Breaking News

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ

ಬೆಂಗಳೂರು: ದೇಶಾದ್ಯಂತ ಏರಿಕೆಯಾಗಿದ್ದ ಖಾದ್ಯತೈಲ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಬಳಿಕ ಕಂಪನಿಗಳು ದರ ಇಳಿಕೆ ಮಾಡತೊಡಗಿವೆ. ದಕ್ಷಿಣ ಭಾರತದ ಪ್ರಮುಖ ಖಾದ್ಯ ತೈಲ ಕಂಪನಿಯಾಗಿರುವ ಸನ್ ಪ್ಯೂರ್ ತನ್ನ ಉತ್ಪನ್ನಗಳ ದರ ಕಡಿಮೆ ಮಾಡಿದೆ. ಈ ಮೂಲಕ ಸನ್ ಪ್ಯೂರ್ ಬ್ರಾಂಡ್ ಅಡುಗೆ ಎಣ್ಣೆ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಆಮದು ಸುಂಕ ಕಡಿತ ಮಾಡಿದ ನಂತರ ಸೂರ್ಯಕಾಂತಿ ಎಣ್ಣೆ ದರ ಇಳಿಕೆ ಹಾದಿಯಲ್ಲಿದೆ. …

Read More »

ನಾನು ಬದುಕಿರುವಾಗಲೇ ನನ್ನನ್ನು ಸಾಯುಸುತ್ತಿದ್ದಾರೆ – ಹಿರಿಯ ನಟ ಅವಿನಾಶ್ ಬೇಸರ

ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗೆ ಹಿರಿಯ ನಟ ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅವಿನಾಶ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿಗಳನ್ನು ಹಾಕುತ್ತಿದ್ದಾರೆ. ನಾನು ಆರಾಮಾಗಿದ್ದಿನಿ ಬೆಳಿಗ್ಗೆ ವರ್ಕೌಟ್ ಕೂಡ ಮಾಡಿದ್ದೀನಿ. ಹಲವು ಸಿನಿಮಾಗಳಲ್ಲಿ‌ ನಟಿಸೋದಕ್ಕೆ‌ ಸಿದ್ಧತೆ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಂ‌ಗೆ ದೂರು ಕೊಟ್ಟಿದ್ದೇನೆ. ಯಾರೆ ಆಗಲಿ ಒಬ್ಬ ವ್ಯಕ್ತಿ ಬದುಕಿರುವಾಗಲೇ …

Read More »

ಶುಕ್ರವಾರ ರಾತ್ರಿ 10ರಿಂದಲೇ ಹೋಟೆಲ್ ಬಂದ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಆದೇಶ;

ಬೆಂಗಳೂರು: ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಾಳೆ (ಶುಕ್ರವಾರ) ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 10 5ರ ವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಹೀಗಾಗಿ ನಾಳೆ ರಾತ್ರಿ 10ರಿಂದಲೇ ಹೋಟೆಲ್ ಬಂದ್ ಮಾಡಲು ಸರ್ಕಾರ ಆದೇಶ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಎಲ್ಲ ಹೋಟೆಲ್​ಗಳು, ಪಬ್, ರೆಸ್ಟೋರೆಂಟ್ ಬಂದ್ ಮಾಡಲು ಸೂಚಿಸಿದೆ. …

Read More »

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ಮೋನಿಷಾ

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ಮೋನಿಷಾ. ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ಅವರ ಬದುಕು ಅನೇಕರಿಗೆ ಸ್ಫೂರ್ತಿಯಾಗುವಂಥದ್ದು. ಹುಟ್ಟಿದ್ದು ಗಂಡಾಗಿ, ಬೆಳೆದದ್ದು ಹೆಣ್ಣಾಗಿ. ಹೆಣ್ಣಾಗುವ ಆಸೆಯನ್ನು ಅದುಮಿಡಲಾಗದೇ ಶಾಲೆಯ ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡಿದಾಗ ಮನೆಯವರ ತಿರಸ್ಕಾರಕ್ಕೊಳಗಾದರು. ಇಂದಲ್ಲ ನಾಳೆ ಮಗ ರಾಮು (ಮೂಲಹೆಸರು) ಸರಿಹೋದಾನು ಎಂಬ ಕುಟುಂಬದ ಭರವಸೆ ನಿಜವಾಗಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಅಪ್ಪನಿಂದ ಬೆತ್ತದೇಟಿನ ರುಚಿ ಕಂಡು …

Read More »

ಜೀವಂತವಾಗಿ ವಾಪಾಸ್‌ ಬಂದಿದ್ದೇನೆ, ನಿಮ್ಮ ಸಿಎಂಗೆ ನನ್ನ ಧನ್ಯವಾದ ತಿಳಿಸಿಬಿಡಿ : ಅಧಿಕಾರಿಗಳ ಬಳಿ ʼಪ್ರಧಾನಿ ಮೋದಿʼ ಅಸಮಾಧಾನ

ಚಂಡೀಗಢ: ಪ್ರಧಾನ ಮಂತ್ರಿಗಳ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾದ ಹಿನ್ನೆಲೆಯಲ್ಲಿ ಪಂಚಾಬ್‌ನ ಫಿರೋಜ್ ಪುರ(Ferozepur)ದಲ್ಲಿ ಬುಧವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಮೊದಲ ರ್ಯಾಲಿ(first rally)ಯನ್ನ ರದ್ದುಗೊಳಿಸಲಾಗಿದ್ದು, ಪ್ರಧಾನಿ ನವದೆಹಲಿಗೆ ವಾಪಸ್‌ ಆಗಿದ್ದಾರೆ.   ಇನ್ನು ದೆಹಲಿಗೆ ವಾಪಸಾಗುವಾಗ ಭಟಿಂಡಾ ಸೆಕ್ಯೂರಿಟಿ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ, ‘ಏರ್‌ಪೋರ್ಟ್‌ವರೆಗೆ ಜೀವಂತವಾಗಿ ವಾಪಸ್‌ …

