Breaking News

ಕೆಲಸದಲ್ಲಿ ನಿರಾಸಕ್ತಿ: ಯುಪಿ ಪೊಲೀಸ್ ಮುಖ್ಯಸ್ಥರನ್ನೇ ಹುದ್ದೆಯಿಂದ ವಜಾ ಮಾಡಿದ ಯೋಗಿ ಆದಿತ್ಯನಾಥ!

ಲಖನೌ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕೆಲಸದಲ್ಲಿ ನಿರಾಸಕ್ತಿ, ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದುದ್ದರಿಂದ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಯೋಗಿ ಸರ್ಕಾರದ ಆದೇಶದಲ್ಲಿ ಹೇಳಿದೆ.   ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯೆಲ್ ಅವರನ್ನು ಅತ್ಯಲ್ಪ ಹುದ್ದೆಗೆ ಇಳಿಸಿದ್ದು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ. 1987ರ ಬ್ಯಾಚ್ ಐಪಿಎಸ್ ಅಧಿಕಾರಿ ಮುಕುಲ್ ಗೋಯೆಲ್ ಅವರು 2021ರ ಜುಲೈನಲ್ಲಿ ರಾಜ್ಯದ ಉನ್ನತ ಪೋಲೀಸ್ ಆಗಿ …

Read More »

ಮೋದಿ‌ ನಾಯಕತ್ವದ ಚುನಾವಣೆ ಗೆದ್ದಂಗೆ : ಕರಡಿ ಸಂಗಣ್ಣ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರ ನಾಯಕತ್ವ ನಂಬಿಕೊಂಡರೆ ಚುನಾವಣೆ ಗೆದ್ದಂಗೆ ಎಂದು ವ್ಯಂಗ್ಯವಾಡಿದ್ದಾರೆ.   ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮವಾಗಲಿ ರಾಷ್ಟ್ರೀಯ ನಾಯಕರ ಫೋಟೋಗಳನ್ನು ಹಾಕುತ್ತಾರೆ. ಎಲ್ಲಿಯೇ ನಡೆದರೂ ಅವರ ಫೋಟೋಗಳಿರುತ್ತವೆ. ಇದನ್ನು ಯಾರು ಹೇಳಿದ್ದಾರೋ ಏನೋ ಗೊತ್ತಿಲ್ಲ. ಹಾಕಿಕೊಳ್ಳಲಿ ಅದರಲ್ಲಿ ತಪ್ಪೇನು ಇಲ್ಲ. ಆದರೆ ಅದಕ್ಕೆಂದು ಒಂದು ನೀತಿ, ನಿಯಮ ಇರುತ್ತೆ ಅಲ್ಲವಾ. …

Read More »

ಡಿಕೆಶಿಗೆ ‘ಡಿಚ್ಚಿಕೊಟ್ಟ’ ಮಾಜಿ ಸಂಸದೆ ರಮ್ಯಾ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ, ಈ ನಡುವೆ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬ ಕಾರಣಕ್ಕೆ ಅಶ್ವತ್ಥ ನಾರಾಯಣ ಅವರು ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ ಅಂಥ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಈ ನಡುವೆ ಈ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್‌ನಲ್ಲಿ …

Read More »

ಬಿಜೆಪಿ ಕಾರ್ಯಕರ್ತ ಧರ್ಮಸ್ಥಳದಲ್ಲಿ ನಿಧನ

ಬೆಳ್ತಂಗಡಿ : ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾಮಂದಿರದ ಮಾಲೀಕರಾಗಿರುವ ಡಾ. ನರೇಂದ್ರ ಕುಮಾರ್(45) ಧರ್ಮಸ್ಥಳದಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ಯಲಹಂಕ ಮತ್ತು ಬಂಡಿಕೊಡಿಗೆಹಳ್ಳಿಯಲ್ಲಿರುವ ಶ್ರೀ ಜ್ಞಾನಕ್ಷಿ ವಿದ್ಯಾ ಮಂದಿರದ‌ ಮಾಲೀಕ ಹಾಗೂ ಬೆಂಗಳೂರು ಉತ್ತರ ವಲಯದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ನರೇಂದ್ರ ಕುಮಾರ್(45) ನಿನ್ನೆ ಬೆಂಗಳೂರಿನಿಂದ ತಮ್ಮ ಶಾಲೆಯ ಶಿಕ್ಷಕಿಯರನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ತರಬೇತಿಗಾಗಿ ತಮ್ಮ ಪತ್ನಿ …

Read More »

ಹಣ ಜಮಾ, ವಿತ್ ಡ್ರಾ ಗೆ ಆಧಾರ್, ಪಾನ್ ಕಡ್ಡಾಯ;

