ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಏಳು ಸದಸ್ಯರ ಅವಧಿ ಜೂನ್ 14ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಗಳ ಭರ್ತಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಬಿಜೆಪಿಯ ಲಕ್ಷ್ಮಣ ಸವದಿ, ಲಹರ್ ಸಿಂಗ್ ಸಿರೋಯಾ, ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಜೆಡಿಎಸ್‌ನ ಕೆ.ವಿ. ನಾರಾಯಣ ಸ್ವಾಮಿ ಮತ್ತು ಎಚ್.ಎಂ. ರಮೇಶ್ ಗೌಡ …
Read More »ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲಾಗಿದೆ: ಕಾಂಗ್ರೆಸ್
ಬೆಂಗಳೂರು: ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಶೇ 40 ಪರ್ಸೆಂಟ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ. ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ. ಇದು ಶೇ 40 …
Read More »ಅಶ್ವತ್ಥ ನಾರಾಯಣ ಎಂ.ಬಿ ಪಾಟೀಲರನ್ನು ಭೇಟಿಯಾಗಿದ್ದಾರೆ: ಡಿ.ಕೆ ಶಿವಕುಮಾರ್
ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ತಮ್ಮ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ವಿರುದ್ಧ ಧ್ವನಿ ಎತ್ತದಂತೆ ಮನವೊಲಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಸಚಿವರು ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಈಗ ಬೇರೆ ಸಬೂಬು ಹೇಳಬಹುದು. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಎಂ.ಬಿ. ಪಾಟೀಲರ …
Read More »PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಇದೀಗ ಖಾಕಿ ಸುತ್ತಲೂ ಸುತ್ತುವರಿಯೋಕೆ ಮುಂದಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್‍ಪಿ ಕಮಾಂಡೆಂಟ್ ವೈಜನಾಥ್ ರೇವೂರ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಲ್ಲಿ 10 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್‍ಐ ಹಗರಣದ ಒಂದೊಂದೇ ರಹಸ್ಯ ಬಯಲಾಗ್ತಿದ್ದಂತೆ ಅಲರ್ಟ್ ಆದ ಸಿಐಡಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ …
Read More »ಸಿದ್ದರಾಮಯ್ಯ ಅವರೊಬ್ಬರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಗೂಂಡಾಗಳು ಎಂದ ಯತ್ನಾಳ್
Kalaburagi: ಅಜಾನ್ ವಿರುದ್ಧ ಕೆಲವು ಹಿಂದೂ ಸಂಘಟನೆಗಳ ಪ್ರತಿಭಟನೆ ಸೋಮವಾರದಿಂದ ಹೆಚ್ಚಾಗಿದೆ. ರಾಜ್ಯದ ಹಲವಾರು ಭಾಗಗಳ ಹಿಂದೂ ದೇವಸ್ಥಾನಗಳಲ್ಲಿ (Hindu temples) ಸುಪ್ರಭಾತ ಮತ್ತು ಹನಮಾನ್ ಚಾಲಿಸಾ (Hanuman Chalisa) ಧ್ವನಿವರ್ಧಕಗಳ ಮೂಲಕ ಪಠಿಸಲಾಗುತ್ತಿದೆ. ಹಾಗಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಯಾನ್ ಬಾಜಿ ಶುರುವಾಗಿದೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ (BK Hari Prasad) ಅವರು ಅಜಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರು …
Read More »ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿ ಕುಸಿತ; ಇದು ಕಳಪೆ ಕಾಮಗಾರಿಗೆ ಸಾಕ್ಷಿ ಎಂದ ಆಪ್ ಪಕ್ಷ
