Breaking News

ಹಂಪಿ ಎಕ್ಸ್‌ಪ್ರೆಸ್‌ ರೈಲಿನ ಗಾಲಿಗಳಲ್ಲಿ ಬೆಂಕಿ

ಬಳ್ಳಾರಿ: ನಿನ್ನೆ ರಾತ್ರಿ ಹಂಪಿ ಎಕ್ಸ್ ಪ್ರೆಸ್ ರೈಲಿನ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ನಡೆದಿದೆ. ಹೌದು, ತಾಂತ್ರಿಕ ದೋಷದಿಂದ ಹಂಪಿ ಎಕ್ಸ್‌ಪ್ರೆಸ್‌ ರೈಲಿನ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ರೈಲಿನ ಎಂಜಿನ್ ಸ್ಟಾರ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಹಿಂದಿನ ಗಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ, ಆ ದೋಷವನ್ನು ಸರಿಪಡಿಸಿದ್ದಾರೆ. ನಂತರ ರೈಲು ಸಂಚಾರ ಆರಂಭಿಸಲಾಗಿದೆ. …

Read More »

ಕಾಮುಕ ಪತಿಯಿಂದ ಪತ್ನಿಗೆ ವಿಕೃತವಾಗಿ ಹಿಂಸೆ..! ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿ ಅರೆಸ್ಟ್​..!

ಬೆಂಗಳೂರು : ಕಾಮುಕ ಪತಿಯೊಬ್ಬ ಪತ್ನಿಗೆ ವಿಕೃತವಾಗಿ ಹಿಂಸೆ ನೀಡುತ್ತಿದ್ದನು. ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿಯನ್ನ ಅರೆಸ್ಟ್​ ಮಾಡಲಾಗಿದೆ. ಪತಿ ಪ್ರದೀಪ್ ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ದೈಹಿಕ ಹಿಂಸೆ ಹಾಗೂ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದನು. ಅಶ್ಲೀಲ ಚಿತ್ರ ತೋರಿಸಿ ಪತ್ನಿಗೆ ಮದ್ಯ ಕುಡಿಸುತ್ತಿದ್ದ. ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ಯಾದ ಐದು ತಿಂಗಳಿಗೆ ಪತಿಯ ಅಸಲಿ ಚಹರೆ ಬೆಳಕಿಗೆ ಬಂದಿದೆ. ಐದು ಬಾರಿ ಅಬಾರ್ಷನ್ ಮಾಡಿಸಿದ್ದ ಆರೋಪವಿದೆ.   …

Read More »

ಸಿದ್ದರಾಮಯ್ಯ ವಿರುದ್ಧವೇ ಸ್ಫರ್ಧೆ: ಶ್ರೀರಾಮಲು

ಬೀದರ್: ಬಿಜೆಪಿ ಪಕ್ಷ ಸೂಚಿಸಿದರೆ ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸ್ಫರ್ಧೆ ಮಾಡುವುದಾಗಿ ಸಾರಿಗೆ ಸಚಿವ ಶ್ರೀರಾಮಲು ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತೆ ಸ್ಫರ್ಧಿಸಿದರೆ ಅವರು ಠೇವಣಿ ಕಳೆದುಕೊಳ್ಳಲಿದ್ದಾರೆ. ಅಲ್ಲಿನ‌ ಜನ‌ ಶ್ರೀರಾಮುಲು ಅವರನ್ನು ಸೋಲಿಸಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು. ಕ್ಷೇತ್ರ ಹುಡುಕಾಡುತ್ತಿರುವ ಸಿದ್ದರಾಮಯ್ಯ ಸಿಎಂ ಹೇಗಾಗುತ್ತಾರೆ? ಪಕ್ಷದ ಬೆಂಬಲದ ಮೇಲೆ ಸಿದ್ದರಾಮಯ್ಯ ಹಾರಾಡುತ್ತಿದ್ದಾರೆ, ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಸ್ವಂತ ಶಕ್ತಿ …

Read More »

ಖಾಸಗಿ ಆಸ್ಪತ್ರೆಗಳಿಂದ ರೋಗದ ಭೀತಿಯಲ್ಲಿ ಗ್ರಾಮೀಣ ಜನರು….

