ಬೆಂಗಳೂರು,ಆ.1- ಸರ್ಕಾರ ಹಾಗೂ ಪಕ್ಷಕ್ಕೆ ಭಾರೀ ಮುಜುಗರ ಸೃಷ್ಟಿಸಿರುವ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಬದಲಾವಣೆ ಮಾಡುವ ಸಂಭವವಿದೆ. ದಕ್ಷಿಣಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನಟ್ಟಾರ್ ಕೊಲೆಯಾದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರೊಂದಿಗೆ ತೇಜಸ್ವಿ ಸೂರ್ಯ ದೂರವಾಣಿಯಲ್ಲಿ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಸರ್ಕಾರ ಇದ್ದರೆ ನಾವು …
Read More »ಹೆಸರು ಗೊಂದಲದಿಂದ ಅಮಾಯಕನ ಬಂಧನ: 5 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ಹೆಸರು ಗೊಂದಲದ ಹಿನ್ನೆಲೆಯಲ್ಲಿ ತಪ್ಪಾಗಿ ಬಂಧಿಸಲ್ಪಟ್ಟ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಪೊಲೀಸರು ಬಂಧಿಸಬೇಕಾಗಿದ್ದ ವ್ಯಕ್ತಿಯೇ ಎಂದು ಖಚಿತಪಡಿಸಿಕೊಳ್ಳದೆ ಅಮಾಯಕನನ್ನು ಬಂಧಿಸಿದ ಕಾರಣ ಕರ್ನಾಟಕ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಬಂಧಿತ ವ್ಯಕ್ತಿ ತಾನು ವಾರಂಟ್‌ನಲ್ಲಿ ಹೆಸರಿಸಿರುವ ವ್ಯಕ್ತಿಯೇ ಅಲ್ಲ ಎಂದು ಸ್ಪಷ್ಟವಾಗಿ ವಾದಿಸಿದ್ದು, ಈ ವಾದಕ್ಕೆ ಮನ್ನಣೆ ನೀಡಿರುವ …
Read More »ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆ? ಇನ್ಮುಂದೆ ವರ್ಷಕ್ಕೆ ಒಂದಲ್ಲ, ನಾಲ್ಕು ಅವಕಾಶ: ಡಿಟೇಲ್ಸ್ ಇಲ್ಲಿದೆ ನೋಡಿ.
ನವದೆಹಲಿ : ಮುಂದಿನ ವರ್ಷ 18 ವಯಸ್ಸು ನಿಮಗೆ ಆಗುವುದಾದರೆ, ನೀವು ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಹೀಗೊಂದು ಹೊಸ ಪ್ರಕಟಣೆಯನ್ನು ಇತ್ತೀಚೆಗೆ ಚುನಾವಣಾ ಆಯೋಗ ಹೊರಡಿಸಿತ್ತು. ಇದರ ಅರ್ಥ 17 ವರ್ಷಕ್ಕಿಂತ ಮೇಲ್ಪಟ್ಟರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿದೆ. ಅದರ ಮುಂದುವರೆದಿರುವ ಭಾಗವಾಗಿ ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಅವಕಾಶಗಳನ್ನು ಚುನಾವಣಾ …
Read More »ಪೆನ್ಸಿಲ್ & ಮ್ಯಾಗಿ ಬೆಲೆ ದುಬಾರಿಯಾಗಿದ್ದಕ್ಕೆ ಸಿಟ್ಟಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 6 ವರ್ಷದ ಬಾಲಕಿ!
ಒಂದನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಸಂಕಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರ ಬರೆದಿದ್ದಾಳೆ. ಇದರಲ್ಲಿ ‘ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ …
Read More »ಸರ್ಕಾರದ ಸೂಚನೆಗೂ ಡೋಂಟ್ ಕೇರ್: ನಿರಾಣಿ ಶುಗರ್ಸ್ ಸೇರಿ 13 ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಬಾಕಿ
ಬೆಂಗಳೂರು: ರೈತರ ಬಾಕಿ ಬಿಲ್ ಪಾವತಿಸುವಂತೆ ಸರ್ಕಾರ ಡೆಡ್ ಲೈನ್ ನೀಡಿದರೂ, ಇನ್ನೂ 13 ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ರೈತರಿಗೆ ಬಿಲ್ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಪೈಕಿ ಸಚಿವ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಕಾರ್ಖಾನೆ ಕೂಡ ಸೇರಿದೆ. ಕಬ್ಬು ಬೆಳೆಗಾರರಿಗೆ ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಕೋಟ್ಯಂತರ ರೂ. ಬಿಲ್ ಬಾಕಿ ಉಳಿಸಿಕೊಂಡಿರುತ್ತವೆ. ರೈತರು ಈ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಈ ಬಾರಿಯೂ …