Read More »

ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ನ ಚುನಾವಣಾ ಪ್ರಚಾರಾರ್ಥ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ವೇಳೆ ಪ್ರತಿಭಟನೆಯ ಕಾರಣದಿಂದಾಗಿ ಹಲವು ನಿಮಿಷಗಳ ಕಾಲ ರಸ್ತೆ ಮಧ್ಯೆಯೇ ನಿಂತು ಬಳಿಕ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದರು. ಈ ಘಟನೆಯು ಪಂಜಾಬ್‌ ಮುಖ್ಯಮಂತ್ರಿ ʼಭದ್ರತಾ ಲೋಪʼ ಎಸಗಿದ್ದಾರೆ ಎಂಬ ಆರೋಪಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಾಮಾಜಿಕ ತಾಣದಾದ್ಯಂತ ಈ ಕುರಿತು ಹಲವು ಹೇಳಿಕೆಗಳು ಮತ್ತು ವೀಡಿಯೋಗಳು ಹರಿದಾಡುತ್ತಿವೆ. “ಇದು ನಾವೆಲ್ಲರೂ ಖಂಡಿಸಲೇಬೇಕಾದ ಸುದ್ದಿ. …

Read More »

ಹಸಿದ ನಾಯಿ ಮರಿಗಳಿಗೆ ಪ್ರತಿನಿತ್ಯ ಹಾಲುಣಿಸುವ ಗೋಮಾತೆ..!

ಗೋವನ್ನ ಸುಮ್ಮನೆ ಕಾಮಧೇನು ಅನ್ನುವುದಿಲ್ಲ. ಈಗಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆ ಕಾಣೆಯಾಗಿದ್ರು, ಪ್ರಾಣಿಗಳಲ್ಲಿ ಅದು ಕಾಣಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆಯೆ ಈ ಗೋವಿನ ಕಥೆ. ಕರ್ನಾಟಕ ಯಾದಗಿರಿಯ ಅಮ್ಮಾಪುರ ಗ್ರಾಮದಲ್ಲಿ ಹಸುವೊಂದು ಹಸಿದ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಇದೇ ಗ್ರಾಮದಲ್ಲಿ ಬೀದಿನಾಯಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ‌. ಆದರೆ ಈ ತಾಯಿ ಶ್ವಾನ ತೀರಾ ಬಡಕಲಾಗಿದ್ದು, ಅಪೌಷ್ಟಿಕತೆಗೆ ಒಳಗಾಗಿದೆ. ಸಿಗುವ ಅಷ್ಟು ಇಷ್ಟು ಊಟವನ್ನ ತಿಂದುಕೊಂಡು ಬದುಕಿರುವ ತಾಯಿ ಶ್ವಾನದ ಕೆಚ್ಚಲಿನಿಂದ …

Read More »

ವಿಧಾನ ಪರಿಷತ್ ಸದಸ್ಯರಾಗಿ  ಲಖನ್ ಜಾರಕಿಹೊಳಿ  ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ  ಲಖನ್ ಜಾರಕಿಹೊಳಿ  ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಡಿಸೆಂಬರ್ 10ರಂದು ನಡೆದ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಸ್ಥಾನದಿಂದ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಹಾಲಿ ಸದಸ್ಯರಾದ ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ವಿವೇಕರಾವ್ ಪಾಟೀಲ ಅವರ ಅವಧಿ ಬುಧವಾರ ಮುಕ್ತಾಯವಾಗಿದೆ. ಚನ್ನರಾಜ ಹಟ್ಟಿಹೊಳಿ ಮತ್ತು …

Read More »

ವಾರಾಂತ್ಯ ಕರ್ಫ್ಯೂ: ಸ್ಥಳೀಯ ಆರ್ಥಿಕತೆಗೆ ಮತ್ತೆ ಕುಸಿತದ ಭಯ

ಸರಕಾರವು ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಒಟ್ಟಾರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಅಪಾಯವಿದೆ.   ಈ ಹಿಂದಿನ ಲಾಕ್‌ಡೌನ್‌ ಹಾಗೂ ಅನಂತರ ನಿರ್ಬಂಧಗಳ ಸಡಿಲಿಕೆ ಬಳಿಕ ಇತ್ತೀಚೆಗಷ್ಟೇ ದೈನಂ ದಿನ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಅಷ್ಟರಲ್ಲಿ ಮತ್ತೊಮ್ಮೆ ಹಿಂದಿನ ಕರಾಳ ಸ್ಥಿತಿಯ ಭೀತಿ …

Read More »

ವೀಕೆಂಡ್ ಕರ್ಫ್ಯೂ ವೇಳೆ ಎಂದಿನಂತೆ ಸಂಚರಿಸಲಿವೆ ಕೆಎಸ್‌ಆರ್‌ಟಿಸಿ ಬಸ್‌; ಆದರೆ ಬಿಎಂಟಿಸಿ ಬಸ್‌ ಸಂಚಾರ ಇರಲ್ಲ

ಬೆಂಗಳೂರು: ಒಮಿಕ್ರಾನ್​ ಮತ್ತು ಮೂರನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಗೊಳಿಸಿದೆ. ಮುಂದಿನ ಎರಡು ವಾರಗಳ ಕಾಲ ವೀಕೆಂಡ್​ ಕರ್ಫ್ಯೂ ಇರಲಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊವಿಡ್​ಗೆ (Coronavirus) ಸರ್ಕಾರ ಹೇರಿರುವ ನಿಯಮ‌ …

Read More »