ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾವು-ಬದುಕಿನ ಪ್ರಶ್ನೆಯನ್ನು ದೇಶದ ಜನರ ಮುಂದಿಟ್ಟಿದೆ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಅನಾಚಾರಗಳನ್ನೆಲ್ಲ ಸಹಿಸಿಕೊಂಡು ಇನ್ನೂ ಅಚ್ಚೇ ದಿನಗಳ ಕನಸು ಕಂಡರೆ ಬದುಕಿನ ನಾಶ ಖಂಡಿತ.ಕಾಲ ಮಿರಿಹೋಗುತ್ತಿದೆ, ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಬ್ರ್ಯಾಂಡ್ ಗಳ ಬೆನ್ನತ್ತಿ ಹೋಗುತ್ತಿರುವ ಉಳ್ಳವರು, …
Read More »ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿ: ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು: ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕಾರ್ಮಿಕ ಇಲಾಖೆ ಸಚಿವರು, ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ …
Read More »ಅವೈಜ್ಞಾನಿಕ ಕಾಮಗಾರಿ : ರಸ್ತೆ ಮೇಲೆ ನಿಲ್ಲುತ್ತಿದೆ ಕೊಳಚೆ ನೀರು,
ಕುಷ್ಟಗಿ : ಅವೈಜ್ಞಾನಿಕ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಸಿಸಿ ರಸ್ತೆಯ ಮೇಲೆ ನೀರು ನಿಲ್ಲುತ್ತಿರುವುದು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ದಿನ ಬೆಳಗಾದರೆ ಈ ಗಲೀಜು ದಾಟಿಕೊಂಡು ಮನೆ ಸೇರಬೇಕಿದೆ. ಇದು ಕುಷ್ಟಗಿ ಪಟ್ಟಣದ 2ನೇ ವಾರ್ಡಿನ ಬುತ್ತಿಬಸವೇಶ್ವರ ನಗರದ ರಥ ಬೀದಿಗೆ ಹೊಂದಿಕೊಂಡಿರುವ ಎನ್.ಜೆ.ಕಿಡ್ಸ್ ಶಾಲೆಯ ದುಸ್ಥಿತಿ ಇದು. ಇದು ಕುಷ್ಟಗಿ ಪಟ್ಟಣದ 2ನೇ ವಾರ್ಡಿನ ಬುತ್ತಿಬಸವೇಶ್ವರ ನಗರದ ರಥ ಬೀದಿಗೆ ಹೊಂದಿಕೊಂಡಿರುವ ಎನ್.ಜೆ.ಕಿಡ್ಸ್ ಶಾಲೆಯ ದುಸ್ಥಿತಿ ಇದು. ಈ …
Read More »ಮೊಸರು, ಮಜ್ಜಿಗೆ, ಲಸ್ಸಿಗಳ ದರ ಕಡಿತ ಮಾಡಿದ ಕೆಎಂಎಫ್
ಬೆಂಗಳೂರು: ಸೋಮವಾರವಷ್ಟೇ ಕೆಲವು ಉತ್ಪನ್ನಗಳ ದರ ಏರಿಕೆ ಮಾಡಿದ್ದ ಕೆಎಂಎಫ್ ಇದೀಗ ನಂದಿನಿ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿಗಳ ಬೆಲೆಗಳಲ್ಲಿ ಕಡಿತ ಮಾಡಿ ಹೊಸ ಆದೇಶ ಹೊರಡಿಸಿದೆ. 200 ಗ್ರಾಂ ಮೊಸರಿನ ಪ್ಯಾಕೆಟ್ 12 ರೂ., 500 ಗ್ರಾಂ ಮೊಸರು ಪ್ಯಾಕೇಟ್ 24 ರೂ., ಒಂದು ಲೀಟರ್ ಪ್ಯಾಕೆಟ್ 46 ರೂ. 200 ಗ್ರಾಂ ಮೊಸರಿನ ಪ್ಯಾಕೆಟ್ 12 ರೂ., 500 ಗ್ರಾಂ ಮೊಸರು ಪ್ಯಾಕೇಟ್ 24 …
Read More »ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಶಿರೋಳ ಗ್ರಾಮಕ್ಕೆ ಬಂತು ಸಾರಿಗೆ ಬಸ್ !
