Breaking News

ನಿಜ ಹೇಳಬೇಕೆಂದರೆ, ಹೊಸಬನ ತರಹ ಫೀಲ್​ ಆಗುತ್ತಿದೆ, ಆಗ ಪ್ರಯತ್ನ ಈಗ ಅನಿವಾರ್ಯತೆ

ನಿಜ ಹೇಳಬೇಕೆಂದರೆ, ಹೊಸಬನ ತರಹ ಫೀಲ್​ ಆಗುತ್ತಿದೆ …’ ಶರಣ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡೂವರೆ ವರ್ಷಗಳಾಗಿವೆ. 2019ರ ಅಕ್ಟೋಬರ್​ನಲ್ಲಿ ಅವರ ‘ಅಧ್ಯಕ್ಷ ಇನ್​ ಅಮೆರಿಕಾ’ ಬಿಡುಗಡೆಯಾಗಿತ್ತು. ಇಂದು ‘ಅವತಾರ ಪುರುಷ 1′ ಬಿಡುಗಡೆಯಾಗುತ್ತಿದೆ. ಈ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಜನರ ಅಭಿರುಚಿ, ಮನಸ್ಥಿತಿ, ಚಿತ್ರಗಳ ಶೈಲಿ ಎಲ್ಲವೂ ಬೇರೆಯಾಗಿದೆ. ಹೀಗಿರುವಾಗ, ‘ಅವತಾರ ಪುರುಷ’ ಬಗ್ಗೆ ಏನನ್ನುತ್ತೀರಿ? ಎಂದರೆ, ಸರಿಯಾದ ಸಮಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಉತ್ತರ ಅವರಿಂದ ಬರುತ್ತದೆ. …

Read More »

532 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

ಬೆಂಗಳೂರು, ಮೇ 6: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.   ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು …

Read More »

ವಿಟ್ಲದಲ್ಲಿ ಅಪ್ರಾಪ್ತೆ ಆತ್ಮಹತ್ಯೆ

ಮಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್‍ಗೆ ಪುಷ್ಟಿ ನೀಡುವ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ನಡೆದ ಘಟನೆಯೂ ಸೇರಿಕೊಂಡಿದೆ. ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಂಪತಿಯ 14 ವರ್ಷದ ಮಗಳು ನೇಣು ಬಿಗಿದ …

Read More »

ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗ್ತಿದ್ದೇವೆ: ಚಂದ್ರಶೇಖರ ಸ್ವಾಮೀಜಿ

ತುಮಕೂರು: ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗುತ್ತಿದ್ದೇವೆ. ಮಠಾಧೀಶರು ಎಚ್ಚರದಿಂದ ದೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಧರ್ಮದಿಂದ ದೇಶ ಉಳಿಸುವ ಕೆಲಸ ಮಾಡಬೇಕು. ನಮಗೆ ರಾಜಕೀಯ ಬೇಡ ದೇಶ ಬೇಕಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ವಿಷಾದಿಸಿದರು. ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಸಂಸ್ಮರಣೆ, ಗುರುಲಿಂಗ ಜಂಗಮರ ಪೂಜೆ, ಬಸವ ಜಯಂತಿ, ರಾಜ್ಯಮಟ್ಟದ ಭಜನಾ ಮೇಳ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಅವರು …

Read More »

ಖಾವಿ ಬಟ್ಟೆತೊಟ್ಟು ಗುತ್ತಿಗೆದಾರನಿಂದ ಲಕ್ಷ-ಲಕ್ಷ ಕಿತ್ತ ಸ್ವಾಮೀಜಿಗಳು: ಪ್ರಕರಣ ದಾಖಲು

ನಾವು ಕಲ್ಲೂರು ಮಠದ ಸ್ವಾಮೀಜಿ, ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ಹಣ ಬಂದಿದೆ ಎಂದು ಗುತ್ತಿಗೆದಾರನನ್ನ ನಂಬಿಸಿ 3 ಲಕ್ಷಕ್ಕೆ ಟೋಪಿ ಹಾಕಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಮೂಲದ ವಿಜಯ್‌ಕುಮಾರ್ ಅವರೇ ವಂಚನೆಗೆ ಒಳಗಾದವರು. ಮಠಕ್ಕೆ ರಾಜಕಾರಣಿಗಳಿಂದ ಅನುದಾನ ಬಂದಿದ್ದು, ಇದನ್ನು ಸಾಲದ ರೂಪದಲ್ಲಿ ಜನರಿಗೆ ನೀಡುತ್ತಿದ್ದೇವೆ ಎಂದು ನಂಬಿಸಿದ್ದಾರೆ. ಕಾವಿ ಬಟ್ಟೆ ಧರಿಸಿದ ಖದೀಮರು ಶಿವಮೊಗ್ಗದಲ್ಲಿ ವಿಜಯ್‌ಕುಮಾರ್ …

Read More »

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವಂತ 84 ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವಂತ 84 ಗ್ರಾಮಲೆಕ್ಕಿಗರ ಹುದ್ದೆಗಳನ್ನು ( Village Accountant ) ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು, ಸರ್ಕಾರ ಅನುಮತಿ ನೀಡಿದೆ.   ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಬಂಧ ಪಟ್ಟಂತ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಖಾಲಿ ಇರುವಂತ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ( VA Recruitment ) ಮೂಲಕ ಭರ್ತಿ ಮಾಡಿಕೊಳ್ಳು ಅನುಮತಿಸಲಾಗಿದೆ ಎಂದು …