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮೀಣ ಪ್ರದೇಶದ ಜನರು ಖಾಸಗಿ ಆಸ್ಪತ್ರೆ ಎಡವಟ್ಟು ಹಾಗೂ ಹವಮಾನ ವೈಪರಿತೆಯಿಂದ ರೋಗರುಜನೆಗಳು ಜನರಿಗೆ ತಗಲುತ್ತವೆ ಎಂಬ ಭಯದ ವಾತಾವರಣದಲ್ಲಿದ್ದಾರೆ.   ಇದೆಲ್ಲಾ ಕಂಡು ಬಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಗ್ರಾಮವಾದ ಕೊಕಟನೂರ ದಲ್ಲೀ ಖಾಸಗಿ ಆಸ್ಪತ್ರೆಯದವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ತಮ್ಮ ಆಸ್ಪತ್ರೆಗಳಲ್ಲಿ ರೋಗಿಯನ್ನ ಗುಣಪಡಿಸಲು ಉಪಯೋಗಿಸಿದ ಔಷಧೀಯ ಮೆಡಿಸನಗಳಾದ, ಸಿರಂಜ್,ಸಲೈನ್,ಬ್ಯಾಂಡೇಜ್, ವೇಸ್ಟ್ ಆದ ಔಷಧಿ ಬಾಟಲಿಗಳನ್ನು ಹಾಗೂ …

Read More »

ಅಶ್ಲೀಲ ವೀಡಿಯೋದಲ್ಲಿ ಇದ್ದಾಳೆ ಎನ್ನಲಾದ ಕಾಂಗ್ರೆಸ್ ಯುವ ನಾಯಕಿ ಬೆಳಗಾವಿ ಎ ಪಿ ಎಮ್ ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲ

ಬೆಳಗಾವಿ : ಅಶ್ಲೀಲ ವೀಡಿಯೋದಲ್ಲಿ ಇದ್ದಾಳೆ ಎನ್ನಲಾದ ಕಾಂಗ್ರೆಸ್ ಯುವ ನಾಯಕಿ ಹಾಗೂ ಚನ್ನಪಟ್ಟಣ ಮೂಲದ ಯುವತಿ ವಿರುದ್ಧ ಬೆಳಗಾವಿ ಎ ಪಿ ಎಮ್ ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌ ತನಗೆ ಮಾನಸಿಕ ಚಿತ್ರಹಿಂಸೆ, ಸುಳ್ಳು ಕೇಸ್ ನೀಡಿ ಮಾನನಷ್ಟ ಮಾಡಿ ಜೈಲಿಗೆ ಕಳುಹಿಸುವುದಾಗಿ ಜಾಗೂ ಜೀವ ಬೆದರಿಕೆ ಹಾಕುತ್ತಿರುವುದಾಗಿ ಬೆಳಗಾವಿಯ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಎಂಬುವವರು ದೂರು ದಾಖಲಾಗಿದೆ. ‌ಕಾಂಗ್ರೆಸ್ ಮುಖಂಡೆ ಚನ್ನಪಟ್ಟಣದ …

Read More »

ಬೆಂಗಳೂರು: ಹೆಂಡ್ತಿ ಕೊಲ್ಲಲು ಬಂದು ನಶೆಯಲ್ಲಿ ಅತ್ತೆಗೆ ಹೊಡೆದು ಕೊಂದ!

ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿದ್ದಾರೆ. ಕುಡಿದ ಅಮಲಿನಲ್ಲಿ ಅಳಿಯನೋರ್ವ ಹೆಣ್ಣು ಕೊಟ್ಟ ಅತ್ತೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ನಾಗರಾಜ್​ನನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಮಾರತ್ ಹಳ್ಳಿಯ ಸಂಜಯನಗರ ನಿವಾಸಿ ಸೌಭಾಗ್ಯ ಕೊಲೆಯಾದವರು. ಕಳೆದ‌ 6 ವರ್ಷದ ಹಿಂದೆ ನಾಗರಾಜ(35) ಮತ್ತು ಭವ್ಯಶ್ರೀ ಮದುವೆಯಾಗಿತ್ತು.‌ ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗುವಿದೆ. ವೃತ್ತಿಯಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ ಕುಡಿತದ ಚಟಕ್ಕೆ ಬಿದ್ದಿದ್ದ. ಹಾಗಾಗಿ ಆಗಾಗ ಮನೆಯಲ್ಲಿ …

