ಬೆಂಗಳೂರು: ಇಂದಿನಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದ್ದು, ಈ ಹೊತ್ತಿನಲ್ಲಿಯೇ ಮಕ್ಕಳಿಗೆ ಈ ಬಾರಿ ಸರ್ಕಾರ ಸೈಕಲ್ ಭಾಗ್ಯ ಯೋಜನೆಯನ್ನು ನಿಲ್ಲಿಸಿದೆ ಎನ್ನಲಾಗುತ್ತಿದೆ. ಶಾಲೆ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಮೊದಲ 15 ದಿನ ಮಕ್ಕಳಿಗೆ ಆಟದ ಜೊತೆ ಪಾಠವೂ ಇರಲಿದೆ. ಎರಡು ವರ್ಷ ಕೊರೊನಾದಿಂದಾದ ಕಲಿಕಾ ನಷ್ಟವನ್ನು ತುಂಬಲು ಈ ಬಾರಿ 15 ದಿನ ಮುಂಚಿತವಾಗಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು …
Read More »ಬೊಮ್ಮಾಯಿ, ಕಟೀಲ್‌ಗೆ ತರಾಟೆ – ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಆರ್‌ಎಸ್‌ಎಸ್ ಚಾಟಿ
ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಹಾಗೂ ಬಿಜೆಪಿ ನಡವಳಿಕೆ ಬಗ್ಗೆ ಆರ್‌ಎಸ್‌ಎಸ್ ಗರಂ ಆಗಿದೆ. ಶನಿವಾರ ರಾತ್ರಿ ಮೂರು ಗಂಟೆಗಳ ಕಾಲ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಕಿಡಿಕಾರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆರ್‌ಎಸ್‌ಎಸ್ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ …
Read More »ಮಗು ಮೃತಪಟ್ಟಿರುವುದಾಗಿ ಘೋಷಿಸಿದ ವೈದ್ಯರು: ಅಂತ್ಯಕ್ರಿಯೆ ವೇಳೆ ಜೀವಂತವಾಗಿ ಪತ್ತೆಯಾದ ನವಜಾತ ಶಿಶು
ರಾಯಚೂರು: ನವಜಾತ ಹೆಣ್ಣು ಶಿಶು ಸಾವನ್ನಪ್ಪಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ ನಂತರ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಈ ವೇಳೆ ಮಗು ಉಸಿರಾಡುತ್ತಿರುವುದನ್ನು ಸಂಬಂಧಿಕರು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ರಾಯಚೂರು ಜಿಲ್ಲೆಯ ತುರುವಿಹಾಳ ಗ್ರಾಮದಲ್ಲಿ ನಡೆದಿದೆ. ಏನಿದು ಘಟನೆ? ಮೇ 10 ರಂದು ತುರುವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಹೆಣ್ಣು ಮಗುವಾಗಿತ್ತು. ಆದರೆ ಮಗುವಿಗೆ ಹೆಚ್ಚಿನ …
Read More »ಗೋಕಾಕನಲ್ಲಿ ಸ್ವಂತ ತಮ್ಮನ ಹೆಣ ಉರುಳಿಸಿದ ಪಾಪಿ ಅಣ್ಣ
ಬೆಳಗಾವಿ: ಒಡ ಹುಟ್ಟಿದ ತಮ್ಮನ ಏಳಿಗೆಯನ್ನೇ ಸಹಿಸದ ಸಹೋದರನೊಬ್ಬ ತಮ್ಮನ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದ ಮಾಳಪ್ಪ ಭೀಮಪ್ಪ ಚಳಾಯಿ (33)ಕೊಲೆಯಾದ ವ್ಯಕ್ತಿ. ಆತನ ಸಹೋದರನಾದ ವಾಶಪ್ಪ ಭೀಮಪ್ಪ ಚಳಾಯಿ ಕೊಲೆ ಮಾಡಿದ ಆರೋಪಿ. ತಮ್ಮ ಜಮೀನಿನಲ್ಲಿ ದುಡಿದು ಶ್ರೀಮಂತನಾಗುತ್ತಿರುವುದನ್ನು ಕಂಡು ಹೊಟ್ಟೆ ಕಿಚ್ಚಿನಿಂದ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ ಎಂದು …
Read More »ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್ ಟವರ್ ಏರಿದವಳ ರಕ್ಷಿಸಿತು ಜೇನ್ನೊಣ!
