Breaking News

ಬಿಜೆಪಿ ಬೆಂಬಲಿಸಿದ ಮನಮೋಹನ್‌ ಸಿಂಗ್‌, ಮುಲಾಯಂ ಸಿಂಗ್‌… ಆದರೆ!

ಅಂಬೇಡ್ಕರ್‌ ನಗರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮನಮೋಹನ್‌ ಸಿಂಗ್, ಮುಲಾಯಂ ಸಿಂಗ್‌ ಹಾಗೂ ಮತ್ತಿತರರು ಬಿಜೆಪಿಯನ್ನು ಬೆಂಬಲಿಸಿ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಮತ್ತು ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ಬಿಜೆಪಿಯನ್ನು ಬೆಂಬಲಿಸಿದ್ದಾರೆಯೇ? ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದು, ಮುಖ್ಯಮಂತ್ರಿ ಗಾದಿಗೇರುವ ಹುಮ್ಮಸ್ಸಿನಲ್ಲಿರುವ ಅಖಿಲೇಶ್‌ ಯಾದವ್‌ ಅವರ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರು ಯೋಗಿ …

Read More »

ಬೆಳಗುಂದಿ ಗ್ರಾಮದ ಗಜಾನನ ಬಾಳಾರಾಮ್ ನಾಯ್ಕ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿ

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಗಜಾನನ ಬಾಳಾರಾಮ್ ನಾಯ್ಕ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗುಂದಿ ಗ್ರಾಮದ ವಿದ್ಯಾ ಪಾಟೀಲ್, ಆಕೆಯ ಮಗ ರಿತಿಕ್ ಪಾಟೀಲ್ ಹಾಗೂ ಆತನ ಸ್ನೇಹಿತ ಪರುಶರಾಮ್ ಗೋಂಧಳಿ ಬಂಧಿತ ಆರೋಪಿಗಳು. ಕೊಲೆಯಾದ ಗಜಾನನ ನಾಯ್ಕ ಆರೋಪಿ ವಿದ್ಯಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ, ಆಕೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ಮೂವರು …

Read More »

ವ್ಯಾಸಂಗ ಮುಂದುವರೆಸಲು ಭಾರತದಲ್ಲಿ ಅವಕಾಶ ಕೊಡಿ’

ಬೆಳಗಾವಿ: ಯುದ್ಧಪೀಡಿತ ಉಕ್ರೇನಿನಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.ಬೈಲಹೊಂಗಲ ಪಟ್ಟಣದ ಪ್ರಜ್ವಲ್ ತಿಪ್ಪಣ್ಣವರ ಉಕ್ರೇನಿನ ಟೆರ್ನೋಪಿಲ್ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಟೆರ್ನೋಪಿಲ್​ನಿಂದ ಮುಂಬೈ ಮಾರ್ಗವಾಗಿ ಪ್ರಜ್ವಲ್ ಬೆಳಗಾವಿಗೆ ಆಗಮಿಸಿದ್ದಾರೆ.ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ತಿಪ್ಪಣ್ಣವರ, ಬೆಳಗಾವಿ ಜಿಲ್ಲೆಯ 19 ವಿದ್ಯಾರ್ಥಿಗಳು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರಿಗೂ ಇಲ್ಲೇ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್​ನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಶುಲ್ಕವನ್ನೇ ಸರ್ಕಾರ …

Read More »

ಯುಪಿ ಚುನಾವಣೆ: ಸ್ಟ್ರಾಂಗ್‌ ರೂಮ್‌ ಹಿಂಬದಿ ವಿವಿಪ್ಯಾಟ್‌ ಚೀಟಿಗಳು ಪತ್ತೆ

ಲಖನೌ: ಉತ್ತರ ಪ್ರದೇಶದಲ್ಲಿ ನಿನ್ನೆಯಷ್ಟೇ 6ನೇ ಹಂತದ ಮತದಾನ ಮುಗಿದಿದ್ದು, ಮಾರ್ಚ್‌ 7ಕ್ಕೆ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಇದೇ 10 ರಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮಂಡಿಯ ಸ್ಟ್ರಾಂಗ್‌ ರೂಂ ಪಕ್ಕದಲ್ಲಿ ವಿವಿಪ್ಯಾಟ್‌ನ ಸ್ಲಿಪ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಚುನಾವಣಾ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದು, ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ …

Read More »

ಮಣಿಪುರದಲ್ಲಿಂದು 2ನೇ ಹಾಗೂ ಕೊನೆಯ ಹಂತದ ಮತದಾನ ಆರಂಭವಾಗಿದೆ. 6 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಂಪಾಲ್‌: ಮಣಿಪುರ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, 6 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದು ನಿರ್ಧರಿಸಲಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4ರವರೆಗೆ ನಡೆಯಲಿದೆ. 1,247 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ತೌಬಲ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಒಟ್ಟು 8.38 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ …

Read More »

ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

ಲಂಡನ್‌: ರಷ್ಯಾ ಸೈನಿಕರು ಯುದ್ಧದ ನಡುವೆಯೇ ಉಕ್ರೇನಿಯನ್ನರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಗಂಭೀರ ಆರೋಪ ಮಾಡಿದ್ದಾರೆ. ನಗರಗಳ ಮೇಲೆ ಬಾಂಬ್‌ಗಳು ಬಿದ್ದಾಗ, ಆಕ್ರಮಿತ ನಗರಗಳಲ್ಲಿ ಸೈನಿಕರು ಮಹಿಳೆಯರನ್ನು ಅತ್ಯಾಚಾರ ಮಾಡಿದಾಗ, ದುರದೃಷ್ಟವಶಾತ್ ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ನಮ್ಮಲ್ಲಿವೆ. ಆದರೆ ಅಂತಾರಾಷ್ಟ್ರೀಯ ಕಾನೂನಿನ ದಕ್ಷತೆಯ ಬಗ್ಗೆ ಮಾತನಾಡುವುದು ಕಷ್ಟ ಎಂದು ಲಂಡನ್‌ನಲ್ಲಿ ಕುಲೆಬಾ ಹೇಳಿದ್ದಾರೆ. …

Read More »

ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ

ಭಾರತೀಯ ರೈಲ್ವೇ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ(ಎಟಿಪಿ)ಯ ಹೊಸ ‘ಕವಚ’ ತಂತ್ರಜ್ಞಾನವನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪರೀಕ್ಷೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ಕೂಲಂಕುಶವಾಗಿ ವೀಕ್ಷಿಸಿ ತಂತ್ರಜ್ಞಾನವನ್ನು ಶ್ಲಾಘಿಸಿದ್ದಾರೆ. Watch the action!! Collision was avoided with the help of Kavach with two trains/loco approaching each other on same track. Loco was stopped automatically by Kavach …

Read More »

i phone ‘ಆಪಲ್’ ಕಂಪನಿಗೆ ಬುದ್ಧಿ ಕಲಿಸಿದ ಚಿಕ್ಕಮಗಳೂರಿನ ಯುವಕ!

ಬೆಂಗಳೂರು, ಮಾ. 04: ವಾರಂಟಿ ಅವಧಿಯಲ್ಲಿ ಕೆಟ್ಟು ಹೋಗಿದ್ದ ಐಪೋನ್ ರಿಪೇರಿ ಮಾಡಲು ನಿರಾಕರಿಸಿದ ಐಪೋನ್ ಕಂಪನಿಗೆ ಚಿಕ್ಕಮಗಳೂರಿನ ಯುವಕ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ವಾರಂಟಿ ಅವಧಿ ಇದ್ದರೂ ಪೋನ್ ನನ್ನು ರಿಪೇರಿ ಮಾಡಿಕೊಡದೇ ಆಪಲ್ ಐಪೋನ್ ವಿರುದ್ಧ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿ ಚಿಕ್ಕಮಗಳೂರಿನ ಯುವಕ ಜಯ ಗಳಿಸಿದ್ದಾರೆ. ಅರ್ಜಿದಾರನ ವಾದ ಆಲಿಸಿದ ನ್ಯಾಯಾಲಯ, ವಾರಂಟಿ ಅವಧಿ ಇದ್ದರೂ ಐಪೋನ್ ರಿಪೇರಿ ಮಾಡದ ಆಪಲ್ ಇಂಡಿಯಾ ಸಂಸ್ಥೆಯು, …

Read More »

ಮಂತ್ರಾಲಯಕ್ಕೆ ಭೇಟಿ ಕೊಟ್ಟ ಸುದೀಪ್

ರಾಯಚೂರು: ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನ ಗುರುವೈಭವೋತ್ಸವವಾಗಿ ಆಚರಣೆ ಮಾಡಲಾಗುತ್ತೆ. ಈ ಹಿನ್ನೆಲೆ ಇಂದು ರಾಯರ 401ನೇ ಪಟ್ಟಾಭಿಷೇಕವಾಗಿದ್ದು, ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದರು. ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದ ನಂತರ ರಾಯರ ಬೃಂದಾವನದ ದರ್ಶನವನ್ನು ಮೊದಲು ಪಡೆದಿದ್ದಾರೆ. ಬಳಿಕ ಕಿಚ್ಚನಿಗೆ ವೇದಿಕೆ ಕಾರ್ಯಕ್ರಮದಲ್ಲಿ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸನ್ಮಾನ ಮಾಡಿದ್ದಾರೆ. 

Read More »

ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಇವತ್ತಿಗೆ ಒಂಬತ್ತನೇ ದಿನ. ಈ ನಡುವೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ. ರಷ್ಯಾ ಸೇನೆ ಕಂಡುಕೇಳರಿಯದ ರೀತಿಯಲ್ಲಿ ಉಕ್ರೇನ್ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸ್ತಿವೆ. ಈ ಹಿನ್ನೆಲೆ ಖಾರ್ಕೀವ್, ಚೆರ್ನಿಹೀವ್, ಸುಮಿ, ಕೀವ್ ನಗರಗಳು ತತ್ತರಿಸಿದ್ದು, ಸ್ಮಶಾನದಂತಾಗಿಬಿಟ್ಟಿವೆ. ಸದ್ಯ ರಷ್ಯಾ ಆರ್ಮಿ ಕೀವ್‍ನಿಂದ 20 ಮೈಲಿ ದೂರದಲ್ಲಿ ಬೀಡುಬಿಟ್ಟಿದೆ. ಮುಂದಿನ ಆದೇಶಕ್ಕಾಗಿ ಕಾಯ್ತಿದೆ. ಜಾಪೋರಿಷಿಯಾ ಸಮೀಪದ ಎನರ್ವೋದರ್ …

Read More »