Read More »

ರಾಜ್ಯದಲ್ಲಿ ‘ಜೆಡಿಎಸ್ ಪಕ್ಷ’ ಅಧಿಕಾರಕ್ಕೆ ಬಂದ್ರೇ.. ‘LKGಯಿಂದ ಪಿಯುಸಿ’ವರೆಗೆ ‘ಉಚಿತ ಶಿಕ್ಷಣ’ – ಮಾಜಿ ಸಿಎಂ ಕುಮಾರಸ್ವಾಮಿ

ತುಮಕೂರು: ಮುಂಬರುವಂತ 2023ರ ವಿಧಾನಸಭಾ ಚುನಾವಣೆಯಲ್ಲಿ ( Assembly Election ) ಜೆಡಿಎಸ್ ಪಕ್ಷ ( JDS Party )ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬಂದ್ರೇ.. ಎಲ್ ಕೆ ಜಿಯಿಂದ ದ್ವಿತೀಯ ಪಿಯುಸಿವರೆಗೆ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಹೈಟೆಕ್ ಶಾಲೆಗಳನ್ನು ತೆರೆದು, ಉಚಿತ ಶಿಕ್ಷಣ ( Free Education ) ನೀಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ತುಮಕೂರಿನ ಶಿರಾದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದಂತ …

Read More »

ಶೀಘ್ರವೇ ದೇಶದಲ್ಲಿ ‘CAA ಜಾರಿ – ಗೃಹ ಸಚಿವ ಅಮಿತ್‌ ಶಾ ಘೋಷಣೆ |

ಕೋವಿಡ್ -19 ಅಲೆ ಕೊನೆಗೊಂಡ ಕ್ಷಣದಲ್ಲಿ ನಾವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಗುರುವಾರ ಹೇಳಿದ್ದಾರೆ. ಅವರು ಇದೇ ವೇಳೇ ಅವರು ‘ಮಮತಾ ದೀದಿಯವರು ಒಳನುಸುಳುವಿಕೆಯನ್ನು ಬಯಸುತ್ತಾರೆ ಅಂತ ಕಿಡಿಕಾರಿದರು. ಇನ್ನೂಟಿಎಂಸಿ ಸಿಎಎ ಬಗ್ಗೆ ವದಂತಿಗಳನ್ನು ಹರಡುತ್ತಿದೆ, ಆದರೆ ಅದು ನಿಜವಲ್ಲ, ಕೋವಿಡ್ ಅಲೆ ಕೊನೆಗೊಂಡ ಕ್ಷಣದಲ್ಲಿ ನಾವು ಸಿಎಎ ಅನ್ನು ಜಾರಿ …

Read More »

ಪುರುಷ ಮತ್ತು ಹೆಂಡತಿ ಕುಟುಂಬದ ಆಧಾರ ಸ್ತಂಭಗಳು, ಒಂದು ಮುರಿದರೆ ಇಡೀ ಮನೆ ಕುಸಿಯುತ್ತದೆ: ಹೈಕೋರ್ಟ

ನವದೆಹಲಿ: ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಪತಿ-ಪತ್ನಿ ಕುಟುಂಬದ ಎರಡು ಆಧಾರ ಸ್ತಂಭಗಳಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಒಟ್ಟಿಗೆ ನಿಭಾಯಿಸಬಹುದು, ಎಲ್ಲ ಸಂದರ್ಭಗಳಲ್ಲೂ ಕುಟುಂಬವನ್ನು ಸಮತೋಲನದಲ್ಲಿಡಬಹುದು ಎಂದು ಅಭಿಪ್ರಾಯಪಟ್ಟಿದೆ. ಒಂದು ಕಂಬ ದುರ್ಬಲವಾದರೆ ಅಥವಾ ಮುರಿದರೆ, ಇಡೀ ಮನೆ ಕುಸಿದು ಬೀಳುತ್ತದೆ ಇದೇ ವೇಳೇ ಹೇಳಿದೆ. ಗಂಡ ಹೆಂಡತಿ ಕುಟುಂಬದ ಎರಡು ಆಧಾರ ಸ್ತಂಭಗಳು, ಯಾವುದೇ ಪರಿಸ್ಥಿತಿಯನ್ನು ಒಟ್ಟಿಗೆ ನಿಭಾಯಿಸಬಹುದು, ಎಲ್ಲಾ ಸಂದರ್ಭಗಳಲ್ಲಿ ಕುಟುಂಬವನ್ನು …

Read More »

ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ

ಬೆಳಗಾವಿ, ಮೇ 5(ಕರ್ನಾಟಕ ವಾರ್ತೆ): ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗುರುವಾರ(ಮೇ 5) ಸಂಜೆ ಅಧಿಕಾರವನ್ನು ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನವರಾದ ನಿತೇಶ್ ಪಾಟೀಲ ಅವರು ಇದಕ್ಕೂ ಮುಂಚೆ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಆಹಾರ ಮತ್ತು ನಾಗರಿಕ …

Read More »