ಬೆಂಗಳೂರು, ಏ.20- ವಾಣಿ ವಿಲಾಸ ತಾಯಿ-ಶಿಶು ಆಸ್ಪತ್ರೆಯ ಮಾದರಿಯಲ್ಲೇ ಕೆ.ಸಿ. ಜನರಲ್ ಆಸ್ಪತ್ರೆಯಲ್ಲೂ ತಾಯಿ-ಶಿಶು ಆಸ್ಪತ್ರೆ ನಿರ್ಮಿಸ ಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಿರ್ಮಾಣ್ ಹಾಗೂ ಓಪನ್ ಟೆಕ್ಸ್ಟ್ ನೆರವಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ಹೊಸ ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ವಾಣಿ …
Read More »ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್
ಬೆಂಗಳೂರು, ಏ.19. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಯಾವುದೇ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆಗೆ ನಡೆಸುವ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ಆದೇಶಿದೆ. ಮಾಲೂರು ಪುರಸಭೆಯ ಕೆ.ಲಕ್ಷ್ಮೀಕಾಂತ ಸೇರಿ ಆರು ನಾಮ ನಿರ್ದೇಶಿತ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ದ ಕಲಂ 243ಆರ್(2)(ಎ) …
Read More »ಏರ್ಪೋರ್ಟ್ಗಳನ್ನು ಮಾರಾಟ ಮಾಡ್ತಿಲ್ಲ, ಗುತ್ತಿಗೆಗೆ ನೀಡುತ್ತಿದ್ದೇವೆ: ಸಚಿವ ಸಿಂಧಿಯಾ
: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರಾಜನಂದಗಾಂವ್ಗೆ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿ ಅಗತ್ಯ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಸಿಂಧಿಯಾ ಜೊತೆ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ರಾಜನಂದಗಾಂವ್ ಸಂಸದ ಸಂತೋಷ್ ಪಾಂಡೆ ಮತ್ತು ಎಲ್ಲಾ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಕೇಂದ್ರ ಸಚಿವ ಸಿಂಧಿಯಾ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದೇವೆ. ಸಭೆಯಲ್ಲಿ …
Read More »ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ
ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕೆಲವು ಕಡೆಗಳಲ್ಲಿ ಪೈಸೆಗಳಷ್ಟು ಏರಿಕೆ ಕಂಡಿದೆ. ಹಲವು ದಿನಗಳ ಕಾಲ ಏರಿಕೆ ಕಂಡಿದ್ದ ಇಂಧನ ಬೆಲೆ ಯಥಾಸ್ಥಿತಿ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಇದರ ಜತೆಗೆ ಸ್ಪೀಡ್ ಪೆಟ್ರೋಲ್ಗೆ ರಾಜಧಾನಿಯಲ್ಲಿ 114.06 ರೂಪಾಯಿ ದರ ನಿಗದಿಯಾಗಿದೆ. ಬೆಂಗಳೂರು ಹೊರತುಪಡಿಸಿ …
Read More »ಪಿಯುಸಿ ಪರೀಕ್ಷೆ ಬರೆಯಲು ಪೊಲೀಸ್ ಭದ್ರತೆ! ಈತನಿಗೆ
ಹುಬ್ಬಳ್ಳಿ: ವಾಟ್ಸ್ಆಯಪ್ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿಕೊಂಡಿದ್ದ ಆರೋಪಿ, ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಅಭಿಷೇಕ ಅವಹೇಳನಕಾರಿ ಸ್ಟೇಟಸ್ ಇಟ್ಟಿದ್ದ ಆರೋಪದಡಿ ಬಂಧಿತನಾಗಿದ್ದಾನೆ. ಈತನಿಗೆ ಏ.22ರಿಂದ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಕೀಲ ಸಂಜು ಬಡಸ್ಕರ 4ನೇ ಅಧಿಕ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ …
Read More »ನಟ ಶಿವಣ್ಣಗೆ ಅನಾರೋಗ್ಯ; ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮೈಸೂರು: ಡಾಕ್ಟರ್ ಶಿವರಾಜ್ ಕುಮಾರ್ಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ವೇದಾ ಶೂಟಿಂಗ್ ವೇಳೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಎಸ್ಎಸ್ ಆಸ್ಪತ್ರೆಗೆ ಹೋಗಿದ್ದರು. ಜನರಲ್ ಚೆಕಪ್ ಮಾಡಿಕೊಂಡ ಬಳಿಕ ಮತ್ತೆ ವೇದಾ ಶೂಟಿಂಗ್ಗೆ ಮರಳಿದ್ದಾರೆ ಎನ್ನಲಾಗಿದೆ.
