Breaking News

ನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಕುಂದಾನಗರಿ ಜನ

ಬೆಳಗಾವಿ: ನಾಯಿಗಳ ಹಾವಳಿಗೆ ಕುಂದಾನಗರಿ ಜನ ಬೆಚ್ಚಿ ಬಿದಿದ್ದು, ಕಳೆದ ಆರು ತಿಂಗಳಲ್ಲಿ ಅದೇಷ್ಟೂ ಜನರಿಗೆ ನಾಯಿ (Dog Attack) ಕಚ್ಚಿದೆ ಅನ್ನೋದನ್ನ ಕೇಳಿದ್ರೇ ನೀವು ಶಾಕ್ ಆಗುತ್ತೀರಿ. ಸಾವಿರಲ್ಲ ಎರಡು ಸಾವಿರಲ್ಲ ಬರೋಬ್ಬರಿ 14ಸಾವಿರ ಜನರ ರಕ್ತ ಹೀರಿವೆ ನಾಯಿಗಳು. ಆರೋಗ್ಯ ಇಲಾಖೆಯಿಂದಲೇ ಸ್ಪೋಟಕ ಮಾಹಿತಿ ಹೊರ ಬಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ವಾನಗಳು ಅಟ್ಟಹಾಸ ಮೆರೆಯುತ್ತಿವೆ. ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಗಿದೆ. ಈ ಕುರಿತಾಗಿ ಡಿಎಚ್‌ಒ …

Read More »

ನಾಳೆ ದ್ರೌಪದಿ ಮುರ್ಮು ಪ್ರಮಾಣ ವಚನ; 21 ಗನ್ ಸೆಲ್ಯೂಟ್

ನವದೆಹಲಿ: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ನಾಳೆ (ಜುಲೈ 25 )ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಬೆಳಗ್ಗೆ 10.15ಕ್ಕೆ ಸಮಾರಂಭ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ರಾಷ್ಟ್ರಪತಿಗಳ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.   21 ಗನ್ ಸೆಲ್ಯೂಟ್ ನಂತರ ಪ್ರಮಾಣ ವಚನ ಸ್ವೀಕರಿಸಿ, ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಸಮಾರಂಭದ ಮೊದಲು, …

Read More »

ಮಾನಮರ್ಯಾದೆ ಇದ್ದರೆ ತೇಜಸ್ವಿ ಸೂರ್ಯ ರಿಂದ ರಾಜೀನಾಮೆ ಪಡೆಯಲಿ: A.A.P.ಜಗದೀಶ್‌

ಬೆಂಗಳೂರು : ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ದಾಂಧಲೆ ನಡೆಸಿದ ಪ್ರಕರಣದ ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರಿದ್ದು, ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು ತೇಜಸ್ವಿ ಸೂರ್ಯರನ್ನು ಸಂಸದರನ್ನಾಗಿ ಮಾಡಿದ್ದಾರೆ. ಆದರೆ ಸೂರ್ಯ …

Read More »

ಯಡಿಯೂರಪ್ಪರನ್ನು ಬಳಸಿಕೊಂಡ ನಂತರ ಬಿಜೆಪಿ ಈಗ ಅವರನ್ನು ಹೊರಹಾಕಿದೆ: ಸಂತೋಷ್ ಲಾಡ್

ಬಳ್ಳಾರಿ, ವಿಜಯನಗರ: ಇಲ್ಲಿಯವರೆಗೆ ಬಿ.ಎಸ್ ಯಡಿಯೂರಪ್ಪ ಅವರನ್ನು ಬಳಸಿಕೊಂಡ ಬಿಜೆಪಿ ಈಗ ಅವರನ್ನು ಹೊರ ಹಾಕಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಪರ ಮಾತನಾಡುತ್ತಲೇ ಬಿಜೆಪಿಯನ್ನು ತೆಗಳಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಎಂಬುದು ಸರಿಯಲ್ಲ. ಅವರ ಕೆಲಸ ಗಮಮಿಸಬೇಕು. ಬಿಎಸ್​ವೈ ಅವರನ್ನು ಸೈಡ್ ಲೈನ್ ಮಾಡುತ್ತಿರೋದನ್ನು ಇಡೀ ಕರ್ನಾಟಕದ ಜನರು ನೋಡುತ್ತಿದ್ದಾರೆ. ರಾಜಕಾರಣದಲ್ಲಿ ವಯಸ್ಸು ಮುಖ್ಯ …

Read More »

ಬಿಎಸ್ವೈ ನಂತರ ವರ್ಷ ಮುಗಿಸಿದ ಮೊದಲ ಬಿಜೆಪಿ ಸಿಎಂ ಬೊಮ್ಮಾಯಿ

ಬೆಂಗಳೂರು : ದಕ್ಷಿಣ ಭಾರತದಲ್ಲಿ ಕಮಲ ಅರಳಿದ ಮೊದಲ ರಾಜ್ಯವಾದ ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ. ರಾಜ್ಯದಲ್ಲಿ ಈವರೆಗೆ ನಾಲ್ವರು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರೆ ಡಿ.ವಿ. ಸದಾನಂದಗೌಡ ಎರಡನೇ ಸಿಎಂ, ಜಗದೀಶ್ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದು, ಪ್ರಸ್ತುತ ಇರುವ ಬಸವರಾಜ ಬೊಮ್ಮಾಯಿ ನಾಲ್ಕನೇ ಮುಖ್ಯಮಂತ್ರಿಯಾಗಿದ್ದಾರೆ. ಈ ನಾಲ್ವರು ಮುಖ್ಯಮಂತ್ರಿಗಳಲ್ಲಿ …

