ಬೆಂಗಳೂರು: ಆನ್‌ಲೈನ್ ಶಿಕ್ಷಣ ಸರಿಯಲ್ಲ. ಆನ್‌ಲೈನ್ ಶಿಕ್ಷಣ ನಗರ ಪ್ರದೇಶಗಳಿಗೆ ಸೂಕ್ತವಾಗುತ್ತೆ. ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಅನುಕೂಲವಿಲ್ಲ. ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಇರಲ್ಲ, ಮೊಬೈಲ್ ಇರಲ್ಲ. ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಸರಿಯಾಗಲ್ಲ. ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ ಎಂದು ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿಕೆ ನೀಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ರಜೆ ಹಿನ್ನೆಲೆ …
Read More »ಬಿಸಿಸಿಐ ಜತೆಗಿನ ಜಟಾಪಟಿ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಮುಳುವಾಯಿತೇ?
ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್ ಗೆದ್ದರೂ, ಸರಣಿ ಗೆಲುವಿನ ಅಪೂರ್ವ ಅವಕಾಶ ಕೈಚೆಲ್ಲಿದ ಭಾರತ ತಂಡಕ್ಕೆ ಶನಿವಾರ ಸಂಜೆ ಮತ್ತೊಂದು ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ-ಆಘಾತ ಮೂಡಿಸಿದ್ದಾರೆ. ಟೆಸ್ಟ್ ನಾಯಕರಾಗಿ ಇನ್ನಷ್ಟು ಸಮಯ ಮುಂದುವರಿಯುವ ಒಲವು ಹೊಂದಿದ್ದ 33 ವರ್ಷದ ಕೊಹ್ಲಿ ಅವರ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂಬ ಗೊಂದಲ ಅವರ ಅಭಿಮಾನಿಗಳಲ್ಲಿ …
Read More »ಸರ್ಕಾರಿ ಶಾಲೆಯಲ್ಲಿ ಕಲಿತು ಸತತ ಮೂರು ಹುದ್ದೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗಳಿಗೆ ಮಾದರಿಯಾದ ಅಲಖನೂರ ಗ್ರಾಮದ ರೈತನ ಮಗಳು ಮಂಜುಳಾ ನಿಲಜಗಿ
ಸರ್ಕಾರಿ ಶಾಲೆಯಲ್ಲಿ ಕಲಿತು ಸತತ ಮೂರು ಹುದ್ದೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗಳಿಗೆ ಮಾದರಿಯಾದ ಅಲಖನೂರ ಗ್ರಾಮದ ರೈತನ ಮಗಳು ಮಂಜುಳಾ ನಿಲಜಗಿ ಹೌದು ರಾಯಬಾಗ ತಾಲೂಕಿನ ಅಲಖನೂರ ಸದಾಶಿವ ನಗರದ ಒಬ್ಬ ಯುವತಿ ತಂದೆ ತಾಯಿ ಅನಕ್ಷರಸ್ಥರಿದ್ದರು ಶಿಕ್ಷಕರ ಹಾಗೂ ತಂದೆತಾಯಿಗಳ ಮಾರ್ಗದರ್ಶನದಲ್ಲಿ ಡಿಆರಎಫ, ಆರಎಫಓ ಹಾಗೂ ಎಸಿಎಫ್ ಹೀಗೆ ತರಬೇತಿ ಮುಗಿಸುವ ಮುನ್ನ ಒಂದರಮೇಲೊಂದು ಸತತ ಮೂರು ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾಳೆ. …
