Breaking News

ಬೆಳಗಾವಿಯಲ್ಲಿ ನಿರಂತರ ಮಳೆ ಮನೆಗಳು ಜಲಾವೃತ

ಬೆಳಗಾವಿ: ಪಶ್ಚಿಮಘಟ್ಟ ಸೇರಿ ಕುಂದಾನಗರಿ ಬೆಳಗಾವಿಯಲ್ಲಿ ನಿರಂತರ ಮಳೆಯಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು ಜಲಾವೃತಗೊಂಡ ನಿವಾಸಿಗಳು ಪರದಾಡುವಂತೆ ಆಗಿದೆ. ಅಲ್ಲದೇ, ನೀರು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೇಶವ ನಗರ, ಅನ್ನಪೂರ್ಣೇಶ್ವರಿ ನಗರದ ಮನೆಗಳಿಗೆ ನೀರು ನುಗ್ಗಿದೆ. ಕೇಶವ ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಡಾವಣೆಗಳಲ್ಲಿ ಸರಿಯಾದ ಒಳ ಚರಂಡಿ ವ್ಯವಸ್ಥೆ ಮಾಡದ …

Read More »

ಧಾರಾಕಾರ ಮಳೆಗೆ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ ಮನೆಗೋಡೆ ಕುಸಿದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಧಾರಾಕಾರ ಮಳೆಗೆ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ ಮನೆಗೋಡೆ ಕುಸಿದಿದೆ. ಹೌದು ಯರಗೊಪ್ಪ ಗ್ರಾಮದ ಜನತಾ ಪ್ಲಾಟ್‍ನಲ್ಲಿರುವ ಈರಪ್ಪ ಚಂದುಗೋಳ ಎಂಬುವರ ಮನೆಗೋಡೆ ಮಳೆಯಿಂದ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದರೂ ಸ್ಥಳಕ್ಕೆ ಪಿಡಿಒ ಸೇರಿ ಇತರೆ ಯಾವುದೇ ಅಧಿಕಾರಿಗಳು ಭೇಟಿ ನೀಡದೇ ಇರೋದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ. ಗೋಡೆ ಬಿದ್ದ ಮನೆಯಲ್ಲೇ ಕುಟುಂಬಸ್ಥರು ವಾಸಿಸುತ್ತಿದ್ದಾರೆ. …

Read More »

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ. ಕೆಲವೊಂದು ಸ್ಮಶಾನಗಳಲ್ಲಿ ರಾತ್ರಿಯಾದ್ರೆ ಬೆಳಕಿನ ವ್ಯವಸ್ಥೆ ಇಲ್ಲ, ಮತ್ತೊಂದಿಷ್ಟು ಮುಕ್ತಿಧಾಮಗಳ ಮೇಲ್ಛಾವಣಿಯ ತಗಡುಗಳು ಆಗಲೋ ಈಗಲೋ ಬೀಳುವಂತಾಗಿವೆ. ಹೌದು ನಾವು ತೋರಿಸುತ್ತಿರುವ ಈ ದೃಶ್ಯ ಶಾಹಪುರದ ಮುಕ್ತಿಧಾಮದಲ್ಲಿನ ಅವ್ಯವಸ್ಥೆಯನ್ನು. ಇಲ್ಲಿ ಮೇಲ್ಛಾವಣಿಯಲ್ಲಿ ಹಾಕಿರುವ ತಗಡುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಯಾವಾಗ ಬೀಳುತ್ತವೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಮೃತರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು, …

Read More »

ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​.

