ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಇಡೀ ವಿಶ್ವದಾಧ್ಯಂತ ಆಚರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಕೂಡ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು. ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಬಿಮ್ಸ ಉಪನ್ಯಾಸ ಕೊಠಡಿಯಲ್ಲಿ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತಿಯ ಹೊಸ ಅಧ್ಯಾಯ …
Read More »ನಿರಂತರ ಮಳೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ
ಬೆಂಗಳೂರು: ನೆರೆಯ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವದರಿಂದ ಕೃಷ್ಣಾ ನದಿಯ ಒಳಹರಿವು ಹೆಚ್ಚಿದೆ. ಆಲಮಟ್ಟಿ ಜಲಾಶಯದ ಒಳಹರಿವು ಇಂದು 75,149 ಕ್ಯೂಸೆಕ್ಸ್ ಇದೆ. ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು …
Read More »ಗನ್ಮ್ಯಾನ್ಗೆ ಪಿಎಸ್‌ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್‌ಪಿನ್
ಅಫಜಲಪುರ (ಕಲಬುರಗಿ): ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಆಳಕ್ಕೆ ಹೋದಷ್ಟೂ ಹಲವು ಗಣ್ಯರ ಹೆಸರು ಹೊರಕ್ಕೆ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಮೃತ್ ಪೌಲ್ ಅವರು ಈ ಕೇಸ್ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಕಾಂಗ್ರೆಸ್ ಶಾಸಕರೊಬ್ಬರ ಮಗ ಹಾಗೂ ಅವರ ಸಹೋದರ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಶಾಸಕರ ಸಹೋದರ ಎಸ್.ವೈ.ಪಾಟೀಲ್ಗೆ ಸಂಕಷ್ಟ ಎದುರಾಗಿದೆ. ಶಾಸಕ ಎಂ.ವೈ.ಪಾಟೀಲ್ …
Read More »ಆಸ್ತಿ ಖರೀದಿ, ಮಾರಾಟಗಾರರು, ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಆಸ್ತಿ ನೋಂದಣಿ, ಪೌತಿ ಖಾತೆ ಆಕ್ಷೇಪಣೆ ಅವಧಿ ಕಡಿತ
ಕಂದಾಯ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿ ಮತ್ತು ಪೌತಿ ಖಾತೆಯ ಆಕ್ಷೇಪಣೆ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಒಬ್ಬರ ಹೆಸರಿನಿಂದ ಮತ್ತೊಬ್ಬರ ಹೆಸರಿಗೆ ಆಸ್ತಿ ನೋಂದಣಿ ಆದ ನಂತರ ಖಾತೆ ಬದಲಾವಣೆಯಾಗಲು 35 ದಿನ ಕಾಯಬೇಕು. ಪೌತಿ ಖಾತೆಯಡಿ ಆಸ್ತಿ ವರ್ಗಾವಣೆಯಾದಾಗಲೂ 45 ದಿನ ಕಾಯಬೇಕು. ಇದರ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿಗೆ ಹಾಲಿ ಆಕ್ಷೇಪಣೆ ಅವಧಿ 35 …
Read More »ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಜಾ ಕೋರಿ ಪ್ರಧಾನಿ ಮೋದಿಗೆ ಖಾಸಗಿ ಶಾಲೆಗಳ ಪತ್ರ
ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ( Textbook revision controversy ) ಸದ್ಯಕ್ಕೆ ಮುಗಿಯುವಂತಿಲ್ಲ. ಪಠ್ಯಪುಸ್ತಕ ಪರಿಷ್ಕರಣಾ ವಿಚಾರ ಸೇರಿದಂತೆ ಶಿಕ್ಷಣ ಇಲಾಖೆಯ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ವಜಾಗೊಳಿಸುವಂತೆ ಸೂಚಿಸಬೇಕು ಎಂದು ರುಪ್ಸಾ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ. ಈ ಬಗ್ಗೆ ನೋಂದಾಯಿತ ಅನುದಾನ ರಹಿತ ಖಾಸಗಿ …
