ಉಡುಪಿ: ಹಿಜಾಬ್ಗಾಗಿ ಹೋರಾಟ ನಡೆಸುತ್ತಿರುವ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ. ಆಲ್ಮಾಸ್, ಹಾಜ್ರಾ ಶಿಫಾ ಹಾಗೂ ಆಯಿಶಾ ಪರೀಕ್ಷೆಗೆ ಗೈರಾದವರು. ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶನಿವಾರ ವಿದ್ಯೋದಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದಲ್ಲಿ ಪರೀಕ್ಷೆ ಬರೆಯಬೇಕಿತ್ತು. ಮೂವರ ಪೈಕಿ ಆಲ್ಮಾಸ್ ಶುಕ್ರವಾರ ಕಾಲೇಜಿಗೆ ಬಂದು ಪ್ರವೇಶ ಪತ್ರ ಪಡೆದುಕೊಂಡಿದ್ದರು. ಉಳಿದ ಇಬ್ಬರು ಪಡೆದುಕೊಂಡಿರಲಿಲ್ಲ ಎಂದು …
Read More »ಧಾರವಾಡ- ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಧಾರವಾಡ ಹೈಕೋರ್ಟ್ ತಡೆ
ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಹೀಗಾಗಿ ಕೆಲ ಜನಪ್ರತಿನಿಧಿಗಳು, ರೈತರ ಮುಖಂಡರು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರಕಾರಿ …
Read More »ಸಂತೋಷ್ ಆತ್ಮಹತ್ಯೆ ಬೆನ್ನಲ್ಲೆ ಗುತ್ತಿಗೆದಾರರ ಬಿಲ್ ಪಾವತಿ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು, ಏ.22. ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಮೀಷನ್ ಗಲಾಟೆ ನಡೆಯುತ್ತಿರುವುದರ ಮಧ್ಯೆಯೇ ಹೈಕೋರ್ಟ್ ಗುತ್ತಿಗೆದಾರರಿಗೆ ನೆರವಿಗೆ ಧಾವಿಸಿದೆ. ನ್ಯಾಯಾಲಯ ಮಹತ್ವದ ಪ್ರಕರಣವೊಂದರಲ್ಲಿ, ಯಾವುದೇ ಲೋಪವಿಲ್ಲದೆ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಖಡಕ್ ಆದೇಶ ನೀಡಿದೆ. “ಯಾವುದೇ ಲೋಪವಿಲ್ಲದೆ ಕಾಮಗಾರಿ ಪೂರ್ಣಗೊಳಿಸಿದ್ದರೂ ಗುತ್ತಿಗೆ ಹಣ ಪಾತಿಸುತ್ತಿಲ್ಲವೆಂದು ಆಕ್ಷೇಪಿಸಿ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. …
Read More »ಭೂ ನಕ್ಷೆಗೆ ‘ಸ್ವಾವಲಂಬಿ ಆಯಪ್’; ಕಂದಾಯ ಇಲಾಖೆಯಿಂದ ಹೊಸ ಸೇವೆ: ಉದ್ದೇಶವಿದು.
ಬೆಂಗಳೂರು: ಜಮೀನು ಸರ್ವೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸಲು ಕಂದಾಯ ಇಲಾಖೆ ‘ಸ್ವಾವಲಂಬಿ ಆಯಪ್’ ಪರಿಚಯಿಸಿದೆ. ಈ ಮೂಲಕ ಭೂ ಮಾಲೀಕ ತನ್ನ ಭೂಮಿಯನ್ನು ಸ್ವಯಂ ಸರ್ವೆ ಸಿದ್ಧಪಡಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದೆ. ನಾಗರಿಕರು ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಲು ಸ್ವಾವಲಂಬಿ ಆಯಪ್ ಬಳಸಿಕೊಳ್ಳಬಹುದು. ಏಕ ಮಾಲೀಕತ್ವದ ಪಹಣಿ (ಆರ್ಟಿಸಿ) ಹೊಂದಿರುವರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ನಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. …
Read More »29 ಅಡಿ ತೇರು ಕಟ್ಟಿದ ಅಂಧ ಸೋದರರು!