Read More »

ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ: ಇದೇ ಮೊದಲ ಬಾರಿಗೆ 80 ರೂ. ಗಡಿ ದಾಟಿದ ದೇಶಿಯ ಕರೆನ್ಸಿ

ನವದೆಹಲಿ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿದೆ. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ಸ್ಥಿರಗೊಂಡಿತು. ಇದೀಗ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ. …

Read More »

ಆಗಸ್ಟ್ 3 ರಂದು ‘ಸಿದ್ದರಾಮೋತ್ಸವ’: ಕಾರ್ಯಕ್ರಮ ಆಯೋಜನೆ ಖರ್ಚು-ವೆಚ್ಚಕ್ಕೆ ಸಿದ್ದರಾಮಯ್ಯ ಟಿಪ್ಸ್!

ಬೆಂಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬ ಆಯೋಜಿಸಲಾಗಿದೆ. ಸೋಮವಾರ ವಿಧಾನಸೌಧದಲ್ಲಿ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಆಚರಣೆಗೆ ಉಂಟಾಗುವ ಖರ್ಚು -ವೆಚ್ಚಗಳ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಅನೌಪಚಾರಿಕವಾಗಿ ಚರ್ಚಿಸಲಾಯಿತು.   ರಾಜ್ಯದ 13 ಬಜೆಟ್ ಮಂಡಿಸಿದ ಅನುಭವ ಹೊಂದಿರುವ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಮೆಗಾ ರ್ಯಾಲಿಗೆ ಹಣವನ್ನು ಖರ್ಚು ಮಾಡಬೇಕು ಹಾಗೂ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ …

Read More »

3 ವರ್ಷ ಮೀರಿದವರ ವರ್ಗಾವಣೆ ಮಾಡಿ’

ಕಲಬುರಗಿ: ಪ್ರತಿ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಎಸ್ಬಿ ಡ್ಯೂಟಿ ಮಾಡಿದ ಕಾನ್‌ಸ್ಟೆಬಲ್‌ಗಳನ್ನು ಒಂದು ವಾರದೊಳಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಬೇಕು ಎಂದು ಕಾನೂನು, ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿದರು.   ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆದ ಬಳಿಕ ಮೊದಲ ಬಾರಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ ಅವರು ಸಾರ್ವಜನಿಕರ ಅಹವಾಲು ಸ್ವೀಕಾರದ …

Read More »

ಜೋಗದಲ್ಲಿ ಮತ್ತದೇ ಜನ ಸಾಗರ; ಕೈ ಚೆಲ್ಲಿದ ಪೊಲೀಸರು!

ಸಾಗರ: ಒಂದೆಡೆ ಜೋಗದ ಮೈಸೂರು ಬಂಗ್ಲೋ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಪ್ರವಾಸಿಗರ ಕಾರಣ ತಾಲೂಕಿನ ಜಗತ್ಪ್ರಸಿದ್ಧ ಜೋಗದಲ್ಲಿ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸರ ಕೈಯಿಂದ ಜಾರಿದ ಘಟನೆಗೆ ಭಾನುವಾರ ಸಾಕ್ಷಿಯಾಯಿತು.   10 ಸಾವಿರಕ್ಕೂ ಹೆಚ್ಚು ಜನ ಭೇಟಿ ಇತ್ತ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿರುವ ಗೇಟ್ ಒಳಗಿನ ಪ್ರದೇಶದಲ್ಲಿ ಪಾರ್ಕಿಂಗ್ ರದ್ದುಗೊಳಿಸಲಾಗಿತ್ತು. ಹಾಗಾಗಿ ಜನ ರಸ್ತೆಯ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜ್ಯಾಮ್ ಸಾಮಾನ್ಯವಾಗಿತ್ತು. …

Read More »