Breaking News

ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 2.76 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ

ಬೆಂಗಳೂರು: ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗಿದೆ.   2017 ರಿಂದ ಪಡಿತರ ಚೀಟಿ ಪೋರ್ಟಲ್ ಸ್ಥಗಿತವಾಗಿದ್ದು, ಮತ್ತೆ ಕಾರ್ಯಾರಂಭ ಮಾಡಿದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಮರು ಚಾಲನೆಯ ನಂತರ ಹೊಸದಾಗಿ 2.76 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಮಂಜೂರು ಮಾಡಲಾಗಿದೆ. …

Read More »

ಅಕ್ರಮ-ಸಕ್ರಮ : ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ತುಮಕೂರು : ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಸಿಕೊಂಡವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲೇ ಅಕ್ರಮ-ಸಕ್ರಮ ಅಂತಿಮಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಸಕ್ರಮ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಪೌರಾಡಳಿತ, ಕಾನೂನು ಸಚಿವರು ಹಾಗೂ ಒಳಗೊಂಡಂತೆ ಉಪ ಸಮಿತಿ ರಚಿಸಲಾಗಿಇದ್ದು, ಈಗಾಗಲೇ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.   ಅಕ್ರಮ ಸಕ್ರಮದಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಜನರಿಗೆ …

Read More »

ತವರಿನ ‘ಹೋಟೆಲ್‌ ಊಟ’ ಗಂಡನ ಮನೆಯಲ್ಲಿ ಸಿಗಲಿಲ್ಲ- ಇಬ್ಬರು ಕಂದಮ್ಮಗಳ ಜತೆ ಬೆಂಕಿ ಹಚ್ಚಿಕೊಂಡ ದೊಡ್ಡಬಳ್ಳಾಪುರದ ಮಹಿಳೆ!

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿಯಲ್ಲೊಂದು ನಿನ್ನೆ ದೊಡ್ಡ ದುರಂತ ನಡೆದಿತ್ತು. ಮಹಿಳೆಯೊಬ್ಬರು ತನ್ನಿಬ್ಬರು ಪುಟಾಣಿ ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು.   ತಾಯಿ ಸಂಧ್ಯಾ (33) ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಮೃತಪಟ್ಟಿದ್ದಾರೆ. ಸಂಧ್ಯಾ ಅವರ ವಿವಾಹವು ಶ್ರೀಕಾಂತ‌ ಎನ್ನುವವರ ಜತೆ ಐದು ವರ್ಷಗಳ ಹಿಂದೆ ನಡೆದಿದೆ. ಅತ್ತೆ-ಮಾವನ ಜತೆ ಸಂಧ್ಯಾ ನೆಲೆಸಿದ್ದರು. ಈ ತಾಯಿ …

Read More »

5 ರಾಜ್ಯಗಳ ವಿಧಾನಸಭೆ ಚುನಾವಣೆ; ಮಹತ್ವದ ಸಭೆ ನಡೆಸಿದ ಆಯೋಗ

ನವದೆಹಲಿ, ಜನವರಿ 07; ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಕೈಗೊಂಡಿದೆ. ಇಂತಹ ಸಂದರ್ಭದಲ್ಲಿಯೇ ದೇಶದಲ್ಲಿಕೋವಿಡ್ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.   ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದರು. ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದರು.   ಜನವರಿ 10 ರಿಂದ 13ರೊಳಗೆ 5 ರಾಜ್ಯಗಳ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ …

Read More »

ಮಠ ತೊರೆದ ಶ್ರೀಗಳ ಮನವೊಲಿಕೆಗೆ ಇಡೀ ಊರು ಆಗಮನ

ಹುಬ್ಬಳ್ಳಿ (hubballi) – ಮನೆಯಲ್ಲಿ (home) ಜಗಳ ಮಾಡಿದರೇ ಮಕ್ಕಳು (Children) ಮನೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಜನರಿಗೆ ಆಶೀರ್ವಾದ ನೀಡಿ, ಊರಿಗೆ ಮಾರ್ಗದರ್ಶಕರಾಗಬೇಕಿದ್ದ ಸ್ವಾಮೀಜಿ(Swamiji)ಯೊಬ್ಬರು ಮಠ (Mutt) ತೊರೆದಿದ್ದಾರೆ. ವ್ಯಕ್ತಿಯೊಬ್ಬರ ಕಾರಣದಿಂದ ಮನಸ್ಸಿಗೆ ನೋವಾಗಿರುವ ಹಿನ್ನೆಲೆಯಲ್ಲಿ ಊರನ್ನೇ ಬಿಟ್ಟು ಬಂದಿದ್ದಾರೆ. ಆ ಮಹಾ ವ್ಯಕ್ತಿಯ ಮನವೊಲಿಸಲು ಊರಿಗೆ ಊರೇ ಅವರ ಬಳಿಗೆ ಬಂದಿದೆ. ಹಾಗಿದ್ದರೇ ಯಾರು ಆ ವ್ಯಕ್ತಿ, ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ …

Read More »

BPL ಕಾರ್ಡ್ ಸೇರಿ ಅರ್ಹ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಗರೀಬ್ ಕಲ್ಯಾಣ್, ಅನ್ನಭಾಗ್ಯ ಯೋಜನೆಯಡಿ ಉಚಿತ ರೇಷನ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜನವರಿ ಮಾಹೆಗೆ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ …

