ಕೊರೋನಾ ಕಾರಣದಿಂದ ಕಳೆದೆರಡು ವರ್ಷ ಸರಿಯಾಗಿ ಶಾಲೆಗಳು ನಡೆದೇ ಇಲ್ಲ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾರ್ಚ್/ಏಪ್ರಿಲ್ ತಿಂಗಳಿಂದ ಶುರುವಾಗಲಿರುವ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಅಂತಿಮ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ, ಕಡ್ಡಾಯ ಹಾಜರಾತಿ ನಿಯಮವನ್ನು ಸಡಿಲಿಸಲು ನಿರ್ಧರಿಸಿದೆ. ಭೌತಿಕ ತರಗತಿಗಳ ಆರಂಭದ ವಿಳಂಬ, ಆನ್‌ಲೈನ್ ತರಗತಿಗಳ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆಗಳನ್ನು ಪರಿಗಣಿಸಿ, ಈ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು …
Read More »8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಹೃದಯಾಘಾತದಿಂದ ಸಾವು
ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ಸಂಭವಿಸಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ. ಬಾಗಲಕೋಟೆ: ಹೃದಯಾಘಾತದಿಂದ ಟಗರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿದೆ. ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ,ಕಲಾವಿದ ಹೆಚ್.ಎನ್. ಸೇಬಣ್ಣವರ ಎಂಬುವರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು …
Read More »ಉಕ್ರೇನ್ ಬಂಕರ್’ನಲ್ಲಿನ ಕರಾಳ ಸತ್ಯ ಬಿಚ್ಚಿಟ್ಟ ‘ರಾಯಚೂರು ವಿದ್ಯಾರ್ಥಿ’.!
ರಾಯಚೂರು: ರಷ್ಯಾದಿಂದ ಉಕ್ರೇನ್ ಮೇಲೆ ಯುದ್ಧ ಸಾರಿದ ನಂತ್ರ, ಉಕ್ರೇನ್ ನಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಭಯ, ಆತಂಕ ಹುಟ್ಟಿಸುತ್ತಿದೆ. ಯುದ್ಧದ ಭೀತಿಯ ನಡುವೆಯ ಉಕ್ರೇನ್ ನಲ್ಲಿ ಸಿಲುಕಿರುವಂತ ಕನ್ನಡಿಗ ವಿದ್ಯಾರ್ಥಿಗಳು ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ.ಅಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎನ್ನುವ ಬಗ್ಗೆ ಇಂಚಿಂಚೂ ಮಾಹಿತಿಯನ್ನು ರಾಯಚೂರು ವಿದ್ಯಾರ್ಥಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಉಕ್ರೇನ್ ನಲ್ಲಿನ ಬಂಕರ್ ನಲ್ಲಿ ಆಶ್ರಯ ಪಡೆದಿರುವಂತ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ವಿದ್ಯಾರ್ಥಿ …
Read More »ಕರೆನ್ಸಿ ಬದಾವಣೆಗೆ ಹೋಗಿದ್ದಾಗ ಫೈರಿಂಗ್ ಆಗಿದೆ: ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳ ಮಾತು
ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್ ವ್ಯಾಸಂಗ ಮಾಡುತ್ತಿದ್ದ. ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ನವೀನ್ ವಾಸವಾಗಿದ್ದ. ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ರಷ್ಯಾ ಸೇನೆಯ ರಾಕೆಟ್ ದಾಳಿಗೆ ನವೀನ್ ಬಲಿಯಾಗಿದ್ದಾನೆ(Death). ಮೃತ ನವೀನ್ ಶೇಖರಪ್ಪ ಗ್ಯಾನಗೌಡರ್ (21) ಕರ್ನಾಟಕದ ಹಾವೇರಿ ಮೂಲದವರು. …
Read More »ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಅರೆಸ್ಟ್
ಚಿಕ್ಕೋಡಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಘಟನೆ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಆಶಾ ಪ್ರದೀಪ ಕಾಂಬಳೆ (35 ) ಕೊಲೆಯಾದ ಮಹಿಳೆ. ಈಕೆಯ ಪತಿ ಪ್ರತಾಪ್ ಅಲಿಯಾಸ್ ಪ್ರದೀಪ ಕಾಂಬಳೆ (35) ಕೊಲೆ ಮಾಡಿದ ಆರೋಪಿ. ಬಂಧಿತ ಆರೋಪಿ ಪ್ರದೀಪ ಪ್ರತಿದಿನ ಕುಡಿದು ಹೆಂಡತಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಗಲಾಟೆ …
Read More »ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಕರುನಾಡ ವಿದ್ಯಾರ್ಥಿ ಬಲಿ…
ಹಾವೇರಿ: ಉಕ್ರೇನ್‌ನ ಖಾರ್ಕೀವ್ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಸಂಬಂಧ ಮೃತ ನವೀನ್ ಮನೆಗೆ ದೌಡಾಯಿಸಿದ ನೂರಾರು ಜನರು ಹಾಗೂ ಸಂಬಂಧಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರಷ್ಯಾ ಆಕ್ರಮಣಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಜನರು, ವಿದೇಶಾಂಗ ಇಲಾಖೆ ವಿಫಲವಾಗಿದೆ. ನಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಅವರು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಮ್ಮ ಮಗ ಬಾರದಲೋಕಕ್ಕೆ ತೆರಳಿದ, …
Read More »ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿ
ದಾವಣಗೆರೆ: ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದರು. ಶ್ರೀ ಆಂಜನೇಯ ಜನ್ಮಭೂಮಿ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯ ಕಿಷ್ಕಿಂದೆ ಆಂಜನಾದ್ರಿ ಬೆಟ್ಟವೇ ಹನುಮನ ನಿಜವಾದ ಜನ್ಮಭೂಮಿ. ತಿರುಪತಿಯಲ್ಲಿ ವಿನಾಕರಣ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಆಂಜನೇಯನ ಜನ್ಮಭೂಮಿಯನ್ನೆ ಹೈಜಾಕ್ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಯ ಪ್ರಶ್ನೆ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಅವರ ಶ್ರೀಮತಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಮ …
Read More »ಬೆಂಗಳೂರಿಗೆ ನೀರು ಒದಗಿಸಲು ಬಿಜೆಪಿ ಸರ್ಕಾರಕ್ಕೆ ಮಾತ್ರ ಸಾಧ್ಯ: ಬೊಮ್ಮಾಯಿ
ಬೆಂಗಳೂರು: ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಬೆಂಗಳೂರಿನ ಜನತೆಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 2 ಟಿಎಂಸಿ ನೀರನ್ನು ಒದಗಿಸಲು ಡಿಪಿಆರ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ .ಉತ್ತರ ಭಾಗದ ನೀರಿನ ಸಮಸ್ಯೆಯನ್ನು ಇದರಿಂದ ಬಗೆಹರಿಸಲು ಸಾಧ್ಯ. ನಾನು ನೀರಾವರಿ ಸಚಿವನಿದ್ದಾಗ ಮೇಕೆದಾಟು ಯೋಜನೆ 1996 ರಲ್ಲಿ ಪ್ರಾರಂಭವಾಯಿತು. ಈಗ …
Read More »ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್
ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣಕ್ಕೆ ಜೈಲುವಾಸ ಅನುಭವಿಸಿ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್, ತಮ್ಮ ನಿಲುವಿನ ಕುರಿತು ಮತ್ತೆ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ತಪ್ಪು ಕಂಡಲ್ಲಿ ಮಾತನಾಡುತ್ತೇನೆ. ಮತ್ತಷ್ಟು ಜನರಿಗೆ ತಲುಪಲು ಆ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ. ಯಾವುದೇ ಕಾರಣಕ್ಕೂ ಟ್ವಿಟ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಸೋಮವಾರ ಸಂಜೆ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ …
Read More »ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ: ಹೆಚ್‌ಡಿಕೆ
ಬೆಂಗಳೂರು : ಶಿವಮೊಗ್ಗ ಘಟನೆ ಮತ್ತು ಹಿಜಬ್ ಪ್ರಕರಣದ ವಿಚಾರಕ್ಕೆ ಕೂಡಲೇ ರಾಜ್ಯಪಾಲ ಮಧ್ಯೆ ಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡುವಂತೆ ಒತ್ತಾಯ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು …
Read More »