ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡರ ಪುಟ್ಟ ಮೊಮ್ಮಗಳು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಿ.ಟಿ. ದೇವೇಗೌಡರ ಮಗ ಜಿ.ಡಿ. ಹರೀಶ್ ಗೌಡ ಅವರ ಮಗಳು 3 ವರ್ಷದ ಗೌರಿ ಮೃತ ಕಂದಮ್ಮ. ಎಲ್ಲ ಮಕ್ಕಳೊಂದಿಗೆ ಆಟವಾಡುತ್ತಾ, ಖುಷಿ ಖುಷಿಯಿಂದ ಮನೆತುಂಬಾ ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡಾಡುತ್ತಿದ್ದ ಪುಟಾಣಿ ಗೌರಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಕೊನೆಯುಸಿರೆಳೆದಿದ್ದಾಳೆ. …
Read More »ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ವೇಳೆಯೇ ಟಿಟಿ ವಾಹನ ಪಲ್ಟಿ
ಶಿವಮೊಗ್ಗ: ಸಿಗಂದೂರು ಸಮೀಪ ಟಿಟಿ ವಾಹನ ಪಲ್ಟಿಯಾಗಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗದ ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿ ಗ್ರಾಮದ ಬಳಿ ಟಿಟಿ ಪಲ್ಟಿಯಾಗಿದೆ. ಬೆಂಗಳೂರಿನ ಬಿಡದಿಯವರಾಗಿದ್ದ ಈ ಕುಟುಂಬ ಸಿಗಂದೂರು ದೇವಿ ದರ್ಶನಕ್ಕೆ ತೆರಳಿದ್ದಾರೆ.ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಚಾಲಕನಿಗೆ ಪಿಡ್ಸ್ ಬಂದಿದೆ. ಚಲಿಸುವಾಗ ಡ್ರೈವರ್ ಗೆ ಪಿಡ್ಸ್ ಬಂದಿದ್ದರಿಂದ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿಯಾಗಿ ಟಿಟಿ ವಾಹನ ಪಲ್ಟಿಯಾಗುತ್ತಲೇ ತಗ್ಗು ಪ್ರದೇಶದ ಮನೆ ಮುಂಭಾಗ ಬಿದ್ದಿದ್ದು, …
Read More »ಹತ್ತಾರು ಜನರ ಎದುರೇ ವಕೀಲೆ ಮೇಲೆ ಹಲ್ಲೆ; ಆರೋಪಿಯ ಬಂಧನ..
ಬಾಗಲಕೋಟೆ: ರಸ್ತೆ ಬದಿಯಲ್ಲಿ ಹತ್ತಾರು ಜನರ ಎದುರೇ ವಕೀಲೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂಗೀತಾ ಸಿಕ್ಕೇರಿ ಎಂಬಾಕೆ ಹಲ್ಲೆಗೊಳಗಾದ ವಕೀಲೆ. ಮಹಾಂತೇಶ್ ಚೊಳಚಗುಡ್ಡ ಎಂಬಾತ ಬಂಧನಕ್ಕೆ ಒಳಗಾಗಿರುವ ಆರೋಪಿ. ಬಾಗಲಕೋಟೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿತ್ತು. ಸಂಜೆಯೊಳಗಾಗಿ ಬಾಗಲಕೋಟೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ರಸ್ತೆ ಬದಿಯಲ್ಲಿ ಸಾರ್ವಜನಿಕರ ಎದುರೇ ಸಂಗೀತಾ …
Read More »ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್ಬುಕ್ನಿಂದ. ಅಂಥ ಫೇಸ್ಬುಕ್ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್ ಝುಕರ್ಬರ್ಗ್ ಜನ್ಮದಿನಕ್ಕೆ ಫೇಸ್ಬುಕ್ ಬಳಕೆದಾರರು ಜನ್ಮದಿನದ ಶುಭಾಶಯ
ಬೆಂಗಳೂರು: ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್ಬುಕ್ನಿಂದ. ಅಂಥ ಫೇಸ್ಬುಕ್ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್ ಝುಕರ್ಬರ್ಗ್ ಜನ್ಮದಿನಕ್ಕೆ ಫೇಸ್ಬುಕ್ ಬಳಕೆದಾರರು ಜನ್ಮದಿನದ ಶುಭಾಶಯಗಳನ್ನೇ ಹರಿಸಿದ್ದಾರೆ. 1984ರ ಮೇ 14ರಂದು ಜನಿಸಿದ ಮಾರ್ಕ್ ಝುಕರ್ಬರ್ಗ್ ಫೇಸ್ಬುಕ್ ಆರಂಭಿಸಿದ್ದು, ಜಗತ್ತಿನಾದ್ಯಂತರ ಜನರಿಗೆ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಜನರನ್ನು ಬೆಸೆಯುವ ಸಾಧನವನ್ನೂ ಆಗಿಸಿದ್ದಾರೆ. ಅಂಥ ಝುಕರ್ಬರ್ಗ್ಗೆ 17 ಲಕ್ಷಕ್ಕೂ ಅಧಿಕ ಮಂದಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಜನ್ಮದಿನಕ್ಕೆ ಹೇಳುವಂಥ …
Read More »ಸಿಎಂ ಹೆಗಲಿಗೆ ಸಂಪುಟ: ಅರುಣ್ ಸಿಂಗ್ ಹೇಳಿಕೆ | ಸಚಿವರ ಮೌನ ಕಾರ್ಯವೈಖರಿಗೆ ಕಿಡಿ
ಬೆಂಗಳೂರು: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಬಿಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯದಲ್ಲಿ ಮುಖ್ಯಮಂತ್ರಿಯದೇ ಪರಮಾಧಿಕಾರ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪುನರುಚ್ಚರಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯದಮವರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಅದೇನಿದ್ದರೂ ಕಾಂಗ್ರೆಸ್ನಲ್ಲಿದೆ, ಸದಾ ಗೊಂದಲದಲ್ಲಿ ಆ ಪಕ್ಷ ಮುಳುಗಿರುತ್ತದೆ ಎಂದರು. ‘ವರಿಷ್ಠರ ಒಪ್ಪಿಗೆಯಂತೆ ಮುಂದಿನ ನಡೆ ಎಂದು ಸಿಎಂ …
Read More »ಇಂದಿರಾ, ಸೋನಿಯಾ ಬಳಿಕ ರಾಜ್ಯಕ್ಕೆ ಪ್ರಿಯಾಂಕಾ?