ಮುದ್ದೇಬಿಹಾಳ: ಕೊನೆಗೂ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಮೊದಲ ಬಾರಿಗೆ ಪಟ್ಟಣದಿಂದ 3-4 ಕಿಮಿ ಅಂತರದಲ್ಲಿರುವ ಶಿರೋಳ ಗ್ರಾಮಕ್ಕೆ ಸೋಮವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಬಂದಿದ್ದು ಗ್ರಾಮಸ್ಥರಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡಿದೆ. ಶನಿವಾರ ನಡೆದಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಬಸ್ ಸೌಲಭ್ಯ ಇಲ್ಲದಿರುವ ಕುರಿತು ತಾಲೂಕಾಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರ ಗಮನ ಸೆಳೆದಿದ್ದರು. ಸಭೆಯಲ್ಲಿ ಭರವಸೆ ನೀಡಿದಂತೆ ತಹಶೀಲ್ದಾರ್ …
Read More »7 I.A.S.ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ
ಬೆಂಗಳೂರು: ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಹಾಂತೇಶ್ ಬೀಳಗಿ ಅವರನ್ನು ನೇಮಿಸಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಿ.ರಾಜೇಂದ್ರ ಚೋಳನ್ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿ., ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಆಗಿದ್ದಾರೆ. ಕೆ. ಶ್ರೀನಿವಾಸ್ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ಆಗಿದ್ದ ತುಳಸಿ ಮದ್ದಿನೇನಿ …
Read More »ಅಕ್ರಮ ಅಕ್ಕಿ ಸಾಗಾಟ ; ಅಧಿಕಾರಿಗಳ ತಪಾಸಣೆ; ಚಾಲಕನ ಬಂಧನ
ಕುಳಗೇರಿ ಕ್ರಾಸ್ : ಸರಕಾರದ ವಿವಿಧ ಯೋಜನೆಗಳಲ್ಲಿ ಉಚಿತವಾಗಿ ಫಲಾನುಭವಿಗಳಿಗೆ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ, ವಾಹನವನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದು, ಚಾಲಕನನ್ನು ಹಿಡಿದು ಬಂಧಿಸಿದ ಘಟನೆ ಬಾದಾಮಿ ತಾಲೂಕಿನ ರೇಲ್ವೆ ಸ್ಟೇಶನ್ ಗ್ರಾಮದ ಹತ್ತಿರ ನಡೆದಿದೆ. ಬಾದಾಮಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಅಶೋಕ ಲೇಲ್ಯಾಂಡ್ ವಾಹನದಲ್ಲಿ ಸರಕಾರದ ಅನುಮತಿ ಇಲ್ಲದೇ ರೂ.೨೩೧೦೦ ಮೌಲ್ಯದ ೧೦೫೦ …
Read More »ಅಥಣಿಯಲ್ಲಿ ಸೆರೆಸಿಕ್ಕ ಅಪರೂಪದ ಪುನುಗು ಬೆಕ್ಕು
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಚಿರತೆಯ ಮರಿಯನ್ನು ಹೋಲುವಂತ ಪ್ರಾಣಿ ಸೆರೆ ಸಿಕ್ಕಿದೆ. ಸ್ಥಳೀಯರು ಚಿರತೆ ಮರಿ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ, ಸ್ಥಳಕ್ಕೆ ಅಥಣಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದಾಗ ಇದು ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ಎಂದು ತಿಳಿಸಿದ್ದಾರೆ. ಇ ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಾದೇವ ಹೊನ್ನೊಳ್ಳಿ ಎಂಬುವವ ಹೊಲದಲ್ಲಿ ಪುನುಗು ಬೆಕ್ಕು ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿತ್ತು. ಸ್ಥಳಕ್ಕೆ …
Read More »ಹಾನಿಗೊಳಗಾದ ಮನೆಗಳಿಗೆ 924ಕೋಟಿ ರೂ. ಪರಿಹಾರ
ಬೆಳಗಾವಿ: ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾಗೂ ಮನೆ ಹಾನಿಯ ಬಗ್ಗೆ ನಿಖರವಾಗಿ ಸಮೀಕ್ಷೆ ನಡೆಸಬೇಕು. ಅಲ್ಲದೇ ತಕ್ಷಣವೇ ಪರಿಹಾರವನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಸಭೆ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಗೊಂಡಿದೆ. ನೀರು ಸುರಿದ ಬಳಿಕ ಸಮೀಕ್ಷೆ …
Read More »ರಿಟರ್ನ್ ಗಿಫ್ಟ್’ ನೀಡಿದ ಪ್ರಕೃತಿ, ಮುಂಬೈ ಬೀಚ್ ನೋಡಿದ್ರೆ ಗೊತ್ತಾಗುತ್ತೆ!
ಮಾನವನ ದುರಾಸೆಯಿಂದ ಪ್ರಕೃತಿ ನಶಿಸುತ್ತಿದೆ. ಮರಗಳನ್ನು ಕಡಿದು ನಗರ ನಿರ್ಮಾಣ, ತ್ಯಾಜ್ಯವನ್ನು ಬಯಲು ಪ್ರದೇಶ, ಸಮುದ್ರಕ್ಕೆಸೆದು ಸುಂದರ ಪರಿಸರ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ. ಹೀಗೆ ಮಾಡಿದ ಮನುಷ್ಯನಿಗೆ ಅದೇ ಪ್ರಕೃತಿ ಪ್ರತಿಯಾಗಿ ನೀಡಿದ ಕೊಡುಗೆಯನ್ನು ಮುಂಬೈ ಬೀಚ್ನಲ್ಲಿ ಕಾಣಬಹುದು!. ಅರಬ್ಬಿ ಸಮುದ್ರದ ದಡದಲ್ಲಿರುವ ಮುಂಬೈ ನಗರಿಗೆ ನಿಸರ್ಗ ತನ್ನದೇ ಆದ ರೀತಿಯಲ್ಲಿ ಕೊಟ್ಟಿರುವ ಎಚ್ಚರಿಕೆ ಇದು. ಸಾವಿರಾರು ಟನ್ಗಟ್ಟಲೆ ಪ್ರಮಾಣದಲ್ಲಿ ಬಿಸಾಡಲಾಗಿದ್ದ ತ್ಯಾಜ್ಯವನ್ನು ಸಮುದ್ರ ವಾಪಸ್ ತಂದು ಮಾಹಿಮ್ …
Read More »