ಮುಂಬೈ: ನಟಿ, ರೂಪದರ್ಶಿ ಮಲೈಕಾ ಅರೋರಾ ಶನಿವಾರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಮಧ್ಯಾಹ್ನ ಪುಣೆಯಲ್ಲಿ ನಡೆದ ಫ್ಯಾಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಮಲೈಕಾ ಕಣ್ಣಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ಅಪಘಾತದಲ್ಲಿ ಗಾಯಗೊಂಡ ನಟಿಯನ್ನು ಮುಂಬೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟಿಗೆ ಹೆಚ್ಚಿನ ತೊಂದರೆಗಳಾಗಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಲೈಕಾ ಸಹೋದರಿ ಅಮೃತಾ ಅರೋರಾ ತಿಳಿಸಿದ್ದಾರೆ.ಮಲೈಕಾ ಪುಣೆಯಲ್ಲಿ ನಡೆದ …
Read More »ಜಮೀನಿಗಾಗಿ ಸಹೋದರರ ಸವಾಲ್ – ಎರಡು ಗುಂಪುಗಳ ನಡುವೆ ಮಾರಾಮಾರಿ
ಚಿತ್ರದುರ್ಗ: ಜಮೀನು ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿಯಾಗಿದ್ದು, ಪೊಲೀಸರ ಎದುರಲ್ಲಿಯೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಸೋದರ ಸಂಬಂಧಿಗಳಾಗಿರುವ ಚಿತ್ತಣ್ಣ ಹಾಗೂ ಕುಂಟಪ್ಪನ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಸರ್ವೆ ಮಾಡಿಸಿ, ಇಬ್ಬರು ಮಕ್ಕಳಿಗೂ ಸಮವಾಗಿ ಹಂಚುವಂತೆ ತಿಳಿಸಿದ್ದರು. ಆದರೆ ಗಲಾಟೆಯಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಲು …
Read More »ಒಂದು ಕಪ್ ಚಹಾ 100 ರೂಪಾಯಿ ಎಲ್ಲಿ ಗೊತ್ತಾ ಈ ಸ್ಟೋರಿ ನೋಡಿ
ಕೊಲಂಬೋ: ಭಾರತದ ನೆರೆಯ ಪುಟ್ಟ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ನಿಯಂತ್ರಣವನ್ನು ತಪ್ಪಿದೆ. ಥಾಮಸ್ ಹೆಸರಿನ 69 ವರ್ಷದ ವ್ಯಕ್ತಿ ಇಂಡಿಯಾ ಟುಡೆಗೆ ಲಂಕಾ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು, ಅಲ್ಲಿನ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಪೆಟ್ರೋಲ್ ಲಭ್ಯವಾಗುತ್ತಿಲ್ಲ. ಮೆಡಿಶಿನ್ ಪಡೆಯುವುದು ಕಷ್ಟಕರವಾಗಿದೆ. ಅಗತ್ಯ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ಸದ್ಯದ ಕ್ಷಣದಲ್ಲಿ ನಮಗೆ ಯಾವುದೇ ಗ್ಯಾಸ್ ಸೌಲಭ್ಯ ಸಿಕ್ಕಿಲ್ಲ. ಮೆಡಿಶಿನ್ ಇಲ್ಲ. ನನ್ನ ವಯಸ್ಸು 69 ಆದರೆ, ನನ್ನ ಜೀವನದಲ್ಲಿ ಇದೇ …
Read More »ಹಲಾಲ್-ಜಟ್ಕಾ ಮಧ್ಯ ಇಲ್ಲಿ ಗುಡ್ಡೆ ಮಾಂಸದ್ದೇ ಸದ್ದು; ಹೊಸ ತೊಡಕಿಗೆ ತೊಡಕಿಲ್ಲ..
ಮಂಡ್ಯ: ಯುಗಾದಿ ಹಬ್ಬದ ಮರುದಿನ ಹಲವೆಡೆ ಹೊಸತೊಡಕು ಎಂದು ಆಚರಿಸುತ್ತಾರೆ. ಆ ದಿನ ಭರ್ಜರಿ ಮಾಂಸದಡುಗೆ ಮಾಡಿ ಸವಿಯುತ್ತಾರೆ, ಇನ್ನು ಕೆಲವೆಡೆ ಮೋಜಿಗಾಗಿ ಇಸ್ಪೀಟ್ನಂಥ ಆಟವೂ ನಡೆಯುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಮಾಂಸಕ್ಕೆ ಸಂಬಂಧಿಸಿದಂತೆ ಹಲಾಲ್-ಜಟ್ಕಾ ಸಂಘರ್ಷ ಉಂಟಾಗಿದ್ದು, ನಾಳೆ ಹೊಸ ತೊಡಕಿಗೆ ಯಾರಿಗೆ ಹೆಚ್ಚು ವ್ಯಾಪಾರ, ಯಾರು ಎಲ್ಲಿ ಮಾಂಸ ಖರೀದಿಸಲಿದ್ದಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಈ ಮಧ್ಯೆ ಮಂಡ್ಯದಲ್ಲಿ ಗುಡ್ಡೆ ಮಾಂಸಕ್ಕೆ ಭರ್ಜರಿ ಬೇಡಿಕೆ ಉಂಟಾಗಿದೆ. …
Read More »ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಗೌತಮ್ ಈಗ ಏಷ್ಯಾದ ಅತಿ ಶ್ರೀಮಂತ..
