Breaking News

ಪಿಎಸ್‍ಐ ಮರುಪರೀಕ್ಷೆ ದಿನಾಂಕ ಪ್ರಕಟ ಶೀಘ್ರದಲ್ಲೇ : ಆರಗ ಜ್ಞಾನೇಂದ್ರ

ಶಿವಮೊಗ್ಗ: ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಸರ್ಕಾರ ಮರು ಪರೀಕ್ಷೆ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಪಿಎಸ್‍ಐ ಮರು ಪರೀಕ್ಷೆಯ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಿಎಸ್‍ಐ ಪರೀಕ್ಷೆಯ ಅಕ್ರಮದ ಕುರಿತು ಒಂದೊಂದೆ ಅಂಶ ಹೊರಗೆ ಬರುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಅನೇಕರನ್ನು ಬಂಧಿಸಲಾಗಿದೆ. ಪರೀಕ್ಷೆಯಲ್ಲಿ ನೂತನ ಟೆಕ್ನಾಲಜಿ ಬಳಸಿ ಅಕ್ರಮ ಎಸಗಿದ್ದಾರೆ. ಹೀಗಾಗಿ ಮರು …

Read More »

ಸಾವಿರ ಕೋಟಿ ಕ್ಲಬ್‌ಗ ಕನ್ನಡದ ಕೆಜಿಎಫ್-2;

ಬೆಂಗಳೂರು: ನಿರೀಕ್ಷೆಯಂತೆಯೇ ಯಶ್‌ ನಟನೆಯ “ಕೆಜಿಎಫ್-2′ ಚಿತ್ರ ಒಂದು ಸಾವಿರ ಕೋಟಿ ರೂ.ಕಲೆಕ್ಷನ್‌ ಮಾಡಿದ್ದು, ಈ ಸಾಧನೆ ಮಾಡಿರುವ ಮೊದಲ ಕನ್ನಡ ಮೊದಲ ಹಾಗೂ ಭಾರತೀಯ ಚಿತ್ರರಂಗದ ನಾಲ್ಕನೇ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.   ಬಿಡುಗಡೆಯಾದ ದಿನದಿಂದಲೇ ಕಲೆಕ್ಷನ್‌ನಲ್ಲಿ ನಾಗಾಲೋಟದಲ್ಲೇ ಸಾಗಿದ “ಕೆಜಿಎಫ್-2′ 15ನೇ ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಿದೆ. ಗುರುವಾರದ ವೇಳೆಗೆ ಚಿತ್ರದ ಜಾಗತಿಕ ಕಲೆಕ್ಷನ್‌ 997 …

Read More »

ಮುಸ್ಲಿಮರಿಗೆ ದ್ರೋಹ ಮಾಡಿದರೆ ರಾಜಕೀಯ ನಿವೃತ್ತಿ : ಶಾಸಕ ಜಿ ಸೋಮಶೇಖರ ರೆಡ್ಡಿ

ಬಳ್ಳಾರಿ: ನನ್ನ ಕೊನೆಯ ಉಸಿರು ಇರುವವರೆಗೂ ಮುಸ್ಲಿಂ ಸಮುದಾಯದಕ್ಕೆ ದ್ರೋಹ ಮಾಡಲ್ಲ. ನಾನೇನಾದರೂ ಮುಸ್ಲಿಂರಿಗೆ ದ್ರೋಹ ಬಗೆದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಅವರು ನಗರದ ಕೌಲಬಜಾರ್​​​​ನ ಎಂ.ಆರ್. ಫಂಕ್ಷನ್ ಹಾಲ್‌ನಲ್ಲಿ ರಂಜಾನ್ ಪ್ರಯುಕ್ತ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ನಿಷ್ಠುರವಾದಿ, ಮನಸ್ಸಿನಲ್ಲಿ ಇರುವುದನ್ನು ಹೇಳಿ ಬಿಡುತ್ತೇನೆ, ಮತ್ತೆ ಅದನ್ನು ಮರೆತು …

Read More »

