, ಅಲ್ಲಿನ ಭೀಕರತೆ ಬಗ್ಗೆ ವಿವರಿಸಿದ್ದಾರೆ. ಉಕ್ರೇನ್​ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭ ಮಾಡುವುದಕ್ಕೂ ಕೆಲ ದಿನ ಮುಂಚೆ ಭಾರತಕ್ಕೆ ವಾಪಸ್​ ಆಗಿರುವ ಜಾನ್ಹವಿ ಖುರಾನಾ, ಅಲ್ಲಿನ ಪರಿಸ್ಥಿತಿ ಬಗ್ಗೆ …

Read More »

ಡೊಳ್ಳು ಕುಣಿತದವರೊಂದಿಗೆ ಸ್ಪೀಕರ್ ಕಾಗೇರಿ ಗಿಲಿಗಚ್ಚಿ ಹಿಡಿದು ಸ್ಟೆಪ್​… ವಿಡಿಯೋ

ಶಿರಸಿ :ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ ಗಿಲಿಗಚ್ಚಿಯನ್ನು ಬಾರಿಸಿದ್ದು, ಎಲ್ಲರ ಗಮನ ಸೆಳೆಯಿತು. ಕಳೆದ 9 ತಿಂಗಳಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹವನ್ನು ವೈದಿಕ ಪ್ರಮುಖರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ನೂತನ ವಿಗ್ರಹವನ್ನು ಅಲಂಕರಿಸಿ, ಆರತಿಯೊಂದಿಗೆ …

Read More »

ವಂಚನೆ ಕೇಸ್​: ಅಸ್ಸೋಂ ಪ್ರಕರಣ ಹುಬ್ಬಳ್ಳಿಗೆ ವರ್ಗಾವಣೆ

ಹುಬ್ಬಳ್ಳಿ: ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶ ಕೊಡಿಸುವುದಾಗಿ 8.85 ಲಕ್ಷ ವಂಚನೆ ಮಾಡಿದ ಪ್ರಕರಣ ಅಸ್ಸೋಂ ರಾಜ್ಯದ ಕೊಕ್ರಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸದ್ಯ ಕೇಸ್​​​ ವಿಚಾರಣೆಗಾಗಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದೆ. ಅಸ್ಸೋಂ ರಾಜ್ಯದ ಸುರೇಶ್​​​​ ಗೋವಿಂದರಾಜ ಯೆರಮಶೆಟ್ಟಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯ ರೋಹಿತ್‌ ಕುಮಾರ ಕಲಾಸ್ಕರ್ ಎಂಬುವವರು ದೂರು ದಾಖಲಿಸಿದ್ದಾರೆ. 2017ರ ಮಾರ್ಚ್ ತಿಂಗಳಲ್ಲಿ ಥಾಯ್ಲೆಂಡ್​ ವಿಶ್ವವಿದ್ಯಾನಿಲಯ ಆಧಾರಿತ ನಾಲ್ಕು ವರ್ಷಗಳ ವ್ಯಾಸಂಗಕ್ಕಾಗಿ ಯುನಿರ್ವಸಿಟಿ …

Read More »

ರಾಜ್ಯಮಟ್ಟದ ಕರ್ನಾಟಕ ಸೌಂದರ್ಯ ಸ್ಪರ್ಧೆ: ಕಿಂಜಲ್​ಗೆ ಮಿಸ್ ಕರ್ನಾಟಕ ಕಿರೀಟ

ಪುತ್ತೂರು: ಸೌಂದರ್ಯವರ್ಧಕ ಕ್ಷೇತ್ರವೆನಿಸಿದ ಮಾಡೆಲಿಂಗ್ ಕ್ಷೇತ್ರಕ್ಕೆ ಹುಡುಗರು, ಹುಡುಗಿಯರು ಫಿದಾ ಆಗುವುದು ಸಹಜ. ಈ ಮಾಡೆಲಿಂಗ್ ಕ್ಷೇತ್ರವು ಹಲವರು ಪ್ರತಿಭಾವಂತರನ್ನು ಕೈ ಬೀಸಿ ಕರೆಯುತ್ತಿದೆ. ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಯುವತಿಯೊಬ್ಬಳು ಚೊಚ್ಚಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡ ಬಾಲೆಯಾಗಿದ್ದು, ಪ್ರತಿಷ್ಠಿತ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಫೆ.20 ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಯೂನಿಕ್ ಫ್ಯಾಷನ್ ಸಂಸ್ಥೆಯ ವತಿಯಿಂದ …