ಕುಷ್ಟಗಿ (ಕೊಪ್ಪಳ): ಅಪ್ಪನ ಅಕಾಲಿಕ ಸಾವಿನಿಂದಾಗಿ ಹೆಗಲೇರಿದ 29 ಅಡಿ ಎತ್ತರದ ತೇರು ನಿರ್ಮಾಣ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ಸೋದರರಿಬ್ಬರ ಸಾಧನೆಯ ಕತೆ ಇದು. ಈ ಇಬ್ಬರೂ ಅಂಧರಾದರೂ, ಕೇವಲ ಸ್ಪರ್ಶಜ್ಞಾನದಿಂದಲೇ ಕಟ್ಟಿಗೆಯಲ್ಲಿ ವಿವಿಧ ಚಿತ್ತಾರ ಬಿಡಿಸುವಲ್ಲಿ ಪರಿಣತಿ ಸಾಧಿಸಿರುವುದು ವಿಶೇಷ. ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಬೇಲೂರಿನ ಸುರೇಶ ಮತ್ತು ಮಹೇಶ ಬಡಿಗೇರ ಅವರೇ ಈ ಸಾಹಸಿಗರು. ಇವರ ತಂದೆ ಮಲ್ಲಪ್ಪ ಬಿಡಗೇರ ರಾಜ್ಯ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ. …
Read More »ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್: ಪ್ರೇಮಿ ಮೇಲೆ 3 ಕೇಸ್.
ಚಾಮರಾಜನಗರ: ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತ ರೊಮ್ಯಾನ್ಸ್ ಮಾಡಿದ್ದ ಪ್ರೇಮಿಯ ಮೇಲೆ ಮೂರು ಕೇಸ್ಗಳು ಬಿದ್ದಿವೆ. ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಯುವಕನೊಬ್ಬ ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್ ಮಾಡಿದ್ದ ವಿಡಿಯೋ ಇಂದು ವೈರಲ್ ಆಗಿತ್ತು. ಹಾಡಹಗಲೇ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಅಪಾಯಕಾರಿಯಾಗಿ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ …
Read More »ಪಿಎಸ್ಐ ಪರೀಕ್ಷೆ ಅಕ್ರಮ: ಖರ್ಗೆ ಆಪ್ತ, ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧನ!
ಕಲ್ಬುರ್ಗಿ : ಇದೀಗ ಪಿಎಸ್ಐ ಅಕ್ರಮ ತನಿಖೆ ಮುಂದುವರೆಸಿರುವ ಸಿಐಡಿ ಪೊಲೀಸರು ಅಫಜಲಪುರದಲ್ಲಿ ಖರ್ಗೆ ಆಪ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧಿಸಿ ಸಿಐಡಿ ಅಧಿಕಾರಿಗಳು ನಗರಕ್ಕೆ ಕರೆ ತಂದು ವಿಚಾರಣೆ ಕೈಗೊಂಡಿದ್ದಾರೆ. ಬಂಧನಕ್ಕೆ ಮಹಾಂತೇಶ್ ಪಾಟೀಲ್ ಸಹಕರಿಸಿಲ್ಲವೆಂದು ಕುತ್ತಿಗೆ ಪಟ್ಟಿ ಹಿಡಿದು ಸಿಐಡ ಅಧಿಕಾರಿಗಳು ಎಳೆದುಕೊಂಡು ಹೋದ ಘಟನೆ ನಡೆಯಿತು.ನಿನ್ನೆಯಷ್ಟೇ ಅಫಜಲಪುರ ಶಾಸಕ ಗನ್ ಮ್ಯಾನ್ ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 13ಕ್ಕೇರಿದೆ.
Read More »ತಡರಾತ್ರಿ ಪಂಪ್ಸೆಟ್ ಕದಿಯಲು ಬಂದ ಯುವಕರಿಬ್ಬರನ್ನು ಅಮಾನುಷವಾಗಿ ಕೊಂದ ತೋಟದ ಮಾಲೀಕ!
