ಮುಂಬೈ: ಮಹಾರಾಷ್ಟ್ರದಲ್ಲಿ ಆಜಾನ್ ಮತ್ತು ಹನುಮಾನ್ ಚಾಲೀಸಾ ವಿವಾದ ತಾರಕಕ್ಕೇರಿದೆ. ಧ್ವನಿವರ್ಧಕಗಳನ್ನು ಬಳಸುವ ಕುರಿತು ಸುಪ್ರೀಂಕೋರ್ಟ್ ಏನು ಆದೇಶ ಹೊರಡಿಸಿದೆಯೋ ಅದನ್ನು ಪಾಲನೆ ಮಾಡದಿದ್ದರೆ ಆಜಾನ್ ಕೇಳಿಸುವ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ನಿನ್ನೆ (ಮೇ 3) ಕರೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಬಹಿರಂಗ ಪತ್ರ ಬರೆದಿದ್ದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 …
Read More »ಗೋವಾದಲ್ಲಿ ಯಶ್: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್?
ಬೆಂಗಳೂರು: ಕೆಜಿಎಫ್-2 ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಈ ನಟ, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಯಶ್ ದಂಪತಿ ಗೋವಾಕ್ಕೆ ಭೇಟಿ ಕೊಟ್ಟ ಬಳಿಕ ಆಗಿರುವ ಬೆಳವಣಿಗೆ ಹಾಗೂ ಈಚೆಗೆ ಜ್ಯೋತಿಷಿ ನುಡಿದಿರುವ ಭವಿಷ್ಯ! ಯಶ್ ಮತ್ತು ರಾಧಿಕಾ ಗೋವಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ …
Read More »ಪ್ರಿಯಕರ ಸೇರಿ 9 ಜನರಿಂದ ಪ್ರೇಯಸಿಯ ಪತಿ ಹತ್ಯೆ
ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಪತಿಯನ್ನು ಕೊಲೆಗೈದಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ 9 ಮಂದಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಾಲೇಔಟ್ ನಿವಾಸಿಗಳಾದ ನದೀಂ ಅಹಮದ್ (23), ಶಬ್ಬೀರ್ ಹುಸೇನ್ (23), ಮೊಹಮ್ಮದ್ ಶಫೀ (23), ತಬ್ರೇಜ್ ಪಾಷಾ (23), ತನ್ವೀರ್ ಪಾಷಾ (21), ಹನನ್ ಪಾಷಾ (20), ಮೊಹಮ್ಮದ್ ಮುಬಾರಕ್ (21) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಲಾಗಿದೆ. ಆರೋಪಿಗಳು ಮೇ 2ರಂದು ಜೋಹೆಬ್ ಅಬ್ರಾಹಂ …
Read More »4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆ ಮಾತನಾಡಿದ ಬೊಮ್ಮಾಯಿ,
ಬೆಂಗಳೂರು: ದೆಹಲಿಗೆ ತೆರಳಿದ ನಂತರ ಸಂಪುಟ ವಿಸ್ತರಣೆ ಬಗ್ಗೆ ಅಲ್ಲಿ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆ ಮಾತನಾಡಿದ ಬೊಮ್ಮಾಯಿ, ಇದು ಕೇವಲ ಮಾಧ್ಯಮಗಳಿಂದ ಬಂದ ವಿಚಾರ ಅಷ್ಟೇ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Read More »ಹಿರಿಯ ರಂಗ ಕಲಾವಿದೆ ಲಕ್ಷ್ಮೀ ಬಾಯಿ ಏಣಗಿ ನಿಧನ
ಧಾರವಾಡ: ಪ್ರಸಿದ್ದ ರಂಗ ಕಲಾವಿದೆ ಹಾಗೂ ದಿ. ಏಣಗಿ ಬಾಳಪ್ಪ ಅವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮಿಬಾಯಿ ಬಾಳಪ ಏಣಗಿ (96) ಮಂಗಳವಾರ ಇಲ್ಲಿನ ರಜತಗಿರಿ ನಿವಾಸದಲ್ಲಿ ನಿಧನರಾದರು. ಅವರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 2:೦೦ ಗಂಟೆಗೆ ಹೋಸಯಲಾಪೂರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರನಟ ದಿ. ನಟರಾಜ ಏಣಗಿ ಹಾಗೂ ಓರ್ವಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. 1940-50 ರ …