ಬೆಂಗಳೂರು: ಹೌದು ಸ್ವಾಮಿ… ಈ ಪದ ಕೇಳಿದರೆ ಥಟ್​ ಅಂತಾ ನೆನಪಾಗುವುದು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​. ಈಗಾಗಲೇ ಯಶಸ್ವಿ 8 ಆವೃತ್ತಿಗಳನ್ನು ಮುಗಿಸಿದ್ದು, 9 ನೇ ಆವೃತ್ತಿಯ ಬಿಗ್​ಬಾಸ್ ಶೋಗೆ ಭರ್ಜರಿ ತಯಾರಿ ನಡೆದಿದೆ.​ ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು …

Read More »

ಎತ್ತಿನ ಕತ್ತಿನ ಭಾರಕ್ಕೆ ನೊಗವಾದ ‘ರೋಲಿಂಗ್ ಸಪೋರ್ಟ್

ಸಾಂಗ್ಲಿ: ಹಳ್ಳಿ ಕಡೆಗಳಲ್ಲಿಎತ್ತು ಯಾವಾಗಲೂ ಬಿಡುವಿಲ್ಲದ ಪ್ರಾಣಿ. ಕೃಷಿಯ ಜೊತೆಗೆ ಬಂಡಿಗಳನ್ನು ಎಳೆಯಲು ಎತ್ತನ್ನು ನಿರಂತರವಾಗಿ ಬಳಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿಎತ್ತಿನ ಗಾಡಿಗೆ ಅದರ ಸಾಮರ್ಥ್ಯ ಮೀರಿ ಹೊರೆ ಹಾಕಲಾಗುತ್ತದೆ. ಇದರ ನೇರ ಪರಿಣಾಮ ಎತ್ತಿನ ಕುತ್ತಿಗೆಯ ಮೇಲಾಗುತ್ತದೆ. ಇದರ ವಿರುದ್ಧ ಪ್ರಾಣಿ ಪ್ರಿಯರು ಆಗಾಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಎತ್ತಿನ ಕತ್ತಿನ ಹೊರೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದೀಗ ಎತ್ತಿನ ಭಾರ ಕಡಿಮೆ ಮಾಡುವ ಹೊಸ ಸಂಶೋಧನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. …

Read More »

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ

ಮುಂಬಯಿ : ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ ಲೀಟರ್‌ಗೆ 5 ಮತ್ತು ಲೀಟರ್‌ಗೆ 3 ರೂಪಾಯಿ ಇಳಿಕೆ ಮಾಡುವುದಾಗಿ ಸಿಎಂ ಏಕನಾಥ್ ಶಿಂಧೆ ಗುರುವಾರ ಘೋಷಿಸಿದ್ದಾರೆ. ಹೊಸ ಸರ್ಕಾರದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮಂತ್ರಾಲಯದಲ್ಲಿ ನಡೆದ ಸಂಪುಟ ಸಭೆಯ ನಂತರ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.   ಬೆಲೆ ಇಳಿಕೆಯ ನಂತರ, ಮುಂಬೈನಲ್ಲಿ …

Read More »

ಶಿಂಧೆ ಸರ್ಕಾರದಲ್ಲಿ ‘ಠಾಕ್ರೆ ಕುಟುಂಬದ’ ಕುಡಿಗೆ ಸಚಿವ ಸ್ಥಾನ..!

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ, ಆದರೆ ಸಚಿವ ಸಂಪುಟ ವಿಭಜನೆ ಇನ್ನೂ ಆಗಿಲ್ಲ. ಬಿಜೆಪಿ ಮತ್ತು ಶಿಂಧೆ ಬಣದ ಎಷ್ಟು ಶಾಸಕರು ಸಚಿವರಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆಗೆ ಶಿಂಧೆ ಸರ್ಕಾರಕ್ಕೆ ಸೇರಿಸಿಕೊಳ್ಳಬಹುದು ಎಂಬ ಮಾಹಿತಿ ಹೊರಬಿದ್ದಿದೆ.   ಎಂಎನ್‌ಎಸ್ ಯುವ ನಾಯಕಅಮಿತ್ ಠಾಕ್ರೆಕೊಂಕಣ ಪ್ರವಾಸದಲ್ಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಅವರ ಸಂಪುಟ ಸೇರುವ …

Read More »

ರಾಜಕೀಯ ನಾಯಕರ ತಲೆಬಿಸಿ ಮಾಡಿದ ಹೊಸ ಕೈಪಿಡಿ: ಇನ್ಮುಂದೆ ಬಾಯಿ ಬಿಡೋ ಹಾಗೇ ಇಲ್ಲ!