ಬೆಂಗಳೂರು: ರಾಜಸ್ಥಾನದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕರ್ನಾಟಕವನ್ನು ಗೆಲ್ಲುವ ಬಗ್ಗೆ ಚಿಂತನ ಮಂಥನ ಕೂಡ ನಡೆದಿದೆ. ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ 2023ರ ಮಾರ್ಚ್-ಏಪ್ರಿಲ್ನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಈ ಎರಡು ರಾಜ್ಯಗಳನ್ನು ಕೈ ವಶಮಾಡಿಕೊಳ್ಳಲೇಬೇಕೆಂದು ಪಕ್ಷದ ನಾಯಕರು ಸಂಕಲ್ಪ ಮಾಡಿದ್ದಾರೆ. ಈ ಎರಡು ರಾಜ್ಯಗಳ ಕುರಿತಂತೆ ಪ್ರಮುಖ ಅಜೆಂಡವಾಗಿ ಸಭೆಯಲ್ಲಿ …
Read More »ಅಪಘಾತದಲ್ಲಿ ಜೀವಕಳೆದುಕೊಂಡ ದಂತಕಥೆ ಸೈಮಂಡ್ಸ್
ಆಸ್ಟ್ರೇಲಿಯಾ: ಕ್ರಿಕೆಟ್ ಲೋಕದ ದಂತಥೆ ಎಂದೇ ಬಿಂಬಿತವಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಂಡ್ರ್ಯೋ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಗೆ 46 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಬಳಿ ಈ ಅಪಘಾತ ನಡೆದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 14 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಪೊಲೀಸರು ಶನಿವಾರ ಸಂಜೆ ನಗರದಿಂದ ಸುಮಾರು …
Read More »ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್, ಪರಿಷತ್‌ಗೆ ವಿಜಯೇಂದ್ರ ಆಯ್ಕೆಗೆ ಸಮ್ಮತಿ
ಬೆಂಗಳೂರು: ರಾಜ್ಯಸಭೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಐವರು ಹಾಗೂ ವಿಧಾನ ಪರಿಷತ್‌ಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇಪ್ಪತ್ತು ಸಂಭ್ಯಾವರ ಹೆಸರುಗಳನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಶನಿವಾರ ನಡೆದ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಹಾಗೂ …
Read More »ವಾರದಲ್ಲಿ ಒಂದು ದಿನ ತಾಲೂಕು ಆಫೀಸ್ ನಲ್ಲಿ ಜಿಲ್ಲಾಧಿಕಾರಿ ಕೆಲಸ,: ಆರ್. ಅಶೋಕ
ದಾವಣಗೆರೆ: ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ದಾವಣಗೆರೆಯಲ್ಲಿ ರಾಜ್ಯಮಟ್ಟದ ಗ್ರಾಮಲೆಕ್ಕಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವ ಬಗ್ಗೆ ಒಂದು ವಾರದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಕಾರ್ಯನಿರ್ವಹಣಾಧಿಕಾರಿ ಎಂದು ಹುದ್ದೆಯ ಹೆಸರು ಬದಲಾವಣೆ ಮಾಡಲು ಬೇಡಿಕೆಯಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ …
Read More »ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್ ಬಾಬು ಸಿನಿಮಾ ದಾಖಲೆ
ಮೊದಲಾರ್ಧವನ್ನು ಇಷ್ಟಪಟ್ಟ ಫ್ಯಾನ್ಸ್ ಸೆಕೆಂಡ್ ಹಾಫ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯಪ್ಯಾನ್ ಇಂಡಿಯಾಟ್ರೆಂಡ್ ಜೋರಾಗಿದೆ. ಆದರೆ, ಮಹೇಶ್ ಬಾಬು ಸಿನಿಮಾ ತೆಲುಗಿನಲ್ಲಿ ಮಾತ್ರ ತೆರೆಗೆ ಬಂದಿದೆ. ಆದಾಗ್ಯೂ ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಹೊರತಾಗಿಯೂ ಮಹೇಶ್ ಬಾಬು ಫ್ಯಾನ್ಸ್ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರ ಎರಡೇ ದಿನಕ್ಕೆ 100 …
Read More »
Laxmi News 24×7