ಬೆಂಗಳೂರು: ನಿನ್ನೆ(ಏಪ್ರಿಲ್ 08) ಸುರಿದ ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಕುಸಿದುಬಿದ್ದಿದೆ. ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್‌ಎಸ್‌ಆರ್ ಲೇಔಟ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿಯ ಮೇಲ್ಛಾವಣಿ ಕುಸಿದುಬಿದ್ದಿದೆ. ಹೀಗಾಗಿ ಆಪ್ ಕಾರ್ಯಕರ್ತರು ಸ್ಟೇಡಿಯಂ ಪರಿಸ್ಥಿತಿ ನೋಡಲು ಸ್ಥಳಕ್ಕೆ ಬಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಕಟ್ಟುವಾಗ ಕಳಪೆ ಕಾಮಗಾರಿ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸ್ಟೇಡಿಯಂ ಕಟ್ಟಿ ಮೂರು ತಿಂಗಳು ಕಳೆದಿಲ್ಲ ಆಗಲೇ …
Read More »‘ಮೋದಿ ಕ್ಯಾಂಟಿನ್’ ತೆರೆದ ಮಾಜಿ ಐಎಎಸ್ ಶಿವರಾಮ್
K. Shivram: 2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಕೆ ಶಿವರಾಮ್, ಆರು ತಿಂಗಳಿಗೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿ, ಜೆಡಿಎಸ್ ಸೇರ್ಪಡೆಯಾದರು. 2014ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಮುಂದೆ 2016ರಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಐಎಎಸ್ ಅಧಿಕಾರಿ, ಸಿನಿ ನಟ ಮತ್ತು ಹಾಲಿ ರಾಜಕಾರಣಿ ಶಿವರಾಮು ಕೆ (ಶಿವರಾಮು ಕೆಂಪಯ್ಯ- ಕೆ ಶಿವರಾಮ್) ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಮೂಲತಃ ರಾಮನಗರ …
Read More »ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ: ಹೆಚ್ಡಿ ದೇವೇಗೌಡ
ಚಿಕ್ಕಮಗಳೂರು: ಜೆಡಿಎಸ್ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ದೇವೇಗೌಡರಿಗೆ 90 ವರ್ಷ ವಯಸ್ಸಾಗಿದೆ ಎಂದು ಯಾರೋ ಹೇಳಿದ್ರು. ಆದ್ರೆ ನನಗೆ ಇನ್ನೂ 90 ಮುಟ್ಟೇ ಇಲ್ಲ. ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ? ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ ಎಂದು ಹೆಚ್.ಡಿ. …
Read More »ದಿವ್ಯಾ ದಂಪತಿಗೆ ಜೈಲುಭಾಗ್ಯ, ಜಡ್ಜ್ ಮುಂದೆ ಸಿಐಡಿ ಅಧಿಕಾರಿ ವಿರುದ್ಧ ಆರೋಪಗಳ ಸುರಿಮಳೆ
ಬೆಂಗಳೂರು/ ಕಲಬುರ್ಗಿ: 545 ಪಿಎಸ್‍ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment scam) ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿರುವ ಬಂಧಿತ 11 ಅಭ್ಯರ್ಥಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ. ಪ್ರಕರಣದ ಇಬ್ಬರು ಆರೋಪಿಗಳಿಗೆ 4 ದಿನ ಸಿಐಡಿ ಕಸ್ಟಡಿ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಮಾಡಿದೆ. ಈ ಮಧ್ಯೆ, ಬೆಂಗಳೂರಿನ ಈ ಆರೋಪಿಗಳು ಜಡ್ಜ್ ಮುಂದೆ ತನಿಖಾಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿಐಡಿ ಕಸ್ಟಡಿ …
Read More »ಯಡಿಯೂರಪ್ಪನವರನ್ನು 45 ನಿಮಿಷಗಳ ಕಾಲ &ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಗಿ: ಬಸನಗೌಡ ಪಾಟೀಲ್ ಯತ್ನಾಳ್
ಕಲಬುರಗಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತಾಡಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಕುರಿತಾದ ಒಂದು ಮೂಲಭೂತ ಪ್ರಶ್ನೆಗೆ ಸಮಾಧಾನ ನೀಡಿದರು. ಯತ್ನಾಳ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳ ಎದುರೇ ಯಾಕೆ ರೇಗಾಡುತ್ತಾರೆ, ಪಕ್ಷದ ವೇದಿಕೆಯಲ್ಲಿ ಅಥವಾ ಹೈಕಮಾಂಡ್ (high command) ಮುಂದೆ ಆ ವಿಷಯಗಳನ್ನು ಯಾಕೆ ಚರ್ಚಿಸುವುದಿಲ್ಲ ಅಂತ ಮಾಧ್ಯಮದವರು ಕೇಳಿದಾಗ ಶಾಸಕರು; ಪಕ್ಷದ ವೇದಿಕೆಯಲ್ಲಿ ತನಗೆ ಮಾತಾಡುವ …
Read More »