Read More »ಪಿಎಸ್ಐ ಪರೀಕ್ಷೆ ಅಕ್ರಮ: ಸ್ಫೋಟಕ ಅಂಶ ಬಯಲು ಮಾಡಿದ ಹೆಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ: ಇಡೀ ದೇಶದ ಗಮನ ಸೆಳೆದಿರುವ ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸ್ ಇಲಾಖೆಯಿಂದಲೇ ಬಯಲಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಈ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕೊಲೆ ನಂತರ ನಡೆದ ಬೆಳವಣಿಗೆಗಳಿಗೂ ಈ ಪರೀಕ್ಷೆ ಅಕ್ರಮ ಬಯಲಾಗುವುದಕ್ಕೂ ಲಿಂಕ್ ಇದೆ” ಎಂದರು. ಚಂದ್ರು ಎಂಬ ಯುವಕನ ಕೊಲೆ ಪ್ರಕರಣದ …
Read More »ಪಿಎಸ್ ಐ ನೇಮಕ ಹಗರಣ: ನ್ಯಾಯಾಂಗ ತನಿಖೆ ನಡೆಸಬೇಕು: ಸಿದ್ದರಾಮಯ್ಯ
ಬೆಂಗಳೂರು: ಪಿಎಸ್ ಐ ವರ್ಗಾವಣೆ ಆರೋಪಿಗಳು ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಸರಕಾರ ಸಾಮಾನ್ಯ ಜನಪೀಡಕ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿಗಳಾದ ದರ್ಶನ ಗೌಡ ಹಾಗೂ ನಾಗೇಶ್ ಗೌಡ ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಕಾರಣಕ್ಕಾಗಿ ಅವರನ್ನು ಬಿಟ್ಟುಕಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಅಶ್ವತ್ಥನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ …
Read More »ಬಸವ ಜಯಂತಿಯಂದೇ ಬಸವಣ್ಣನಿಗೆ ಅಪಮಾನ!
ವಿಜಯಪುರ: ಬಸವ ಜಯಂತಿಯಂದೇ ಜಗಜ್ಯೋತಿ ಬಸವಣ್ಣನಿಗೆ ಅಪಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಗಜ್ಯೋತಿ ಬಸವೇಶ್ವರ ದಿನಾಚಾರಣೆಯನ್ನು ವಿಜಯಪುರದಲ್ಲಿ ಆದ್ಧೂರಿಯಾಗಿ ಆಚರಿಸಲಾಯಿತು. ನಗರದ ಬಸವೇಶ್ವರರ ಮೂರ್ತಿ ಎದುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಎಸ್ಪಿ ಆನಂದ ಕುಮಾರ ಸೇರಿದಂತೆ ಹಲವರು ಭಾಗಿ ಆಗಿದ್ದರು. ಇದೆ ವೇಳೆ ಬಸವೇಶ್ವರರಿಗೆ ಅಪಮಾನ ಮಾಡಿದ ಘಟನೆ ಕೂಡ ನಡೆಯಿತು.ಸಂಸದ ರಮೇಶ ಜಿಗಜಿಣಗಿ ಶೂ ಧರಿಸಿ ಪೂಜೆಯಲ್ಲಿ ಪಾಲ್ಗೊಂಡರು. …
Read More »ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು
ಹಾವೇರಿ: ಬಸವ ಜಯಂತಿ ಪ್ರಯುಕ್ತ ನಡೆದ ಎತ್ತುಗಳ ಮೆರವಣಿಗೆ ವೇಳೆ ಸವಣೂರು ತಾಲೂಕಿನ ಗ್ರಾಮದಲ್ಲಿ ಯುವಕನೊಬ್ಬ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ. ಮಂಗಳವಾರ ರಾತ್ರಿ ಕಾರಡಗಿ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಎತ್ತುಗಳ ಮೇಲೆ ಖಾಜಾಮುದ್ದೀನ್ ಕೋಲ್ಕಾರ(29) ಎಂಬಾತ ಚಪ್ಪಲಿ ತೂರಿದ್ದಾನೆ. ಚಪ್ಪಲಿ ತೂರಿದ್ದಕ್ಕೆ ಆಕ್ರೋಶಗೊಂಡ ಜನರು ಯುವಕನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್ನನ್ನು ವಶಕ್ಕೆ ಪಡೆದಿದ್ದಾರೆ.
Read More »ಆಮೆಗತಿಯಲ್ಲಿ ಸಾಗುತ್ತಿದೆ ಚಿಕ್ಕೋಡಿಯ ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ
ಅಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ 100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಕಟ್ಟಲಾಗುತ್ತಿದೆ. ಎರಡೂ ವರ್ಷ ಮುಂಚೆಯೇ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ… ಸದ್ಯ ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..ಬೇಗನೆ ಕಾಮಗಾರಿ ಮುಗಿಸುವಂತೆ ಒತ್ತಾಯಿಸುತ್ತಿದ್ದಾರೆ.ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ 20 ಕೋಟಿ ಅನುದಾನ ನೀಡಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಬಾಣಂತಿ ಕೋಡಿ ರಸ್ತೆ ಪಕ್ಕದಲ್ಲಿ ನಿರ್ಮಾಣ ವಾಗುತ್ತಿರುವ ತಾಯಿ …
Read More »
Laxmi News 24×7