Read More »

ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಆರೋಪಿ ಬಂಧಿಸುವಂತೆ ಸಿದ್ದು ಒತ್ತಾಯ

ಮಂಗಳೂರು: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿಯನ್ನ ತಕ್ಷಣ ಬಂಧಿಸವಂತೆ ಆಗ್ರಹಿಸಿದ್ದಾರೆ. ಧರ್ಮಸ್ಥಳದ ಕನ್ಯಾಡಿ ನಿವಾಸಿ ದಿನೇಶ್ ಎಂಬುವರನ್ನು ಕಿಟ್ಟು ಯಾನೆ ಕೃಷ್ಣ ಎಂಬಾತ ಹತ್ಯೆಗೈದಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಿಜೆಪಿ ಮುಖಂಡನಾಗಿದ್ದು, ಆತನನ್ನು ಮುಂದಿನ 24 ಗಂಟೆಯೊಳಗೆ ಬಂಧಿಸದಿದ್ದರೆ ಪೊಲೀಸ್ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು …

Read More »

ರಷ್ಯಾ ವಿರುದ್ಧದ ಖಂಡನಾ ನಿರ್ಣಯದ ಮತದಾನದಿಂದ ದೂರ ಉಳಿದ ಭಾರತ, ಚೀನಾ

ನವದೆಹಲಿ: ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಶನಿವಾರ ಗೈರು ಹಾಜರಾಗಿದೆ. ನಿರೀಕ್ಷೆಯಂತೆ ಚೀನಾ ಕೂಡಾ ರಷ್ಯಾದ ವಿರುದ್ಧ ಮತದಾನದಿಂದ ದೂರ ಉಳಿದಿದೆ. ಯುಎನ್‌ಎಸ್‌ಸಿ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಹಿಂಸಾಚಾರ ಮತ್ತು ದ್ವೇಷವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಭಾರತವು ಒತ್ತಾಯಿಸಿದ್ದು, ವಿವಾದಗಳನ್ನು ಇತ್ಯರ್ಥ ಮಾಡಲು ಮಾತುಕತೆಯೊಂದೇ ದಾರಿ ಎಂದಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿಯಾದ ಟಿ …

Read More »

ಬೈಕ್ ನಿಯಂತ್ರಣ ತಪ್ಪಿ ಅಪಘಾತ ಜವರಾಯನ ಪಾದ ಸೇರಿದ4 ಯುವಕರು

ಚಿಕ್ಕೋಡಿ: ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ. ಸಂಕೇಶ್ವರ ಪಟ್ಟಣದ ನಿವಾಸಿಗಳಾದ ಬಸವರಾಜ ಮಾಳಿ(29), ಪ್ರವೀಣ್ ಸನದಿ(26), ಮೆಹಬೂಬ ಶೇಗಡಿ(21), ಮಲಿಕ್ ಜಮಾದಾರ್(21) ಮೃತ ದುರ್ದೈವಿಗಳಾಗಿದ್ದಾರೆ. ಗುರುವಾರ ತಡರಾತ್ರಿ ಒಂದೇ ಬೈಕಿನಲ್ಲಿ ನಾಲ್ವರು ಯುವಕರು ಮಹಾರಾಷ್ಟ್ರದ ಗಡಹಿಂಗ್ಲಜ್ ರಸ್ತೆ ಮಾರ್ಗದಿಂದ ಸಂಕೇಶ್ವರ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಬೈಕ್ …

Read More »