ಕೇರಳ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಯುವತಿಯೊಬ್ಬಳನ್ನು ಜೇನ್ನೊಣಗಳು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿಯ ಆಲಪ್ಪುಳ ಕರಾವಳಿಯ ಕಾಯಂಕುಲಂನಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ಜರುಗಿದೆ. ಮಗುವನ್ನು ಕರೆದುಕೊಂಡು ಹೋಗಿದ್ದ ಪತಿ, ಮಗುವನ್ನು ನೋಡಲು ಬಿಡುತ್ತಿಲ್ಲ ಎನ್ನುವ ಕಾರಣಕ್ಕೆ, ಪತಿಯ ಮೇಲಿನ ಸಿಟ್ಟಿನಿಂದ ಯುವತಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿದ್ದಳು. ಪತಿ ಮಗುವನ್ನು ತೋರಿಸದೇ ಹೋದರೆ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ …
Read More »ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!
ಕೊಪ್ಪಳ: ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಅಂತರ್ಧಮೀಯ ಜೋಡಿ, 5 ದಿನದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದೆ. ಇದೀಗ ನವ ದಂಪತಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದಿದ್ದು, ಎರಡೂ ಗುಂಪಿನ ಮುಖಂಡರು ಠಾಣೆಗೆ ದೌಡಾಯಿಸಿದ್ದಾರೆ. ನಿನ್ನೆ ಸಂಜೆಯಿಂದಲೂ ಹೈಡ್ರಾಮ ಶುರುವಾಗಿದ್ದು, ಮದುವೆ ಪ್ರಹಸನ ಇಂದು ಮುಂದುವರಿಯಿತು. ಕನಕಗಿರಿ ಪಟ್ಟಣದ 21 ವರ್ಷದ ದಿಲ್ ಶಾದ್ ಬೆಗಂ ಮತ್ತು 22 ವರ್ಷದ ಕನಕರೆಡ್ಡಿ ಪ್ರೇಮ ವಿವಾಹ ಪ್ರಕರಣ ನಿನ್ನೆಯಿಂದ …
Read More »: ಮೈಸೂರಿನ ಮಾನಸಗಂಗೋತ್ರಿಯ ಮಹಿಳಾ ಹಾಸ್ಟೆಲ್ ನಲ್ಲಿ ಏನ್ರೀ ಇದು ಕಥೆ..!