PSI ನೇಮಕಾತಿ ರದ್ದು ಮಾಡಿದ ‘ರಾಜ್ಯ ಸರ್ಕಾರ’: ಹೆಚ್ಚಿದ ಆಕ್ರೋಶ, ವ್ಯಾಪಕ ಟೀಕೆ ಇಂದಿನಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ರಾಜ್ಯ ಸರ್ಕಾರದ ನಿದ್ದೆಕೆಡಿಸಿರುವ PSI ನೇಮಕ ಹಗರಣ ದಿನದಿಂದ ದಿನಕ್ಕೆ ಒಂದ ತಿರುವು ಪಡೆದುಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಮತ್ತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.   ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಅಭ್ಯರ್ಥಿಗಳ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರ್ಕಾರ ಯಾರದ್ದೂ ತಪ್ಪನ್ನು ನಮಗೆ ಶಿಕ್ಷೆ ನೀಡಲು ಮುಂದಾಗಿರುವುದು ನಮಗೆ ಬೇಸರ ತಂದಿದ್ದೆ, ಈ ನಿಟ್ಟಿನಲ್ಲಿ ಕಾನೂನು …

Read More »

ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ : ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

ನವದೆಹಲಿ : 2022 ರ ಮೊದಲ ಸೂರ್ಯ ಗ್ರಹಣ ಏಪ್ರಿಲ್ 30 ಇಂದು ಸಂಭವಿಸುತ್ತದೆ. ಇದು 2022 ರಲ್ಲಿ ಬರುವ ಎರಡು ಭಾಗಶಃ ಸೌರ ಗ್ರಹಣಗಳಲ್ಲಿ ಮೊದಲನೆಯದು; ಎರಡನೆಯದು ಅಕ್ಟೋಬರ್ 25 ರಂದು ಸಂಭವಿಸುತ್ತದೆ.   2023 ರವರೆಗೆ ನಾವು ಮತ್ತೊಂದು ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದಿಲ್ಲ.ಒಂದೇ ರೇಖೆಯಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣವು ಒಂದು ಅದ್ಭುತವಾದ ದೃಶ್ಯ ಮತ್ತು ಅಪರೂಪದ ಖಗೋಳ ಘಟನೆಯಾಗಿದೆ. …

Read More »

ಕಷ್ಟಪಟ್ಟು ಓದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದೇನೆ. ಸರ್ಕಾರ ಮುರುಪರೀಕ್ಷೆ ನಿರ್ಧಾರ ಮಾಡಿ ಬದುಕಿನ ಖುಷಿಯನ್ನೇ ಕೊಂದು ಹಾಕಿತು

ಹುಬ್ಬಳ್ಳಿ: ನನ್ನ ತಾಯಿಯ ₹1,500 ಪಿಂಚಣಿ ಹಣದಲ್ಲಿ ಕಷ್ಟಪಟ್ಟು ಓದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದೇನೆ. ಸರ್ಕಾರ ಮುರುಪರೀಕ್ಷೆ ನಿರ್ಧಾರ ಮಾಡಿ ಬದುಕಿನ ಖುಷಿಯನ್ನೇ ಕೊಂದು ಹಾಕಿತು ಎಂದು 94ನೇ ರ್‍ಯಾಂಕ್‌ ಪಡೆದ ಚಿಕ್ಕೋಡಿಯ ಸಂತೋಷ್‌ ಕಾಂಬ್ಳೆ ಸೇನಾಪತಿ ನೋವು ತೋಡಿಕೊಂಡರು. ‘ಹುದ್ದೆಗೆ ಆಯ್ಕೆ ಮಾಡುವಂತೆ ನಾನು ಯಾರಿಗಾದರೂ ಹಣ ಕೊಟ್ಟಿದ್ದರೆ ಅದನ್ನು ವಾಪಸ್‌ ಕೊಡಲಿ; ಅದೇ ಹಣದಿಂದ ಊರಿನಲ್ಲಿಯೇ ಗ್ಯಾರೇಜ್‌ ಆರಂಭಿಸುತ್ತೇನೆ. ನಮ್ಮ ಕುಟುಂಬದ ಎಲ್ಲಾ ಆಸ್ತಿ ಮಾರಿದರೂ ₹3 …