ತುಮಕೂರು: ರೈತರ ತೋಟದಲ್ಲಿ ಮೋಟಾರ್ ಪಂಪ್ಸೆಟ್ ಕದಿಯಲು ಬಂದು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಯುವಕರಿಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಲಾಗಿದೆ. ಇಂತಹ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿಯಲ್ಲಿ ಸಂಭವಿಸಿದೆ. ಪೆದ್ದನಹಳ್ಳಿ ಗ್ರಾಮದ ಅನಿಲ್ (32) ಮತ್ತು ಮಂಚಲದೋರೆ ಗ್ರಾಮದ ಅನಿಲ್(33) ಕೊಲೆಯಾದ ಯುವಕರು. ಆಟೋ ಚಾಲಕನಾಗಿದ್ದ ಅನಿಲ್, ಪೆದ್ದನಹಳ್ಳಿ ಸುತ್ತಮುತ್ತ ಆಟೋ ಓಡಿಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಅನಿಲ್ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮೇಲೆ …
Read More »ಸವದತ್ತಿ ತಾಲೂಕಿನ ಗೊರಗುದ್ದಿ ಲಕ್ಷ್ಮಿ ದೇವಿ ಜಾತ್ರೆಗೆ ಚಾಲನೆ ನೀಡಿದ ಶ್ರೀ ಸಂತೋಷ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊರಗುದ್ದಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಸಂತೋಷ್ ಜಾರಕಿಹೊಳಿ ಅವರನ್ನ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಲು ಆಹ್ವಾನದ ಮೇರೆಗೆ ಆಗಮಿಸಿದ್ದರು. ಹೌದು ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಭೆ ಸಮಾರಂಭ ,ಕ್ರಿಕೆಟ್ ಪಂದ್ಯಾವಳಿಗೆ,ಚಾಲನೆ, ಮಠ ಮಂದಿರ, ಹಾಗೂ ಕಷ್ಟ ಅಂತ ಬಂದವರಿಗೆ ಸಹಾಯ ಹಸ್ತ ಚಾಚುವುದ ರಲ್ಲಿ ಇಟ್ಟಿಚ್ಚಿಗೆ ಎಲ್ಲದಕ್ಕೂ ಸೈ ಎಂದು ಬಂದ ಜನರಿಗೆ ಆಸರೆ …
Read More »ಅರಗ ಜ್ಞಾನೇಂದ್ರಗೆ ಕೊಕ್? ಯಾರಾಗ್ತಾರೆ ಹೋಂ ಮಿನಿಸ್ಟರ್?
ಸಂಪುಟ ಪುನರ್ ರಚನೆ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವ್ರ ಖಾತೆ ಬದಲಾಯಿಸಲಾಗುತ್ತೆ ಅನ್ನೋ ಗುಸುಗುಸು ಸುದ್ದಿ ಬಿಜೆಪಿ ಪಾಳಯದಲ್ಲಿ ಎದ್ದಿದೆ. ಜೊತೆಗೆ ಅನುಭವಿ ಆರ್. ಅಶೋಕ್ ಅವ್ರಿಗೆ ಮರಳಿ ಗೃಹಖಾತೆ ನೀಡ್ಬಹುದು ಅಂತ ಕೂಡ ಹೇಳಲಾಗ್ತಿದೆ. ಅಂದ್ಹಾಗೆ ಆರಗ ಜ್ಞಾನೇಂದ್ರ ಕೂಡ ಬಿಜೆಪಿಯಲ್ಲಿ ಹಿರಿಯರು. ಆದರೆ, ಮೊದಲ ಬಾರಿಗೆ ಸಚಿವರಾಗಿರುವ ಅವರಿಗೆ ಅತ್ಯಂತ ಮಹತ್ವದ ಖಾತೆ ವಹಿಸಲಾಗಿದೆ. ಗೃಹ ಸಚಿವರಾದವರು ಖಡಕ್ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಪರಿಸ್ಥಿತಿ …
Read More »