ಮೈಸೂರು: ಮೈಸೂರಿನ ಮಾನಸಗಂಗೋತ್ರಿಯ ಮಹಿಳಾ ವಿದ್ಯಾರ್ಥಿನಿಲಯ ಸಮಸ್ಯೆಯ ಆಗರವಾಗಿದೆ. ಸದ್ಯ ಇಲ್ಲಿನ ವಿದ್ಯಾರ್ಥಿನಿಯರ ಗೋಳು ಹೇಳತೀರದಾಗಿದ್ದು,ಹಾಸ್ಟೆಲ್ ಮುಂದೆ ನಿಂತು ಮೈಸೂರು ವಿವಿ ಕುಲಪತಿಗೆ ಧಿಕ್ಕಾರ ಹಾಕಿದ್ದಾರೆ. ಅಂದ ಹಾಗೇ ಮಾನಸಗಂಗೋತ್ರಿಯ ಆವರಣದಲ್ಲಿರುವ ಬ್ಲಾಕ್ 1 (ಕಟ್ಟಡ) ರಲ್ಲಿರುವ ಮಹಿಳಾ ವಿದ್ಯಾರ್ಥಿನಿಲಯದ ಹಲವು ಕೊಠಡಿಗಳು ಕಳೆದ ಕೆಲವು ದಿನಗಳಿಂದ ಅವ್ಯವಸ್ಥೆಯಿಂದ ಕೂಡಿವೆ. ಅದರಲ್ಲೂ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಲಯದ ಕೊಠಡಿಗಳಿಗೆ ನೀರು ನುಗ್ಗಿದೆ.ಅಲ್ಲದೆ, ಕೆಲ ಕೊಠಡಿಗಳ ಗೋಡೆಗಳು ಬಿರುಕು …
Read More »35 ವಯೋಮಾನದವರಿಗೆ ಆದ್ಯತೆ.. 75 ದಾಟಿದವರಿಗೆ ಕೋಕ್ : ಇದು ಕಾಂಗ್ರೆಸ್ ನ ತೀರ್ಮಾನ
ಉದಯಪುರ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು, ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದಿಂದ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಗುಲಾಬ್ ನಬಿ, ಹಿರಿಯ ನಾಯಕ ಪಿ ಚಿದಂಬರಂ, ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ದೇಶದ ವಿವಿದೆಡೆಯ ನಾಯಕರು ಒಟ್ಟಿಗೆ ಸೇರಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚಿಂಥನ ಮಂಥನ …
Read More »ಸೋಮವಾರ ಶಾಲೆ ಆರಂಭ, ಸಿಹಿಯೊಂದಿಗೆ ಮಕ್ಕಳಿಗೆ ಸ್ವಾಗತ
ಬೆಂಗಳೂರು,ಮೇ 15: ಕೋವಿಡ್‌ನಿಂದಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಇದರಿಂದಾಗಿ 2022-23 ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದರಂತೆ ಮೇ 16ರ ಸೋಮವಾರ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಸಿಹಿ ಖಾದ್ಯವನ್ನು ನೀಡಲು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳು ಶಾಲೆಗೆ …
Read More »ಪ್ರಜ್ವಲ್ ಅವರಿಗೆ ಎಂದು ಎಷ್ಟು ಸರಿ ಕೂಗ್ತೀರಾ, ನನಗೂ ಒಂದು ಸರಿ ಜೈಕಾರ ಹಾಕಿದ್ರೆ ನಿಮ್ ಗಂಟಲು ಹೋಗ್ಬಿಡ್ತಿತ್ತಾ?: ಶಾಸಕ ಶಿವಲಿಂಗೇಗೌಡ
ಹಾಸನ: ಪ್ರಜ್ವಲ್ ಅವರಿಗೆ, ಪ್ರಜ್ವಲ್ ಅವರಿಗೆ ಎಂದು ಎಷ್ಟು ಸಲ ಕೂಗುತ್ತೀರಾ ನಾನು ಇಲ್ಲೇ ಇದ್ದೀನಿ ಒಬ್ಬನಾದ್ರೂ ಜೈ ಕಾರ ಹಾಕೋದು ಬೇಡ್ವಾ ಎಂದು ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಜಾನಳ್ಳಿಯಿಂದ ಒಬ್ಬ ಹುಡುಗ ಬಂದಿದ್ದಾನೆ. ಶಿವಲಿಂಗೇಗೌಡನಿಗೆ ಜೈ ಅಂದ್ರೆ ನಿನ್ನ ಗಂಟು ಹೋಗ್ಬಿಡುತ್ತಾ, ನಿಮ್ಮ ಪಿಎ ಒಬ್ಬ ಇದ್ದಾನೆ ಬೇಜಾರು ಮಾಡ್ಕೋಬೇಡಿ. ಅವನು ಹತ್ತು ಹುಡುಗರು ಕಟ್ಟಿಕೊಂಡು ಎಲ್ಲಿ ಹೋದರೂ ಹೀಗೆ ಕೂಗಿಸುತ್ತಾನೆ ಯಾಕೆ ಎಂದು …
Read More »
Laxmi News 24×7