Breaking News

ಹುಬ್ಬಳ್ಳಿ ಗಲಭೆ; ದೇವಾಲಯ, ಆಸ್ಪತ್ರೆಗೆ ಸಚಿವರ ಭೇಟಿ

ಹುಬ್ಬಳ್ಳಿ, ಏಪ್ರಿಲ್ 18; ಶನಿವಾರ ರಾತ್ರಿ ಹಳೇಹುಬ್ಬಳ್ಳಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 89 ಜನರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಯುವಕ ವಾಟ್ಸಪ್‌ನಲ್ಲಿ ಎಡಿಟ್‌ ಮಾಡಿದ ಪ್ರಚೋದನಾಕಾರಿ ಪೋಸ್ಟರ್‌ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಗಲಭೆ ಉಂಟಾಗಿತ್ತು. ಪೊಲೀಸರು, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆಯಲ್ಲಿ …

Read More »

ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್​ರ ಪತ್ನಿ ರಜನಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಮುಂಬೈ: ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್​ರ ಪತ್ನಿ ರಜನಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಬೈನ ಕುರ್ಲಾ ಪೂರ್ವದ ನೆಹರು ನಗರದ ಡಿಗ್ನಿಟಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಶಾಸಕರ ಫ್ಲಾಟ್‌ನಲ್ಲಿ ಭಾನವಾರ ರಾತ್ರಿ 8.30ರ ಸುಮಾರಿಗೆ ಶಾಸಕರ ಪತ್ನಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾಸಕರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.   ಸ್ಥಳಕ್ಕೆ ಬಂದ ಮುಂಬೈ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. …

Read More »

100ಕ್ಕೂ ಹೆಚ್ಚು ಮಂದಿಯ ಬಂಧನ: ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಗೋಳಾಟ

ಹುಬ್ಬಳ್ಳಿ (ಏ.17): ಪ್ರಚೋದನಕಾರಿ ಪೋಸ್ಟ್​ (Provocative Post) ​ ವಿರೋಧಿಸಿ ಹುಬ್ಬಳ್ಳಿಯಲ್ಲಿ(Hubballi) ನಡೆದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಟ್ಟು 12 ಮಂದಿ ಪೊಲೀಸರು (Police) ಗಾಯಗೊಂಡಿದ್ದು, ಪ್ರಕರಣ ಸಂಬಂಧ 100 ಮಂದಿಯನ್ನು ಪೊಲೀಸರು ವಶಕ್ಕೆ (100 People Arrests) ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಬಂಧಿತರಲ್ಲಿ ಮೂವರು ಬಾಲಾಪರಾಧಿಗಳಿದ್ದಾರೆ. ಈ ಸಂಬಂಧ ಇದುವರೆಗೆ ಒಟ್ಟು 8 ಪ್ರತ್ಯೇಕ FIR ದಾಖಲಾಗಿದೆ. ಬಂಧಿತರನ್ನು ಕಲಬುರಗಿ …

Read More »

‘ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ 30 ರಷ್ಟು ಕಮಿಷನ್‌ ನೀಡಬೇಕಿದೆ.

ಬಾಗಲಕೋಟೆ: ‘ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ 30 ರಷ್ಟು ಕಮಿಷನ್‌ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ’ ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.   ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಭಾನುವಾರ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತ ಆದ …

Read More »

ಗುತ್ತಿಗೆ ಪಡೆದಿದ್ದವರು ಯಾರು ಎನ್ನುವುದು ನಮಗೆ ಗೊತ್ತಿಲ್ಲ’, ಕೆಲಸ ಆಗಿದೆ;, ಸಂತೋಷ್ ಪಾಟೀಲ ಸ್ಟೋರಿ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಿಜ. ‘ಅವುಗಳನ್ನು ಮಾಡಿಸಿದ್ದು ಗುತ್ತಿಗೆದಾರ ದಿವಂಗತ ಸಂತೋಷ್ ಪಾಟೀಲ’ ಎಂದು ಹಲವರು ಹೇಳಿದರೆ, ‘ಕಾಮಗಾರಿಗಳು ಆಗಿವೆ. ಆದರೆ ಗುತ್ತಿಗೆ ಪಡೆದಿದ್ದವರು ಯಾರು ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು. ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲಿ ‘ಪ್ರಜಾವಾಣಿ’ಯು ಗ್ರಾಮದಲ್ಲಿ ಭಾನುವಾರ ಸಂಚರಿಸಿ ‘ರಿಯಾಲಿಟಿ ಚೆಕ್‌’ ನಡೆಸಿತು. ಆಗ ಗ್ರಾಮಸ್ಥರಿಂದ ಭಿನ್ನ ಅಭಿಪ್ರಾಯಗಳು …

Read More »

ಆರಗ ಖಾತೆ ಬಿಡಬೇಕು: ಯತ್ನಾಳ,ಗಲಭೆ ಸೃಷ್ಟಿಸಿ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವವರನ್ನು ಮನೆ ಮನೆ ಹೊಕ್ಕು ಎಳೆತನ್ನಿ

