Breaking News

ಇಂದು ವಿಧಾನ ಪರಿಷತ್‌ನ 4 ಸ್ಥಾನಗಳಿಗೆ ಚುನಾವಣೆ :

ಇಂದು ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಶನಿವಾರ ಸಂಝೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇಂದು ಮತದಾನದ ನಡೆಯಲಿದೆ.   ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್ 15 ರ ಬುಧವಾರ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ …

Read More »

ವೀಕೆಂಡ್ ಡ್ರಗ್ಸ್ ಪಾರ್ಟಿ ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಡ್ರಗ್ಸ್ ಪಾರ್ಟಿಗಳಿಗೆ ಎಷ್ಟೇ ಬಿಸಿ ಮುಟ್ಟಿಸಿದರೂ ನಿಂತಿಲ್ಲ. ಹಲಸೂರಿನ ಜಿಟಿ ಮಾಲ್ ಬಳಿ ಇರುವ ದಿ ಪಾರ್ಕ್ ಹೋಟೆಲ್‍ನಲ್ಲಿ ತಡರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು ಎಂಬ ಅನುಮಾನದ ಮೇರೆಗೆ ಹಲಸೂರು ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಬಾಲಿವುಡ್ ನಟ ಮಗ ಸೇರಿದಂತೆ, 50ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್‌ಗೆ …

Read More »

ಬೆಳಗಾವಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಸೇಂಟ್ ಆಂಥೋನಿ ಹಬ್ಬ ಆಚರಣೆ

ಬೆಳಗಾವಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಸೇಂಟ್ ಆಂಥೋನಿ ಹಬ್ಬವನ್ನು ಆಚರಣೆ ಮಾಡಲಾಯಿತು. ಬೆಳಗಾವಿಯ ಕ್ಯಾಂಪ್‌ನ ಸೇಂಟ್ ಆಂಥೋನಿ ಚರ್ಚನಲ್ಲಿ ಸೇಂಟ್ ಆಂಥೋನಿ ಫೀಸ್ಟ್ ನಿಮಿತ್ಯ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇಂದು ರವಿವಾರ ಸಾಯಂಕಾಲ ಚರ್ಚ್ದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜನೆ ಮಾಡಲಾಗಿತ್ತು. ನಂತರ ಚರ್ಚ್ ಪ್ರಾಂಗಣದಿಂದ ಖಾನಾಪುರ್ ರಸ್ತೆ ಕ್ಯಾಂಪ್ ಮುಖಾಂತರ ಕ್ಯಾಂಪ್‌ನ ಅನೇಕ ರಸ್ತೆಗಳಲ್ಲಿ ಸೇಂಟ್ ಆಂಥೋನಿ ಪ್ರತಿಮೆಯೊಂದಿಗೆ ಸಂಚಾರ ಮಾಡಿದರು. ಈ ವೇಳೆ ಅನೇಕ ಕ್ರಿಶ್ಚಿಯನ್ ಸಮಾಜ …

Read More »

ಬೆಳಗಾವಿಯಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

4 ಬೈಕ್‍ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು. ಬೆಳಗಾವಿಯಲ್ಲಿ ಶಾಂತಿ ಕದಡಲು ಕಿಡಿಗೇಡಿಗಳು ಯತ್ನಿಸಿದ್ದು. ನೆಹರು ನಗರದಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 4 ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದಾರೆ. ನಾಲ್ಕೂ ಬೈಕ್‍ಗಳು ಬೆಂಕಿಯ ಕೆನ್ನಾಲೆಯಲ್ಲಿ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅದೇ ರೀತಿ ಎಪಿಎಂಸಿ ಠಾಣೆ ಪೊಲೀಸರು ಕೂಡ …

Read More »

ಸೋಲಿನ ಹತಾಶೆಯಲ್ಲಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ ಹುಕ್ಕೇರಿ: ಅರುಣ ಶಾಹಪುರ ಗಂಭೀರ ಆರೋಪ

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಸೋಲಿನ ಹತಾಶೆಯಲ್ಲಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅರುಣ ಶಾಹಪುರ ಗಂಭೀರ ಆರೋಪ ಮಾಡಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಹತ್ತು ಸಾವಿರದಂತೆ ಪ್ಯಾಕೇಟ್‍ನಲ್ಲಿ ಹಣವಿಟ್ಟು ಹಂಚಲಾಗುತ್ತಿತ್ತು. ಇದೊಂದೆ ವಾಹನ ಅಲ್ಲದೆ ಇನ್ನೂ ಹದಿನಾಲ್ಕು ಕಾರುಗಳು ಹೀಗೆ ಓಡಾಡುತ್ತಿವೆ. …

Read More »

ಪ್ರಕಾಶ ಹುಕ್ಕೇರಿ ಪರ ಹಣ ಹಂಚಿಕೆದಾರರು ಸಿಕ್ಕಿ ಬಿದ್ದಿದ್ದಾರೆ. ಒಟ್ಟು 1.70 ಲಕ್ಷ ರೂ.ಪತ್ತೆ

ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಮತದಾರರಿಗೆ ಹಣ ಹಂಚಲು ಹೊರಟಿದ್ದ ವಾಹನ ವಿಜಯಪುರ ನಗರದ ಗೋದಾವರಿ ಬಾರ್ ಬಳಿ ಚುನಾವಣೆ ಅಧಿಕಾರಿಗಳಿಗೆ ಸಿಕ್ಕಿದೆ. ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಹಣ ಹಂಚಿಕೆದಾರರು ಸಿಕ್ಕಿ ಬಿದ್ದಿದ್ದಾರೆ. ಒಟ್ಟು 1.70 ಲಕ್ಷ ರೂ.ಪತ್ತೆಯಾಗಿದ್ದು, ಒಂದೊಂದು ಪಾಕಿಟ್ ನಲ್ಲೂ10 ಸಾವಿರ ರೂ.ಸಿಕ್ಕಿದೆ. ಸೋಮವಾರ ನಡೆಯಲಿರುವ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾರರಿಗೆ ಹಂಚಲು …

