ಬೆಳಗಾವಿ: ಮಿದುಳು ನಿಷ್ಕ್ರಿಯವಾದ ಯುವತಿಯೊಬ್ಬರ ಹೃದಯವನ್ನು ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಲು ಕ್ಷಿಪ್ರ ಸಿದ್ಧತೆ ನಡೆಸಲಾಗಿದೆ. ಅಪಘಾತದಿಂದ ಗಾಯಗೊಂಡ ಯುವತಿಯೊಬ್ಬರು ಧಾರವಾಡ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಮಿದುಳು ನಿಷ್ಕ್ರಿಯವಾಗಿದ್ದು, ಹೃದಯ ಬಡಿದುಕೊಳ್ಳುತ್ತಿದೆ. ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಯುವಕನಿಗೆ ಹೃದಯ ಕಸಿ ಮಾಡಬೇಕಾಗಿದೆ. ಹೀಗಾಗಿ, ಧಾರವಾಡದ ಯುವತಿಯ ಹೃದಯವನ್ನೇ ಬೆಳಗಾವಿಯ ಯುವಕನಿಗೆ ಕಸಿ ಮಾಡಲು ಯುವತಿ ಪಾಲಕರು ಸಮ್ಮತಿಸಿದ್ದಾರೆ. …
Read More »ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ.: ಗೋವಿಂದ ಕಾರಜೋಳ
ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇದೆ. ಎರಡು ದಿನಗಳ ಹಿಂದೆ 30 ಟಿಎಂಸಿ ಅಡಿಯಷ್ಟು ನೀರು ಅಲ್ಲಿ ಸಂಗ್ರಹವಾಗಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಒಟ್ಟು 105 ಟಿಎಂಸಿ ಅಡಿ. ಅದು ಸಂಪೂರ್ಣ ತುಂಬುವವರೆಗೆ ನೀರನ್ನು ಹೊರ ಬಿಡುವುದಿಲ್ಲ. …
Read More »ದೂಧ್ ಸಾಗರ್ ಜಲಪಾತಕ್ಕೆ ಪ್ರವೇಶ ನಿರಾಕರಿಸಿದ ಆರ್ ಪಿಎಫ್, ಪ್ರವಾಸಿಗರಿಗೆ ನಿರಾಸೆ
ಹುಬ್ಬಳ್ಳಿ: ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಖ್ಯಾತ ಪ್ರವಾಸಿ ಆಕರ್ಷಣೀಯ ತಾಣ ದೂಧಸಾಗರ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ರೈಲ್ವೇ ರಕ್ಷಣಾ ಪಡೆ ನಿಷೇಧಿಸಿದ್ದು, ಇದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಜಲಪಾತವು ಮಳೆಗಾಲದ ಸಮಯದಲ್ಲಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಆಗ ಜಲಪಾತಗಳು ತನ್ನ ಸಂಪೂರ್ಣ ವೈಭವಕ್ಕೆ ಮರಳುತ್ತವೆ. ಆದರೆ ರೈಲು ಮಾರ್ಗವನ್ನು ಹೊರತುಪಡಿಸಿ ಇತರರಿಗೆ …
Read More »ನ್ಯಾ.ಸಂದೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು,ಜು.11. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದರೊಂದಿಗೆ ನ್ಯಾ.ಸಂದೇಶ್ ಮತ್ತು ಸೀಮಂತ್ ಕುಮಾರ್ ಸಿಂಗ್ ಅವರ ನಡುವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅವರು ನ್ಯಾ. ಸಂದೇಶ್ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಇನ್ನೂ …
Read More »ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆ..?!