Read More »

ಪ್ರಧಾನಿ ಮೋದಿ ಭದ್ರತೆಯಲ್ಲಾದ ಪಂಜಾಬ್ ಸರ್ಕಾರ ಮಾಡಿದ ಲೋಪ ದೋಷದ ಬಗ್ಗೆ ಸೋನಿಯಾ ಎಚ್ಚರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಬಗ್ಗೆ ಭಾರಿ ವಿವಾದದ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕರೆ ಮಾಡಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಭದ್ರತೆಯಲ್ಲಾದ ಪಂಜಾಬ್ ಸರ್ಕಾರ ಮಾಡಿದ ಲೋಪ ದೋಷದ ಬಗ್ಗೆ ಸೋನಿಯಾ ಪ್ರಶ್ನಿಸಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಭದ್ರತಾ ಲೋಪದಿಂದ ಪ್ರಧಾನಿ ಮೋದಿ ಅವರು ಬುಧವಾರ ಪಂಜಾಬ್ ನ ಫಿರೋಜ್ …

Read More »

ಅಂಚೆ ಕಚೇರಿಗೆ ಹೋಗ್ಬೇಕಿಲ್ಲ, ಮನೆಯಲ್ಲೇ ಕುಳಿತು ಈ ಸೇವೆ ಪಡೆಯಿರಿ

ವಿಶ್ವದಾದ್ಯಂತ ಕೊರೊನಾ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಆತಂಕ ಜನರಲ್ಲಿದೆ. ಒಂದನೇ,‌ ಎರಡನೇ ಅಲೆ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ, ಮೂರನೇ ಅಲೆಯಲ್ಲಿ ಅನಾಹುತ ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿಯೇ ಸರ್ಕಾರ ಎಲ್ಲ ಸೇವೆಗಳನ್ನು ಆನ್ಲೈನ್ ಮಾಡ್ತಿದೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೂ ನೆಮ್ಮದಿ ಸುದ್ದಿಯಿದೆ. ಜನರು ಅಂಚೆ ಕಚೇರಿಗೆ ಹೋಗಿ ಅಪಾಯ ಮೈಮೇಲೆಳೆದುಕೊಳ್ಳಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಅನೇಕ …

Read More »

ಮಟಮಟ ಮಧ್ಯಾಹ್ನವೇ ಮಾಜಿ ಸಚಿವರನ್ನ ಬೆನ್ನಟ್ಟಿ ಹಿಡಿದ ಅಂತಾರಾಜ್ಯ ಪೊಲೀಸರು!

ಹಾಸನ: ವಂಚನೆ ಪ್ರಕರಣವೊಂದರಲ್ಲಿ ಸಿಲುಕಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವರೂ ಆದ ಎಐಡಿಎಂಕೆ ಮಾಜಿ ಶಾಸಕ ರಾಜೇಂದ್ರ ಬಾಲಾಜಿ ಅವರನ್ನು ಹಾಸನದಲ್ಲಿ ನಿನ್ನೆ(ಬುಧವಾರ) ಮಧ್ಯಾಹ್ನ ತಮಿಳುನಾಡು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.   ಹಾಸನ ನಗರದ ವಾರ್ತಾ ಇಲಾಖೆ ಮುಂಭಾಗ ರಾಜೇಂದ್ರ ಬಾಲಾಜಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ನಡುರಸ್ತೆಯಲ್ಲೇ ಕಾರನ್ನು ಅಡ್ಡಗಟ್ಟಿ ಸುತ್ತುವರಿದ ತಮಿಳುನಾಡು ಪೊಲೀಸರು, ರಾಜೇಂದ್ರ ಬಾಲಾಜಿ ಅವರನ್ನು ಬಂಧಿಸಿದರು. ಒಂದು ಕಾರನ್ನು ಅಡ್ಡಗಟ್ಟಿ ಆರೋಪಿಯನ್ನು ಮತ್ತೊಂದು ಕಾರಿಗೆ ಹತ್ತಿಸಿಕೊಳ್ಳುವ …

Read More »

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ಗೆ ಜಯ ಗಳಿಸಿಕೊಟ್ಟ ಪವನ್

ಬೆಂಗಳೂರು: ರೇಡಿಂಗ್‌ ಚತುರ ಪವನ್ ಶೆರಾವತ್ ಮತ್ತೊಮ್ಮೆ ಕಬಡ್ಡಿ ಅಂಗಣದಲ್ಲಿ ಮಿಂಚು ಹರಿಸಿದರು. ಅವರ ಅಮೋಘ ‘ಸೂಪರ್ ಟೆನ್‌’ ಸಾಧನೆಯ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಎಂಟನೇ ಆವೃತ್ತಿಯಲ್ಲಿ ಮತ್ತೊಂದು ಗೆಲುವು ಸಾಧಿಸಿತು.   ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಬೆಂಗಳೂರು ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 38-31ರ ಜಯ ಸಾಧಿಸಿತು. 13 ಟಚ್ ಪಾಯಿಂಟ್ ಸೇರಿದಂತೆ ಪವನ್ 18 ಪಾಯಿಂಟ್ …

Read More »