Breaking News

ಕಾರು ನಿಲ್ಲಿಸಿ ಹೋಗುತ್ತಿದ್ದೀರಾ, ಎಚ್ಚರ!; ಒಂದೇ ದಿನ ಒಂದೇ ಥರದ ಎರಡು ಪ್ರಕರಣ.

ವಿಜಯಪುರ: ರಾಜ್ಯದಲ್ಲೀಗ ಕಾರು ನಿಲ್ಲಿಸಿ ಹೋಗುವುದಕ್ಕೂ ಭಯ ಎನಿಸುವಂಥ ವಾತಾವರಣ ಉಂಟಾದಂತಿದೆ. ಅದರಲ್ಲೂ ಒಂದೇ ದಿನ ಒಂದೇ ಥರದ ಎರಡು ಪ್ರಕರಣಗಳು ನಡೆದಿರುವುದು ಕಾರುಗಳ ಮಾಲೀಕರಲ್ಲಿ ಆತಂಕ ಉಂಟುಮಾಡಿದ್ದು, ಎಚ್ಚರ ವಹಿಸಬೇಕಾದ ಸೂಚನೆಯನ್ನೂ ಪರೋಕ್ಷವಾಗಿ ನೀಡಿದೆ.   ಬೆಳಗಾವಿಯ ಗೋಕಾಕ್​ನ ಸಬ್​ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು, ಮುತ್ತುನಂದಿ ಎಂಬವರ 10 ಲಕ್ಷ ರೂ. ದೋಚಿಕೊಂಡು ಹೋದ ಬೆನ್ನಿಗೆ ರಾಜ್ಯದಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. …

Read More »

ತೈಲ ತುಟ್ಟಿಗೆ ವಿರಾಮ?; ಬ್ಯಾರೆಲ್​ಗೆ 99 ಡಾಲರ್​ಗೆ ಇಳಿದ ಕಚ್ಚಾತೈಲ ದರ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲ ದರ 100 ಡಾಲರ್​ಗಿಂತ ಕೆಳಗಿಳಿದಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಪುಷ್ಟಿಯೆಂಬಂತೆ, ಕಳೆದ ನಾಲ್ಕು ದಿನಗಳಿಂದ ತೈಲ ದರ ಪರಿಷ್ಕರಣೆ ಆಗಿಲ್ಲ.   ಸದ್ಯ ಬ್ಯಾರಲ್ ಕಚ್ಚಾತೈಲ ದರ 99 ಡಾಲರ್​ಗೆ ಇಳಿಕೆಯಾಗಿದೆ. ಇಷ್ಟಾದರೂ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಮೌಲ್ಯ ಬಲಿಷ್ಠವಾಗುತ್ತ ಸಾಗುತ್ತಿದೆ. ಪರಿಣಾಮ ಯಾವುದನ್ನೂ ಊಹಿಸುವುದು ಸಾಧ್ಯವಾಗುತ್ತಿಲ್ಲ ಎಂದೂ ಪರಿಣತರು ಹೇಳುತ್ತಾರೆ. …

Read More »

ಬಿಜೆಪಿ ಸಂಘಟನಾ ಪ್ರವಾಸ ಇಂದಿನಿಂದ;

ಬೆಂಗಳೂರು: ಸಂಘಟನೆ ಬಲಿಷ್ಠವಾಗಿದೆ ಎಂದು ಆಡಳಿತರೂಢ ಬಿಜೆಪಿ ವಿರಮಿಸದೆ, ಪರಿಶ್ರಮ ಹಾಗೂ ಕ್ರಿಯಾಶೀಲತೆ ಕಾಯ್ದಿಟ್ಟುಕೊಳ್ಳಲೆಂದು ಸಂಘಟನೆ ಬಲರ್ವಧನೆ ಪ್ರವಾಸವನ್ನು ಮಂಗಳವಾರ ಆರಂಭಿಸಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ಸಜ್ಜಾಗಿವೆ. ಮೂರೂ ತಂಡಗಳು ವಿಭಾಗವಾರು ಸಭೆಗಳಿಗೆ ತಲಾ ಎರಡು ದಿನ ಮೀಸಲಿಟ್ಟಿವೆ. ಏ.24ರವರೆಗೆ ರಾಜ್ಯ ನಾಯಕರು ಸಂಚಾರ ಕೈಗೊಳ್ಳಲಿದ್ದು, ತಳಸ್ತರದ …

Read More »

ಗ್ರಾಮ ಸಹಾಯಕರ ಮಾಸಿಕ ಸಂಬಳ ಏರಿಕೆ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಸಂಬಳವನ್ನು ಏರಿಕೆ ಮಾಡಲಾಗಿದೆ. ಮಾಸಿಕ ವೇತನವನ್ನು 12 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಪ್ರಕಟಿಸಿದೆ. ಈ ವರ್ಷದ ಬಜೆಟ್‌ನಲ್ಲಿ ಘೋಷಣೆಯಾದಂತೆ ಏಪ್ರಿಲ್‌ 1 ರಿಂದಲೇ ಇದು ಜಾರಿಯಾಗಲಿದೆ.ಕರ್ನಾಟಕ ಗ್ರಾಮ ಕಚೇರಿಗಳ ರದ್ದತಿ ಕಾಯ್ದೆ 1961 ಜಾರಿಯಾದ ಬಳಿಕ 1963ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲ ಗ್ರಾಮೀಣ ಹಂತದ ವಿಲೇಜ್‌ ಆಫೀಸರ್ಸ್‌ ಹುದ್ದೆಗಳು ರದ್ದಾಗಿದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು …

Read More »

ಮದುವೆ ಸಂಭ್ರಮ ಕಸಿದುಕೊಂಡ ಅಕಾಲಿಕ ಮಳೆ – ತಂದೆ ಆಸ್ಪತ್ರೆಯಲ್ಲಿ, ಮಗಳು ಮನೆಯಲ್ಲಿ ಕಣ್ಣೀರು

ಬೆಳಗಾವಿ: ಕಳೆದ ಮೂರುನಾಲ್ಕು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಮಗಳ ಮದುವೆಯ ಸಂಭ್ರಮ ಕಸಿದುಕೊಂಡಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸುರಿದ ಬಾರಿ ಮಳೆ, ಗಾಳಿಗೆ ಚಂದ್ರಶೇಖರ್ ಹುಡೇದ್ ಅವರ ಮನೆ ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿವೆ. ಈ ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನು ನಿಶ್ಚಯ ಮಾಡಿಕೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ …

Read More »

ಎಲ್ಲರ ಚಿತ್ತ ಬಿಎಸ್‌ವೈ-ಅರುಣ್ ಸಿಂಗ್ ಭೇಟಿಯತ್ತ!

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ನಾಯಕರ ಮಧ್ಯೆದ ಸಂಘರ್ಷ ತಾರಕಕ್ಕೇರುತ್ತಿದೆ‌. ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಕಮಲ ನಾಯಕರ ಈ ಕಲಹ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ‌. ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಭಿನ್ನಮತ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ …

Read More »

ಬಿಜೆಪಿ ಸರ್ಕಾರವೆಂದರೆ ಅದು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಅಂದರೆ ಅದು ಸುಳ್ಳಿನ ಕಾರ್ಖಾನೆ. ಅಧಿಕಾರಕ್ಕೆ ಬಂದಾಗಿನಿಂದ ಬರೀ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಸ್ವಾತಂತ್ರ್ಯ ಭಾರತದ ನಂತರ ಹಲವಾರು ಪ್ರಧಾನಿಗಳು ಬಂದರೂ, ಮೋದಿಯಷ್ಟು ಸುಳ್ಳು ಹೇಳುವವರು ಯಾರೂ ಬರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.   ಫ್ರೀಡಂ ಪಾರ್ಕ್ ನಲ್ಲಿ ಬೆಲೆ ಏರಿಕೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವ …

Read More »

ಇಂದೇ ಉಸ್ತುವಾರಿ ಬದಲಾಯಿಸಿ, ನನಗೇನು ಅಭ್ಯಂತರವಿಲ್ಲ: ಬಿ.ಸಿ.ಪಾಟೀಲ ಗರಂ

ಗದಗ: ಅಕ್ರಮ ಮರಳುಗಾರಿಕೆ ವಿಚಾರವಾಗಿ ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಧ್ಯೆ ವಾಗ್ವಾದ ನಡೆಯಿತು. ‘ಇವತ್ತೇ ಉಸ್ತುವಾರಿ ಬದಲಾವಣೆ ಮಾಡಿಸಿ ನನಗೇನು ಅಭ್ಯಂತರವಿಲ್ಲ. ಆಸಕ್ತಿಯೂ ಇಲ್ಲ’ ಎಂದು ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.   ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಎಸ್ ಪಿ ವಿವರಿಸಿದರು. …

Read More »

ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ, : ಎಚ್ ಡಿಕೆ

ರಾಮನಗರ: ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ. ತಲೆ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಕೇತಗಾನಹಳ್ಳಿಯ ತೋಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ತಲೆ ಒಡೆಯುತ್ತಿರಿ, ನಾವು ಕನಿಕರ ವ್ಯಕ್ತ ಪಡಿಸುತ್ತಲೇ ಇರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.   ಜಮೀರ್ ಅಹಮದ್, ಚಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತೆ ಜೆಡಿಎಸ್ ಪಕ್ಷಕ್ಕೆ ವಾಪಸ್ ಬಂದರೆ ಕರೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ …

Read More »

ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ:B.S.Y.

ಬೆಂಗಳೂರು : ‘ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂಬುದು ನಮ್ಮ ಅಪೇಕ್ಷೆ, ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ನಾವೆಲ್ಲಒಟ್ಟಾಗಿ ಬಾಳಬೇಕು. ಯಾರೋ ಕಿಡಿಗೇಡಿಗಳು ಸಾಮರಸ್ಯಕ್ಕೆ ಅಡ್ಡಿ ಮಾಡಿದರೆ, ಅಹಿತಕರ ಘಟನೆಗಳಿಗೆ ಕಾರಣವಾದರೆ ಸರಕಾರ ಸಹಿಸುವುದಿಲ್ಲ,ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ” ಎಂದರು.

Read More »