ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಮಂಜುನಾಥ ಮೇಳಕುಂದಿ ಒಎಂಆರ್ ಉತ್ತರ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಪರೀಕ್ಷಾ ಸಿಬ್ಬಂದಿಯಿಂದ ಭರ್ತಿ ಮಾಡಿಸುವ ಮೂಲಕ ಅಭ್ಯರ್ಥಿಗಳು ಉತ್ತೀರ್ಣರಾಗುವಂತೆ ನೋಡಿಕೊಳ್ಳುತ್ತಿದ್ದ. ಆ ನಂತರ ತನ್ನ ಪಾಲಿನ ಹಣ ಬರುವವರೆಗೂ ಉತ್ತರ ಪತ್ರಿಕೆಯ ಅಭ್ಯರ್ಥಿಗಳ (ಕ್ಯಾಂಡಿಡೇಟ್ ಕಾಪಿ) ಪ್ರತಿಯನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ ಸಂಗತಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೊರಬಿದ್ದಿದೆ. ಪ‍್ರಕರಣದಲ್ಲಿ ಮೊಟ್ಟಮೊದಲು ಬಂಧನಕ್ಕೊಳಗಾದ ಅಭ್ಯರ್ಥಿ, ಸೇಡಂನ ವೀರೇಶನಿಗೆ …
Read More »ಯಾಕ್ರೈಯ್ಯಾ ಮೋದಿ ಮೋದಿ ಅಂತಿರಾ? ಮೋದಿ ನಿಮ್ಮ ಮನೆ ಹಾಳು ಮಾಡಿದ್ದಾರೆ”: ಸಿದ್ದರಾಮಯ್ಯ
ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಮನೆ ಮೈದಾನದಲ್ಲಿ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಯುವ ಗರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ದೇಶದ …
Read More »ಬೆಳಗಾವಿ ವಿಭಾಗ ಅಮ್ಲನ್ ಆದಿತ್ಯ ಬಿಸ್ವಾಸ್, & 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶಿಸಿದೆ. ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ವಿವರ ಹೀಗಿದೆ. ಅಮ್ಲನ್ ಆದಿತ್ಯ ಬಿಸ್ವಾಸ್, ಐಎಎಸ್ (ಕೆ.ಎನ್: 1997) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ವಿಭಾಗಕ್ಕೆ …
Read More »ಹೀಗಿರಬೇಕು ಮದುವೆ ಅಗ್ರಿಮೆಂಟ್! ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ!
ಮದುವೆಯಲ್ಲಿ ನವ ವಧು-ವರರು ಏಳೇಳು ಜನ್ಮಕ್ಕೂ ಜತೆಯಾಗಿರುವುದಾಗಿ ಪ್ರಮಾಣಿಸುವುದು ಸಾಮಾನ್ಯ. ಆದರೆ ಈ ಮದುವೆಯಲ್ಲಿ ನಡೆದ ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ. ‘ತಿಂಗಳಿಗೊಂದೇ ಪಿಜ್ಜಾ ತರಿಸಬೇಕು’, ’15 ದಿನಕ್ಕೊಮ್ಮೆ ಶಾಪಿಂಗ್‌ಗೆ ಕರೆದೊಯ್ಯಬೇಕು’, ‘ಮನೆ ಊಟಕ್ಕೆ ಯಾವಾಗಲೂ ಬೇಡ ಎನ್ನಕೂಡದು’, ‘ಪ್ರತಿದಿನ ಜಿಮ್‌ಗೆ ಹೋಗಬೇಕು’, ‘ಪ್ರತಿ ಪಾರ್ಟಿಯಲ್ಲಿ ಒಳ್ಳೊಳ್ಳೆ ಫೋಟೋ ತೆಗೆದುಕೊಡಬೇಕು’, ‘ಪ್ರತಿ ಭಾನುವಾರ ಗಂಡನೇ ತಿಂಡಿ ರೆಡಿ ಮಾಡಬೇಕು’. ಇದು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಮದುವೆಯಾದ ವರ-ವಧು …
Read More »ನಿರಂತರ ಮಳೆಖಾನಾಪುರ ತಾಲೂಕಿನ ಪ್ರಾಥಮಿಕ ಶಾಲೆಯ ಗೋಡೆಯೂ ತೇವಗೊಂಡು ಕುಸಿತ
ಬೆಳಗಾವಿ: ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಖಾನಾಪುರ ತಾಲೂಕಿನ ಗುರ್ಲಗಂಜಿ ಗ್ರಾಮದ ಶಾಲಾ ಕೊಠಡಿಯೊಂದು ಕುಸಿದು ಬಿದ್ದಿದೆ. ಇನ್ನೊಂದೆಡೆ, ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಯೂ ತೇವಗೊಂಡು ಕುಸಿತವಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಖಾನಾಪೂರ ತಾಲೂಕಿನಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಶಾಲಾ ಗೋಡೆಗಳು ಮಳೆ ಅಬ್ಬರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ …
Read More »ಸೋನಿಯಾ ಗಾಂಧಿಗೆ ಸಂಕಷ್ಟದ ಸುರಿಮಳೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಸಮನ್ಸ್
ದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ED) ಸೋಮವಾರ, ಜುಲೈ 12ರಂದು ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಜುಲೈ 21 ರಂದು ಏಜೆನ್ಸಿಯ (Enforcement Directorate) ಮುಂದೆ ಹಾಜರಾಗುವಂತೆ ಕಾಂಗ್ರೆಸ್ ಪಕ್ಷದ ಉನ್ನತ ನಾಯಕಿಯಾದ ಸೋನಿಯಾ ಗಾಂಧಿಗೆ (Sonia Gandhi) ಸೂಚಿಸಲಾಗಿದೆ. ಪ್ರಕರಣದಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಸೋನಿಯಾ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಫೆಡರಲ್ ಏಜೆನ್ಸಿ ಈ …
Read More »ಕುಸಿಯುತ್ತಿದೆ ದೊಡ್ಡ ಕೆರೆ ತಡೆಗೋಡೆ
ಎಂ.ಕೆ.ಹುಬ್ಬಳ್ಳಿ: ಬೆಳೆದ ಗಿಡಕಂಟಿಗಳು, ತಿಪ್ಪೆ ಗುಂಡಿಗಳು, ಬೀಳುತ್ತಿರುವ ತಡೆಗೋಡೆಗಳು, ತ್ಯಾಜ್ಯಗಳನ್ನು ಎಸೆಯುವ ಜಾಗೆಯಾಗಿದೆ ಇಟಗಿ ಗ್ರಾಮದ ದೊಡ್ಡ ಕೆರೆ. ಒಂದು ಕಾಲಕ್ಕೆ ಈ ಕೆರೆ ನೀರನ್ನು ದೇವರ ಪೂಜೆಗೂ, ದಿನಬಳಕೆಗೂ ಉಪಯೋಗಿಸುತ್ತಿದ್ದರು ಎಂದರೆ ಈಗ ಯಾರೂ ನಂಬಲು ಸಾಧ್ಯವಿಲ್ಲ. ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಸುಮಾರು 53 ಎಕರೆ 15 ಗುಂಟೆ ಈ ಕೆರೆಯತ್ತ ಯಾವೋಬ್ಬ ಅಧಿ ಕಾರಿಗಳು ಗಮನ ಹರಿಸುತ್ತಿಲ್ಲ. ಮಳೆಗಾಲ ಮುಗಿದು ಮತ್ತೆ ಮತ್ತೆ ಬಂದರೂ, ಕೆರೆ …
Read More »ಅಮರನಾಥದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೈರಾಣಾದ ಬೆಳಗಾವಿಯ ಪ್ರವಾಸಿಗರು
ಬೆಳಗಾವಿ: ಪ್ರಸಿದ್ಧ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿರುವ ಬೆಳಗಾವಿಯ 32 ಜನರ ತಂಡ ಹವಾಮಾನ ವೈಪರೀತ್ಯದಿಂದಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶೇಷನಾಗದಿಂದ ಮರಳಿ ಪೆಹಲಗಾಮ್ ಎಂಬ ಪ್ರದೇಶಕ್ಕೆ ವಾಪಸ್ಸಾಗಿದ್ದು, ಮೇಘ ಸ್ಪೋಟ ಆಗಿ ಗುಡ್ಡ ಕುಸಿತಗೊಂಡಿರುವ ಮಾರ್ಗ ಬಂದ್ ಮಾಡಿದ್ದರಿಂದ ದರ್ಶನಕ್ಕಾಗಿ ಇನ್ನೂ 2-3 ದಿನ ಕಾಯಬೇಕಾಗಿದೆ. ಶೇಷನಾಗ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗುತ್ತಿದ್ದು, ಹೀಗಾಗಿ ಆರೋಗ್ಯದಲ್ಲಿ ಏರುಪೇರು …
Read More »ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ
ಚಿಕ್ಕೋಡಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ. ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆ, ಬ್ರಿಡ್ಜ್ಗಳ ಕಾಮಗಾರಿ ಮುಕ್ತಾಯಗೊಂಡಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಇದರಿಂದ ನದಿ ತೀರದ ಜನ ಸಂಕಷ್ಟ ಪಡುವಂತಾಗಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ …
Read More »ವರುಣನ ಆರ್ಭಟ: ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರೆದಿದ್ದು. ಕ್ಷಣಕ್ಷಣಕ್ಕೂ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಮತ್ತೊಮ್ಮೆ ಪ್ರವಾಹ ಎದುರಾಗುತ್ತದೆ ಎನ್ನುವ ಭೀತಿ ನದಿ ತೀರದ ಜನರಲ್ಲಿ ಆವರಿಸಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದ ಹೆಚ್ಚು ಮಳೆ ಬಿಳುವ ಕೋಯ್ನಾ, ಮಹಾಬಲೇಶ್ವರ, ನವಜಾ. ಪಾಟಗಾಂವ,ಕಾಳಮ್ಮವಾಡಿ ಮತ್ತು ಕೊಲ್ಲಾಪೂರ ಸೇರಿದಂತೆ ಚಿಕ್ಕೋಡಿ ಸುತ್ತಮುತ್ತ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು. ಕೃಷ್ಣಾ ನದಿಗೆ …
Read More »