Read More »

ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ ಪ್ರಕರಣ – ಮೂವರು ದುಷ್ಕರ್ಮಿಗಳು ವಶಕ್ಕೆ

ಬೆಳಗಾವಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ್ದ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇಶಪಾಂಡೆ ಗಲ್ಲಿಯ ಮೊಹ್ಮದ್ ಶೋಯೆಬ್ ಅಬ್ದುಲ್ ಗಫರ್ ಹಕೀಮ್, ಅಮನ್ ಮೊಕಾಶಿ ಹಾಗೂ ಅರ್ಬಾಜ್ ಮೊಕಾಶಿ ವಶಕ್ಕೆ ಪಡೆಯಲಾದ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೇಶಪಾಂಡೆ ಗಲ್ಲಿಯ ಕಾಂಪ್ಲೆಕ್ಸ್‌ಗೆ ನುಗ್ಗಿ ಹಗ್ಗ ಕಟ್ಟಿ ನೂಪುರ್ ಶರ್ಮಾ ಪ್ರತಿಕೃತಿ ನೇತು …

Read More »

ನಾಳೆ 2 ಪದವೀಧ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ಹಣ ಹಂಚಿಕೆ

ಮಂಡ್ಯ: ನಾಳೆ 2 ಪದವೀಧ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾರರನ್ನು ಓಲೈಸಿಕೊಳ್ಳೋದಕ್ಕಾಗಿ, ಅಭ್ಯರ್ಥಿಗಳು ಹಣ, ಹೆಂಡದ ಹೊಳೆಯನ್ನೇ ಹರಿಸುತ್ತಿರೋದಾಗಿ ತಿಳಿದು ಬಂದಿದೆ. ಮಂಡ್ಯದಲ್ಲಿ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮತದಾರರಿಗೆ 2000 ಸಾವಿರ ರೂ ಹಂಚಿಕೆ ಮಾಡಿರೋದಾಗಿ ತಿಳಿದು ಬಂದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಚುನಾವಣೆಯ ಮತದಾರರಿಗೆ ರೂ.2000 ಹಣವನ್ನು ಕವರ್ ನಲ್ಲಿ ಇರಿಸಿ, ಮತದಾರರಿಗೆ ಹಂಚಿದಂತ ವೀಡಿಯೋ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ …

Read More »

ಪೋಷಕರ ವಿರೋಧದ ಮಧ್ಯೆ ಮದುವೆಯಾದ ನವಜೋಡಿ: ಕಣ್ಣೀರಿಡುತ್ತಾ ಅಪ್ಪನಿಗೆ ಮನವಿ ಮಾಡ್ತಿರುವ ಮಗಳು

ಬಳ್ಳಾರಿ : ಒಂದೇ ಕಾಲೇಜು, ಒಂದೇ ತರಗತಿ, ನಿತ್ಯ ಜೊತೆಗೆ ಓಡಾಟ ಹೀಗಾಗಿ ಈ ಇಬ್ಬರ ಮಧ್ಯೆ ಗೊತ್ತಿಲ್ಲದಯೇ ಪ್ರೀತಿ ಶುರುವಾ ಗಿತ್ತು. ಮೂರು ವರ್ಷಗಳ ಕಾಲ ಪರಸ್ಥರ ಪ್ರೀತಿಸಿದ ಆ ಜೋಡಿ ಪೋಷಕರ ವಿರೋಧದ ಮಧ್ಯೆ ಮನೆ ಬಿಟ್ಟು ಬಂದು ಸಪ್ತಪದಿ ತುಳಿದಿದ್ದಾರೆ. ಆದ್ರೇ ಯುವತಿಯ ಪೋಷಕರ ಭಯದಿಂದ ಇದೀಗ ಆ ಜೋಡಿ ರಕ್ಷಣೆಗಾಗಿ ಪೊಲೀಸ್‌ ಠಾಣೆ ಹಾಗೂ ನ್ಯಾಯಾಲಯದ ಮೇಟ್ಟಿಲೇರಿದ್ದಾರೆ. ಪ್ರತಿ ಸ್ಟೋರಿಯಲ್ಲಿದ್ದಂತೆ ಇಲ್ಲಿಯೂ ಕೂಡ ಯುವತಿಯ ಪೋಷಕರೇ ವಿಲನ್‌ಗಳಾಗಿದ್ದು, …

Read More »

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಜಾರಿ ತರುವ ಮೂಲಕ ಮಹಿಳೆಯರ ಪ್ರಗತಿಗಾಗಿ ಅನೇಕ ಕಾನೂನುಗಳನ್ನು ತಂದರು: ಸತೀಶ್‌ ಜಾರಕಿಹೊಳಿ

ಬಸವಣ್ಣನವರ ಕ್ರಾಂತಿಯಿಂದ 12ನೇ ಶತಮಾನದಲ್ಲೇ ಮಹಿಳೆಯರ ಜೀವನದಲ್ಲಿ ಕೆಲ ಬದಲಾವಣೆಗಳಾದವು, ನಂತರ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಜಾರಿ ತರುವ ಮೂಲಕ ಮಹಿಳೆಯರ ಪ್ರಗತಿಗಾಗಿ ಅನೇಕ ಕಾನೂನುಗಳನ್ನು ತಂದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಪಾಚ್ಛಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾದೇವಿ ಮೆಮೋರಿಯಲ್‌ ನೂತನ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಎಲ್ಲಾ ರಂಗಗಳಲ್ಲಿಯೂ …

Read More »