ನವದೆಹಲಿ: ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಈ ನಡುವೆಯೇ ರಾಜಕೀಯ ನಾಯಕರಿಗೆ ತಲೆಬಿಸಿ ಉಂಟಾಗಿದೆ. ಇದಕ್ಕೆ ಕಾರಣ, ಸಂಸತ್ತಿನಲ್ಲಿ ಬಳಸಲೇಬಾರದಾದ ಕೆಲವು ಶಬ್ದಗಳನ್ನು ಪಟ್ಟಿ ಮಾಡಿ ಕೈಬಿಡಿ ಬಿಡುಗಡೆ ಮಾಡಲಾಗಿದೆ. ಇನ್ನುಮುಂದೆ ಈ ಶಬ್ದಗಳನ್ನು ನಾಯಕರು ಸಂಸತ್ತಿನಲ್ಲಿ ಬಳಸುವಂತಿಲ್ಲ. ಇವುಗಳನ್ನು ಅಸಂಸದೀಯ ಪದಗಳು ಎಂದು ಕರೆಯಲಾಗುತ್ತದೆ. ನೂರಕ್ಕೂ ಅಧಿಕ ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಪೈಕಿ ಹಲವು ದಿನನಿತ್ಯ ಬಳಸುವ ಪದಗಳಾಗಿವೆ. ಆದ್ದರಿಂದ ರಾಜಕಾರಣಿಗಳು ಈ ಮಾತುಗಳನ್ನಾಡಿದರೆ …

Read More »

ADGP ಅಮೃತ್ ಪೌಲ್ ಮಂಪರು ಪರೀಕ್ಷೆಗೆ ಆಗ್ರಹ; ಡೈರಿಯ ಬಗ್ಗೆಯೂ ತನಿಖೆಯಾಗಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೀಡಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.   ಪಿಎಸ್‌ಐ ಅಕ್ರಮದಲ್ಲಿ ನೇಮಕಾತಿ ವಿಭಾಗದ ಎ.ಡಿ.ಜಿ.ಪಿ ಯಾಗಿದ್ದ ಅಮೃತ್ ಪೌಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಬಂಧನವಾಗಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ಬಯಲಾಗಲಿದೆ. ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. “ಉಪ್ಪು …

Read More »

ಬಿಜೆಪಿ ಆಂತರಿಕ ಸಮೀಕ್ಷೆ ವರದಿ: ಬೆಳಗಾವಿಯ ಹಲವು ಶಾಸಕರಿಗೆ ವಿಧಾನಸಭೆ ಚುನಾವಣೆಯಿಂದ ಗೇಟ್ ಪಾಸ್

ಬೆಳಗಾವಿ: ಹದಿನೆಂಟು ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಬಿಜೆಪಿಯ ಶಾಸಕರು ಮತ್ತು ಪ್ರಭಾವಿ ನಾಯಕರುಗಳಿದ್ದು, ಇವರಲ್ಲಿ ಕೆಲವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ. ಹಲವು ಪ್ರಭಾವಿಗಳು ಮುಂಬರುವ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯೆತೆಯಿದೆ ಎಂದು ಆಂತರಿಕ ಸಮೀಕ್ಷೆ ವರದಿ ಮಾಡಿದೆ. ಬೆಳಗಾವಿಯ 14 ಸ್ಥಾನಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಮುಂದೆಯು ಕೂಡ ಈ ಸ್ಥಾನಗಳನ್ನು ಉಳಿಸಿಕೊಂಡು ಹೋಗಲು ಬಿಜೆಪಿ ಬಯಸಿದೆ. ಒಂದು ವೇಳೆ ನಾಯಕರಿಗೆ ಟಿಕೆಟ್ ನಿರಾಕರಿಸಿದರೇ ಪಕ್ಷದಲ್ಲಿ ಬಂಡಾಯಕ್ಕೆ …

Read More »