ಮೈಸೂರು : ‘ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್ ಆಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ …
Read More »ಈ ಬಾರಿ ಗಣೇಶೋತ್ಸವಕ್ಕೆ ನಿರ್ಬಂಧಗಳಿಲ್ಲ: ಕಂದಾಯ ಸಚಿವ ಆರ್.ಅಶೋಕ
ಬೆಂಗಳೂರು: ಈ ವರ್ಷದ ಗಣೇಶೋತ್ಸವವನ್ನು ಕೋವಿಡ್ ಪೂರ್ವದಂತೆ ನಡೆಸಲು ಅನುಮತಿ ನೀಡಲಾಗುವುದು. ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಲಾಗಿದೆ. ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ಎರಡು ವರ್ಷ ಕೋವಿಡ್ನಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಸಾರ್ವಜನಿಕರ ಪ್ರಾಣ ಒದಗಿಸುವುದು ಮುಖ್ಯವಾಗಿತ್ತು. ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದರು. ಈ ಬಾರಿ ಯಾವುದೇ …
Read More »ಬೆಳಗಾವಿಯಲ್ಲಿ ಮಳೆ ಅಬ್ಬರಕ್ಕೆ ಮನೆ ಕುಸಿತ; ಮಹಿಳೆಗೆ ಗಂಭೀರ ಗಾಯ, ನಾಲ್ಕು ವಾಹನಗಳು ಜಖಂ
ಬೆಳಗಾವಿ: ಜಿಲ್ಲೆಯಾದ್ಯಂತ ಸುರಿಯುತ್ತಿವ ಭಾರಿ ಮಳೆಯಿಂದಾಗಿ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿರುವ ಘಟನೆ ತಾಲೂಕಿನ ವಡಗಾಂವಿ ಪ್ರದೇಶದಲ್ಲಿ ನಡೆದಿದೆ. ವಡಗಾವಿಯ ಭಾರತ ನಗರದ ಎಡರನೇ ಕ್ರಾಸ್ನಲ್ಲಿ ಆನಂದ ಕಲ್ಲಪ್ಪ ಬಿರ್ಜೆ ಎಂಬುವವರಿಗೆ ಸೇರಿದ ಮನೆ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ನೆಲಸಮವಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಭಾನುವಾರ ಸಂಜೆಯಷ್ಟೇ ಮನೆಯಲ್ಲಿದ್ದ ಏಳು ಜನ ಕುಟುಂಬ ಸದಸ್ಯರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ …
Read More »ಬೆಳಗಾವಿಯಲ್ಲಿ 75 ಮೀ ಉದ್ದದ ಧ್ವಜ ಹಿಡಿದು 7.5 ಕಿ.ಮಿ ಪಾದಯಾತ್ರೆ
ಆಜಾದಿಕಾ ಅಮೃತಮಹೋತ್ಸವ ಪ್ರಯುಕ್ತ ದಾಲ್ಮಿಯಾ ಭಾರತ್ ಫೌಂಡೇಶನ್ ದೀಕ್ಷಾ ಬೆಳಗಾವಿ ವತಿಯಿಂದ 7.5 ಕಿಮಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 75 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ 7.5 ಕಿ.ಮಿ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕಾಲ್ನಡಿಗೆಯಲ್ಲಿ 75 ಜನ ಭಾಗಿಯಾಗಿದ್ದರು. ಇಂದು ಮುಂಜಾನೆ 7:50ಕ್ಕೆ 75 ಜನ ಕೈಯ್ಯಲ್ಲಿ 75 ಮೀ ರಾಷ್ಟ್ರಧ್ವಜವನ್ನು ಹಿಡಿದು ಮಾನವ ಸರಪಳಿಯನ್ನು ರಚಿಸಿ ಕಣಬರ್ಗಿಯ ಸಿದ್ದೇಶ್ವರ ದೇವಸ್ಥಾನಕ್ಕೆ ತಲುಪಿದರು
Read More »ಮೂರು ದಿನಗಳಿಂದ ವ್ಯಾಪಕ ಮಳೆ ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ …
Read More »ಬೆಳಗಾವಿ ಸ್ಮಾರ್ಟಸಿಟಿ ಪಟ್ಟಿಗೆ ಸೇರಿದ ನಂತರ ಇದರ ಚಿತ್ರಣವೇ ಬದಲ: ಆಕ್ರೋಶಗೊಂಡ ಜನ
ಬೆಳಗಾವಿ ಸ್ಮಾರ್ಟಸಿಟಿ ಪಟ್ಟಿಗೆ ಸೇರಿದ ನಂತರ ಇದರ ಚಿತ್ರಣವೇ ಬದಲಾಗುತ್ತದೆ ಎಂದು ಜನ ಬಯಸಿದ್ದರು. ಆದರೆ ಜನರ ಬಯಕೆ ಹುಸಿಯಾಗಿದೆ. ಕುಂದಾನಗರಿಯ ಹಳೆ ಗಾಂಧಿ ನಗರ ಲಕ್ಷ್ಮೀ ಗಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ನಿಂತಿರುವ ದೊಡ್ಡ ಪ್ರಮಾಣದ ನೀರು..ಕಟ್ ಆಗಿ ಜೋತಾಡುತ್ತಿರುವ ವಿದ್ಯುತ್ ತಂತಿ…ರಸ್ತೆ ಪಕ್ಕ ಪಾರ್ಕಿಂಗ್ ಮಾಡಿರುವ ಲಾರಿ..ನೀರಿನಲ್ಲಿಯೇ ನಿಂತು ಪ್ರತಿಭಟನೆ ಮಾಡುತ್ತಿರುವ ನಿವಾಸಿಗಳು..ಹೌದು ನೀವು …
Read More »ಹೆಣ ಕಂಡ್ರೆ ಓಡೋಡಿ ಬರೋ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡಲ್ಲ ಯಾಕೆ?
ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ ಎಂದು ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ. ಪತ್ರಿಕೆಯೊಂದರ ‘ರೈತರಿಗೂ ಬಡ್ಡಿ ಬರೆ’ ಎಂಬ ವರದಿಯ ತುಣುಕೊಂದನ್ನು ಟ್ವೀಟ್ (Tweet) ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹೆಣ ಕಂಡರೆ ಓಡೋಡಿ ಬರ್ತಾರೆ, ಸಮಸ್ಯೆ ಕೇಳಲ್ಲ ಯಾಕೆ? ‘ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ …
Read More »ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ತಮ್ಮನಿಗೆ ಮುಹೂರ್ತ, ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕಂದಿರು!
ಕಲಬುರಗಿ: ರಕ್ಷಾ ಬಂಧನ (Raksha Bandhan) ಇನ್ನೇನು ಹತ್ತಿರದಲ್ಲೇ ಇದೆ. ರಕ್ಷಾ ಬಂಧನ ಅಂದರೆ ಸಹೋದರ (Brother), ಸಹೋದರಿಯರ (Sister) ಬಾಂಧವ್ಯವನ್ನು (Relationship) ಸಾರುವ ಹಬ್ಬ (Festival) ಇದು. ಸಹೋದರಿ ತನ್ನ ಸಹೋದರನಿಗೆ ರಾಖಿ (Rakhi) ಕಟ್ಟಿ, ಶುಭವಾಗಲಿ ಅಂತ ಹಾರೈಸುತ್ತಾಳೆ. ರಾಖಿ ಕಟ್ಟಿಸಿಕೊಂಡ ಸಹೋದರ ನಿನ್ನ ರಕ್ಷಣೆ ಮಾಡುತ್ತೇನೆ ಅಂತ ವಾಗ್ದಾನ ಮಾಡುತ್ತಾನೆ. ಆದರೆ ಕಲಬುರಗಿಯಲ್ಲಿ (Kalaburagi) ಇಂತಹ ಪವಿತ್ರವಾದ ಅಕ್ಕ, ತಮ್ಮನ ಸಂಬಂಧಕ್ಕೆ ಮಹಿಳೆಯರಿಬ್ಬರು ಮಸಿ ಎರಚಿದ್ದಾರೆ. ತನ್ನ ತಮ್ಮನನ್ನೇ …
Read More »ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ 2ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ್ ಎಸಿಬಿ ಬಲೆಗೆ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation ) ವಲಯ 2ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಹಣಿ ನೀಡಲು ಬಾರ್ & ರೆಸ್ಟೋರೆಂಟ್ ಒಂದರಲ್ಲಿ ಗುರುರಾಜ ಗಾಳಿ ಎಂಬುವರಿಂದ 6,000 ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೆಂಕಟೇಶ ದಾಸರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು IPS ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ಸರ್ಕಾರ ಇಬ್ಬರು IPS ಅಧಿಕಾರಿಗಳನ್ನು …
Read More »ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಕಾರು ಅಪಘಾತವಾಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯ (Hubli) ಬಿವಿಬಿ (BVB) ಕಾಲೇಜ್ ಕ್ಯಾಂಪಸ್ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ( Basavaraj Horatti ) ಅವರ ಕಾರು ಅಪಘಾತವಾಗಿದೆ. ಬೈಕ್ ಸವಾರ ಕೆಂಚಪ್ಪಗೆ ಗಂಭೀರ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಕೆಂಚಪ್ಪ ಸವದತ್ತಿ ಮೂಲದ ಜೆಸಿಬಿ ಆಪರೇಟರ್ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜ ಕ್ಯಾಂಪಸ್ನಲ್ಲಿ ಕಾರ್ಯಕ್ರಮವೊಂದು …
Read More »