ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಹಾಡುಹಗಲೆ ವೃದ್ದೆಯೊಬ್ಬರ ಕೊರಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ಕನಕರತ್ನ ಎಂಬ ವೃದ್ದೆ ಚಿನ್ನದ ಸರ ಕಳೆದುಕೊಂಡವರು. ಅದು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಸರವಾಗಿದೆ. ಗಂಗಾವತಿ ಇಂದ ಬಾಪಿರೆಡ್ಡಿ ಕ್ಯಾಂಪ್ ಗೆ ಹೊರಟಿದ್ದಾಗ, ಬಸ್ ನಿಲ್ದಾಣದಲ್ಲಿ ಕನಕರತ್ನ ಅವರ ಚಿನ್ನದ ಸರವನ್ನು ಕಳ್ಳರು ಎಗುರಿಸಿದ್ದಾರೆ. ಗಂಗಾವತಿ …
Read More »ಮೃತ ಸತೀಶ್ ಪಾಟೀಲ್ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ
ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ಗುಂಪು ಘರ್ಷಣೆ ವೇಳೆ ಸತೀಶ್ ಪಾಟೀಲ್(Satish Patil)ಹತ್ಯೆ ಪ್ರಕರಣ ಹಿನ್ನೆಲೆ ಕೊಲೆಯಾದ ಸತೀಶ್ ಪಾಟೀಲ್ ಮನೆಗೆ ಸ್ಥಳೀಯ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಸತೀಶ್ ಪತ್ನಿ, ತಾಯಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರ ಭೇಟಿ ಬಳಿಕ ಗ್ರಾಮದ ಮಹಿಳೆಯರ ಅಹವಾಲು ಆಲಿಸಿದ ಸತೀಶ್, ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡಿಸುವಂತೆ ಮನವಿ ಮಾಡಿದರು. ಗ್ರಾಮದಲ್ಲಿ ಕೊಲೆ ಆರೋಪಿಗಳ ದಬ್ಬಾಳಿಕೆ ಬಗ್ಗೆಯೂ ಮಹಿಳೆಯರು ಹೇಳಿದ್ದು, ಕೋರ್ಟ್ …
Read More »ಶಿವಸೇನೆಯ 42ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದ ಪತನ ಬಹುತೇಕ ಸನ್ನಿಹಿತವಾಗಿದೆ. ಶಿವಸೇನೆಯ 42 ಶಾಸಕರು ಏಕನಾಥ ಶಿಂಧೆ (Eknath Shinde) ನೇತೃತ್ವದ ಬಂಡುಕೋರರ ಬಣಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ (CM Uddhav Thackeray) ಬೆಂಬಲಕ್ಕೆ ನಿಂತ ಶಾಸಕರ ಸಂಖ್ಯೆ ಕೇವಲ 13ಕ್ಕೆ ಇಳಿದಿದೆ. ಶಿವಸೇನೆಯ ಮತ್ತಷ್ಟು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ …
Read More »ರಾಜ್ಯವೇ ಬೆಚ್ಚಿ ಬಿಳಿಸಿದ್ದ ಬೆಳಗಾವಿ ನಗರದ ತ್ರಿವಳಿ ಕೊಲೆಆರೋಪಿ ನಿರ್ದೋಷಿ: ಧಾರವಾಡ ಹೈಕೋರ್ಟ್
ಬೆಳಗಾವಿ: ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದ್ದ ಕುವೆಂಪು ನಗರದ ತ್ರಿವಳಿ ಕೊಲೆ)ಆರೋಪಿ ಪ್ರವೀಣ್ ಭಟ್ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಅಂತಾ ತೀರ್ಪು ನೀಡಿದೆ. ತ್ರಿವಳಿ ಕೊಲೆ ಪ್ರಕರಣವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ತಾಯಿ ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ ಯುವಕ. ಈ ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ. ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ …
Read More »ಪಿಎಂ ಬಂದರೆ ಅವರನ್ನು ಮೆಚ್ಚಿಸಲು ರಸ್ತೆ ಸರಿ ಮಾಡ್ತೀರಾ ಎಂದು ಉಲ್ಲೇಖಿಸಿ ಬಿಡಿಎಗೆ ಹೈಕೋರ್ಟ್ ತರಾಟೆ
ಬೆಂಗಳೂರು: ಬೆಂಗಳೂರಿನ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಕ್ರಮ ಕೈಗೊಳ್ಳದ ಬಿಡಿಎಗೆ(BDA) ಹೈಕೋರ್ಟ್(High Court) ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶಕ್ಕೆ ಬಿಡಿಎ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಆಗಾಗ ಪ್ರಧಾನಮಂತ್ರಿ(PM Narendra Modi) ಬಂದರೆ ರಸ್ತೆಗಳು ಸರಿಹೋಗಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಆಗಾಗ ಪಿಎಂ, ರಾಷ್ಟ್ರಪತಿ ಬಂದ್ರೆ ರಸ್ತೆ ಉತ್ತಮಗೊಳ್ಳಬಹುದು. ಮೊನ್ನೆ 23 ಕೋಟಿ ಖರ್ಚು ಮಾಡಿ ಗುಂಡಿ ಮುಚ್ಚಿದ್ದೀರಾ. ಪ್ರತಿಬಾರಿ ಬೇರೆ ಬೇರೆ ಮಾರ್ಗವಾಗಿ ಪಿಎಂ …
Read More »ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿ
ಎರಡು ದಿನಗಳ ಕರ್ನಾಟಕ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಮೈಸೂರಿಗೆ ಮೂರ್ನಾಲ್ಕು ಬಾರಿ ಆಗಮಿಸಿದ್ದರೂ, ಚಾಮುಂಡಿ ಬೆಟ್ಟಕ್ಕೆ ಮೋದಿ ಇದೇ ಮೊದಲ ಬಾರಿ ಭೇಟಿ ನೀಡಿದ್ದರು. ದೇವಾಲಯದಲ್ಲಿ ಸುಮಾರು ಹದಿನೈದು ನಿಮಿಷ ಪ್ರಾರ್ಥನೆ ಸಲ್ಲಿಸಿದ್ದ ಮೋದಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ದೇವಾಲಯಕ್ಕೆ ಹಲವು ಗಣ್ಯರು ಭೇಟಿ ನೀಡಿದ್ದಾರೆ, ಆದರೆ ಮೋದಿಯವರಷ್ಟು ಸರಳತೆಯ ವ್ಯಕ್ತಿತ್ವವನ್ನು ನಾವು …
Read More »ಬೆಳಗಾವಿ ಗಡಿ ಗಲಾಟೆಯಲ್ಲಿ ಏಕನಾಥ ಶಿಂಧೆ 40 ದಿನ ಜೈಲಿನಲ್ಲಿದ್ದ ಶಿವಸೈನಿಕ
ಮಹಾರಾಷ್ಟ್ರದ ಮಹಾ ಆಘಾಡಿ ಸರಕಾರ ಪತನದ ಅಂಚಿಗೆ ತಲುಪಿರುವಂತೆ ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರೇ ಏಕನಾಥ ಶಿಂಧೆ. ಒಂದು ಕಾಲದ ಹಾರ್ಡ್‌ಕೋರ್ ಶಿವಸೈನಿಕ, ಬಾಳಾ ಸಾಹೇಬ್ ಠಾಕ್ರೆ ಅವರ ಕಟ್ಟಾ ಬೆಂಬಲಿಗ, ನಾಲ್ಕು ಅವಧಿಯ ಶಾಸಕ, ಕಾರ್ಪೊರೇಟರ್, ಸ್ಥಳೀಯ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕ… ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಸರಕಾರ ಮಾಡಿದಾಗ ಲಿಂದಲೂ, ತೀರಾ ಅಸಹನೆಯಲ್ಲಿದ್ದ ಶಿವಸೇನೆಯ ಹಿರಿಯ ನಾಯಕ, ಸದ್ಯ ಪಕ್ಷದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಅಷ್ಟೇ …
Read More »ಮಹಾರಾಷ್ಟ್ರ ಹೈಡ್ರಾಮಾ; ಕಾರಿನಿಂದ ಎಸ್ಕೇಪ್ ಆಗಿ ಟ್ರಕ್‌ನಲ್ಲಿ ಲಿಫ್ಟ್ ಪಡೆದು 4 ಕಿಮೀ ನಡೆದ ಶಾಸಕ..!