Read More »ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎಸ್.ಆರ್. ಪಾಟೀಲ್ ಸೂಕ್ತ ಅಭ್ಯರ್ಥಿ: ವೀರಪ್ಪ ಮೊಯ್ಲಿ
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಎಸ್.ಆರ್. ಪಾಟೀಲ್ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಇಬ್ಬರ ಮಧ್ಯೆ ಪೈಪೋಟಿ ಎದ್ದಿದೆ ಎಂದುಕೊಳ್ಳುತ್ತಿರುವಾಗಲೇ, ಹಿರಿಯ ನಾಯಕರೊಬ್ಬರ ಹೆಸರು ಇದೀಗ ಮುನ್ನೆಲೆಗೆ ಬಂದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿರುವಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಎಸ್.ಆರ್. ಪಾಟೀಲ್ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಎಂದು …
Read More »ಲಾಡ್ಜ್ ನಲ್ಲಿ ಯುವಕ ನೇಣಿಗೆ ಶರಣು
ಲಾಡ್ಜ್‌ನಲ್ಲಿ ಯುವಕ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ನಗರದ ವಿಕೆಜಿ ಲಾಡ್ಜ್‌ನಲ್ಲಿ ನಡೆದಿದೆ. ನಗರದ ಶಹಾಪೇಟೆ ನಿವಾಸಿ ಹರ್ಷ ಜಯರಾಜ್ ಪಟ್ಟಣಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Read More »ಸಿಎಂ ಟೀಕೆ ಮಾಡೋ ಭರದಲ್ಲಿ ಅಪ್ಪು ಸಾವನ್ನು ಎಳೆ ತಂದ ಚಕ್ರವರ್ತಿ ಸೂಲಿಬೆಲೆ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವು ಕನ್ನಡಿಗರಿಂದ ಇನ್ನೂ ದೂರವಾಗಿಲ್ಲ. ಅಪ್ಪು ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಲೇ ಇದೆ. ಈ ಮಧ್ಯೆ ಅವರ ಸಾವನ್ನು ಮುಂದಿಟ್ಟುಕೊಂಡು ಟೀಕೆ ಮಾಡಲು ಹೋಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪೇಚಿಗೆ ಸಿಲುಕಿದ್ದಾರೆ. ಚಕ್ರವರ್ತಿ ಸೂಲಿಬೆಲೆ ತಮ್ಮ ಹೇಳಿಕೆಗಳಿಂದ ಆಗಾಗ ವಿವಾದಕ್ಕೆ ಸಿಲುಕುವುದು ಹೊಸದೇನಲ್ಲ. ಇವರ ಹೇಳಿಕೆಗಳು ಹೆಚ್ಚಾಗಿ ರಾಜಕೀಯ ವಲಯಕ್ಕೆ ಸಂಬಂಧಿಸಿರುತ್ತೆ. ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ …
Read More »ನಾಗರ ಪಂಚಮಿಯನ್ನು ಯಾವಾಗ ಆಚರಿಸುತ್ತಾರೆ, ಅದರ ಹಿನ್ನೆಲೆ ಏನು?
ಶ್ರಾವಣ ಮಾಸ (Sheavana Masa / Sawan Masa) ಅಂದ್ರೆನೇ ಹಬ್ಬಗಳ ಮಾಸ ಎನ್ನುವಂತೆ ಇರುತ್ತೆ. ಒಂದು ತಿಂಗಳುಗಳ ಕಾಲ ಪೂಜೆ, ಪುನಸ್ಕಾರ, ವ್ರತಗಳು ನಡೆಯುತ್ತಲೇ ಇರುತ್ತವೆ. ಶ್ರಾವಣ ಮಾಸದಲ್ಲಿ ಎಲ್ಲಾ ದಿನಗಳು ಒಳ್ಳೆಯ ದಿನಗಳೇ ಆಗಿರುತ್ತವಂತೆ, ಈ ಮಾಸದಲ್ಲಿ ಶಿವನ (Lord Shiva Pooja) ಕೃಪೆ ಪ್ರತಿ ದಿನದ ಮೇಲೆ ಇರುತ್ತಂತೆ. ಒಂದೊಂದು ದಿನವೂ ಒಂದೊಂದು ದೇವರ (God) ಆರಾಧನೆ ಮಾಡ್ತಾರೆ. ನಾಗರ ಪಂಚಮಿ (Nagara Panchami) ಹಬ್ಬವೂ …
Read More »150ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ಅಧಿಕಾರಕ್ಕೆ ಬರುತ್ತೇವೆ:C.M.
ಮತ್ತೆ 150ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ಅಧಿಕಾರಕ್ಕೆ ಬರುತ್ತೇವೆ ಎನ್ನುವ ರಾಜ್ಯ ಬಿಜೆಪಿ ನಾಯಕರ ವಿಶ್ವಾಸದ ಮಾತಿಗೆ ಪಕ್ಷದ ಕಾರ್ಯಕರ್ತರಿಬ್ಬರ ಕಗ್ಗೊಲೆ ಅಡ್ಡಿಯಾಗುವ ಸಾಧ್ಯತೆಯಿದೆಯೇ?. ಯಾಕೆ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ?. ಶಿವಮೊಗ್ಗದದಲ್ಲಿ ಹರ್ಷನ ಕೊಲೆಯ ನಂತರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಏನು ಪ್ರಯೋಜನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ನಂತರ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ …
Read More »