Read More »

ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಆಯುಷ್ಮಾನ್: ಆಯುಷ್ಮಾನ್ ಭಾರತ ದಿನ ಇಂದು

ಬೆಂಗಳೂರು: ಎರಡು ವರ್ಷಗಳಿಂದ ಜನರನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಗುರಿಯೊಂದಿಗೆ ದೇಶವು ಇಂದು (ಏ.30) ಆಯುಷ್ಮಾನ್ ಭಾರತ ದಿನವನ್ನು ಆಚರಿಸುತ್ತಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಆರೋಗ್ಯ ರಕ್ಷಣೆಯ ಅರಿವು ಮೂಡಿಸಲು ಈ ದಿನವನ್ನು ಗೊತ್ತುಪಡಿಸಲಾಗಿದೆ. ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲು ಬಡವರು ಮತ್ತು ಸೌಲಭ್ಯವಂಚಿತರಿಗೆ ಆರೋಗ್ಯ ವಿಮಾ ರಕ್ಷಣೆ ಖಚಿತಪಡಿಸಿಕೊಳ್ಳಲು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಕುರಿತು …

Read More »

ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ

ವಿಜಯಪುರ, ಏಪ್ರಿಲ್ 29 ; ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯುತ್ತಿದೆ. ಈ ವೇಳೆ ಶಿಕ್ಷಕರಿಗೆ ಉತ್ತರ ಪತ್ರಿಕೆಯೊಂದು ಸಿಕ್ಕಿದ್ದು, ವಿದ್ಯಾರ್ಥಿ ಸಾಷ್ಟಾಂಗ ನಮಸ್ಕಾರ ಹಾಕಿದ್ದಾನೆ. ವಿಜಯಪುರದ ಸ್ನೇಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೌಲ್ಯ ಮಾಪನದ ವೇಳೆ ಈ ಪತ್ರಿಕೆ ಪತ್ತೆಯಾಗಿದೆ. ಬಿಲ್ ಕಲೆಕ್ಟರ್ ಆಗಿ ಮುಂಬಡ್ತಿ ಪಡೆಯಲು ಒಂದು ಅಂಕ ನೀಡಿ ಎಂದು ಮನವಿ ಮಾಡಿರುವ ಈ ಪತ್ರಿಕೆ ಫೋಟೋ ವೈರಲ್ ಆಗಿದೆ. ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿರುವ …

Read More »

ಕುಡಿದು ಬಂದ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿ ಅಪ್ರಾಪ್ತ ಬಾಲಕ..!

ಧಾರವಾಡ : ಅಪ್ರಾಪ್ತ ಬಾಲಕನೊಬ್ಬ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪುಂಡಲೀಕ (43) ಎಂದು ಗುರುತಿಸಲಾಗಿದೆ. ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತಿದ್ದ ತಂದೆ ಯಿಂದ ರೋಸಿ ಹೋಗಿದ್ದ ಮಗ, ಕೊನೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಾಲಕ ಇನ್ನೂ 17 ವರ್ಷದವನಾಗಿದ್ದು, ತಂದೆಯ ಜೊತೆ ಕಳೆದ ನಾಲ್ಕು ದಿನಗಳ ಹಿಂದೆ ಕೂಡಾ ಜಗಳ ಮಾಡಿದ್ದ. ಆದರೂ ತಂದೆ ಕುಡಿದು …

Read More »

ರಾಜ್ಯದಾದ್ಯಂತ ಮೇ.16ರಿಂದ ಶಾಲೆ ಪ್ರಾರಂಭ,

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿನ ಕಲಿಕಾ ಕೊರತೆಯನ್ನು ಸರಿದೂಗಿಸೋ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.   ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ( School Education Department ) 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಈ ವೇಳಾಪಟ್ಟಿಯಂತೆ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲಾಗಿದ್ದು, ವಾರ್ಷಿಕ ಪಠ್ಯವಸ್ತು ಬೋಧನೆಯನ್ನು ಕಲಿಕಾ …

Read More »