ಬಾಗಲಕೋಟೆ: ಈ ಊರಲ್ಲಿನ ಅಂತಿಮ ದಿನದಂದು ನಡೆದ ಹೋಳಿಯಾಟ ಅಕ್ಷರಶಃ ರಕ್ತದೋಕುಳಿ ಎಂಬಂತಾಗಿದೆ. ಏಕೆಂದರೆ ಹೋಳಿಯಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಬಾಗಲಕೋಟೆಯಲ್ಲಿ ಮೂರು ದಿನ ಹೋಳಿ ಹಬ್ಬ ಆಚರಣೆ ಇದ್ದು, ಇಂದು ಮೂರನೇ ದಿನ ಹೋಳಿ ಆಡುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಬಣ್ಣ ಎರಚುವ ವಿಚಾರದಲ್ಲಿ ಉಂಟಾದ ಗಲಾಟೆ ಹಲ್ಲೆಯವರೆಗೂ ತಲುಪಿದೆ. ಹೋಳಿಯಾಡುತ್ತಿದ್ದ ಅವಿನಾಶ್ (24) ಮತ್ತು ಬಸವರಾಜ (22) ಈ …
Read More »ಡೀಸೆಲ್ ಬೆಲೆ ಲೀಟರ್ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?
ನವದೆಹಲಿ: ಈ ಹಿಂದೆಯೇ ಸುಳಿವು ಇದ್ದಂತೆ ತೈಲ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಡೀಸೆಲ್ ದರ ಲೀಟರ್ವೊಂದಕ್ಕೆ 25 ರೂಪಾಯಿ ಏರಿದೆ. ಅದಾಗ್ಯೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರು ಚಿಂತೆ ಮಾಡುವಂತಿಲ್ಲ. ಹಾಗಾದರೆ, ಈ ಬೆಲೆ ಏರಿಕೆಯ ಚಿಂತೆ ಯಾರಿಗೆ? ಹೌದು.. ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ 25 ರೂ. ಹೆಚ್ಚಳವಾಗಿದ್ದರೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರಿಗೆ ಅದರ ಬಿಸಿ ಸದ್ಯಕ್ಕಂತೂ ತಟ್ಟುವಂತಿಲ್ಲ. ಏಕೆಂದರೆ ಈ ಬೆಲೆ ಏರಿಕೆ …
Read More »ಭಗ್ನ ಪ್ರೇಯಸಿ ಉಪನ್ಯಾಸಕಿ; ಪ್ರಿಯಕರನ ಮದುವೆ ದಿನವೇ ಆತ್ಮಹತ್ಯೆ!
ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನ ಅತಿಥಿ ಉಪನ್ಯಾಸಕಿಯೊಬ್ಬರು ಪ್ರೇಮವೈಫಲ್ಯದಿಂದ ಮನನೊಂದು ತನ್ನ ಪ್ರಿಯಕರ ಮದುವೆಯಾದ ದಿನವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಭಾನುವಾರ ಬೆಳಗ್ಗೆ ತಮ್ಮ ಮನೆಯ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಏನಿದು ಪ್ರಕರಣ?: ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಕೆಗೆ ವಿನೋಬನಗರದ ನಿವಾಸಿಯಾದ ತನ್ನ ಸಹಪಾಠಿಯೊಂದಿಗೆ ಸ್ನೇಹ ಬೆಳೆದಿತ್ತು. ಆನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಉಂಟಾಗಿತ್ತು. ನಂತರ ಪ್ರಿಯಕರನಿಗೆ …
Read More »38 ಲಕ್ಷ ರೂ. ಬಾಡಿಗೆ ಬಾಬ್ತು ಪಾವತಿಸದ ಜಮೀರ್ ಅಹಮದ್; ಐವರು ಮಾಜಿ ಸಚಿವರಿಂದಲೂ ಬಾಕಿ..