ಹೊಸಪೇಟೆ: ಗೃಹ ಮಂತ್ರಿಗಳು ಆ ಹುದ್ದೆಗೆ ತಕ್ಕಂತೆ ಖಡಕ್ ಇಲ್ಲದಿರುವುದರಿಂದ ಅವರನ್ನು ಶೀಘ್ರ ಬದಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು. ಹುಬ್ಬಳ್ಳಿ ಘಟನೆಯ ಹಿನ್ನೆಲೆಯಲ್ಲಿ ಅವರು ಈ ಆಗ್ರಹ ಮಾಡಿದರು. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಸರ್ಕಾರದ ವರ್ತನೆ ಸಾರ್ವಜನಿಕ ನಿರೀಕ್ಷೆಯಂತೆ ಇಲ್ಲ. ಬಿಜೆಪಿ ಇಮೇಜ್‌ಗೆ ಹಾನಿಯಾಗಿದೆ ಎಂಬುದಾಗಿಯೂ ಕಿಡಿಕಾರಿದರು. ಬಿಜೆಪಿ ಕಾರ್ಯಕಾರಣಿ ಸ್ಥಳದಲ್ಲೇ ಯತ್ನಾಳ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿರುವ ಈ ಪ್ರತಿಕ್ರಿಯೆ ಭಾರೀ ಸದ್ದು ಮಾಡಿದೆ. ಹುಬ್ಬಳ್ಳಿಯಂತಹ …

Read More »

ಪತ್ನಿಗೆ‌ ಪ್ರಜ್ಞೆ ತಪ್ಪಿಸಿ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿದ ಪತಿ

ಬೆಂಗಳೂರು: ಜ್ಯೂಸ್‌ನಲ್ಲಿ ಮತ್ತು ಬರುವ ವಸ್ತು ಹಾಕಿ ಪತ್ನಿಗೆ ಕೊಟ್ಟು ಆಕೆ ಪ್ರಜ್ಞೆತಪ್ಪಿದ ಬಳಿಕ ನಗ್ನ ಚಿತ್ರ ಸೆರೆಹಿಡಿದು ಅದನ್ನು ಸ್ನೇಹಿತರಿಗೆ ಕಳುಹಿಸಿದ ಘಟನೆ ಬಸವನಗುಡಿ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ (30) ದೂರಿನ ಆಧಾರದ ಮೇಲೆ ಆಕೆಯ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ಯೋನ್ಯವಾಗಿದ್ದ …

Read More »

ಏನ್‌ ಇವ್ರು ಮಾತ್ರ ಉಪ್ಪು, ಹುಳಿ ಖಾರ ತಿಂತಾರಾ..? ಸಿ.ಟಿ. ರವಿ

ವಿಜಯನಗರ : ವಾಟ್ಸ್ಯಾಪ್‌ ಸ್ಟೇಟಸ್‌ ಹಾಕಿದ್ದ ಎಂಬ ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ ಆದ್ರೆ ಅವರು ಸಣ್ಣ ಘಟನೆ ಇಟ್ಟುಕೊಂಡು ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ದುರದೃಷ್ಟಕರ. ನಮ್ಮ ಐತಿಹಾಸಿಕ ದೇವಾಲಯಗಳನ್ನೇ ನಾಶ ಮಾಡಿದ್ರು ಸಹ ನಾವು …

Read More »

ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ

ಬೆಂಗಳೂರು: ಇದುವರೆಗೆ ರೈತರು ಕಂದಾಯ ಇಲಾಖೆಯ ಕೆಲ ದಾಖಲೆಗಳನ್ನು ಪಡೆಯೋದಕ್ಕಾಗಿ ದಿನಂಪ್ರತಿ ಕಚೇರಿಗೆ ಅಲೆಯಬೇಕಾಗಿತ್ತು. ಆದ್ರೇ ಇದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ. ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳನ್ನು ಇನ್ನೂ ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.   ಹೌದು.. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಇನ್ಮುಂದೆ ಆನ್ ಲೈನ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ರಾಜ್ಯದ ರೈತರು https://103.138.196.154/service19/Report/ApplicationDetails ಈ …

Read More »

ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿದ ಬೆನ್ನಲ್ಲೇ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಮಂಗಳೂರು: ನಗರದ ಅಗ್ನಿಶಾಮಕದಳ ಕಚೇರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ (36) ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.   ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರು ಜಿಲ್ಲೆ ಲಿಂಗಸಗೂರುನಲ್ಲಿದ್ದ ಅವರ ಪತ್ನಿ ಶ್ರುತಿ (30) ತಮ್ಮ 6 ತಿಂಗಳ ಮಗು ಅಭಿರಾಮನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ರಾತ್ರಿ 8.50ರ ವೇಳೆಗೆ …

Read More »