Breaking News

ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

ನವದೆಹಲಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನು ಉಂಟು ಮಾಡುತ್ತವೆ. ನಾವು ಜಾಗರೂಕರಾಗಿಬೇಕು ಎಂದು ಪ್ರಧಾನಿ ಮೋದಿ ಅವರು ಎಚ್ಚರಿಸಿದರು. ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಜ್ಯಗಳಲ್ಲಿ ಲಸಿಕೆ ಅಭಿಯಾನ …

Read More »

ದಲಿತ ಸಿಎಂ ಮಾಡ್ತೀವಿ ಅಂತಾ ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ: ಸಿದ್ದುಗೆ ಶ್ರೀರಾಮುಲು ಸವಾಲು

ಬಳ್ಳಾರಿ: ನೀವು ದಲಿತ ಸಿಎಂ ಮಾಡುತ್ತೇವೆ ಎಂದು ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ಸಿದ್ದರಾಮಯ್ಯನವರೇ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಈ ದೇಶದ ಪ್ರಧಾನಿಯಾದವರು, ಆದರೆ ಸಿದ್ದರಾಮಯ್ಯ ದೇವೇಗೌಡರಿಗೆ ಏಕ ವಚನ ಪ್ರಯೋಗ ಮಾಡುತ್ತಿದ್ದಾರೆ. ರಾಜಕೀಯ ವಿಚಾರದಲ್ಲಿ ದೇವೇಗೌಡರಿಗೆ ನಿಮ್ಮ ತಾಯಿ, ಮಕ್ಕಳ ಮೇಲೆ ಆಣೆ ಮಾಡಿ ಎಂದು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ ಅವರು, ಅವರಿವರ ಮಕ್ಕಳ ಮೇಲೆ ಆಣೆ ಮಾಡಿ …

Read More »

ಈ ನಿಟ್ಟಿನಲ್ಲಿ ಇಂದು ಹಂಪಿಯ ಸ್ಮಾರಕಗಳಾದ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥ, ಲೋಟಸ್ ಮಹಲ್, ವಿರುಪಾಕ್ಷೇಶ್ವರ ದೇವಾಲಯ, ಆನೆ ಮತ್ತು ಕುದುರೆ ಲಾಯಗಳು, ಸಾಸುವೇ ಕಾಳು ಗಣೇಶ, ಬಡವಿ ಲಿಂಗ ಸೇರಿದಂತೆ ಹಲವಾರು ಸ್ಮಾರಕಗಳ ಮುಂದೆ ಯೋಗ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಪರಿಶೀಲನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸ್ಮಾರಕದ ಮುಂದೆಯೂ ಕೌಂಟ್ ಡೌನ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನದಂದು ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

ವಿಜಯನಗರ: ಈ ಬಾರಿಯ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷರು ಹಾಗೂ ಶ್ವಾಸಕೇಂದ್ರದ ಸಂಸ್ಥಾಪಕರಾದ ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳು ತಿಳಿಸಿದರು. ಇಂದು ವಚನಾನಂದ ಮಹಾಸ್ವಾಮೀಜಿಗಳು, ಪ್ರವಾಸೋದ್ಯಮ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರೊಂದಿಗೆ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ …

Read More »

YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

ಹೈದರಾಬಾದ್: ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಪಿ) ಬ್ಯಾನರ್‌ಗಳನ್ನು ಹಾನಿಗೊಳಿಸಿದ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಡಳಿತ ನಡೆಸುತ್ತಿರುವ ವೈಎಸ್‍ಆರ್‌ಪಿ ಪೋಸ್ಟರ್‌ಗಳನ್ನು ಹರಿದು ಹಾಕಿದರ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆದೊಯ್ದು ಸಂಜೆಯವರೆಗೂ ನೆಲದ ಮೇಲೆ ಕುರಿಸಿಕೊಂಡಿದ್ದರು.  ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‍ಪಿ) ಜಯರಾಮ್ ಪ್ರಸಾದ್, ಕಟ್ಟಿದ್ದ …

Read More »

ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

ರಾಯಚೂರು: ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ನಟ ಕಿಚ್ಚ ಸುದೀಪ್ ಮಹರ್ಷಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದರು. ಈ ಹಿಂದೆ ಸುದೀಪ್ ಅಭಿಮಾನಿಗಳು ಸುದೀಪ್ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿದ್ದರು. ಆದ್ರೆ ಸುದೀಪ್ ತಮ್ಮ ಮೂರ್ತಿ ಸ್ಥಾಪನೆಗೆ ಒಪ್ಪದ ಹಿನ್ನೆಲೆ ವಿಚಾರ ಕೈಬಿಡಲಾಗಿತ್ತು. ರಾಯಚೂರಿನ ಸಿರವಾರ ತಾಲೂಕಿನ ಕುರಕುಂದದಲ್ಲಿ ಮಾತನಾಡುವ ಸುದೀಪ್, ನನ್ನ ಮೂರ್ತಿ ಪ್ರತಿಷ್ಟಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಶರಣು. ನನ್ನ ಮೂರ್ತಿ ಅನಾವರಣಕ್ಕೆ ನಾನು …