ಮಹಾರಾಷ್ಟ್ರ ರಾಜಕೀಯ ರೋಚಕ ಘಟ್ಟ ತಲುಪಿದ್ದು, ಒಂದು ಚಲನಚಿತ್ರಕ್ಕಾಗುವಷ್ಟು ಸರಕು ಕೂಡ ಇದೆ. ಶಿವಸೇನಾ, ಕಾಂಗ್ರೆಸ್ ನೇತೃತ್ವದ ಅಘಾಡಿ ಸರ್ಕಾರ ಅಲುಗಾಡುತ್ತಿದ್ದು, ಶಿವಸೇನೆಯಲ್ಲಿ ಮಹಾ ಬಿರುಕು ಉಂಟಾಗಿದೆ. ಈ ನಡುವೆ ಬಂಡಾಯಗಾರರ ಜತೆ ಗುರುತಿಸಿಕೊಂಡಿದ್ದ ಶಾಸಕರೊಬ್ಬರು ತಮ್ಮನಾಯಕನಿಗೆ ನಿಷ್ಠೆ ತೋರಿಸಲು ಸಾಹಸ ಮಾಡಿದ್ದಾರೆ. ಏಕನಾಥ್ ಶಿಂಧೆ ಜೊತೆಗಿದ್ದ ಶಾಸಕರೊಬ್ಬರು ಗುಜರಾತ್‌ನಿಂದ ಎದ್ದೆನೋ ಬಿದ್ದೆನೋ ಎಂದು ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಮರಳಿದ್ದಾರೆ. ಶಿಂಧೆ ಅವರು ಭೇಟಿಯಾಗಲು ಬಯಸುತ್ತಾರೆ ಎಂಬ ನೆಪದಲ್ಲಿ ಗುಜರಾತ್‌ಗೆ …
Read More »ರಾಜ್ಯದ ‘ಸರ್ಕಾರಿ ಜಮೀನು’ಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದ ‘ರೈತ’ರಿಗೆ ಗುಡ್ ನ್ಯೂಸ್
ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಮತ್ತೆ ರಾಜ್ಯ ಸರ್ಕಾರ ಕಾಲಾವಕಾಶ ವಿಸ್ತರಿಸಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ -1964ರ ಕಲಂ 94(ಎ)ರನ್ವಯ ಅವಕಾಶ ನೀಡಲಾಗಿದೆ. ನಮೂನೆ-57ರಲ್ಲಿ ಅರ್ಜಿಗಳನ್ನು ಸಲ್ಲಿಸಲು …
Read More »ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ
ಮುಂಬೈ: ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಳ್ಳುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ರಣಾವತ್ ಕಿಡಿಕಾರಿದ್ದರು. ಈ ತಿಕ್ಕಾಟ ಜೋರಾದ ಸಮಯದಲ್ಲೇ ಕಂಗನಾ ರಣಾವತ್ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಈ ಹಿಂದೆ ಬಿಎಂಸಿ ಮನೆಯನ್ನು ಕೆಡವಿತ್ತು. ಇದಕ್ಕೆ ಅಂದು ತಿರುಗೇಟು ಕೊಟ್ಟಿದ್ದ ನಟಿ, ನೆನಪಿರಲಿ ಉದ್ಧವ್ …
Read More »
Laxmi News 24×7