Read More »

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಸಮಾವೇಶ

ಬೆಳಗಾವಿ ನಗರದಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಹಳೆ ಪಿಬಿ ರಸ್ತೆಯ ಸಾಯಿ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಚಿಂತನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂಎಲ್‌ಇ ಚನ್ನರಾಜ್ ಹಟ್ಟಿಹೊಳಿರವರು, ಕಾಂಗ್ರೆಸ್ ನಾಯಕರ ಆತ್ಮಬಲವನ್ನು …

Read More »

ಚುನಾವಣೆಯಲ್ಲಿ ಕೇವಲ ದಕ್ಷಿಣ ನಮ್ಮ ಟಾರ್ಗೆಟ್ ಅಲ್ಲ. ಸವದತ್ತಿ, ರಾಯಬಾಗ, ಹಾರೋಗೇರಿ ಎಲ್ಲಾ: ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕೇವಲ ದಕ್ಷಿಣ ನಮ್ಮ ಟಾರ್ಗೆಟ್ ಅಲ್ಲ. ಸವದತ್ತಿ, ರಾಯಬಾಗ, ಹಾರೋಗೇರಿ ಎಲ್ಲಾ ಕಡೆಗಳಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಸಭೆಗಳನ್ನು ಮಾಡುತ್ತಿದ್ದೇವೇ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ರವರು, ಅಭ್ಯರ್ಥಿ ಯಾರು ಎಂದು ಆಮೇಲೆ ನೋಡೋಣ. ಮೊದಲು ಪಕ್ಷ ಸಂಘಟನೆ ಮಾಡೊಣ. ಮತ ಬ್ಯಾಂಕ್ …

Read More »

ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಕರ್ನಾಟಕದ ಸಂಸದೆ ಆಗ್ತಾರಂತೆ!

ನಟಿ ರಶ್ಮಿಕಾ ಮಂದಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಪಕ್ಷ, ಸ್ಥಾನ ಸೇರಿದಂತೆ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗುತ್ತಾರೆ ಎಂದು ಹೇಳಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಇತ್ತೀಚಿನ ಮಾತುಗಳು ವೈರಲ್ ಆಗಿವೆ. ಸೆಲೆಬ್ರಿಟಿಗಳ ಪರ್ಸನಲ್ ವಿಚಾರಗಳ ಬಗ್ಗೆ ವೇಣು ಸ್ವಾಮಿ ಅವರ ಇತ್ತೀಚಿನ ವಿಡಿಯೋ ವೈರಲ್ ಆಗುತ್ತಿದೆ. ಇಂಡಸ್ಟ್ರಿಯಲ್ಲಿಯೂ ಅವರಿಗೆ ಒಂದಷ್ಟು ವಿಶ್ವಾಸಾರ್ಹತೆ ಇದೆ. ಸೆಲೆಬ್ರಿಟಿಗಳು ಅವರ ಮಾತನ್ನು ನಂಬುತ್ತಾರೆ. ಇತ್ತೀಚಿನ ಸಂದರ್ಶನದಲ್ಲಿ, ವೇಣು …

Read More »

ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ

ಹುಬ್ಬಳ್ಳಿ (ಜು.23): ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ (Explosion ) ಸಂಭವಿಸಿದ ಪರಿಣಾಮ 8 ಜನ ಗಾಯಗೊಂಡ ಘಟನೆ ಹುಬ್ಬಳ್ಳಿ ಹೊರಲವಯದ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ. ಸ್ಪಾರ್ಕರ್ ಕ್ಯಾಂಡಲ್ ತಯಾರಿಕಾ ಕಾರ್ಖಾನೆಯಲ್ಲಿ (Sparker Candle Factory) ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಭಾರಿ ಸ್ಫೋಟಕ್ಕೆ ಕಾರಣವಾಗಿದೆ. ಗಾಯಾಳುಗಳ (Injured) ಪೈಕಿ ಮುವ್ವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಹೊರವಲಯದಲ್ಲಿ ಅಗ್ನಿ ಅವಘಡ …

Read More »

ಒಂದೇ ರಾತ್ರಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.

ಒಂದೇ ರಾತ್ರಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಸಶಸ್ತ್ರ ಮೀಸಲು ಉಪನಿರೀಕ್ಷಕ ಸುರೇಶ ಆರ್. ತಹಶೀಲ್ದಾರ್ ಜಠರದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು ಸಶಸ್ತ್ರ ಮುಖ್ಯ ಪೇದೆ ದುಂಡಪ್ಪ ಕೆ. ಮಗ್ದೂಮ್ ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಬ್ಬರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Read More »