Read More »ಚಾಕೊಲೇಟ್ ಕೊಡ್ತೀನೆಂದು ಪುಸಲಾಯಿಸಿ ರೇಪ್ & ಕಿಡ್ನಾಪ್; ಅಪರಾಧಿಗೆ 10 ವರ್ಷ ಜೈಲು
ಬೆಂಗಳೂರು: ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗು ಒಂದನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಆನೇಕಲ್ ತಾಲೂಕಿನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು 10 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದ್ದಾರೆ. ಲೋಕನಾಥ್ ಬಹದ್ದೂರ್ ಜೈಲು ಶಿಕ್ಷೆಗೆ ಒಳಗಾದ ಅಪರಾಧಿ. ಏನಿದು ಪ್ರಕರಣ..? ನೇಪಾಳಿ ಮೂಲದವನಾದ ಲೋಕನಾಥ್ ಬಹದ್ದೂರ್ 2017ರಲ್ಲಿ ಮಗುವನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿದ್ದ. ಅತ್ತಿಬೆಲೆಯಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡ್ತಿದ್ದ ಈತ, ಮನೆ ಎದುರು …
Read More »12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ
ಮುಂಬೈ: ಕಲ್ಲಿದ್ದಲು ಕೊರತೆಯಿಂದಾದಾಗಿ 12 ರಾಜ್ಯಗಳು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವತ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ಮಟ್ಟದ ಯೋಜನೆಯಿಂದಾಗಿ ಕಳೆದ ಐದರಿಂದ ಆರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರಲಿಲ್ಲ. ವಿದ್ಯುತ್ ಕೊರತೆಯು ಶೆ.15ರಷ್ಟಿದೆ ಎಂದರು. ರಾಜ್ಯದ ಸ್ವಾಮ್ಯದ ಮಹಾಜೆಂಕೊ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಕರಾವಳಿ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಆಮದು …
Read More »ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು
ನವದೆಹಲಿ: ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್ಪುರಿಗೂ ಸರ್ಕಾರ ಬುಲ್ಡೋಜರ್ ಶಾಕ್ ನೀಡಿದ್ದು, ದೆಹಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಒಡೆದು ಹಾಕಲು ನಗರ ಪಾಲಿಕೆ ಆದೇಶ ನೀಡಿದೆ. ಹನುಮ ಜಯಂತಿಯಂದು ದೆಹಲಿಯಲ್ಲಿ ನಡೆದ ಜಹಾಂಗೀರ್ಪುರಿ ಹಿಂಸಾಚಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಉತ್ತರ ಮಹಾನಗರ ಪಾಲಿಕೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಯಲ್ಲಿ ಏ.20 ಮತ್ತು 21ರಂದು …
Read More »ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ , ಕಿರುಕುಳ
ಮುಂಬೈ: ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಅಜ್ಜ ಹಾಗೂ ಚಿಕ್ಕಪ್ಪ ಕಳೆದ 5 ವರ್ಷಗಳಿಂದ ಕಿರುಕುಳ ನೀಡಿದ ಘಟನೆ ಪುಣೆದಲ್ಲಿ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಹೋದರ, ಸಂತ್ರಸ್ತೆಯ ತಂದೆ (45) ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಜೊತೆಗೆ ಆಕೆಯ ಅಜ್ಜ(60) ಹಾಗೂ ಚಿಕ್ಕಪ್ಪ (25) ಕಳೆದ 5 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಮೂಲತಃ ಬಿಹಾರದವರಾಗಿದ್ದು, ಸದ್ಯ ಪುಣೆಯಲ್ಲಿ …
Read More »
Laxmi News 24×7