ಬೆಂಗಳೂರು,ಜು.11- ಕರ್ನಾಟಕದಲ್ಲಿ ಅವಧಿಗೂ ಮುನ್ನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ಮೇ ತಿಂಗಳಲ್ಲಿ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆಯೂ ಈ ವರ್ಷದ ಡಿಸೆಂಬರ್‍ನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಜರಾತ್ ಚುನಾವಣೆಯೂ ಡಿಸೆಂಬರ್‍ಲ್ಲೇ ನಡೆಯಲಿದ್ದು, ಅದರ ಜೊತೆಯಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಗಿಸುವ ತವಕದಲ್ಲಿ ಬಿಜೆಪಿ ಇದ್ದು, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಬಿಜೆಪಿ ಇಡುತ್ತಿರುವ ಹೆಜ್ಜೆಗಳನ್ನು …
Read More »ಅಮೃತ್ ಪೌಲ್ ಬಂಧನ ಪ್ರಕರಣ: ಪ್ರಭಾವಿ ವ್ಯಕ್ತಿಗಳಿಗೆ ಶುರುವಾಯ್ತು ಸಂಕಷ್ಟ
ಬೆಂಗಳೂರು: ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ಅವರ ಬಂಧನದ ಬೆನ್ನಲ್ಲೇ ಕೆಲ ಪ್ರಭಾವಿಗಳಿಗೆ ಸಂಕಷ್ಟ ಎದುರಾಗಿದೆ. ಪೌಲ್ ಅವರ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಡೈರಿ ಹಾಗೂ ಇತರೆ ದಾಖಲೆಗಳು ಸಿಕ್ಕಿದ್ದು, ಇವುಗಳೇ ಪ್ರಭಾವಿ ವ್ಯಕ್ತಿಗಳಿಗೆ ಸಂಕಷ್ಟ ತಂದೊಡ್ಡಲಿವೆ ಎಂದು ಹೇಳಲಾಗಿದೆ. ಈ ಪ್ರಭಾವಿಗಳು ತಮಗೆ ಬೇಕಾದವರ ನೇಮಕಾತಿಗೆ ಎಡಿಜಿಪಿಯವರಿಗೆ …
Read More »ಪಿಎಸ್ಐ ನೇಮಕ ದೊಡ್ಡ ಹಗರಣ ಇದೆ, ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ: ಶಾಸಕ ಯತ್ನಾಳ
ಪಿಎಸ್ಐ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅಕ್ರಮದಲ್ಲಿ ಪಾಲು (ಪೌಲ್) ಎಲ್ಲರದ್ದು ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಎಲ್ಲರೂ ಬಿಚ್ಚಿ ಹೇಳಬೇಕು ಎಂದು ಆಗ್ರಹಿಸಿದರು ಮಾಜಿ ಸಿಎಂ ಮಗ ಸಹಿತ ಪಿಎಸ್ಐ ಹಗರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದು ಒಂದು ದೊಡ್ಡ …
Read More »ಸುರಿಯುತ್ತಿರುವ ಮಳೆ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಟ್ರಕ್‍ನ ಚಕ್ರಗಳು ಸಿಲುಕಿಹಾಕಿಕೊಂಡಿವೆ.
ಬೆಳಗಾವಿಯಲ್ಲಿ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಭಾರೀ ಟ್ರಕ್‍ನ ಚಕ್ರಗಳು ರಸ್ತೆ ಕುಸಿತದಲ್ಲಿ ಸಿಲುಕಿಹಾಕಿಕೊಂಡಿತ್ತು. ಹೌದು ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿಯ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಟ್ರಕ್‍ನ ಚಕ್ರಗಳು ಸಿಲುಕಿಹಾಕಿಕೊಂಡಿವೆ. ಭಾರೀ ಲೋಡ್‍ನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ನ ಹಿಂದಿನ ಚಕ್ರಗಳು ರಸ್ತೆ ಕುಸಿದು ಸಿಲುಕಿಹಾಕಿಕೊಂಡಿತ್ತು …
Read More »12 ಕ್ವಿಂಟಾಲ್ ರೇಶನ್ ಅಕ್ಕಿ ಜಪ್ತಿ ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿ
ಟ್ರಕ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ರೇಶನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ರೇಶನ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಂಕೇಶ್ವರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳು 12 ಕ್ವಿಂಟಾಲ್ ಅಕ್ಕಿಯನ್ನು ಟ್ರಕ್ ಸಮೇತ ಜಪ್ತಿ ಮಾಡಿದ್ದಾರೆ. ಏಂ 24 1751 ಅಶೋಕ್ ಲೈಲೆಂಡ್ ಟ್ರಕ್ ಇದಾಗಿದೆ. ಬೆಳಗಾವಿ ತಾಲೂಕಿನ ಬಸವಣ್ಣ ಕುಡಚಿ …
Read More »ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಸಂಸದರು ಈ ಕುರಿತಂತೆ ಧ್ವನಿ ಎತ್ತಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಿ ಸಂಸದರಿಗೆ ಮನವಿಯನ್ನು ಸಲ್ಲಿಸಿದರು. ಹೌದು ಇಂದು ಬೆಳಗಾವಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಬೇಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು …
Read More »