Read More »ಸಿಎಂ ಜೊತೆ ಚರ್ಚಿಸಿ ಹಾಲಿನ ದರ ಏರಿಕೆ, ನಿರ್ಧಾರ: ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು: ‘ನಂದಿನಿ’ ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಹಾಲಿನ ದರ ಪ್ರತಿ ಲೀಟರ್‌ಗೆ ₹ 3 ಹೆಚ್ಚಿಸಲು ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಕೋರಿದ್ದಾರೆ’ ಎಂದು ತಿಳಿಸಿದರು. ‘ಹೆಚ್ಚಿಸಿದರೆ ಲೀಟರ್ ಹಾಲಿಗೆ ಈಗಿರುವ ₹ 37ರಿಂದ …
Read More »ಪೊಲೀಸರ ಸೂಚನೆ ಕಡೆಗಣಿಸಿ ಭಕ್ತರ ಪಾದಯಾತ್ರೆ
ಇಳಕಲ್: ಬಾದಾಮಿಯ ಬನಶಂಕರಿ ದೇವಿ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ನೂರಾರು ಭಕ್ತರನ್ನು ತಡೆಯಲು ಶನಿವಾರ ಪೊಲೀಸರು ಇಡೀ ದಿನ ಕಷ್ಟಪಟ್ಟರು. ಪ್ರತಿವರ್ಷ ಇಳಕಲ್‍ದಿಂದ 10ಸಾವಿರಕ್ಕೂ ಅಧಿಕ ಭಕ್ತರು ಬನಶಂಕರಿ ದರ್ಶನಕ್ಕೆ ಹೋಗುತ್ತಿದ್ದರು. ಈಗ ಕೋವಿಡ್ ಕಾರಣ ಪಾದಯಾತ್ರೆಗೆ ನಿರ್ಬಂಧ ಹೇರಿದೆ. ಪೊಲೀಸರು ತಡೆದರೂ ಹೊಲ, ಕಾಲುದಾರಿ ಮೂಲಕ ಸಾಗುತ್ತಿದ್ದುದು ಕಂಡುಬಂದಿತು. ಅಲ್ಲಿಯೂ ತಡೆಯುವ ಪೊಲೀಸರ ಯತ್ನ ಫಲನೀಡಲಿಲ್ಲ. 21ರವರೆಗೆ ಶಾಲೆಗೆ ರಜೆ ಕಾರವಾರ ನಗರ, ಹೊನ್ನಾವರ ಪಟ್ಟಣದ ಪ್ರಾಥಮಿಕ ಶಾಲೆಗಳಿಗೆ …
Read More »ಟೈಸನ್’ ಶ್ವಾನದ ಜನ್ಮದಿನ: 150 ಮಂದಿಗೆ ಬಿರಿಯಾನಿ ಊಟ, 13 ಸಾವಿರ ಬೆಲೆ ಬಾಳುವ ಹಾಸಿಗೆ ಉಡುಗೊರೆ
ಶಿವಮೊಗ್ಗ : ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಶ್ವಾನಪ್ರಿಯರೊಬ್ಬರು ಶ್ವಾನಕ್ಕೆ ಬೆಲೆಬಾಳುವ ಉಡುಗೊರೆ ನೀಡಿದ್ದಾರೆ. ಇಲ್ಲಿನ ರಾಗಿಗುಡ್ಡದ ನಿವಾಸಿ ಮಹಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ‘ಟೈಸನ್’ ಎಂದು ಹೆಸರಿಟ್ಟಿದ್ದಾರೆ. ‘ಟೈಸನ್’ಗೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. 150 ಮಂದಿಗೆ ಬಿರಿಯಾನಿ ಊಟ: ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮಹಮದ್ ಅಯಾಜ್ ಅವರು ಮನೆ ಬಳಿ ಪೆಂಡಾಲ್ ಹಾಕಿಸಿ, ನಾಯಿಯಿಂದ ಕೇಕ್ …
Read More »ಮಂತ್ರಿ ಗೋಳ ಮನೆ ಮುಂದ ಗುಂಡಿ ಬಿದ್ದು ಹೋದರು ರಿಪೇರಿ ಮಾಡದ ಅಧಿಕಾರಿ ವರ್ಗ
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದು ಅವ್ಯವಸ್ಥೆ ತಲೆದೋರಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಇದರ ದುರಸ್ತಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಅವರ ಮನೆಯ ಹತ್ತಿರದಲ್ಲಿರುವ ರಸ್ತೆಯಲ್ಲಿ ಡ್ರೈನೇಜ್ ಹೋಲ್ ಕಳಪೆ ಕಾಮಗಾರಿಯಿಂದ ಸುಮಾರು 15 ಅಡಿಗಳಷ್ಟು ತಗ್ಗು ಬಿದ್ದಿದೆ. ಇದರಿಂದ ಜನರು ಸಂಚರಿಸಲು ಪರದಾಡುತ್ತಿದ್ದು, ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿಗಳು ಇತ್ತ ಗಮನ …
