ಬೆಂಗಳೂರು : ಅಕ್ಟೋಬರ್ 2 ರಂದು ಯಶಸ್ವಿನಿ ಯೋಜನೆಯನ್ನು ಉದ್ಘಾಟನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ ಜುಲೈ ತಿಂಗಳೊಳಗೆ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ …
Read More »P.S.I.ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರ: ಭಾಸ್ಕರ್ ರಾವ್
ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರವಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು. ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ. ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ …
Read More »ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ
ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ …
Read More »ರಾಜ್ಯ ಸರ್ಕಾರಿ ನೌಕರ ಸಂಘ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ
ಚಿಕ್ಕೋಡಿ(ಬೆಳಗಾವಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹುಕ್ಕೇರಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ನೌಕರ ಅವಿನಾಶ್ ಹೊಳೆಪ್ಪಗೋಳ ಅವಿರೋಧ ಆಯ್ಕೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಜರಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ್ ಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಅವಿನಾಶ್ ಅವರನ್ನು …
Read More »ವೈದ್ಯನೊಬ್ಬ ಪೋಸ್ಟ್ ಮಾರ್ಟಂ ಮಾಡಬೇಕಾದರೆ 16000 ರೂ. ನೀಡುವಂತೆ ಲಂಚಕ್ಕೆ ಬೇಡಿಕೆ
ನೆಲ್ಲೂರು(ಆಂಧ್ರಪ್ರದೇಶ): ಆತ್ಮಹತ್ಯೆ ಮಾಡಿಕೊಂಡ ಪತಿ ಶವವನ್ನು ಪೋಸ್ಟ್‌ಮಾರ್ಟಂ ಮಾಡಲು ಮಹಿಳೆಯೊಬ್ಬರು ಹರಸಾಹಸ ಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯನೊಬ್ಬ ಲಂಚ ಕೇಳಿರುವ ಅಮಾನವೀಯ ಘಟನೆಯೊಂದು ನೆಲ್ಲೂರು ಜಿಲ್ಲೆಯ ಉದಯಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯನ ಹೆಸರು ಸಂದಾನಿ ಬಾಷಾ. ಮರಣೋತ್ತರ ಪರೀಕ್ಷೆ ಮಾಡಲು ಲಂಚ ಕೇಳಿದ ವೈದ್ಯದೂರವಾಣಿ ಮೂಲಕ ಮಾತನಾಡಿರುವ ವೈದ್ಯ ಹಣ ನೀಡಿದರೆ ಮಾತ್ರ ಗಂಡನ ದೇಹವನ್ನು ಪೋಸ್ಟ್‌ಮಾರ್ಟಂ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಮಹಿಳೆ …
Read More »ರಮೇಶ್ ಜಾರಕಿಹೊಳಿ ವಿರುದ್ಧದ ಷಡ್ಯಂತ್ರದಲ್ಲಿ ಬಿಜೆಪಿ ಮಹಾನ್ ನಾಯಕರೊಬ್ಬರ ಪುತ್ರನ ಪಾತ್ರವಿದೆ : ಯತ್ನಾಳ್ ಹೊಸ ಬಾಂಬ್!
ಬೆಳಗಾವಿ : ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಿದವರಲ್ಲಿ ನಮ್ಮಲ್ಲಿನ ಮಹಾನ್ ನಾಯಕರೊಬ್ಬರ ಪುತ್ರನ ಪಾತ್ರವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಹಾಗೂ ಮೋಸ ಮಾಡಿದವರಲ್ಲಿ ನಮ್ಮಲ್ಲಿನ ಮಹಾನ್ ನಾಯಕರೊಬ್ಬರ ಪುತ್ರನ ಪಾತ್ರವಿದೆ ಎಂದು ಹೇಳಿದ್ದಾರೆ.ಇನ್ನು ಬಿಜೆಪಿಯ ಮಹಾನ್ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ …
Read More »ನನಗೆ 90 ವರ್ಷ ಆಯ್ತು ವಿಶ್ರಾಂತಿ ಬೇಕು: ಮಾಜಿ ಸಿಎಂ ಎಸ್ ಎಂ ಕೃಷ್ಣ
ಬೆಂಗಳೂರು: ಚಿತ್ರಕಲಾ ಪರಿಷತ್ನಲ್ಲಿ ಇಂಡಿಯನ್ ಆರ್ಟ್ ಫೆಸ್ಟಿವಲ್ ಇಂದಿನಿಂದ ಶುರುವಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಲನೆ ಕೊಟ್ಟರು. ಬಳಿಕ ಮಾತಾನಾಡಿದ ಅವರು, ಕಲಾಕೃತಿಗಳು ಕಣ್ಣಿಗೆ ಹಾಗೂ ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತವೆ. ನಮ್ಮ ದೇಶದ ಪ್ರಸಿದ್ಧ ಕಲಾವಿದರು, ಹೆಸರು ಮಾಡಿರುವ ಕಲಾವಿದರು ಬಂದಿದ್ದು, ಅವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಈ ಕಲಾಕೃತಿಗಳನ್ನು ನೋಡಲು ಸಂತೋಷವಾಗ್ತಿದೆ ಎಂದರು. ಈಗಿನ ರಾಜಕೀಯದಲ್ಲಿ ಆಗ್ತಿರುವ ಬೆಳವಣಿಗೆ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ …
Read More »ಮೇ 15 ರಿಂದ ಬದಲಾಗಲಿದೆ ಈ 6 ರಾಶಿಯವರ ಭವಿಷ್ಯ, ಸೂರ್ಯ ಬೆಳಗಲಿದ್ದಾನೆ ಅದೃಷ್ಟ
ಬೆಂಗಳೂರು : Surya Gochar in May 2022: ಸೂರ್ಯನ ರಾಶಿಚಕ್ರ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸೂರ್ಯನು ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತಾನೆ. ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ …
Read More »ಗಮನಿಸಿ: ಕರ್ನಾಟಕದಲ್ಲಿ ಈ ವೀಕೆಂಡ್‌ನಲ್ಲಿ ಎಣ್ಣೆ ಸಿಗಲ್ಲ!
ಬೆಂಗಳೂರು, ಮೇ 5: ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಪಾರ್ಟಿ ಮಾಡಬೇಕು. ಸ್ಯಾಲರಿ ಬಂದಿರುವ ಖುಷಿಯಲ್ಲಿ ಫ್ರೆಂಡ್ಸ್ ಜೊತೆ ಗುಂಡು ಹಾಕಬೇಕು ಎಂದುಕೊಂಡಿರುವ ಮದ್ಯಪ್ರಿಯರಿಗೆಲ್ಲ ಒಂದು ಶಾಕಿಂಗ್ ನ್ಯೂಸ್. ಶುಕ್ರವಾರದಿಂದಲೇ ರಾಜ್ಯದಲ್ಲಿ ಮುಂದಿನ ಮೇ 19ವರೆಗೂ ಎಣ್ಣೆ ಸಿಗುವುದಿಲ್ಲ. ರಾಜ್ಯದಲ್ಲಿ ಮೇ 6 ರಿಂದ 19ರವರೆಗೂ ಮದ್ಯ ಮಾರಾಟಗಾರರು ಮುಷ್ಕರ ನಡೆಸುವುದಕ್ಕೆ ನಿರ್ಧರಿಸಿದ್ದಾರೆ. ಇದರಿಂದ ಮುಂದಿನ 15 ದಿನಗಳವೆರಗೂ ಮದ್ಯಪ್ರಿಯರಿಗೆ ಎಣ್ಣೆ ಸಿಗುವುದೇ ಅನುಮಾನವಾಗಿದೆ. ಉಡುಪಿಯಲ್ಲಿ ಮಾತನಾಡಿದ ರಾಜ್ಯ ಮದ್ಯ …
Read More »ಪಿಎಸ್‍ಐ ನೇಮಕಾತಿ ಹಗರಣ: ಡಿವೈಎಸ್ಪಿ, ಇನ್ಸ್ಪೆಕ್ಟರ್ ಸಿಐಡಿ ಬಲೆಗೆ
ಬೆಂಗಳೂರು/ ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ 545 ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಡಿವೈಎಸ್ಪಿ, ಇನ್ಸ್ಪೆಕ್ಟರ್ನನ್ನು ಸಿಐಡಿ ಕೊನೆಗೂ ಬಂಧಿಸಿದೆ. ಈ ಇಬ್ಬರಿಗೂ ಕೋಳ ತೊಡಿಸುವ ಮೂಲಕ ಬಂಧಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್ಸ್ಪೆಕ್ಟರ್ ಆನಂದ ಮೇತ್ರೆನನ್ನು ಕಲಬುರಗಿಯಲ್ಲಿ ವಿಚಾರಣೆಗಾಗಿ ಕರೆದು ಬಂಧಿಸಲಾಗಿದೆ. ಅದೇ ರೀತಿ ಮೈಸೂರು ರಸ್ತೆ ಕುಂಬಳಗೋಡು ಠಾಣೆ ಕಾನ್ಸ್ಟೇಬಲ್ ಸೋಮನಾಥ್ ಮತ್ತು …
Read More »