ಬೆಂಗಳೂರು: ರಾಜ್ಯದಲ್ಲಿ ಬಿ.ಝಡ್. ಜಮೀರ್ ಅಹಮದ್ ಖಾನ್ ಸೇರಿ 6 ಮಾಜಿ ಸಚಿವರು ಸರ್ಕಾರದಿಂದ ನೀಡಲಾಗಿದ್ದ ವಸತಿ ಗೃಹಗಳ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಮೂರು ವರ್ಷವಾದರೂ ಪಾವತಿಸಿಲ್ಲ. ರಾಜ್ಯದಲ್ಲಿ ಸಚಿವರಾದವರಿಗೆ ಸರ್ಕಾರದಿಂದ ಆಡಳಿತ ಕಾರ್ಯವೈಖರಿಗೆ ಅನುಕೂಲ ಆಗುವಂತೆ ವಸತಿ ಗೃಹ ನೀಡಲಾಗುತ್ತದೆ. ಕೆಲವರು ಅಧಿಕಾರ ಪೂರ್ಣಗೊಂಡರೂ ವಸತಿ ಮನೆ ಬಿಟ್ಟು ಹೋಗದೇ ಇದ್ದಲ್ಲಿ, ಎಷ್ಟು ದಿನಗಳವರೆಗೆ ಉಳಿದುಕೊಂಡಿರುತ್ತಾರೋ ಅಷ್ಟು ಅವಧಿಗೆ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತು ಪಾವತಿಸಬೇಕು. …
Read More »ಮತ್ತೆ ಬೆಲೆ ಏರಿಕೆಯ ಬರೆ: ದಿನಬಳಕೆ ಗ್ರಾಹಕ ಉತ್ಪನ್ನಗಳು ಶೇ.10 ತುಟ್ಟಿ ಸಾಧ್ಯತೆ
ನವದೆಹಲಿ: ಬೆಲೆ ಏರಿಕೆ ಆಘಾತದಿಂದ ಈಗಾಗಲೇ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಮತ್ತೊಂದು ಸುತ್ತಿನ ದುಬಾರಿ ಬರೆ ಬೀಳುವುದು ಖಚಿತವಾಗಿದೆ. ಸಗಟು ಮತ್ತು ಚಿಲ್ಲರೆ ಮಾರಾಟ ಹಣದುಬ್ಬರದ ದರ ಏರಿಕೆಯಾದ ಬೆನ್ನಲ್ಲೇ ದಿನಬಳಕೆಯ ಶೀಘ್ರ ಬಿಕರಿಯಾಗುವ ಗ್ರಾಹಕ ಸರಕುಗಳ (ಎಫ್ಎಂಸಿಜಿ) ಬೆಲೆಯನ್ನು ಶೇ.10 ಹೆಚ್ಚಿಸಲು ತಯಾರಿಕಾ ಕಂಪನಿಗಳು ಮುಂದಾಗಿವೆ. ಕೆಲವು ಕಂಪನಿಗಳು ಈಗಾಗಲೇ ಏರಿಕೆ ಮಾಡಿಯೂ ಆಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ಕಳೆದ ಜನವರಿಯಲ್ಲಿ ಎಫ್ಎಂಸಿಜಿ …
Read More »ಕೋ-ಜನರೇಷನ್ಗೆ ಬೇಕಿದೆ ನವೀಕರಣ; 62 ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟ!
ಬೆಳಗಾವಿ :ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 72 ಸಕ್ಕರೆ ಕಾರ್ಖಾನೆಗಳ ಪೈಕಿ 60 ಸಕ್ಕರೆ ಕಾರ್ಖಾನೆಗಳು ಕೋಜನರೇಷನ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ನೆರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಠಿಯಿಂದ ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಯುನಿಟ್ಗೆ 5.80 ರೂ. ವಿದ್ಯುತ್ ದರ ನೀಡುತ್ತಲಿದೆ. ಆದರೆ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಕೋ-ಜನರೇಷನ್ ವಿದ್ಯುತ್ ಉತ್ಪಾದನೆಯ …
Read More »ನಾಲ್ಕನೇ ಅಲೆಯಿಂದ ಭಾರತದಲ್ಲಿ ಗಂಭೀರ ಪರಿಣಾಮ ಇಲ್ಲ: ಕಡ್ಡಾಯ ಮಾಸ್ಕ್ ನಿಯಮ ತೆರವಿಗೆ ಸಲಹೆ