Read More »

ಅನುಚಿತ ವರ್ತನೆ ಮಾಡಿದ ಯುವಕನಿಗೆ ಲಾಠಿ ರುಚಿ ತೋರಿಸಿದ ಲೇಡಿ ಪಿಎಸ್‍ಐ

ರಾಯಚೂರು: ಅನುಚಿತ ವರ್ತನೆ ತೋರಿಸಿ ಓಡಿ ಹೋದ ಯುವಕನನ್ನು ಚೇಸ್ ಮಾಡಿ ಹಿಡಿದ ಲೇಡಿ ಪಿಎಸ್‍ಐ ಲಾಠಿ ರುಚಿ ತೋರಿಸಿದ್ದಾರೆ. ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದರು. ಈ ವೇಳೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಯುವಕ ಅನುಚಿತ ವರ್ತನೆ ತೋರಿದ್ದ. ಅಲ್ಲದೇ ಪೊಲೀಸರ ಲಾಠಿಯನ್ನು ಕಿತ್ತುಕೊಂಡು ಓಡಿಹೋಗಿದ್ದ. ಓಡಿ …

Read More »

ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ

ತಿರುವನಂತಪುರಂ: ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸಭೆ ಬೆನ್ನಲ್ಲೆ ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕೆಲಸದ ಸ್ಥಳಗಳಲ್ಲೂ, ಪ್ರಯಾಣದ ವೇಳೆಯೂ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಬೇಕೆಂದು ಇದೇ ವೇಳೆ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಮೂಲಕ ಕೊವೀಡ್ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಕೇರಳ ಸರ್ಕಾರ …

Read More »

ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಕೊರೊನಾ 4ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಟಫ್ ರೂಲ್ಸ್ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಅವರೊಂದು ತುರ್ತು ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಸಾಫ್ಟ್ ರೂಲ್ಸ್ ಮಾತ್ರ ಜಾರಿ ಮಾಡುತ್ತೇವೆ. ಸ್ವಲ್ಪ ದಿನ ಕಾದು ನೋಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕೇಂದ್ರದಿಂದ ಯಾವುದೇ ನಿಯಮ ಜಾರಿಗೆ ಸೂಚನೆ ಬಾರದ ಹಿನ್ನಲೆ ಸದ್ಯಕ್ಕೆ ಕಠಿಣ ನಿಯಮ ಜಾರಿ ಮಾಡದೇ ಇರಲು …

Read More »

ಇಂದು ಸಚಿವ ಸಿ.ಸಿ.ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಧರಣಿ!

ಗದಗ : ಮೂರು ಸಾವಿರ ಮಠದ ಪಿಠಾಧಿಪತಿಯಾಗಲು ದಿಂಗಾಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದರು ಎಂಬ ಸಚಿವ ಸಿ.ಸಿ.ಪಾಟೀಲ್ ಆರೋಪವನ್ನು ಸಾಬೀತು ಮಾಡಬೇಕು ಎಂದು ಆಗ್ರಹಿಸಿ ಇಂದು ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ಸಚಿವ ಸಿ.ಸಿ.ಪಾಟೀಲ್ ಮನೆ ಮುಂದೆ ದಿಂಗಾಲೇಶ್ವರ ಸ್ವಾಮಿಜಿ ಧರಣಿ ನಡೆಸಲಿದ್ದಾರೆ. ತಮ್ಮ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಮಾಡಿರುವ ಆರೋಪಗಳ ಬಗ್ಗೆ ಏಪ್ರಿಲ್ 27 ರೊಳಗೆ ವಿವರಣೆ ನೀಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು …

Read More »

ಹೊಸಬರ ಅಖಾಡಕ್ಕೆ ಸಜ್ಜಾದ ಸಕ್ಕರೆ ನಾಡು

ಮಂಡ್ಯ: ಸಕ್ಕರೆ ನಾಡು ಮಂಡ್ಯ ರಾಜಕಾರಣವೇ ವಿಭಿನ್ನವಾಗಿದ್ದು, ದೇಶದ ರಾಜಧಾನಿ ದಿಲ್ಲಿಯಲ್ಲೂ ಸದ್ದು ಮಾಡುತ್ತದೆ. ಅದರಂತೆ ಮುಂದಿನ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಾಕಷ್ಟು ಮಂದಿ ಹೊಸಬರ ಸ್ಪರ್ಧೆಗೆ ಅಖಾಡ ಸಿದ್ಧಗೊಳ್ಳುತ್ತಿವೆ.   ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಯುವಕರ ಚಿತ್ತ ಚುನಾವಣೆಯತ್ತ ಹರಿದಿದೆ. ಕೆಲವು ಹೊಸ ಮುಖಗಳು ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಮುಖಂಡರನ್ನು ಸೆಳೆಯುವ …

Read More »