Read More »ಮಾಸ್ಕ್ ಹಾಕದ ಯುವಕನನ್ನು ಕೊರಳಪಟ್ಟಿ ಹಿಡಿದು ಎಳೆದೊಯ್ದ ಪೊಲೀಸ್
ಹುಬ್ಬಳ್ಳಿ/ಧಾರವಾಡ: ಕೊರೊನಾ ಪ್ರಕರಣಗಳು ವಿಪರೀತ ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಶನಿವಾರ ವೀಕೆಂಡ್ ಕರ್ಫ್ಯೂ ಕಾರಣ ಎಲ್ಲೆಡೆಯೂ ಪೊಲೀಸ್ ಗಸ್ತು. ನಗರದಲ್ಲಿ ಯಾವುದೋ ಕಾರಣಕ್ಕೆ ಯುವಕನೊಬ್ಬ ಮಾಸ್ಕ್ ಇಲ್ಲದೇ ಹೊರಬಂದು ಖಾಕಿ ಕೈಗೆ ಸಿಕ್ಕಿಬಿದ್ದು ಪಡಿಪಾಟಲು ಪಟ್ಟ ಘಟನೆ ನಡೆದಿದೆ. ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವ ವೇಳೆ ಬೈಕ್ ಸವಾರನೊಬ್ಬ ಮಾಸ್ಕ್ ಇಲ್ಲದೇ ಬಂದಿದ್ದಾನೆ. ಇದನ್ನು ಕಂಡಿದ್ದೇ ತಡ ಮುಗಿಬಿದ್ದ ಪೊಲೀಸ್ ಯುವಕನನ್ನು ಧರಧರನೇ ಎಳೆದುಕೊಂಡು ಹೋಗಿದ್ದಾನೆ. …
Read More »ಚಲಿಸುತ್ತಿದ್ದ ಬಸ್ ಡ್ರೈವರ್‌ಗೆ ಫಿಟ್ಸ್… ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್..!
ಪುಣೆ (ಮಹಾರಾಷ್ಟ್ರ): ಚಲಿಸುತ್ತಿದ್ದ ಮಿನಿ ಬಸ್ ಚಾಲಕನಿಗೆ ಫಿಟ್ಸ್ ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನ ನೆರವಿಗೆ ಬಂದ ಮಹಿಳೆಯೊಬ್ಬರು ಬಸ್ ಅನ್ನು ಚಾಲನೆ ಮಾಡಿ ಮಕ್ಕಳು ಸಹಿತ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರು ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಬಸ್‌ನ ಚಾಲಕನಿಗೆ ಮೂರ್ಛೆ ಬಂದು ಏಕಾಏಕಿ …
Read More »ಒಂದು ಕಡೆ ಕುಡಿಯೋಕ್ಕೆ ನೀರಿಲ್ಲ ಇನ್ನೊಂದು ಕಡೆ ನೀರು ಚರಂಡಿ ಪಾಲು ಕ್ರಮ ಕೈಗೊಳ್ಳ ದಿದ್ದರೆ ಜನ ನಿಮ್ಮ ಕಚೇರಿಗೆ ನುಗ್ಗೋದು ಗ್ಯಾರಂಟಿ
ವಾಲಮನ್‍ಗಳ ಮುಷ್ಕರದಿಂದ ಬೆಳಗಾವಿ ನಗರದಾಧ್ಯಂತ ನೀರು ಪೂರೈಕೆ ಆಗದೇ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಸ್ಮಾರ್ಟಸಿಟಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಒಂದು ವಾರದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಹೌದು ಬೆಳಗಾವಿಯಲ್ಲಿ ಸಧ್ಯ ನೀರಿಗಾಗಿ ಹಾಹಾಕಾರ ಶುರುವಾಗಿದೆ. ವಾಲಮನ್‍ಗಳ ಧರಣಿಯಿಂದ ಜನ ನೀರಿಗಾಗಿ ಕೊಡಗಳನ್ನು ಹಿಡಿದುಕೊಂಡು ಬೀದಿ, ಬೀದಿ ಸುತ್ತುತಿದ್ದಾರೆ. ಆದರೆ ಇದೇ ನಗರದಲ್ಲಿ ಸಿವಿಲ್ ಆಸ್ಪತ್ರೆ ಮುಂಭಾಗದ ರಸ್ತೆಯ ಡಾ.ಭಾತೆ ಕ್ಲಿನಿಕ್ ಬಳಿ …
Read More »