Read More »ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವ-.:ಯತ್ನಾಳ
ಬಾಗಲಕೋಟೆ: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು. ಉತ್ಸವ, ಭಂಡಾರ, ಕೇಸರಿ ಹಚ್ಚಿಕೊಳ್ಳೋದು ಅಂದ್ರೆ ಅವರಿಗೆ ಅಲರ್ಜಿ ಆಗುತ್ತದೆ. ಅದೇ ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ ಆಗುತ್ತದೆ. ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದ್ಯಾವ ಉತ್ಸವರಿ, ಇದು ಕೊನೆಯದ್ದು, ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ …
Read More »ಲಂಕಾ ಸಮಸ್ಯೆ ಭಾರತ ಸರಕಾರಕ್ಕೂ ಸವಾಲು
ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದೆ. ಇದೇ ಸಂದರ್ಭದಲ್ಲಿ ಜಾಕ್ರೋಶಕ್ಕೆ ಹೆದರಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ. ಇತ್ತ ಅವರ ನಿವಾಸಕ್ಕೆ ಮುತ್ತಿಗೆ ಹಾಕಿರೋ ಸಾವಿರಾರು ಪ್ರತಿಭಟನಾಕಾರರು, ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅಲ್ಲದೇ ಅಧ್ಯಕ್ಷರು ಮತ್ತು ಪ್ರಧಾನಿ ರಾಜೀನಾಮೆ ನೀಡೋವರೆಗೆ ಸ್ಥಳದಿಂದ ತೊರೆಯೋದಿಲ್ಲ ಎಂದು ಘೋಷಿಸಿದ್ದಾರೆ. ಈ ಮಧ್ಯೆ ಗೋಟಬಯ ನಿವಾಸದಲ್ಲಿ ಕೋಟ್ಯಂತರ ರೂ ಹಣ ಕೂಡ ಪತ್ತೆಯಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬೊಯ …
Read More »ದೇವೇಗೌಡರ ಮನೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ& C.M. ಬೊಮ್ಮಾಯಿ,
ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಬಿಜೆಪಿ ಶಾಸಕರು ಮತ್ತು ಸಂಸದರ ಬೆಂಬಲ ಪಡೆಯುವ ಸಲುವಾಗಿ ಇಂದು ಕರ್ನಾಟಕಕಕ್ಕೆ ಆಗಮಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೂ ಭೇಟಿಯಾದರು. ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ದ್ರೌಪದಿ ಮುರ್ಮು ಅವರು ಭೇಟಿಯಾಗಿದ್ದು, ಅಲ್ಲಿ ದೇವೇಗೌಡರ ಬೆಂಬಲಕ್ಕಾಗಿ ಮನವಿ ಮಾಡಿಕೊಂಡರು. ಬೆಂಗಳೂರಿನ ಖಾಸಗಿ ಹೋಟೆಲ್ನಿಂದ ಹೊರಟ ದ್ರೌಪದಿ ಮುರ್ಮು ಅವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ …
Read More »ಯುವತಿಯ ಸೌಂದರ್ಯಕ್ಕೆ ಸೋತು ಬೆತ್ತಲಾದವನಿಗೆ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹೆಣಗಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ …
Read More »ಪಿಎಸ್‌ಐ ನೇಮಕಾತಿ ಅಕ್ರಮ: ಹೆದರಿಸಿ ₹10 ಲಕ್ಷ ವಸೂಲಿ ಮಾಡಿದ್ದ ಡಿವೈಎಸ್ಪಿ!
ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದವರ ಮಾಹಿತಿ ಇದ್ದರೂ ಬಂಧಿಸುವುದನ್ನು ಬಿಟ್ಟು ₹80 ಲಕ್ಷಕ್ಕೆ ಬೇಡಿಕೆ ಇಟ್ಟು ಸಂಧಾನದ ಬಳಿಕ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ₹10 ಲಕ್ಷ ಪಡೆದಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ‘ಅಕ್ರಮದ ಕಿಂಗ್‌ಪಿನ್ ಅಫಜಲ ಪುರದ ಆರ್.ಡಿ.ಪಾಟೀಲ ಸೂಚನೆ ಆಧರಿಸಿ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಮಂಜುನಾಥ ಮೇಳಕುಂದಿ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಳ್ಳ ಅವರಿಗೆ …
Read More »