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೊಸ ಅಧಿಸೂಚನೆ ಹೊರಡಿಸಿದ್ದು, 20 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟು ಹೆಚ್ಚಿನ ಮೊತ್ತವನ್ನು ವಿತ್ ಡ್ರಾ ಮಾಡಲು ಅಥವಾ ಜಮಾ ಮಾಡಲು ಆಧಾರ್ ಕಾರ್ಡ್ ಇಲ್ಲವೇ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.   ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳ ಮೂಲಕ ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವ್ಯಕ್ತಿ ಅಥವಾ …

Read More »

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ.   ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ …

Read More »

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಎಐಡಿಎಸ್‌ಒ ಸಂಘಟನೆ ಆಗ್ರಹಿಸಿದೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಆರೋಪಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಡಿಎಸ್‌ಒ ಮುಖಂಡ ಕಲ್ಯಾಣಕುಮಾರ್, ಇತ್ತೀಚಿಗೆ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳು ಸೋರಿಕೆಯಾಗಿದ್ದವು. ಅದರ ಬೆನ್ನಲ್ಲೇ ಇದೀಗ ಇಂಗ್ಲೀಷ್ ಮತ್ತು …

Read More »

ರೈತರ ಸಾಲ ಮನ್ನಾ ಮಾಡದೇ ಇದ್ದಿದ್ದರೆ ಎಂಟು ಸಾವಿರ ಕೋಟಿ ರೂ. ಕಮಿಷನ್ ಸಿಗುತ್ತಿತ್ತು. ಬಿಜೆಪಿ, ಕಾಂಗ್ರೆಸ್​ಗಿಂತ ಚೆನ್ನಾಗಿ ಚುನಾವಣೆ ಮಾಡಬಹುದಿತ್ತು: H.D.K.

ಬೆಂಗಳೂರು : ನಾನು 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡದೇ ಇದ್ದಿದ್ದರೆ ಎಂಟು ಸಾವಿರ ಕೋಟಿ ರೂ. ಕಮಿಷನ್ ಸಿಗುತ್ತಿತ್ತು. ಬಿಜೆಪಿ, ಕಾಂಗ್ರೆಸ್​ಗಿಂತ ಚೆನ್ನಾಗಿ ಚುನಾವಣೆ ಮಾಡಬಹುದಿತ್ತು ಎಂದು 40% ಕಮಿಷನ್‌ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದರು. ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡದೇ ಇದ್ದಿದ್ದರೆ ಎಂಟು ಸಾವಿರ ಕೋಟಿ ರೂ. …

Read More »

ಶರದ್‌ಪವಾರ್ ಭಾಷಣಕ್ಕೆ ಅಡ್ಡಿಪಡಿಸಿದ ಎಂಇಎಸ್ ಪುಂಡರು

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎದುರೇ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮರಾಠಾ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿದ್ದಾರೆ. ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶರದ್ ಪವಾರ್, ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದರು. …

Read More »

ತಡರಾತ್ರಿ ಬೈಕ್​ನಲ್ಲಿ ಮಹಿಳೆ ಶವ ಸಾಗಿಸುವಾಗ ರಾಮನಗರ ಡಿಸಿ ಕಚೇರಿ ಎದುರೇ ಅಪಘಾತ!

ರಾಮನಗರ: ಅವರವರ ಕರ್ಮಕ್ಕೆ ತಕ್ಕ ಪ್ರತಿಫಲವನ್ನ ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು, ಇನ್ನು ಕೆಲವರಿಗೆ ತಕ್ಷಣವೇ ಕರ್ಮಫಲ ದೊರೆಯುತ್ತದೆ ಎಂಬ ಮಾತು ಅಕ್ಷರಶಃ ಈ ಪ್ರಕರಣಕ್ಕೆ ಸಾಕ್ಷಿ. ಮಹಿಳೆಯೊಬ್ಬರನ್ನ ಕೊಲೆ ಮಾಡಿ ಶವವನ್ನು ತಡರಾತ್ರಿ ಬೈಕ್​ನಲ್ಲಿ ಶವ ಸಾಗಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರೇ ಆ ಬೈಕ್​ ಅಪಘಾತಕ್ಕೀಡಾಗಿದ್ದು, ಕೊಲೆ ರಹಸ್ಯ ಬಯಲಾಗಿದೆ!   ಇಂತಹ ಭಯಾನಕ ಘಟನೆ ರಾಮನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಶ್ವೇತಾ ಕೊಲೆಯಾದಾಕೆ. ಬೆಂಗಳೂರಿನ …

Read More »