Breaking News

ತಂದೆ-ಮಗನ ಗಾಂಜಾ ದಂಧೆ.. ಪೊಲೀಸ್​ ದಾಳಿಯಲ್ಲಿ ಸಿಕ್ಕಿಬಿದ್ದ ಪುತ್ರ

ಬೆಂಗಳೂರು : ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಕ್ರಿಯನಾಗಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಎಚ್.ಎಸ್.ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಾಧಿಕ್ ಎಂದು ಗುರುತಿಸಲಾಗಿದೆ. ಏಪ್ರಿಲ್ 12ರಂದು‌ ಎಚ್.ಎಸ್.ಆರ್ ಲೇಔಟ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಟಿವಿಎಸ್ ಎಕ್ಸೆಲ್ ನಲ್ಲಿ ತಿರುಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ 5 ಕೆ.ಜಿ 300 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಹೆಚ್ಚಿನ ವಿಚಾರಣೆ ವೇಳೆ ಆರೋಪಿಯು ತನ್ನ ತಂದೆ ಅಮೀರ್ …

Read More »

ಬಿಜೆಪಿಯಿಂದ ಹಲಾಲ್ ಆದ ಮೊದಲ ವ್ಯಕ್ತಿ ಈಶ್ವರಪ್ಪ: ಸತೀಶ್ ಜಾರಕಿಹೊಳಿ

ಬೆಳಗಾವಿ: ಕೆ.ಎಸ್. ಈಶ್ವರಪ್ಪ ಬಿಜೆಪಿಯಿಂದ ಹಲಾಲ್ ಆದ ಮೊಟ್ಟ ಮೊದಲ ವ್ಯಕ್ತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆ.ಎಸ್. ಈಶ್ವರಪ್ಪನವರ ಸರದಿ ಬಂದಿತ್ತು, ಹಲಾಲ್ ಆದರು. ಇನ್ನೂ ಬಹಳಷ್ಟು ಸಚಿವರ ಹಲಾಲ್ ಆಗಲಿದೆ. ಶೀಘ್ರವೇ ಅವರ ಸರದಿಯೂ ಬರಲಿದೆ ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಹೀಗಾಗಿ ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ಬಿಜೆಪಿ ನೇತೃತ್ವದ …

Read More »

ರಾಜಕಾರಣದಲ್ಲಿ ಯಾರು ಸತ್ಯವಂತರು?: ಹೆಚ್.ಡಿ ದೇವೇಗೌಡ ಪ್ರಶ್ನೆ

ಮೈಸೂರು: ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ. ರಾಜಕಾರಣದಲ್ಲಿ ಯಾರು ಸತ್ಯವಂತರು? ಎಂದು ಮಾಜಿ ಪ್ರಧಾನಿ, ಜೆಡಿಎಸ್​​ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಶ್ನಿಸಿದ್ದಾರೆ. ಇಂದು ‘ಜೆಡಿಎಸ್ ಜನತಾ ಜಲಧಾರೆ’ ಕಾರ್ಯಕ್ರಮ ಉದ್ಘಾಟನೆಗೆ ಹೆಚ್.ಡಿ ಕೋಟೆಯ ಬೀಚನಹಳ್ಳಿಗೆ ಆಗಮಿಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪರ್ಸೆಂಟೇಜ್ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್​​ನವರು ಏನು ಮಾಡಿಯೇ ಇಲ್ಲವೇ?, …

Read More »

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಂತೋಷ ಪಾಟೀಲ್​​ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ಬೆಳಗಾವಿ: ಕೆ.ಎಸ್. ಈಶ್ವರಪ್ಪ ವಿರುದ್ದ 40 ಪರ್ಸೆಂಟ್​​ ಕಮಿಷನ್​​ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್​​ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ ಎಂದು ಆಪ್ ಮುಖಂಡ ಭಾಸ್ಕರ್‌ ರಾವ್ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪ ಹಾಗೂ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಸಂತೋಷ ಪಾಟೀಲ್​​ ಕೆಲಸ ಮಾಡಿದ್ದನು‌. ಆದರೆ ಮಾಜಿ ಸಚಿವರು ಬಿಲ್ ಮಂಜೂರು ಮಾಡಲು ಕಾಯಿಸುವ ಜತೆಗೆ ಸಂತೋಷ ಪಾಟೀಲ್​​ ಅವರನ್ನು ಅವಮಾನ ಮಾಡಿದರು. …

Read More »

ಅಸಭ್ಯ ವರ್ತಿಸಿದ ಉಪನ್ಯಾಸಕ ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು

ಬೆಳಗಾವಿ: ಉಪನ್ಯಾಸಕನ ವಿರುದ್ಧ ಅಸಭ್ಯ ವರ್ತಿಸಿದ ಆರೋಪ ಕೇಳಿಬಂದಿದ್ದು, ಕಾಲೇಜಿನ ಸ್ಟಾಫ್ ರೂಮ್‌ನಲ್ಲೇ ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಏಪ್ರಿಲ್ 12 ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.   ಕಾಲೇಜಿನ ಖಾಯಂ ಉಪನ್ಯಾಸಕನನ್ನು ಅತಿಥಿ ಉಪನ್ಯಾಸಕಿಯರು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲಿನಿಂದ ಒದ್ದು ಚಪ್ಪಲಿ ಹಾಗೂ ಕೋಲಿನಿಂದ …

Read More »