ಮುಂಬೈ: ಅದಾನಿ ಗ್ರೂಪ್ನ ಚೇರ್ಮನ್ ಗೌತಮ್ ಅದಾನಿ ಇದೀಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ನ ಚೇರ್ಮನ್ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಹೊಸ ಪಟ್ಟಿ ಪ್ರಕಾರ ಗೌತಮ್ ಅದಾನಿಯ ಒಟ್ಟು ಆಸ್ತಿ 10,000 ಕೋಟಿ (100 ಬಿಲಿಯನ್) ಡಾಲರ್ ಆಗಿದ್ದು, ಈ ಮೂಲಕ ಅವರು ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಟಾಪ್-10 ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಮುಖೇಶ್ ಅಂಬಾನಿ 9,900 ಕೋಟಿ (99 ಬಿಲಿಯನ್) ಡಾಲರ್ …
Read More »ಪ್ರೀತಿಯ ಹೆಸರಲ್ಲಿ ಮೋಸ ಹೋದ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನ
ಮೈಸೂರು: ಪ್ರೀತಿಯ ಹೆಸರಲ್ಲಿ ಮೋಸ ಹೋದ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಪ್ರೀತಿಯ ಬಲೆಗೆ ಬಿದ್ದು ತನ್ನ ದೇಹವನ್ನು ಪ್ರಿಯಕರನಿಗೆ ಒಪ್ಪಿಸಿದ ಯುವತಿ ಇಂದು ವಂಚಿತಳಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇಬ್ಬರು ಒಂದೇ ಗ್ರಾಮದವರು. ಪ್ರಿಯಕರ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು …
Read More »ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಮುಖಿ ಶ್ರೀಸಾಮಾನ್ಯನ ಜೇಬಿಗೆ ಬೆಲೆ ಏರಿಕೆಯ ಬೆಂಕಿ
ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಶುರುವಾದ ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಾಗಾಲೋಟ ಮುಂದುವರಿದಿದೆ. ಜಸ್ಟ್ 12 ದಿನಗಳ ಅವಧಿಯಲ್ಲಿ 10 ಬಾರಿ ತೈಲ ದರ ಪರಿಷ್ಕರಣೆ ಆಗಿದೆ. ಬೆಲೆ ಏರಿಕೆ ಬರೆಗೆ ಶ್ರೀಸಾಮಾನ್ಯ ಬೆಚ್ಚಿಬಿದ್ದಿದ್ದಾನೆ. ದರಪ್ರಹಾರ ಹೀಗೆ ಮುಂದುವರಿದ್ರೆ ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತಾ ಚಿಂತೆಯ ಬಲೆಗೆ ಸಿಲುಕಿ ಒದ್ದಾಡುವಂತಾಗಿದೆ. ಒಂದೆಡೆ ವಸ್ತ್ರ, ವ್ಯಾಪಾರ ಹಾಗೂ ಆಹಾರ ಸಮರಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ರೆ ಮತ್ತೊಂದೆಡೆ ಏರಿಕೆಯಾಗ್ತಿರೋ ಪೆಟ್ರೋಲ್, …
Read More »ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ.:ಪ್ರಭು ಚೌಹಾಣ್
ಬೆಂಗಳೂರು: ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಟಿವಿ9ಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ. ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ. ಹಲಾಲ್ ಕಟ್ ಹಾಗೂ ಜಟ್ಕಾ …
Read More »ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ:ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆ
ವಿಜಯಪುರ: ಇಲ್ಲಿನ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ. ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಜಾತಿ, ಧರ್ಮ ಬದಿಗಿಟ್ಟು ಗ್ರಾಮಸ್ಥರು ಒಂದಾಗಿ ಜಾತ್ರೆ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಹಿಂದೂ ದೇವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರದ ನಡುವೆ ಸಾಮರಸ್ಯದ ಘಟನೆ ನಡೆದಿದೆ. ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಮಾತು …
Read More »ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ, : ಅಮಿತ್ ಶಾ
ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಬೇರೆ ಪಕ್ಷಗಳೊಂದಿಗೂ ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅವಧಿ ಪೂರ್ವ ಚುನಾವಣೆ ನಡೆಯಲ್ಲ. ಇದಕ್ಕೆ ಕಾರಣವನ್ನು ಕರೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿರುವುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ರಾಜ್ಯ …
Read More »