ನವದೆಹಲಿ: ಆಗ್ನೇಯ ಏಷ್ಯಾ ಮತ್ತು ಯುರೋಪ್ನ ಕೆಲ ಭಾಗಗಳಲ್ಲಿ ಕೋವಿಡ್ ಸೋಂಕು ಮತ್ತೆ ಅಬ್ಬರಿಸುತ್ತಿದ್ದು ಕಳವಳ ಸೃಷ್ಟಿಸಿರುವುದರ ನಡುವೆ ಭಾರತದಲ್ಲಿ ಹೊಸ ಅಲೆ ಅಪ್ಪಳಿಸಿದರೂ ಗಂಭೀರ ಪರಿಣಾಮ ಬೀರದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಡ್ಡಾಯ ಮಾಸ್ಕ್ ಧಾರಣೆ ನಿಯಮವನ್ನು ಸಡಿಲಿಸಲೂ ಕೆಲವರು ಸಲಹೆ ಮಾಡಿದ್ದಾರೆ. ನೈಸರ್ಗಿಕ ಸೋಂಕಿನ ಕಾರಣದಿಂದ ರೋಗನಿರೋಧಕತೆ (ಇಮ್ಯುನಿಟಿ) ಹೆಚ್ಚಳ ಮತ್ತು ಅಧಿಕ ಲಸಿಕೆ ನೀಡಿಕೆಯಿಂದಾಗಿ ದೇಶದಲ್ಲಿ ಮುಂದೆ ಕರೊನಾ ಅಲೆ ಅಪ್ಪಳಿಸಿದರೂ ಅದು ದೊಡ್ಡ ರೀತಿಯಲ್ಲಿ …
Read More »ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ತಡೆಗೋಡೆ ಬಿರುಕು..! ಯಾವುದೇ ಕ್ಷಣದಲ್ಲಾದರೂ ತಡೆಗೋಡೆ ಬೀಳುವ ಆತಂಕ
ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ತಡೆಗೋಡೆ ಬಿರುಕು ಬಿಟ್ಟಿದೆ. ಯಾವುದೇ ಕ್ಷಣದಲ್ಲಾದರೂ ತಡೆಗೋಡೆ ಬೀಳುವ ಆತಂಕ, ಅಪಾಯ ಇದೆ. 10 ಕಿಲೋ ಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಫ್ಲೈಓರ್ ನ ಮಧ್ಯ ಭಾಗ ಲೇಬೈ ಬಳಿ ಬಿರುಕು ಬಿಟ್ಟಿದೆ. ಕೆಲ ತಿಂಗಳ ಹಿಂದೆ ಇದೇ ಲೇಬೈ ಬಳಿ ಅಪಘಾತವಾಗಿತ್ತು. ಇತ್ತೀಚೆಗೆ ಅಪಘಾತದಲ್ಲಿ ತಡೆಗೋಡೆ ಬಿರುಕುಬಿಟ್ಟಿತ್ತು. ಆದರೆ ತಡೆಗೋಡೆ ದುರಸ್ತಿ ಮಾಡದೆ, ಬಿಇಪಿಟಿಎಲ್ ಸಂಸ್ಥೆ ಹಾಗೆಯೇ ಬಿಟ್ಟಿದೆ. ಗೋಡೆ ಬದಲಿಗೆ ಬ್ಯಾರಿಕೇಡ್ …
Read More »ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ‘Y’ ಶ್ರೇಣಿಯ ಭದ್ರತೆ: ಸಿಎಂ
ಬೆಂಗಳೂರು: ಹಿಜಾಬ್ ಪ್ರಕರಣದ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಿದ್ದು, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಾಧೀಶರ ಮೇಲೆ ಬೆದರಿಕೆ …
Read More »ಪೊಲೀಸ್ ಪೇದೆಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ.!
ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸಪ್ಪನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಹಾಗೂ ಒಬ್ಬ ವ್ಯಕ್ತಿ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆ ತನ್ನ ಚಪ್ಪಲಿಯಿಂದ ಪೊಲೀಸಪ್ಪನಿಗೆ ಹೊಡೆದಿದ್ದಾರೆ. ಪೊಲೀಸ್ ಮಹಿಳೆಯನ್ನು ದೂರ ತಳ್ಳುವುದು ಮತ್ತು ವ್ಯಕ್ತಿಯನ್ನು ಲಾಠಿಯಿಂದ ಥಳಿಸುವುದು ಕೂಡ ವಿಡಿಯೋದಲ್ಲಿ ಕಾಣಿಸಿದೆ. ಮಹಿಳಾ ಸಿಬ್ಬಂದಿ …
Read More »