ಶೀಘ್ರದಲ್ಲೇ ಸತ್ಯ ಹೊರ ಬರಲಿದೆ, ಸತ್ಯ ಎದುರಿಸುವ ಶಕ್ತಿ ಕಾಂಗ್ರೆಸ್ ಪಡೆದುಕೊಳ್ಳಲಿ: ಬೊಮ್ಮಾಯಿ

ಗದಗ, ಏಪ್ರಿಲ್ 16: ಕಾಂಗ್ರೆಸ್‌ನವರು ತಾವೇ ಶುದ್ಧಹಸ್ತರು ಎನ್ನುವಂತೆ ವರ್ತಿಸುತ್ತಿದ್ದಾರೆ, ಸ್ವಲ್ಪ ದಿನದಲ್ಲಿ ಅವರಿಗೆ ಸತ್ಯವನ್ನು ಎದುರಿಸುವ ಕಾಲ ಸನ್ನಿಹಿತವಾಗಲಿದೆ. ಆ ಸತ್ಯ ಎದುರಿಸುವ ಶಕ್ತಿಯನ್ನು ಕಾಂಗ್ರೆಸ್‌ನವರು ಪಡೆದುಕೊಳ್ಳಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.   ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್‌. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ತಿರುಗೇಟು …

Read More »

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ದಿನ ನಡೆದಿದ್ದೇನು? ಸ್ನೇಹಿತರಿಂದ ಬಹಿರಂಗ!

ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ಕಮಿಷನ್‌ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಜೊತೆ ಕೊನೆಯ ಕ್ಷಣದಲ್ಲಿದ್ದ ಸ್ನೇಹಿತರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ಸ್ನೇಹಿತರು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.   ಪೊಲೀಸರ ವಶದಲ್ಲಿರುವ ಸಂತೋಷ್‌ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೇದಪ್ಪ ಹೇಳಿರುವ ನಾವೆಲ್ಲಾ ಬಾರ್ ನಲ್ಲಿ ಕುಡಿದಿದ್ದೆವು. ಸಂತೋಷ್ ಪಾಟೀಲ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು ಎಂದು ವಿವರಿಸಿದ್ದಾರೆ. …

Read More »

ರಾಜೀನಾಮೆʼ ಬಳಿಕ ರೈಲಿನಲ್ಲಿ ಶಿವಮೊಗ್ಗಕ್ಕೆ ಈಶ್ವರಪ್ಪ ವಾಪಾಸ್

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಳಿಸಿದ್ದ ವಾಟ್ಸಾಪ್‌ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪನವರು ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.   ಇದಕ್ಕೂ ಮುನ್ನ ಈಶ್ವರಪ್ಪನವರು ತಮ್ಮ ಬೆಂಬಲಿಗರ ಬಲ ಪ್ರದರ್ಶನ ಮಾಡಲಿದ್ದು, ಶಿವಮೊಗ್ಗದಿಂದ ರಸ್ತೆ ಮಾರ್ಗದ ಮೂಲಕ ಸಾವಿರಾರು ಬೆಂಬಲಿಗರೊಂದಿಗೆ ರಾಜ್ಯ ರಾಜಧಾನಿಗೆ …

Read More »

ಗುತ್ತಿಗೆದಾರ ಸಂತೋಷ್’ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್: ಸಾವಿಗೂ ಮುನ್ನ ‘ಲಾಡ್ಜ್’ನಲ್ಲಿ ಆಗಿದ್ದೇನು.?

ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಆದ್ರೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆಯನ್ನು ರಾಜ್ಯಾಧ್ಯಂತ ನಡೆಸಲಾಗುತ್ತಿದೆ. ಈ ನಡುವೆ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಅವರ ಸಾವಿಗೂ ಮುನ್ನವೇ ಲಾಡ್ಜ್ ನಲ್ಲಿ ಆಗಿದ್ದೇನು ಎನ್ನುವ ಮಾಹಿತಿಯನ್ನು ಸಂತೋಷ್ ಸ್ನೇಹಿತರು ಬಿಚ್ಚಿಟ್ಟಿದ್ದಾರೆ.   ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ …

Read More »

3 ತಿಂಗಳಲ್ಲಿ ಇನ್ಫೋಸಿಸ್‌ ತೊರೆದಿದ್ದಾರೆ 80 ಸಾವಿರ ಉದ್ಯೋಗಿಗಳು.!

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ನಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರೈಮಾಸಿಕದ ಅಂಕಿ-ಅಂಶಗಳನ್ನು ಗಮನಿಸಿದ್ರೆ ನೌಕರಿ ಬಿಟ್ಟು ಹೋದವರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ. 2022ರ ಜನವರಿಯಿಂದ ಮಾರ್ಚ್‌ವರೆಗೆ ಶೇ.27.7 ರಷ್ಟು ಉದ್ಯೋಗಿಗಳು ಕೆಲಸ ತೊರೆದಿದ್ದಾರೆ. ಅಂದರೆ 3 ತಿಂಗಳ ಅವಧಿಯಲ್ಲಿ 80 ಸಾವಿರ ನೌಕರರು ಇನ್ಫೋಸಿಸ್‌ಗೆ ಗುಡ್‌ ಬೈ ಹೇಳಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇನ್ಫೋಸಿಸ್‌, ಜಾಗತಿಕವಾಗಿ ಒಟ್ಟು 85,000 …

Read More »